Site icon Vistara News

19 ಇಂಚು ಉದ್ದದ ಕಿವಿ ಹೊಂದಿರುವ ಮೇಕೆ ಮರಿಯ ಬಗ್ಗೆ ನಿಮಗೆಷ್ಟು ಗೊತ್ತು?

pakistan goat

ಕರಾಚಿ: ಇತ್ತೀಚಿಗೆ ಪಾಕಿಸ್ತಾನದ ಕರಾಚಿಯಲ್ಲಿ ಮೇಕೆ ಮರಿಯೊಂದು ಭಾರೀ ಫೇಮಸ್​ ಆಗಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಈ ಮೇಕೆ ಮರಿಯ ವಿಶೇಷತೆ ಏನೆಂದರೆ ಇದರ ಕಿವಿಗಳು ಸುಮಾರು 19 ಇಂಚು ಉದ್ದವಿದೆ!

ನ್ಯೂಬಿನ್​ ತಳಿಯ ಮೇಕೆ ಮರಿ ಇದಾಗಿದ್ದು, ಈ ಮೇಕೆ ಮರಿಗೆ “ಸಿಂಬಾʼ ಎಂದು ಹೆಸರಿಡಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಇದರ ಮಾಲೀಕ ಮೊಹಮ್ಮದ್ ಹಾಸನ್ ನರೇಜೋ “”ಮೊದಮೊದಲು ಈ ಮೇಕೆ ಮರಿಯನ್ನು ಕಂಡು ನಾವು ದಿಗ್ವ್ರಾಂತರಾಗಿದ್ದೇವು. ನಂತರ ಈ ಮೇಕೆ ಮರಿ ಸ್ಥಳೀಯವಾಗಿ ಭಾರೀ ಫೇಮಸ್​ ಆಯಿತು. ಇದನ್ನು ನೋಡುವುದಕ್ಕಾಗಿ ಸಾಕಷ್ಟು ಜನ ಮನೆ ಮುಂದೆ ಬರುತ್ತಾರೆʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ| ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್‌ ವೈರಲ್‌; ಪ್ರಾಮಾಣಿಕತೆ ಮೆಚ್ಚುವಂಥದ್ದು !

ಸದ್ಯ ಮೇಕೆ ಮರಿಗೆ ಉದ್ದವಾದ ಕಿವಿಗಳಿಂದ ಯಾವುದೇ ತೊಂದರೆಯಾಗುತ್ತಿಲ್ಲ. ಇದು ಅನುವಂಶಿಕವಾಗಿ ಬಂದಿದ್ದು, ಮೇಕೆ ಮರಿ ನಡೆಯುವಾಗ ನೆಲಕ್ಕೆ ತಾಗುತ್ತದೆ. ಆದರೆ, ಇದರಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ ಮೊಹಮ್ಮದ್. ಈ ಮೇಕೆ ಮರಿಯು ಗಿನ್ನಿಸ್ ದಾಖಲೆ ಬರೆಯುವುದರಲ್ಲಿ ಅನುಮಾನವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಅದು ಕೂಡ ಆಗಬಹುದು ಎಂಬ ವಿಶ್ವಾಸ ಅವರದು.

ಸಾಮಾನ್ಯವಾಗಿ “ಸಿಂಬಾʼದಂತಹ ಮೇಕೆ ತಳಿಗಳು ಉದ್ದವಾದ ಕಿವಿಗಳಿಗೆ ಹೆಸರುವಾಸಿಯಾಗಿವೆ. ಉದ್ದ ಕಿವಿಗಳು ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ. ಈ ಮೇಕೆಮರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೇಕೆ ಮರಿಯ ಕಿವಿಯನ್ನ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Exit mobile version