Site icon Vistara News

Pakistan Inflation: ಪಾಕಿಸ್ತಾನ ಮತ್ತಷ್ಟು ದಿವಾಳಿ; ಲೀಟರ್‌ ಪೆಟ್ರೋಲ್‌ಗೆ 290 ರೂ., ಕೆ.ಜಿ ಹಿಟ್ಟಿಗೆ 800 ರೂ.

Pakistan Inflation

Pakistan grapples with sky-high inflation; Wheat flour costs 800 Pak rupees

ಇಸ್ಲಾಮಾಬಾದ್:‌ ಉಗ್ರರ ಪೋಷಣೆ, ಅವರಿಗೆ ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನವು (Pakistan) ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಇನ್ನು, ಹಣದುಬ್ಬರದ ಏರಿಕೆಯಿಂದಾಗಿ (Pakistan Inflation) ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಹೌದು, ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. (ಪಾಕಿಸ್ತಾನದ ರೂಪಾಯಿ) ಆದರೆ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಇದರಿಂದಾಗಿ ಪಾಕಿಸ್ತಾನದ ನಾಗರಿಕರು ತತ್ತರಿಸಿ ಹೋಗಿದ್ದಾರೆ.

“ಪಾಕಿಸ್ತಾನದ ಸರ್ಕಾರವು ಸಾಮಾನ್ಯ ಜನರ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದರಿಂದಾಗಿಯೇ ದಿನೇದಿನೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಪಾಕಿಸ್ತಾನದಲ್ಲಿ ಈಗ ಗೋಧಿ ಕಟಾವು ಮಾಡುವ ಸೀಸನ್.‌ ಹೀಗಿದ್ದರೂ, ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಕೊಡಬೇಕಾಗಿದೆ. ಇನ್ನು, ಒಂದು ರೊಟ್ಟಿಗೆ 25 ರೂ. ನೀಡಬೇಕಾಗಿದೆ. ಇದರಿಂದಾಗಿ ಸಾಮಾನ್ಯ ಜನ ಮೂರು ಹೊತ್ತು ಊಟ ಮಾಡಲು ಕೂಡ ತೊಂದರೆಯಾಗುತ್ತಿದೆ. ಇದಕ್ಕೂ ಮೊದಲು ಒಂದು ಕೆ.ಜಿ ಹಿಟ್ಟಿಗೆ 230 ರೂ. ಇತ್ತು” ಎಂದು ಕರಾಚಿಯಲ್ಲಿ ದಿನಸಿ ಅಂಗಡಿ ಇಟ್ಟಿರುವ ಅಬ್ದುಲ್‌ ಹಮೀದ್‌ ಎಂಬುವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆ ಶಿಕ್ಷಕರಾಗಿರುವ ಅಬ್ದುಲ್‌ ಜಬ್ಬರ್‌ ಅವರು ಕೂಡ ಸಂಕಷ್ಟದ ಕುರಿತು ಮಾಹಿತಿ ನೀಡಿದ್ದಾರೆ. “ದಿನಕ್ಕೆ 16 ಗಂಟೆ ಲೋಡ್‌ ಶೆಡ್ಡಿಂಗ್‌ ಇರುತ್ತದೆ. ಆದರೂ, ಮಾಸಾಂತ್ಯಕ್ಕೆ ಹೆಚ್ಚಿನ ವಿದ್ಯುತ್‌ ಬಿಲ್‌ ಪಾವತಿಸಬೇಕು. ಒಂದು ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ಆದರೆ, ನಿತ್ಯ 500 ರೂ. ದುಡಿಯುವವರ ಪಾಡೇನು? ಅಡುಗೆ ಅನಿಲದ ಸಿಲಿಂಡರ್‌ ಬೆಲೆಯೂ ಗಗನಕ್ಕೇರಿದೆ. ಇದರಿಂದ ಜನರ ಜೀವನ ದುಸ್ಥರವಾಗಿದೆ” ಎಂದು ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಹೀಗಿದೆ

ಒಂದು ಲೀಟರ್‌ ಹಾಲಿಗೆ 212 ರೂ., ಕೆ.ಜಿ ಅಕ್ಕಿಗೆ 330 ರೂ., ಒಂದು ಕೆ.ಜಿ ಸೇಬಿಗೆ 300 ರೂ., ಒಂದು ಕೆ.ಜಿ ಟೊಮ್ಯಾಟೊಗೆ 125 ರೂ., ಒಂದು ಕೆ.ಜಿ ಈರುಳ್ಳಿ 125 ರೂ., ಒಂದು ಲೀಟರ್‌ ಪೆಟ್ರೋಲ್‌ಗೆ 290 ರೂ. ಇದೆ. ದಿನೇದಿನೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಪಾಕಿಸ್ತಾನದ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ನಂತರದ ದುಸ್ಥಿತಿ ಹೀಗೆಯೇ ಮುಂದುವರಿದಿರುವುದು ಅವರನ್ನು ಆತಂಕಕ್ಕೆ ದೂಡಿದೆ.

ಐಎಂಎಫ್‌ ಹಣವೂ ಸಿಗುತ್ತಿಲ್ಲ

ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಹೆಣಗಾಡುತ್ತಿದೆ. ಈಗಾಗಲೇ ಐಎಂಎಫ್‌ 1.10 ಶತಕೋಟಿ ಡಾಲರ್‌ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್‌ ಸಾಲ ನೀಡಿ ಎಂಬುದಾಗಿ ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್‌ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Pakistan Spy: ATS ಭರ್ಜರಿ ಕಾರ್ಯಾಚರಣೆ; ಪಾಕಿಸ್ತಾನ ಗೂಢಾಚಾರ ಅರೆಸ್ಟ್‌

Exit mobile version