Site icon Vistara News

Nigerian Police: ಧಾರ್ಮಿಕ ಚಟುವಟಿಕೆಗಾಗಿ ಮಾನವ ಕೈ, ಕಿಡ್ನಿ, ನಾಲಗೆ ಸಂಗ್ರಹಿಸಿದ್ದ ಮುಸ್ಲಿಂ ಧರ್ಮಗುರುವಿನ ಬಂಧನ

Nigerian Police

Nigerian Police

ನೈಜೇರಿಯಾ: ಮಾನವ ದೇಹದ ಭಾಗಗಳನ್ನು ಅಕ್ರಮವಾಗಿ ಹೊಂದಿದ್ದ ಕಾರಣಕ್ಕೆ ನೈಜೀರಿಯಾದ ಒಂಡೊ ರಾಜ್ಯದ ಅಕೊಕೊ ಪ್ರದೇಶದಿಂದ (Akoko area in Ondo State) ಒಲುವಾಫೆಮಿ ಇದ್ರೀಸ್ (Oluwafemi Idris) ಎಂಬ ಮುಸ್ಲಿಂ ಧರ್ಮಗುರು ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Nigerian Police). ಇತರ ಇಬ್ಬರು ಆರೋಪಿಗಳನ್ನು ಸ್ಯಾಮ್ಯುಯೆಲ್ ಕುಟೇಲು ಮತ್ತು ಬಬತುಂಡೆ ಕಯೋಡೆ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಇಸ್ಲಾಮಿಕ್ ಧರ್ಮಗುರು ‘ಧಾರ್ಮಿಕ ಚಟುವಟಿಕೆʼಗಳಿಗಾಗಿ ಮಾನವ ದೇಹದ ಭಾಗಗಳನ್ನು ಸಂಗ್ರಹಿಸಿದ್ದ. ಒಲುವಾಫೆಮಿ ಇದ್ರೀಸ್ ನಿವಾಸದಿಂದ ಪೊಲೀಸರು ಮಾನವ ಕೈಗಳು, 3 ಹೃದಯಗಳು, 3 ಮೂತ್ರಪಿಂಡಗಳು, ಬೆನ್ನುಮೂಳೆ ಮತ್ತು ನಾಲಿಗೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಸ್ಲಾಮಿಕ್ ಧರ್ಮಗುರುವಿಗೆ ಮಾನವ ದೇಹದ ಭಾಗಗಳು ಮತ್ತು 3 ತಲೆಬುರುಡೆಗಳನ್ನು ಪೂರೈಸಿದ ಇನ್ನೊಬ್ಬ ಧರ್ಮಗುರುವನ್ನು ಬಂಧಿಸಲು ನೈಜೀರಿಯನ್ ಪೊಲೀಸರು ಈಗಾಗಲೇ ಶೋಧ ಆರಂಭಿಸಿದ್ದಾರೆ. “ಮಾನವ ಭಾಗಗಳನ್ನು ಅಕ್ರಮವಾಗಿ ಹೊಂದಿದ್ದಕ್ಕಾಗಿ ಒಲುವಾಫೆಮಿ ಇದ್ರೀಸ್ ಎಂಬಾತನನ್ನು ಒಂಡೋ ರಾಜ್ಯ ಪೊಲೀಸ್ ಕಮಾಂಡ್ ಬಂಧಿಸಿದೆ. ಆಲ್ಫಾ ಎಂದು ಜನಪ್ರಿಯವಾಗಿರುವ ಇದ್ರೀಸ್ ಎಂಬಾತ ತನ್ನ ಮನೆಯಲ್ಲಿ ಮಾನವ ಭಾಗಗಳನ್ನು ಇಟ್ಟುಕೊಂಡಿದ್ದಾನೆ ಮತ್ತು ಅವುಗಳನ್ನು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲು ಉದ್ದೇಶಿಸಿದ್ದಾನೆ ಎಂದು 2024ರ ಜನವರಿಯಲ್ಲಿ ಪೊಲೀಸರಿಗೆ ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಸಿಕ್ಕಿತ್ತು. ಅದರಂತೆ ಕಾರ್ಯಾಚರಣೆ ನಡೆಸಲಾಗಿತ್ತು. ದಾಳಿ ವೇಳೆ ಮಾನವ ಕೈಗಳು, 3 ಹೃದಯಗಳು, 3 ಮೂತ್ರಪಿಂಡಗಳು, ಬೆನ್ನುಮೂಳೆ ಮತ್ತು ನಾಲಿಗೆಯನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ವರದಿ ತಿಳಿಸಿದೆ.

“ಪೊಲೀಸರು ಕಾರ್ಯಪ್ರವೃತ್ತರಾಗಿ ಶಂಕಿತನನ್ನು ಬಂಧಿಸಿದ್ದಾರೆ. ಅಕೋಕೊದಲ್ಲಿರುವ ಆತನ ಮನೆಯಲ್ಲಿ ಹೆಚ್ಚಿನ ಶೋಧ ನಡೆಸಲಾಗಿದೆʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ. “ಆರೋಪಿ ತಾನು ಇಸ್ಲಾಮಿಕ್ ಧರ್ಮಗುರು ಎಂದು ಹೇಳಿಕೊಂಡಿದ್ದಾನೆ ಮತ್ತು ಕೆಲವು ಮಾನವ ಭಾಗಗಳನ್ನು ಆತನ ಸ್ನೇಹಿತ ಅಲ್ಹಾಜಿ ಮತ್ತು ಸ್ಯಾಮ್ಯುಯೆಲ್ ಕುಟೆಲು ಎಂಬವರು ಸರಬರಾಜು ಮಾಡಿದ್ದಾರೆʼʼ ಎಂದು ತಿಳಿಸಿದ್ದಾರೆ. ʼʼಇನ್ನೊಬ್ಬ ಧರ್ಮಗುರುವನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: Murder Case: ಆಸ್ತಿ ವಿಚಾರಕ್ಕೆ ಕೊಡಲಿಯಿಂದ ಕೊಚ್ಚಿ ಅಣ್ಣನನ್ನೇ ಕೊಲೆಗೈದ ತಮ್ಮ!

Exit mobile version