ಇಸ್ಲಾಮಾಬಾದ್: ಭಾರತಕ್ಕೆ (Terrorism To India) ‘ಭಯೋತ್ಪಾದನೆ’ ಮತ್ತು ಚೀನಾಗೆ ಕತ್ತೆಗಳ (Donkeys to China) ರಫ್ತು ಮಾಡುವ ಮೂಲಕ ಕುಖ್ಯಾತಿ ಗಳಿಸಿರುವ ಪಾಕಿಸ್ತಾನ ಈಗ ವಿಚಿತ್ರ ‘ರಫ್ತು’ ಮೂಲಕ ಮತ್ತೆ ಸುದ್ದಿ ಮಾಡುತ್ತಿದೆ(Pakistan Exports Beggars). ಪಾಕಿಸ್ತಾನದ ರಫ್ತು ಪಟ್ಟಿಯಲ್ಲೀಗ ಭಿಕ್ಷುಕರೂ ಸೇರಿದ್ದಾರೆ!(Pakistani Beggars) ಇದರರ್ಥ, ಪಾಕಿಸ್ತಾನದ ಭಿಕ್ಷುಕರ ಹಾವಳಿ ವಿದೇಶಗಳಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಈ ಸಮಸ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ಸೌದಿ ಅರೆಬಿಯಾ (Saudi Arabia) ಹಾಗೂ ಇರಾಕ್‌ನಂಥ (Iraq) ರಾಷ್ಟ್ರಗಳು ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಭಿಕ್ಷಕರು ತಮ್ಮ ದೇಶಕ್ಕೆ ಬರದಂತೆ ತಡೆಯಬೇಕು ಎಂದು ಕೇಳಿಕೊಂಡಿವೆ. ಮತ್ತೊಂದೆಡೆ, ಮೆಕ್ಕಾ ಗ್ರ್ಯಾಂಡ್ ಮಸೀದಿಯೊಳಗೇ ಬಂಧಿತರಾಗುತ್ತಿರುವ ಜೇಬುಕಳ್ಳರ ಪೈಕಿ ಹೆಚ್ಚಿನವರು ಪಾಕಿಸ್ತಾನದವೇ ಆಗಿದ್ದಾರೆ! (Pakistani Pickpockets)
ದಾಖಲೆಯ ಹಣದುಬ್ಬರ ಮತ್ತು ಗಗನಕ್ಕೇರುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳಿಂದ ಬಡ ಪಾಕಿಸ್ತಾನಿಗಳು ಹೆಚ್ಚು ಬಳಲುತ್ತಿರುವುದನ್ನು ನೋಡಿದರೆ, ಪಾಕಿಸ್ತಾನದಿಂದ ಭಿಕ್ಷುಕರು ಹೆಚ್ಚಿನ ಸಂಖ್ಯೆಯಲ್ಲಿ ಪಶ್ಚಿಮ ಏಷ್ಯಾದ ದೇಶಗಳಿಗೆ ವಲಸೆಹೋಗುತ್ತಿದ್ದಾರೆ. ಈ ಕುರಿತು ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಯಿ ಸಮಿತಿ ಇತ್ತೀಚೆಗೆ ತನ್ನ ಆತಂಕವನ್ನು ಹೊರ ಹಾಕಿದೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಬಂಧಿತರಾಗಿರುವ ಶೇ.90ರಷ್ಟು ಭಿಕ್ಷುಕರು ಪಾಕಿಸ್ತಾನದವರಾಗಿದ್ದಾರೆ. ಈ ಭಿಕ್ಷುಕರು ಇರಾಕ್ ಮತ್ತು ಸೌದಿ ಅರೇಬಿಯಾದಲ್ಲಿ ಜೈಲುಗಳಲ್ಲಿದ್ದಾರೆ ಎಂದು ಸಾಗರೋತ್ತರ ಪಾಕಿಸ್ತಾನಿಗಳ ಕಾರ್ಯದರ್ಶಿ ಜೀಶಾನ್ ಖಂಜಾದಾ ಹೇಳಿದ್ದಾರೆ.
ತೀರ್ಥಯಾತ್ರೆ ವೀಸಾದಲ್ಲಿ ವಿದೇಶಕ್ಕೆ ಹೋಗುವ ಭಿಕ್ಷುಕರು!
