ವಾಷಿಂಗ್ಟನ್: ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸ್ವಂತದ್ದೊಂದು (Dream House) ಮನೆ ಹೊಂದಬೇಕು ಎಂಬ ಕನಸು ಇರುತ್ತದೆ. ಇದಕ್ಕಾಗಿ ಹಗಲಿರುಳು ದುಡಿದು ಸೈಟ್ ಖರೀದಿಸುತ್ತಾರೆ. ಸಾಲ ಮಾಡಿ ಮನೆ ಕಟ್ಟಿಸುತ್ತಾರೆ. ಜಾಸ್ತಿ ದುಡಿದವರು ದೊಡ್ಡ ಬಂಗಲೆ ಕಟ್ಟಿಸಿದರೆ, ಇನ್ನೊಂದಿಷ್ಟು ಜನ ಅಪಾರ್ಟ್‌ಮೆಂಟ್ ಖರೀದಿಸುತ್ತಾರೆ. ಒಟ್ಟಿನಲ್ಲಿ ತಲೆಗೊಂದು ಸೂರು ಕಟ್ಟಿಸಿಕೊಳ್ಳಲು ಜನ ಇನ್ನಿಲ್ಲದಂತೆ ಶ್ರಮಿಸುತ್ತಾರೆ. ಆದರೆ, ಅಮೆರಿಕದಲ್ಲೊಬ್ಬ ಉದ್ಯಮಿಯು ತಮ್ಮ ಮನೆಯ ಕನಸು ನನಸು ಮಾಡಿಕೊಳ್ಳಲು 8,300 (1 ಶತಕೋಟಿ ಡಾಲರ್) ಖರ್ಚು (Expensive Home) ಮಾಡುತ್ತಿದ್ದಾರೆ. ಈಗಾಗಲೇ ಮನೆ ನಿರ್ಮಾಣದ ಕೆಲಸವೂ ಆರಂಭವಾಗಿದೆ.
ಹೌದು, ಅಮೆರಿಕದ ಖ್ಯಾತ ಉದ್ಯಮಿ ಕೆನ್ ಗ್ರಿಫಿನ್ (Ken Griffin) ಅವರು ಪಾಮ್ ಬೀಚ್‌ನಲ್ಲಿ (Palm Beach) ಬೃಹತ್ ಮನೆ ನಿರ್ಮಿಸುತ್ತಿದ್ದಾರೆ. ಸುಮಾರು 20 ಎಕರೆ ಪ್ರದೇಶದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ಎಸ್ಟೇಟ್ ಮನೆಗೆ ಸುಮಾರು 8,300 ಕೋಟಿ ರೂ. ವ್ಯಯಿಸಲು ಅವರು ತೀರ್ಮಾನಿಸಿದ್ದಾರೆ. ಈಗಾಗಲೇ ಮನೆ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಬೌಲ್‌ವಾರ್ಡ್ ಸಮುದ್ರದ ತೀರದಲ್ಲಿಯೇ ಮನೆ ನಿರ್ಮಾಣವಾಗುತ್ತಿದ್ದು, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಕೆನ್ ಗ್ರಿಫಿನ್ ಮನೆ ಇರಲಿದೆ. ಫ್ಲೊರಿಡಾ ಬೀಚ್ ಬಳಿಯೇ ಇವರು ದುಬಾರಿ ಮೊತ್ತ ಕೊಟ್ಟು 20 ಎಕರೆ ಜಾಗವನ್ನೂ ಖರೀದಿಸಿದ್ದಾರೆ.
ದೊಡ್ಡದಾದ ಮನೆ, ಮನೆಯ ಎದುರೇ ಮನಮೋಹಕ ಸ್ವಿಮ್ಮಿಂಗ್ ಪೂಲ್, ಎಸ್ಟೇಟ್ ತುಂಬ ಗಿಡ, ಮರಗಳು, ಎಕರೆಗಟ್ಟಲೆ ವ್ಯಾಪಿಸಿದ ಮನೆಯಲ್ಲಿ ಐಷಾರಾಮಿ ಇಂಟೀರಿಯರ್, ಮನೆ ಮೇಲೊಂದು ಹೆಲಿಪ್ಯಾಡ್, ಅಲ್ಲೊಂದು ಸ್ವಿಮ್ಮಿಂಗ್ ಪೂಲ್, ಮನೆ ಮೇಲೆ ನಿಂತರೆ ಧುಮ್ಮಿಕ್ಕುವ ಸಮುದ್ರ ನೋಡಲು ಗ್ಯಾಲರಿ ಸೇರಿ ನೂರಾರು ಐಷಾರಾಮಿ ಸವಲತ್ತುಗಳಿವೆ.
ಇದನ್ನೂ ಓದಿ: Ayodhya Ram Mandir: ಜನವರಿಯಲ್ಲಿ ಅಯೋಧ್ಯೆಗೆ ಭೇಟಿ ನೀಡ್ತೀರಾ? ಐಷಾರಾಮಿ ʼಟೆಂಟ್ ಸಿಟಿʼ ನಿಮಗಾಗಿಯೇ ಇದೆ!
ಅಂದಹಾಗೆ, ಸಿಟಾಡೆಲ್ ಸಿಇಒ ಆಗಿರುವ ಕೆನ್ ಗ್ರಿಫಿನ್ ಅವರು ಹೂಡಿಕೆ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿದ್ದಾರೆ. ಇವರ ಆಸ್ತಿಯ ಮೌಲ್ಯವು ಅಂದಾಜು 2.82 ಲಕ್ಷ ಕೋಟಿ ರೂ. ಆಗಿದೆ.