ವಾಷಿಂಗ್ಟನ್: ಅಮೆರಿಕದ ಓಹಿಯೋ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು (Shocking News), ಲೈಂಗಿಕ ಕಾರ್ಯಕರ್ತೆಯೊಬ್ಬಳು ತಾನು ಎಚ್ಐವಿ ಪಾಸಿಟಿವ್ (HIV positive) ಪೀಡಿತೆ ಎಂದು ತಿಳಿದಿದ್ದರೂ 200ಕ್ಕೂ ಹೆಚ್ಚು ಗ್ರಾಹಕರೊಂದಿಗೆ ಒಡನಾಟ ನಡೆಸಿದ್ದರಿಂದ ಅವರೆಲ್ಲ ಎಚ್ಐವಿ ಪರೀಕ್ಷೆಗೆ ಒಳಗಾಗಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ʼʼ30 ವರ್ಷದ ಲೈಂಗಿಕ ಕಾರ್ಯಕರ್ತೆ ಲಿಂಡಾ ಲೆಸೆಸೆಸ್ (Linda Leccesse)ಗೆ ತನಗೆ ಮಾರಣಾಂತಿಕ ಎಚ್ಐವಿ ವೈರಸ್ ತಗುಲಿದೆ ಎನ್ನುವ ವಿಚಾರ ಮೊದಲೇ ತಿಳಿಸಿತ್ತು. ಆದರೆ ಅದನ್ನು ಮುಚ್ಚಿಟ್ಟು ಆಕೆ ಸುಮಾರು 211 ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಿದ್ದಾಳೆ. ಆಕೆಯೊಂದಿಗೆ ಈ ʼಅಪಾಯಕಾರಿ ವ್ಯವಹಾರʼದಲ್ಲಿ ತೊಡಗಿಸಿಕೊಂಡವರು ಕೂಡಲೇ ಪರಕ್ಷೆ ಮಾಡಿಸಿಕೊಳ್ಳಿʼʼ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
2022ರ ಜನವರಿಯಲ್ಲಿ ಲಿಂಡಾ ಪರೀಕ್ಷೆ ಮಾಡಿಕೊಂಡಲಾಗಲೇ ಎಚ್‌ಐವಿ ಪಾಸಿಟಿವ್ ವರದಿ ಬಂದಿತ್ತು. ಆದರೂ ಆಕೆ ಸುಮಾರು ಎರಡು ವರ್ಷಗಳ ಕಾಲ ವಿವಿಧ ರಾಜ್ಯಗಳಲ್ಲಿ ಹಲವು ಗ್ರಾಹಕರ ಸಂಪರ್ಕಕ್ಕೆ ಬಂದಿದ್ದಾಳೆ. ಈಕೆ ಪಶ್ಚಿಮ ವರ್ಜೀನಿಯಾ ಗಡಿಯ ಸಮೀಪವಿರುವ ಆಗ್ನೇಯ ಓಹಿಯೋದ ಸಣ್ಣ ನಗರವಾದ ಮಾರಿಯೆಟ್ಟಾದ ಮಾರ್ಕೆಟ್ ಸ್ಟ್ರೀಟ್‌ನಲ್ಲಿ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದಾಳೆ. ಅದಾಗ್ಯೂ ಸಂಭಾವ್ಯ ಸೋಂಕಿತ ವ್ಯಕ್ತಿಗಳು ಪೂರ್ವ ಕರಾವಳಿಯಾದ್ಯಂತ ಹರಡಿರುವ ಸಾಧ್ಯತೆ ಇದೆ.
