Site icon Vistara News

ದಿ ಕ್ವೀನ್‌ ಈಸ್ ಡೆಡ್‌, ಲಾಂಗ್‌ ಲಿವ್‌ ದಿ ಕಿಂಗ್‌!

queen elizabeth

ಲಂಡನ್:‌ ಬ್ರಿಟನ್‌ನಲ್ಲಿ ಹೊಸ ಮಹಾರಾಜನ ಆಗಮನದೊಂದಿಗೆ, ಅಲ್ಲಿನ ರಾಷ್ಟ್ರಗೀತೆ, ನಾಣ್ಯಗಳು, ಸ್ಟಾಂಪ್‌, ಪಾಸ್‌ಪೋರ್ಟ್‌ಗಳು, ಪೋಸ್ಟ್‌ಬಾಕ್ಸ್ ಎಲ್ಲವೂ ಬದಲಾಗಲಿವೆ.

ರಾಣಿ ಎಲಿಜಬೆತ್‌ 2 ಅವರ ನಿಧನಾನಂತರ ತೆರವಾಗಿರುವ ಸಿಂಹಾಸನವನ್ನು ಪ್ರಿನ್ಸ್‌ ಚಾರ್ಲ್ಸ್‌ ತುಂಬಿದ್ದಾರೆ. ಇದೀಗ ಬ್ರಿಟನ್‌ನಾದ್ಯಂತ ಹಾಗೂ ಕಾಮನ್‌ವೆಲ್ತ್‌ ದೇಶಗಳಲ್ಲಿ ಅವರ ಹೆಸರಿನಲ್ಲಿರುವ ಆಡಳಿತಾತ್ಮಕ ವ್ಯವಸ್ಥೆಗಳೆಲ್ಲವೂ ಬದಲಾಗಬೇಕಾಗಿವೆ.

ಬ್ರಿಟನ್‌ನ ನಾಣ್ಯಗಳು ಹಾಗೂ ಕರೆನ್ಸಿಯಲ್ಲಿ ಈಗ ಎಲಿಜಬೆತ್‌ ರಾಣಿಯ ಮುಖದ ಚಿತ್ರವಿದೆ. ಅದೆಲ್ಲವೂ ಹೋಗಿ ಆ ಸ್ಥಾನವನ್ನು ಚಾರ್ಲ್ಸ್‌ ಅಲಂಕರಿಸಲಿದ್ದಾರೆ. ಇದು ಇಂಗ್ಲೆಂಡಿನ ಪೌಂಡ್‌ ಮಾತ್ರವಲ್ಲದೆ ಈಸ್ಟ್‌ ಕೆರಿಬಿಯನ್‌, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ ದೇಶಗಳ ಕರೆನ್ಸಿಯಲ್ಲಿಯೂ ಈಕೆಯ ಮುಖವಿದೆ. ಬ್ರಿಟಿಷ್‌ ಅಧಿಪತ್ಯವನ್ನು ನೆಚ್ಚಿಕೊಂಡಿರುವ ಜೆರ್ಸಿ, ಗಿನ್ಸೇ, ಐಲ್‌ ಆಫ್‌ ಮ್ಯಾನ್‌, ಗಿಬ್ರಾಲ್ಟರ್‌, ಸೇಂಟ್‌ ಹೆಲೆನಾ, ಫಾಕ್‌ಲ್ಯಾಂಡ್‌ ದ್ವೀಪಗಳ ಕರೆನ್ಸಿಯೂ ಬದಲಾಗಲಿದೆ.

1936ರಲ್ಲಿ ಕಿಂಗ್‌ ಎಡ್ವರ್ಡ್‌ 8 ಪಟ್ಟವೇರಿದಾಗಲೂ ಹೀಗೇ ಆಗಿತ್ತು; ಆದರೆ 326 ದಿನಗಳ ಅವರ ಆಡಳಿತದ ನಂತರ ಅವರ ಪದಚ್ಯುತಿಯಾದ ಕಾರಣ, ಕರೆನ್ಸಿ ಪ್ರಿಂಟ್‌ ಆಗುವ ಹಂತದಲ್ಲಿ ತಡೆಹಿಡಿಯಲಾಗಿತ್ತು.

ಅಂಚೆಪೆಟ್ಟಿಗೆಗಳ ಮೇಲಿರುವ EIIR royal ಚಿಹ್ನೆಯನ್ನೂ ಬದಲಾಯಿಸಲಾಗುತ್ತದೆ. ಪೊಲೀಸರ ಹೆಲ್ಮೆಟ್‌ ಮೇಲಿರುವ EIIR ಚಿಹ್ನೆಯೂ ಬದಲಾಗುತ್ತದೆ.

