Site icon Vistara News

Pakistan Violence: ಕುರಾನ್‌ಗೆ ಅಪಮಾನ; ಪೊಲೀಸ್‌ ಸ್ಟೇಶನ್‌ಗೆ ಬೆಂಕಿ..ಠಾಣೆಯೊಳಗೇ ಆರೋಪಿಯ ಬರ್ಬರ ಕೊಲೆ

Pakistan Violence

ಇಸ್ಲಾಮಾಬಾದ್‌: ಇಸ್ಲಾಂ ಧರ್ಮ ಗ್ರಂಥ ಕುರಾನ್‌(Quran)ಗೆ ಅಪವಿತ್ರಗೊಳಿಸಿದ ಎಂಬ ಆರೋಪದಲ್ಲಿ ಉದ್ರಿಕ್ತ ಗುಂಪು ವ್ಯಕ್ತಿಯೊಬ್ಬನನ್ನು ಠಾಣೆಯಲ್ಲೇ ಶೂಟ್‌ ಮಾಡಿ ಕೊಂದಿರುವ ಘಟನೆ ಪಾಕಿಸ್ತಾನ(Pakistan Violence)ದಲ್ಲಿ ನಡೆದಿದೆ. ಖೈಬರ್‌ ಫಕ್ತುನ್‌ಖ್ವಾ ಜಿಲ್ಲೆಯ ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಭಾರೀ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್‌ ಬಂದೋಬಸ್ತ್‌ ವಹಿಸಲಾಗಿದೆ.

ಘಟನೆ ವಿವರ:

ಸ್ವಾತ್‌ ತಾಲೂಕಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕುರಾನ್‌ ಗ್ರಂಥಕ್ಕೆ ಅವಹೇಳನ ಮಾಡಿದ ಆರೋಪದದಲ್ಲಿ ವ್ಯಕ್ತಿಯೊಬ್ಬನನ್ನು ಮಧ್ಯಾನ್‌ ಸ್ಟೇಷನ್‌ನ ಪೊಲೀಸರು ಅರೆಸ್ಟ್‌ ಮಾಡಿ ಠಾಣೆಗೆ ಕರೆತಂದಿದ್ದರು. ಇದರ ಬೆನ್ನಲ್ಲೇ ಠಾಣೆ ಎದುರು ನೂರಾರು ಮಂದಿ ಜಮಾಯಿಸಿದ್ದು, ಆರೋಪಿಯನ್ನು ತಮ್ಮ ಕೈಗೊಪ್ಪಿಸುವಂತೆ ಜನ ಆಗ್ರಹಿಸಿದ್ದರು. ಇದಕ್ಕೆ ಪೊಲೀಸರು ಒಪ್ಪದೇ ಇದ್ದಾರೆ ಪೊಲೀಸರು ಮತ್ತು ಜನ ನಡುವೆ ಭಾರೀ ಘರ್ಷಣೆ ಉಂಟಾಗಿತ್ತು. ಕೊನೆಗೆ ವಿಧಿಯಿಲ್ಲದೇ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿಚಾರ್ಜ್‌ ನಡೆಸಿದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣ ಮಧ್ಯಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಗುಂಪು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದೆ. ಬಳಿಕ ಕೆಲವರು ನೇರವಾಗಿ ಪೊಲೀಸ್‌ ಠಾಣೆಗೆ ನುಗ್ಗಿ ಆರೋಪಿ ಶೂಟ್‌ ಮಾಡಿ ಕೊಂದು ಆತನ ಮೃತದೇಹವನ್ನು ಹೊರಗೆಳೆದು ಅದನ್ನು ಮರಕ್ಕೆ ನೇತು ಹಾಕಿ ವಿಕೃತಿ ಮೆರೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಕೆಲವು ಪೊಲೀಸರಿಗೂ ಗಂಭೀರ ಗಾಯಗಳಾಗಿವೆ ಎಂದು ಜಿಲ್ಲ ಪೊಲೀಸ್‌ ವರಿಷ್ಟಾಧಿಕಾರಿ ಜಹೀದುಲ್ಲಾ ಹೇಳಿದ್ದಾರೆ.

ಇನ್ನು ಪೊಲೀಸರ ಮಾಹಿತಿ ಪ್ರಕಾರ, ಪಂಜಾಬ್‌ನ ಸಿಯಾಲ್ಕೋಟ್‌ ಜಿಲ್ಲೆಯ ವ್ಯಕ್ತಿ ಮಧ್ಯಾನ್‌ ತಾಲೂಕಿನಲ್ಲಿ ಮಂಗಳವಾರ ರಾತ್ರಿ ಕುರಾನ್‌ನ ಕೆಲವು ಪುಟಗಳನ್ನು ಹರಿದು ಸುಟ್ಟು ಹಾಕಿದ್ದ. ಇದರ ವಿರುದ್ಧ ಕೇಸ್‌ ದಾಖಲಿಸಲಾಗಿದ್ದು, ಆತನನ್ನು ಅರೆಸ್ಟ್‌ ಮಾಡಲಾಗಿತ್ತು. ಇದು ತಿಳಿಯುತ್ತಿದ್ದಂತೆ ನೂರಾರು ಮಂದಿ ಠಾಣೆ ಎದುರು ಜಮಾಯಿಸಿದ್ದರು.

ಮುಖ್ಯಮಂತ್ರಿ ಕೆಪಿಕೆ ಅಲಿ ಅಮೀನ್ ಗಂಡಾಪುರ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ವರದಿ ಕೇಳಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಐಜಿಪಿಗೆ ಸಿಎಂ ಸೂಚಿಸಿದ್ದು, ಜನರು ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದಾರೆ.

‌ಇದನ್ನೂ ಓದಿ: Actor Darshan: ದರ್ಶನ್‌ ಗ್ಯಾಂಗ್‌ನಿಂದ ಪೊಲೀಸರು ವಶಪಡಿಸಿಕೊಂಡದ್ದೇನು?

Exit mobile version