ಇಸ್ಲಾಮಾಬಾದ್: ಗುರುವಾರ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ (Pakistan Election) ಮತ ಎಣಿಕೆ ಭರದಿಂದ ಸಾಗಿದೆ(Pakistan Election Results). ಈವರೆಗೆ ನಡೆದ ಮತ ಎಣಿಕೆಯಲ್ಲಿ ಕ್ರಿಕೆಟಿಗ, ಮಾಜಿ ಪಿಎಂ ಇಮ್ರಾನ್ ಖಾನ್ (Ex PM Imran Khan) ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲೇ, ನವಾಜ್ ಷರೀಫ್ (Nawaz Sharif) ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಜ್ (PML-N) ಜತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ. ಪಿಟಿಐ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ಪಿಟಿಐ ಹೇಳಿದೆ.
ಈವರೆಗಿನ ಮತ ಎಣಿಕೆಯಲ್ಲಿ ಇಮ್ರಾನ್ ಖಾನ್ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು, 156 ನ್ಯಾಷನಲ್ ಅಸೆಂಬ್ಲಿ ಸೀಟುಗಳ ಪೈಕಿ 62 ಗೆದ್ದಿದ್ದಾರೆ. ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ 46 ಸ್ಥಾನಗಳನ್ನು ಪಡೆದುಕೊಂಡಿದೆ. 336 ಸೀಟುಗಳ ನ್ಯಾಷನಲ್ ಅಸೆಂಬ್ಲಿಯಲ್ಲಿ ಸರಳ ಬಹುಮತಕ್ಕಾಗಿ 169 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಈಗಿನ ಟ್ರೆಂಡ್ ಪ್ರಕಾರ, ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಿದ್ದಾರೆ.
Shabaz Sharif doesn't look very happy that his powerful friends didn't help in rigging the #PakistanElections2024 hard enough to win a majority 🫡 pic.twitter.com/pJnSTHImSt
— Mariam Salman 🍉 (@Mar_Sal29) February 9, 2024
ಪಿಟಿಐ ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಖಾನ್, ಅವರು ನಾವು ಪಿಪಿಪಿ ಅಥವಾ ಪಿಎಂಎಲ್-ಎನ್ ಜೊತೆ ಸಂಪರ್ಕ ಹೊಂದಿಲ್ಲ. ನಮ್ಮ ಪಕ್ಷವು 150 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಸರ್ಕಾರ ರಚಿಸಲು ಸಾಧ್ಯವಾಗುತ್ತದೆ. ನಾವು ಮೈತ್ರಿ ಮಾಡಿಕೊಳ್ಳುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಪಿಪಿಪಿ ಅಥವಾ ಪಿಎಂಎಲ್-ಎನ್ ಜೊತೆಗೆ ಸಮ್ಮಿಶ್ರ ಸರ್ಕಾರವನ್ನು ರಚಿಸುವ ಉದ್ದೇಶವಿಲ್ಲ. ನಾವು ಕೇಂದ್ರ ಮತ್ತು ಪಂಜಾಬ್‌ನಲ್ಲಿ ಸರ್ಕಾರವನ್ನು ರಚಿಸುತ್ತೇವೆ ಎಂದು ಹೇಳಿದ್ದಾರೆ. ಖೈಬರ್ ಪಖ್ತುಂಖ್ವಾದಲ್ಲಿ ಪಿಟಿಐ ಸ್ಪಷ್ಟ ಮುನ್ನಡೆ ಹೊಂದಿದೆ ಮತ್ತು ಅಲ್ಲಿಯೂ ಸರ್ಕಾರ ರಚಿಸಲಿದೆ ಎಂದು ಅವರು ಹೇಳಿದರು.
ಗೆದ್ದಾಯ್ತು ಎಂದ ನವಾಜ್ ಷರೀಫ್
ಮತ್ತೊಂದೆಡೆ ಗುರುವಾರ ನಡೆದ ಚುನಾವಣೆಯಲ್ಲಿ ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಜ್(ಪಿಎಂಎಲ್-ಎನ್) ನಾಯಕ ನವಾಜ್ ಷರೀಫ್ ಘೋಷಿಸಿಕೊಂಡಿದ್ದಾರೆ. ಪಿಎಂಎಲ್-ಎನ್ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಇಮ್ರಾನ್ ಖಾನ್ ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಪಿಎಂಎಲ್-ಎನ್ ಪಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ.
156 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಇಲ್ಲಿಯವರೆಗೆ 62 ಸ್ಥಾನಗಳನ್ನು ಗೆದ್ದಿದ್ದಾರೆ ಮತ್ತು ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ 46 ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನೂ 110 ಸ್ಥಾನಗಳ ಫಲಿತಾಂಶಗಳು ಬಾಕಿ ಉಳಿದಿವೆ ಮತ್ತು ಯಾವುದೇ ಪಕ್ಷಕ್ಕೆ ಬಹುಮತಕ್ಕೆ 169 ಸ್ಥಾನಗಳು ಬೇಕಾಗುತ್ತವೆ.
ಈ ಸುದ್ದಿಯನ್ನೂ ಓದಿ: Pakistan Elections: ಇಂದು ಪಾಕಿಸ್ತಾನ ಚುನಾವಣೆ; ಇಮ್ರಾನ್ ಖಾನ್, ನವಾಜ್ ಷರೀಫ್ ಅದೃಷ್ಟ ಪರೀಕ್ಷೆ