Site icon Vistara News

Physical abuse: ಐದು ದಿನಗಳಿಂದ ನಿರಂತರ ಗ್ಯಾಂಗ್‌ರೇಪ್‌; ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಬೆಲ್ಜಿಯಂ ಮಹಿಳೆ ರಸ್ತೆ ಬದಿಯಲ್ಲಿ ಪತ್ತೆ

physical abuse

ಇಸ್ಲಮಾಬಾದ್‌: ಪಾಕಿಸ್ತಾನ(Pakistan)ದಲ್ಲಿ 78ನೇ ಸ್ವಾತಂತ್ರ್ಯ ದಿನದಂದೇ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಲ್ಜಿಯಂ ಮೂಲದ ಮಹಿಳೆಯ ಮೇಲೆ ಕಳೆದ ಐದು ದಿನಗಳಿಂದ ನಿರಂತರ ಸಾಮೂಹಿಕ ಅತ್ಯಾಚಾರ(Gangrape) ನಡೆದಿದೆ. ಘೋರ ಕೃತ್ಯದ ಬಳಿಕ ಮಹಿಳೆಯ ಕೈ ಕಾಲು ಕಟ್ಟಿ ಆಕೆಯನ್ನು ರಸ್ತೆಯಲ್ಲಿ ಎಸೆದಿರುವ ಘಟನೆ ವರದಿಯಾಗಿದೆ. ಇನ್ನು ಈ ಪ್ರಕರಣ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ(Physical abuse).

ಪಾಕಿಸ್ತಾನದ 78ನೇ ಸ್ವಾತಂತ್ರ್ಯ ದಿನದಂದು ಆಗಸ್ಟ್ 14 ರಂದು ಇಸ್ಲಾಮಾಬಾದ್‌ನ ಬೀದಿಗಳಲ್ಲಿ 28 ವರ್ಷದ ಬೆಲ್ಜಿಯಂ ಮಹಿಳೆಯೊಬ್ಬರು ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತನ್ನ ಮೇಲೆ ಐದು ದಿನಗಳ ಕಾಲ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಮಹಿಳೆಯನ್ನು ಬೀದಿಯಲ್ಲಿ ಎಸೆಯಲಾಗಿದ್ದು, ಆಕೆಯ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿದೆ ಎಂದು ಸಾಮಾ ಟಿವಿ ವರದಿ ಮಾಡಿದೆ. ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಪಂದಿಸಿ ಆಕೆಯನ್ನು ರಕ್ಷಿಸಿದ್ದಾರೆ. ಐದು ದಿನಗಳಿಂದ ಅನೇಕ ಪುರುಷರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಕೆಯ ದೂರಿನಾಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ತಮೀಜುದ್ದೀನ್ ಎಂಬ ಶಂಕಿತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಪ್ರಕರಣದ ದಾಖಲಾದ ನಂತರ, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಪರಿಶೀಲನೆ ನಡೆಸಿದ್ದಾರೆ. ಇನ್ನು ಈಕೆ ಪ್ರವಾಸಕ್ಕೆಂದು ಪಾಕಿಸ್ತಾನಕ್ಕೆ ಬಂದಿದ್ದಳು. ಈ ವೇಳೆ ದುಷ್ಕರ್ಮಿಗಳಿ ಆಕೆಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

ಆ ವ್ಯಕ್ತಿಯನ್ನು ಅಪ್ಬರ ಪೊಲೀಸ್ ಠಾಣೆ ಅಧಿಕಾರಿಗಳು ತಮಿಜುದ್ದೀನ್‌ನನ್ನು ಆತನ ಮನೆಯಲ್ಲಿ ಬಂಧಿಸಿದ್ದಾರೆ ಎಂದು ಪಾಕಿಸ್ತಾನ್ ಟುಡೇ ವರದಿ ಮಾಡಿದೆ. ತಮಿಜುದ್ದೀನ್, ತನ್ನ ವಿಚಾರಣೆಯ ಸಮಯದಲ್ಲಿ, ಮಹಿಳೆ ಮಾನಸಿಕವಾಗಿ ಅಸ್ಥಿರಳಾಗಿದ್ದಳು ಮತ್ತು ಘಟನೆಯ ಸಮಯದಲ್ಲಿ ವೈಯಕ್ತಿಕ ಗುರುತಿನ ಮತ್ತು ಪ್ರಯಾಣದ ದಾಖಲೆಗಳನ್ನು ಆಕೆ ಕಳೆದುಕೊಂಡಿದ್ದಳು ಎಂದು ಹೇಳಿದ್ದಾನೆ.

ಇದನ್ನೂ ಓದಿ: Pakistani Labours: ಭಿಕ್ಷಾಟನೆ, ಅಪರಾಧ ಕೃತ್ಯ; ಪಾಕಿಸ್ತಾನಿಯರನ್ನು ಒದ್ದು ಓಡಿಸುತ್ತಿರುವ ಗಲ್ಫ್‌ ರಾಷ್ಟ್ರಗಳು!

Exit mobile version