“ಲಿಂಡಾಳ ಗ್ರಾಹಕರು ಫ್ಲೋರಿಡಾದಿಂದ ಪೂರ್ವ ಕರಾವಳಿಯವರೆಗೆ ಹಂಚಿ ಹೋಗಿದ್ದಾರೆ. ಅವರನ್ನೆಲ್ಲ ಪತ್ತೆ ಮಾಡುವುದು ಕಷ್ಟಸಾಧ್ಯವಾದರೂ ಸ್ಥಳೀಯರನ್ನು ಸಂಪರ್ಕಿಸಲು ಯತ್ನಿಸುತ್ತೇವೆ. ಅವರಿಗೆ ವೈದ್ಯಕೀಯ ಪರೀಕ್ಷೆಯ ಸಲಹೆ ನೀಡುತ್ತೇವೆ” ಎಂದು ವಾಷಿಂಗ್ಟನ್ ಕೌಂಟಿ ಶೆರಿಫ್ ಕಚೇರಿಯ ಮುಖ್ಯಸ್ಥ ಮಾರ್ಕ್ ವಾರ್ಡನ್ ತಿಳಿಸಿದ್ದಾರೆ ಎಂದು ವರದಿಯೊಂದು ಹೇಳಿದೆ. ಈಗಾಗಲೇ ಲಿಂಡಾಳ ಗ್ರಾಹಕರ ಪತ್ತೆ ಕಾರ್ಯ ಆರಂಭವಾಗಿದೆ.
ಲಿಂಡಾ ಜತೆಗೆ ಒಡನಾಟ ಹೊಂದಿದ್ದ ವ್ಯಕ್ತಿಗಳ ಬಗ್ಗೆ ತಿಳಿದಿದ್ದರೂ ಅವರ ಮಾಹಿತಿ ಹಂಚಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದು ಹಗರಣವಲ್ಲ. ಸಾರ್ವಜನಿಕ ಆರೋಗ್ಯ ಜಾಗೃತಿ ಎಂದು ಅವರು ಹೇಳಿದ್ದಾರೆ. ನಾವು ಮಾಹಿತಿಯನ್ನು ಸಂಪೂರ್ಣ ಗೌಪ್ಯದಲ್ಲಿ ಇಡುತ್ತೇವೆ ಎಂದೂ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೇ 13ರಂದು ಮಾರ್ಕೆಟ್ ಸ್ಟ್ರೀಟ್‌ನಿಂದ ಲಿಂಡಾ ಲೆಸೆಸೆಸ್‌ನನ್ನು ಬಂಧಿಸಲಾಗಿತ್ತು. ಬಳಿಕ ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪೊಲೀಸರಿಗೆ ಆಕೆ ಎಚ್‌ಐವಿ ಪೀಡಿತೆ ಎಂದು ತಿಳಿದು ಬಂದಿತ್ತು. ಅಲ್ಲದೆ ಆಕೆ ತನಗೆ ಈ ಬಗ್ಗೆ ಸುಮಾರು ಎರಡು ವರ್ಷಗಳ ಹಿಂದೆಯೇ ಅರಿವಿತ್ತು ಎಂದು ತಿಳಿಸಿದ್ದಳು.
ಇದನ್ನೂ ಓದಿ: Murder Case : ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಸುಲಿಗೆ ಮಾಡಿ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ
ಅಶ್ಲೀಲ ವಿಡಿಯೊ ನೋಡಿ ಅಕ್ಕನನ್ನೇ ಗರ್ಭಿಣಿ ಮಾಡಿದ ಬಾಲಕ!
ಮುಂಬೈ: ಮಹಾರಾಷ್ಟ್ರದಲ್ಲಿ 13 ವರ್ಷದ ಬಾಲಕನೊಬ್ಬ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿ 15 ವರ್ಷದ ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಬಾಲಕನು ಅಕ್ಕನ ಮೇಲೆಯೇ ಅತ್ಯಾಚಾರ ಎಸಗಿದ ಪರಿಣಾಮ, ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ. ಮೂರು ತಿಂಗಳು ಗರ್ಭಿಣಿಯಾಗಿರುವ ಬಾಲಕಿಯನ್ನು ಪೋಷಕರು ಮುಂಬೈನಲ್ಲಿರುವ ವಾಶಿ ಜನರಲ್ ಹಾಸ್ಪಿಟಲ್‌ಗೆ ಕರೆದುಕೊಂಡು ಹೋಗಿ, ಗರ್ಭಪಾತ ಮಾಡಿಸಲು ಮುಂದಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದಾದ ಬಳಿಕ ಪೊಲೀಸರು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.