Site icon Vistara News

Pakistan: ಛೇ..ಇವನೆಂಥಾ ಪಾಪಿ ತಂದೆ! ಚಿಕಿತ್ಸೆಗೆ ಹಣ ಇಲ್ಲವೆಂದು 15 ದಿನದ ಹಸುಳೆಯ ಜೀವಂತ ಸಮಾಧಿ

Pakistan

ಇಸ್ಲಾಮಾಬಾದ್‌: ಚಿಕಿತ್ಸೆಗೆ ಹಣವಿಲ್ಲ ಎಂಬ ಕಾರಣಕ್ಕೆ ಹೆತ್ತ ತಂದೆಯೇ ತನ್ನ 15 ದಿನದ ಹಸುಳೆಯನ್ನು ಜೀವಂತ ಸಮಾಧಿ(Buried infant) ಮಾಡಿರುವ ಹೀನಾಯ ಕೃತ್ಯ ಪಾಕಿಸ್ತಾನ(Pakistan)ದಲ್ಲಿ ನಡೆದಿದೆ. ಸಿಂಧ್‌ ಪ್ರಾಂತ್ಯದ ನೌಶಾಹ್ರೋ ಫಿರೋಜ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಯ್ಯಬ್‌ ಎಂಬಾತ ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಈತ ತನ್ನ ಪುಟ್ಟ ಹೆಣ್ಣುಮಗುವನ್ನು ಮಣ್ಣಿನಲ್ಲಿ ಹೂತು ಕೊಲೆ ಮಾಡಿದ್ದಾನೆ.

ತಾರುಶಾಹ್‌ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತೀರ ಹಣಕಾಸಿನ ಸಮಸ್ಯೆ ಯಿಂದಾಗಿ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೇ ಇರುವ ಕಾರಣ ಮಗುವನ್ನು ಮಣ್ಣುನಲ್ಲಿ ಹೂತಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ತಯ್ಯಬ್‌ ವಿರುದ್ಧ ಪ್ರರಕರಣ ದಾಖಲಾಗಿದ್ದು, ಆತನ ಹೂತಿಟ್ಟ ಮಗುವಿನ ಶವವನ್ನು ಹೊರ ತೆಗೆದಿರುವ ಪೊಲೀಸರು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.

ಒಂದು ವರ್ಷದ ಹಿಂದೆ ರಾಜ್ಯದಲ್ಲೂ ಇಂತಹದ್ದೇ ಒಂದು ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ (Murder Case) ನಡೆದಿತ್ತು. ಪಾಪಿ ತಂದೆಯೋರ್ವ ಇಬ್ಬರು ಮಕ್ಕಳನ್ನು ಕೊಲೆಗೈದಿರುವ ಘಟನೆ ವರದಿಯಾಗಿತ್ತು. ಆದರ್ಶ್ (4) ಹಾಗೂ ಅಮೂಲ್ಯ (3) ಕೊಲೆಯಾಗಿರುವ ಮಕ್ಕಳು. ಪಾಪಿ ತಂದೆ ಮೋಹನ್‌ ಕುಮಾರ್‌ ಎಂಬಾತ, ಸುತ್ತಿಗೆಯಿಂದ ಹೊಡೆದು ಮಕ್ಕಳ ಹತ್ಯೆ ಮಾಡಿ ಪರಾರಿಯಾಗಿದ್ದ. ಪತ್ನಿಗೂ ಹಲ್ಲೆ ಮಾಡಿದ್ದ.

ಮೂಲತಃ ಗುಲ್ಬರ್ಗದವರಾಗಿರುವ ಮೋಹನ್ ಕುಮಾರ್ ಕುಟುಂಬ ಮರಳಗಾಲದ ವಿರುಪಾಕ್ಷ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಾಲಕನನ್ನು ವಿವಸ್ತ್ರಗೊಳಿಸಿ ಹಲ್ಲೆ

ಲಾಹೋರ್‌ನ ಡಿಫೆನ್ಸ್ ಬಿ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ದಂಪತಿ ವಿರುದ್ಧ 13 ವರ್ಷದ ಮನೆಕೆಲಸದ ಬಾಲಕಿ ವಿವಸ್ತ್ರಗೊಳಿಸಿ ದೈಹಿಕ ಚಿತ್ರಹಿಂಸೆ ಮತ್ತು ನಿಂದನೆ ಪ್ರಕರಣ ದಾಖಲಾಗಿದೆ. ಕಾರ್ಮಿಕನ ತಾಯಿ ನೀಡಿದ ದೂರಿನ ಮೇರೆಗೆ ಕಾನೂನು ಜಾರಿ ಅಧಿಕಾರಿಗಳು ಆರೋಪಿ ಹಸ್ಸಮ್ ವಿರುದ್ಧ ಪ್ರಥಮ ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾಸನ್ ನನ್ನು ಬಂಧಿಸಲಾಗಿದ್ದು, ಆತನ ಪತ್ನಿಯನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ವರದಿಯಾಗಿದೆ.

ಎಫ್‌ಐಆರ್‌ನ ಪ್ರಕಾರ, ಕಳ್ಳತನದ ಶಂಕೆಯ ಮೇರೆಗೆ ತೆಹ್ರೀಮ್ ಎಂಬ ಬಾಲಕಿಯನ್ನು ಬೆತ್ತಲೆಗೊಳಿಸಿ ನಿರಂತರ ದೈಹಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ತನ್ನ ಮಗಳ ಕೈ ಮತ್ತು ಮೂಗಿಗೆ ಗಂಭೀರ ಗಾಯಗಳಾಗಿವೆ ಎಂದು ಆಕೆಯ ತಾಯಿ ಎಫ್‌ಐಆರ್‌ನಲ್ಲಿ ದೂರಿದ್ದಾರೆ. ತೆಹ್ರೀಮ್ ವಿರುದ್ಧದ ಖಂಡನೀಯ ಕೃತ್ಯಗಳಿಗೆ ಕಾರಣರಾದವರನ್ನು ಶೀಘ್ರವಾಗಿ ನ್ಯಾಯಾಂಗಕ್ಕೆ ತರಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕ್ಯಾಂಟ್ ಭರವಸೆ ನೀಡಿದ್ದಾರೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: Mumbai Rain : ಭಾನುವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತ

Exit mobile version