Site icon Vistara News

Rishi Sunak | ಬ್ರಿಟನ್‌ನ ನೂತನ ಪ್ರಧಾನ ಮಂತ್ರಿ ರಿಷಿ ಸುನಕ್ ಪಾಕಿಸ್ತಾನ ಮೂಲದವರಂತೆ! ಇದು ನಿಜವೇ?

Rishi Sunak and Britain PM

ನವ ದೆಹಲಿ: ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ (Rishi Sunak) ಅವರು ಭಾರತೀಯ ಮೂಲದವರು ಎಂಬುದು ಗೊತ್ತಿರುವ ಸಂಗತಿ. ಆದರೆ, ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸುನಕ್ ಪಾಕಿಸ್ತಾನ ಮೂಲದವರು ಎಂದು ಕೆಲವರು ಕ್ಲೇಮ್ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಸುನಕ್ ಅವರು ಪಾಕಿಸ್ತಾನ ಮೂಲದವರು ಎಂದು ಕ್ಲೇಮ್ ಮಾಡಿಕೊಳ್ಳುವವರು ಅದಕ್ಕೆ ಕಾರಣವನ್ನು ನೀಡುತ್ತಿದ್ದಾರೆ. ಸುನಕ್ ಅವರ ಅಜ್ಜ ಬ್ರಿಟಿಷ್ ಇಂಡಿಯಾ ಮೂಲದವರು. ಅಂದರೆ ಅವಿಭಜಿತ ಭಾರತದವರು. ಸುನಕ್ ಅವರ ಹುಟ್ಟಿದೂರು ಈಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ. ಆ ಊರಿನ ಹೆಸರು- ಗುಜ್ರಾನ್ವಾಲಾ. ಈ ಊರು ಕುಸ್ತಿ ಮತ್ತು ಆಹಾರ ಸಂಸ್ಕೃತಿಯಿಂದಾಗಿ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ಒಂದೇ ಕಾರಣಕ್ಕಾಗಿ ರಿಷಿ ಪಾಕಿಸ್ತಾನ ಮೂಲದವರು ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ.

ರಿಷಿ ಸುನಕ್ ಅವರು ಅಜ್ಜ-ಅಜ್ಜಿ ಗುಜ್ರಾನ್ವಾಲಾ ಊರಿನಲ್ಲಿ ವಾಸವಾಗಿದ್ದರು. 1935ರಲ್ಲಿ ರಿಷಿ ಅಜ್ಜ ರಾಮದಾಸ್ ಸುನಕ್ ಅವರು ಕ್ಲರ್ಕ್ ಕೆಲಸಕ್ಕಾಗಿ ನೈರೋಬಿಗೆ ತೆರಳಿದರು. ರಿಷಿ ಅವರ ಅಪ್ಪ ಯಶ್ವೀರ್ ಸುನಕ್ ಅವರು ನೈರೋಬಿಯಲ್ಲಿ 1949ರಲ್ಲಿ ಜನಿಸಿದರು. 1966ರಲ್ಲಿ ಇಂಗ್ಲೆಂಡ್‌ನ ಲಿವರ್‌ಪೋಲ್‌ಗೆ ಸ್ಥಳಾಂತರಗೊಂಡರು. ಇಲ್ಲಿಯೇ ಅವರು ವೈದ್ಯಕೀಯ ಕೋರ್ಸ್ ಓದಿದರು ಮತ್ತು ಉಷಾ ಅವರನ್ನು ಮದುವೆಯಾದರು. 1980ರಲ್ಲಿ ಸೌತ್ಹ್ಯಾಂಪ್ಟನ್‌ನಲ್ಲಿ ರಿಷಿ ಅವರು ಜನಿಸಿದರು.

ರಿಷಿ ಫ್ಯಾಮಿಲಿಯ ವೃತ್ತಾಂತವನ್ನು ಗಮನಿಸಿದರೆ, ನೈರೋಬಿ ಕೂಡ ತಮ್ಮವನು ಎಂದು ಹೇಳಿಕೊಳ್ಳಬಹುದು! ವಾಸ್ತವದಲ್ಲಿ ಬ್ರಿಟಿಷ್ ಆಡಳಿತವಿದ್ದಾಗ ಪಾಕಿಸ್ತಾನವೇ ಇರಲಿಲ್ಲ. ಹಾಗಾಗಿ, ಪಾಕಿಸ್ತಾನದ ಕೆಲವರು ಆ ರೀತಿ ಕ್ಲೇಮ್ ಮಾಡಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎನಿಸಿಕೊಳ್ಳುತ್ತದೆ.

ಇದನ್ನೂ ಓದಿ | Rishi Sunak | ರಿಷಿ ಸುನಕ್‌ ಎದುರು ಬೆಟ್ಟದಷ್ಟು ಸವಾಲು, ಇವುಗಳನ್ನು ಬಗೆಹರಿಸಬೇಕು ಮೊದಲು

Exit mobile version