ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಾಗಿರುವ, ಉತ್ತಮ ನಾಯಕ ಸಿಗದೆ ಆಡಳಿತಾತ್ಮಕವಾಗಿಯೂ ಅರಾಜಕತೆಯಿಂದ ಕೂಡಿರುವ, ಉಗ್ರರ ಪೋಷಣೆಗಾಗಿ ಜಾಗತಿಕವಾಗಿ ಹಣಕಾಸು ನೆರವು ಸಿಗದೆ ಒದ್ಡಾಡುತ್ತಿರುವ ಪಾಕಿಸ್ತಾನವೀಗ (Pakistan) ಚೀನಾದ (China) ನೆರವಿನಿಂದ ಮೊದಲ ಚಂದ್ರಯಾನ (Pakistan Lunar Mission) ಕೈಗೊಂಡಿದೆ. ಚೀನಾದ ನೆರವಿನಿಂದ ಪಾಕಿಸ್ತಾನ ಕೈಗೊಂಡಿರುವ ಚಂದ್ರಯಾನವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ನಡೆಸಲಿದೆ ಎಂದು ತಿಳಿದುಬಂದಿದೆ.
ಸುಮಾರು 53 ದಿನಗಳವರೆಗೆ ಪಾಕಿಸ್ತಾನದ ಚಂದ್ರಯಾನದ ಉಪಗ್ರಹವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಚಂದ್ರಯಾನದ ಉಡಾವಣೆ ಯಶಸ್ವಿಯಾಗುತ್ತಲೇ ಪ್ರಧಾನಿ ಶೆಹಬಾಜ್ ಷರೀಫ್ ಅವರು ದೇಶದ ಜನರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಅಣ್ವಸ್ತ್ರದಲ್ಲಿ ಹೇಗೆ ಪಾಕಿಸ್ತಾನದ ವಿಜ್ಞಾನಿಗಳು ಪಾರಮ್ಯ ಸಾಧಿಸಿದ್ದರೋ, ಅದೇ ರೀತಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದು ದೇಶವೇ ಹೆಮ್ಮೆ ಪಡುವ ವಿಚಾರವಾಗಿದೆ” ಎಂಬುದಾಗಿ ನೂತನ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Pakistan x China Mission Moon. Pakistan launches first lunar mission. All political differences aside, this is a moment to cheer together. 🇵🇰 pic.twitter.com/dn46D3RFXH
— Faizan (@faizannriaz) May 3, 2024
ಚೀನಾದ ಶಾಂಘೈ ವಿಶ್ವವಿದ್ಯಾಲಯ ಎಸ್‌ಜೆಟಿಯು ಹಾಗೂ ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಪಾರ್ಕೊ ಜತೆಗೂಡಿ ಚಂದ್ರಯಾನ ಮಿಷನ್ ಕೈಗೊಳ್ಳಲಾಗಿದೆ. ಐಕ್ಯೂಬ್-ಕ್ಯೂ ಸ್ಯಾಟಲೈಟ್ (iCube-Q Satellite) ಎರಡು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಇವು ಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಲಿವೆ. ಇದು ಚೀನಾದ ಆರನೇ ಚಂದ್ರಯಾನವಾಗಿದ್ದು, ಚಂದ್ರನ ಅಂಗಳದಲ್ಲಿರುವ ಮಣ್ಣು ಹಾಗೂ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಭಾರತಕ್ಕಿಂತ ಪಾಕ್ 16 ವರ್ಷ ಹಿಂದೆ
ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಚೀನಾದ ನೆರವಿನಿಂದ ಮೊದಲ ಚಂದ್ರಯಾನ ಕೈಗೊಂಡಿರುವ ಪಾಕಿಸ್ತಾನವು ಭಾರತಕ್ಕಿಂತ 16 ವರ್ಷ ಹಿಂದಿದೆ ಎಂಬುದು ಸಾಬೀತಾಗಿದೆ. ಭಾರತದ ಇಸ್ರೋ 2008ರಲ್ಲಿ ಮೊದಲ ಬಾರಿಗೆ ಚಂದ್ರಯಾನ ಕೈಗೊಂಡು ಯಶಸ್ವಿಯಾಗಿತ್ತು. ಈಗ ಭಾರತವು ಮೂರನೇ ಬಾರಿ ಚಂದ್ರಯಾನ ಕೈಗೊಂಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಲ್ಯಾಂಡರ್ ಹಾಗೂ ರೋವರ್‌ಗಳನ್ನು ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಖ್ಯಾತಿಗೆ ಭಾಜನವಾಗಿದೆ.
ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್ ಬಚಾವ್ ಆಗಿದ್ದು ಹೇಗೆ?