ನವದೆಹಲಿ: ಉಕ್ರೇನ್ ಪ್ರವಾಸದಲ್ಲಿರುವ(PM Modi Ukraine Visit) ಪ್ರಧಾನಿ ನರೇಂದ್ರ ಮೋದಿ(PM Narendra Modi) ಉಕ್ರೇನ್‌ಗೆ ವಿಪತ್ತು ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಪ್ರತಿಕ್ರಿಯೆಗಾಗಿ ರೂಪಿಸಲಾದ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ ‘ಭೀಷ್ಮ ಕ್ಯೂಬ್’(BHISHM Cubes) ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಎರಡು ದಿನಗಳ ಪೋಲಂಡ್ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಕ್ರೇನ್ ತಲುಪಿದ್ದು, ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ವ್ಯಾಪಕ ಮಾತುಕತೆಗಳನ್ನು ನಡೆಸಲಿದ್ದಾರೆ.
ತಮ್ಮ ಭೇಟಿ ಸಂದರ್ಭದಲ್ಲಿ ಮೋದಿ ಉಕ್ರೇನ್‌ಗೆ ವಿಪತ್ತು ನಿರ್ವಹಣೆ ಮತ್ತು ತುರ್ತು ವೈದ್ಯಕೀಯ ಪ್ರತಿಕ್ರಿಯೆಗಾಗಿ ರೂಪಿಸಲಾದ ಅತ್ಯಾಧುನಿಕ ಸಂಚಾರಿ ಆಸ್ಪತ್ರೆ ‘ಭೀಷ್ಮ ಕ್ಯೂಬ್’ನ್ನು ಘೋಷಿಸಿದ್ದಾರೆ. ಭೀಷ್ಮ ಕ್ಯೂಬ್’ ಸಹಯೋಗ, ಹಿತ ಮತ್ತು ಮೈತ್ರಿಗಾಗಿ ಭಾರತ ಆರೋಗ್ಯ ಉಪಕ್ರಮ ‘ಪ್ರಾಜೆಕ್ಟ್ ಭೀಷ್ಮ್’ ಅಡಿ ಅಭಿವೃದ್ಧಿಗೊಳಿಸಲಾದ ಆಧುನಿಕ ಸಂಚಾರಿ ಆಸ್ಪತ್ರೆ ಘಟಕವಾಗಿದೆ. ಫೆ.2022ರಲ್ಲಿ ಪ್ರಕಟಿಸಲಾದ ಈ ಯೋಜನೆಯು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಕ್ಷಿಪ್ರ ವೈದ್ಯಕೀಯ ನೆರವು ಒದಗಿಸುವಲ್ಲಿ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
PM Modi presents BHISHM Cubes to Ukraine, President Zelenskyy thanks India for humanitarian aid
— ANI Digital (@ani_digital) August 23, 2024
Read @ANI Story | https://t.co/fugOu59gCM#PMModi #PresidentZelenskyy #Ukraine pic.twitter.com/OOn9zBdTvx
ಭೀಷ್ಮ ಕ್ಯೂಬ್ ಆಧುನಿಕ ವೈದ್ಯಕೀಯ ಇಂಜಿನಿಯರಿಂಗ್‌ನ ಅದ್ಭುತವಾಗಿದ್ದು, ಕ್ಷಿಪ್ರ ಪ್ರತಿಕ್ರಿಯೆ ಮತ್ತು ಸಮಗ್ರ ಆರೈಕೆಯನ್ನು ಕೇಂದ್ರೀಕರಿಸಿ 200 ಗಾಯಾಳುಗಳನ್ನು ನಿರ್ವಹಿಸಲು ಗಾಯಾಳುಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅದನ್ನು ರೂಪಿಸಲಾಗಿದೆ. 720 ಕೆ.ಜಿ.ಗಳಷ್ಟು ತೂಗುವ ಘಟಕವು ಸುಲಭವಾಗಿ ಸಾಗಿಸಬಹುದಾದ 72 ಬಿಡಿಭಾಗಗಳನ್ನು ಹೊಂದಿದೆ. ಈ ಬಿಡಿಭಾಗಗಳನ್ನು ಕೈಯಲ್ಲಿ, ಸೈಕಲ್ ಅಥವಾ ಡ್ರೋನ್ ಮೂಲಕ ಸಾಗಿಸಬಹುದಾಗಿದ್ದು, ಎಲ್ಲಿ ಬೇಕಾದರೂ ಸುಲಭವಾಗಿ ಘಟಕವನ್ನು ನಿಯೋಜಿಸಬಹುದು. ಕ್ಯೂಬ್‌ನ ನವೀನ ವಿನ್ಯಾಸದಿಂದಾಗಿ ಅದನ್ನು ನಿಯೋಜಿಸಿದ ಕೇವಲ 12 ನಿಮಿಷಗಳಲ್ಲಿ ಕಾರ್ಯಾರಂಭವನ್ನು ಮಾಡುತ್ತದೆ ಮತ್ತು ಇದು ಪ್ರತಿಯೊಂದು ಸೆಕೆಂಡ್ ಕೂಡ ಮುಖ್ಯವಾಗಿರುವ ತುರ್ತು ಸಂದರ್ಭ ಸಂದರ್ಭಗಳಲ್ಲಿ ನಿರ್ಣಾಯಕ ವೈಶಿಷ್ಟ್ಯವಾಗಿದೆ.
ಅವರು ಶುಕ್ರವಾರ ಕೈವ್‌ಗೆ ತಮ್ಮ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಉಕ್ರೇನ್ ಸರ್ಕಾರಕ್ಕೆ ನಾಲ್ಕು BHISHM (ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ Sahyog Hita & Maitri) ಕ್ಯೂಬ್‌ಗಳನ್ನು ನೀಡಿದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು BHISHM ಕ್ಯೂಬ್‌ಗಳಿಗಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು, ಇದು ರಷ್ಯಾದೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆಗೆ ಸಹಾಯ ಮಾಡುತ್ತದೆ.
#WATCH | Ukraine: India hands over BHISHM cube of Medical assistance to Ukraine. Prime Minister Narendra Modi hands over the assistance to Ukrainian President Volodymyr Zelenskyy, in Kyiv. pic.twitter.com/IZWmC3PM2N
— ANI (@ANI) August 23, 2024
ಇದನ್ನೂ ಓದಿ: PM Modi Ukraine Visit: ಉಕ್ರೇನ್‌ಗೆ ಬಂದಿಳಿದ ಪ್ರಧಾನಿ ಮೋದಿ- ಝೆಲೆನ್ಸ್ಕಿಗೆ ಆತ್ಮೀಯ ಅಪ್ಪುಗೆ