ಇದನ್ನೂ ಓದಿ : ಮಹಾರಾಣಿಯ ನೋಟಕ್ಕಾಗಿ ಕಾತರಿಸುತ್ತಿದ್ದ ಜನ | ಭಾರತಕ್ಕೆ 3 ಬಾರಿ ಭೇಟಿ

ಬ್ರಿಟಿಷರ ರಾಷ್ಟ್ರಗೀತೆ ಈಗ ಅದು ʼಗಾಡ್‌ ಸೇವ್‌ ದಿ ಕ್ವೀನ್‌ʼ ಎಂದು ರಾಣಿಯನ್ನು ಕೀರ್ತಿಸುವಂತೆ ಇದೆ. ಅದರ ಜಾಗದಲ್ಲಿ ʼಗಾಡ್‌ ಸೇವ್‌ ದಿ ಕಿಂಗ್‌ʼ ಎಂಬ ಪುರುಷ ಸ್ತುತಿಯ ಹಾಡಿನ ಆವೃತ್ತಿ ಬರಲಿದೆ. 1952ರಿಂದೀಚೆಗೆ ಅದನ್ನು ಹಾಡಲಾಗಿಲ್ಲ. ಕೆನಡಾ, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾಗಳಲ್ಲೂ ಇದೇ ರಾಷ್ಟ್ರಗೀತೆಯಾಗಿದೆ.

ಬ್ರಿಟನ್‌ ನಾಗರಿಕರಿಗೆ ಕೊಡಮಾಡುವ ಪಾಸ್‌ಪೋರ್ಟ್‌ಗಳ ಮೊದಲ ಪುಟ “Her Britannic Majesty’sʼʼ ಎಂದು ಆರಂಭವಾಗುತ್ತದೆ. ಕೆನಡಾ, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾಗಳಲ್ಲೂ ಇದೇ ಇದ್ದು, ಅದು ಕೂಡ ಬದಲಾಗಬೇಕಿದೆ. ಭೋಜನಕೂಟ, ಔತಣಕೂಟಗಳ ಆರಂಭದಲ್ಲಿ ಸಿಂಹಾಸನಕ್ಕೆ ವಿಶ್‌ ಮಾಡುವ ʼಟು ದಿ ಕ್ವೀನ್‌ʼ ಎಂಬ ಔಪಚಾರಿಕತೆ ಬದಲಾಗಿ ʼಟು ದಿ ಕಿಂಗ್‌ʼ ಬರಲಿದೆ.

ʼಹರ್ ಮೆಜೆಸ್ಟಿʼಯ ಸರ್ಕಾರ, ಖಜಾನೆ, ಕಸ್ಟಮ್ಸ್ ಹೆಸರುಗಳನ್ನು ಬದಲಾಯಿಸಬೇಕಾಗುತ್ತದೆ. ಸಂಸತ್ತಿನ ಉದ್ಘಾಟನೆಯು ರಾಣಿಯ ಭಾಷಣದ ಬದಲು ರಾಜನ ಭಾಷಣವನ್ನು ಒಳಗೊಂಡಿರುತ್ತದೆ. ಬಕಿಂಗ್‌ಹ್ಯಾಮ್‌ ಅರಮನೆಯ ಹೊರಗೆ ಇರುವ ʼಕ್ವೀನ್ಸ್ ಗಾರ್ಡ್ʼ ಪೊಲೀಸರು “ಕಿಂಗ್ಸ್‌ ಗಾರ್ಡ್‌ʼ ಆಗಲಿದ್ದಾರೆ. ಹಿರಿಯ ವಕೀಲರು QC(ಕ್ವೀನ್ಸ್ ಕೌನ್ಸಿಲ್)ಯಿಂದ KCಗೆ ಬದಲಾಗುತ್ತಾರೆ. ಹೈಕೋರ್ಟ್‌ನ ಕ್ವೀನ್ಸ್ ಬೆಂಚ್ ವಿಭಾಗ ರಾಜನಿಗೆ ಹಿಂತಿರುಗುತ್ತದೆ. ಕೈದಿಗಳು ‘ಹರ್ ಮೆಜೆಸ್ಟಿ’ಯ ಹೆಸರಿನಲ್ಲಿ ಬಂಧನಕ್ಕೊಳಗಾಗುವುದಿಲ್ಲ, ಆದರೆ ʼಹಿಸ್‌ ಮೆಜೆಸ್ಟಿʼಯ ಸಂತೋಷಕ್ಕಾಗಿ ಜೈಲು ಸೇರುತ್ತಾರೆ!

ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್

Exit mobile version