Site icon Vistara News

PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ

PM Modi Poland Visit

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಇಂದು ಸಂಜೆ ಪೋಲೆಂಡ್‌(Poland)ಗೆ ಭೇಟಿ ನೀಡಿದ್ದಾರೆ(PM Modi Poland Visit). 45 ವರ್ಷಗಳ ನಂತರ ಮಧ್ಯ ಯುರೋಪಿಯನ್ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ. ಭಾರತ ಮತ್ತು ಪೋಲೆಂಡ್ ತಮ್ಮ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆ ಪ್ರಧಾನಿ ಪೋಲೆಂಡ್​ನ ವಾರ್ಸಾಗೆ ಭೇಟಿ ಕೊಟ್ಟಿದ್ದಾರೆ.

ಇನ್ನು ಪೋಲೆಂಡ್‌ಗೆ ಬಂದಿಳಿಯುತ್ತಿದ್ದಂತೆ ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ಬಂದಿಳಿದೆ. ಇಲ್ಲಿನ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಪೋಲೆಂಡ್ ಸ್ನೇಹವನ್ನು ಬಲಪಡಿಸುತ್ತದೆ ಮತ್ತು ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಬರೆದಿದ್ದಾರೆ.

ಗುಜರಾತಿ ನೃತ್ಯದ ಮೂಲಕ ಮೋದಿಗೆ ಸ್ವಾಗತ

ಪೋಲೆಂಡ್​ನ ವಾರ್ಸಾದಲ್ಲಿರುವ ಹೋಟೆಲ್​ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಟೆಲ್‌ನಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರು ಸ್ವಾಗತಿಸಿದ್ದಾರೆ. ಈ ವೇಳೆ ಭಾರತೀಯ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸುವ ಮೂಲಕ ಪೋಲೆಂಡ್​ನ ನೃತ್ಯ ಕಲಾವಿದರು ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ದೂರದ ಪೋಲೆಂಡ್​ನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣವನ್ನು ಕಂಡು ಖುಷಿಯಿಂದ ಮೋದಿ ಚಪ್ಪಾಳೆ ತಟ್ಟಿ, ಕಲಾವಿದರಿಗೆ ಶಹಬ್ಬಾಸ್ ಹೇಳಿದ್ದಾರೆ.

ಇದನ್ನೂ ಓದಿ: PM Narendra Modi: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

Exit mobile version