ಪಾಕಿಸ್ತಾನಿ ಭಿಕ್ಷುಕರು ಉಮ್ರಾ ವೀಸಾದಲ್ಲಿ ಝಿಯಾರತ್ (ತೀರ್ಥಯಾತ್ರೆ) ನೆಪದಲ್ಲಿ ವಿದೇಶಕ್ಕೆ ಪ್ರಯಾಣಿಸುತ್ತಾರೆ. ಆದರೆ, ಆ ದೇಶಗಳಿಂದ ವಾಪಸ್ ಬರದೆ, ಭಿಕ್ಷಾಟನೆಯಲ್ಲಿ ತೊಡಗುತ್ತಾರೆ ಎಂದು ಇರಾಕ್ ಮತ್ತು ಸೌದಿ ಅರೇಬಿಯಾದ ರಾಯಭಾರಿಗಳು ನಮಗೆ ತಿಳಿಸಿದ್ದಾರೆ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಮೆಕ್ಕಾದ ಗ್ರ್ಯಾಂಡ್ ಮಸೀದಿಯೊಳಗೆ ಬಂಧಿಸಲಾದ ಹೆಚ್ಚಿನ ಜೇಬುಕಳ್ಳರು ಪಾಕಿಸ್ತಾನಿ ಪ್ರಜೆಗಳು ಎಂದು ಜೀಶಾನ್ ಖಂಜಾದಾ ಅವರು ಹೇಳಿದರು. ಈ ಕುರಿತು ನ್ಯೂಸ್ ಇಂಟರ್‌ನ್ಯಾಶನಲ್ ಕೂಡ ವರದಿ ಮಾಡಿದೆ.
ಸೆನೆಟರ್ ಮಂಜೂರ್ ಕಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜೀಶನ್ ಖಾಂಜದಾ ಅವರು ಸುಮಾರು 10 ಮಿಲಿಯನ್ ಪಾಕಿಸ್ತಾನಿ ನಾಗರಿಕರು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದು ಸ್ಥಾಯಿ ಸಮಿತಿಗೆ ತಿಳಿಸಿದರು. ವೀಸಾ ಪಡೆದುಕೊಂಡು ಹೋಗುವ ಈ ಜನರು ವಿದೇಶಗಳಲ್ಲಿ ಭಿಕ್ಷೆ ಬೇಡುತ್ತಾರೆ. ಪಾಕಿಸ್ತಾನದಿಂದ ಮಧ್ಯ ಪ್ರಾಚ್ಯಕ್ಕೆ ತೆರಳುವ ವಿಮಾನಗಳು ಸಾಮಾನ್ಯವಾಗಿ ಭಿಕ್ಷುಕರಿಂದಲೇ ಸಂಪೂರ್ಣವಾಗಿ ತುಂಬಿರುತ್ತವೆ ಎಂದು ಅವರು ಸಮಿತಿಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pakistan: ನೋಡಿ ಪಾಪಿ ಪಾಕಿಸ್ತಾನ ಎಂಥ ಕೆಲ್ಸಾ ಮಾಡ್ತಿದೆ! ಹೆಂಗಸರು, ಮಕ್ಕಳನಾ ಬಳಸಿಕೊಳ್ತಿದೆಯಂತೆ
ಸೌದಿ ಅರೆಬಿಯಾ, ಇರಾಕ್ ಜೈಲುಗಳು ಪಾಕ್ ಭಿಕ್ಷುಕರು
ಈ ವ್ಯಕ್ತಿಗಳು ವೀಸಾಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ನಂತರ ಇತರ ದೇಶಗಳಲ್ಲಿ ಭಿಕ್ಷಾಟನೆಯನ್ನು ಆಶ್ರಯಿಸುತ್ತಾರೆ, ಪಾಕಿಸ್ತಾನದಿಂದ ಮಧ್ಯಪ್ರಾಚ್ಯಕ್ಕೆ ವಿಮಾನಗಳು ಸಾಮಾನ್ಯವಾಗಿ ಭಿಕ್ಷುಕರಿಂದ ಸಂಪೂರ್ಣವಾಗಿ ತುಂಬಿರುತ್ತವೆ ಎಂದು ಅವರು ಹೇಳಿದರು.
ಯುಎಇಯಲ್ಲಿ 1,600,000 ಮತ್ತು ಕತಾರ್‌ನಲ್ಲಿ 200,000 ಪಾಕಿಸ್ತಾನಿಗಳು ಇರುವ ಬಗ್ಗೆ ಸಮಿತಿಗೆ ಇದೇ ವೇಳೆ ತಿಳಿಸಲಾಯಿತು. ಇದಲ್ಲದೆ, ಇರಾಕಿ ಮತ್ತು ಸೌದಿ ಅರೇಬಿಯಾದ ರಾಜತಾಂತ್ರಿಕರು ತಮ್ಮ ಜೈಲುಗಳು ಪಾಕಿಸ್ತಾನಿ ಭಿಕ್ಷುಕರಿಂದ ತುಂಬಿ ತುಳುಕುತ್ತಿವೆ ಎಂದು ಹೇಳಿಕೊಂಡಿದ್ದಾರೆ, ಈ ವಿಷಯವು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.