Expensive Home: 8 ಸಾವಿರ ಕೋಟಿ ರೂ. ವೆಚ್ಚದ ಮನೆ ಹೇಗಿರುತ್ತದೆ? ಇಲ್ಲಿವೆ ನೋಡಿ ಫೋಟೊಗಳು! - Vistara News

ಪ್ರಮುಖ ಸುದ್ದಿ

Expensive Home: 8 ಸಾವಿರ ಕೋಟಿ ರೂ. ವೆಚ್ಚದ ಮನೆ ಹೇಗಿರುತ್ತದೆ? ಇಲ್ಲಿವೆ ನೋಡಿ ಫೋಟೊಗಳು!

Expensive Home: ಅಮೆರಿಕದ ಖ್ಯಾತ ಉದ್ಯಮಿ ಕೆನ್‌ ಗ್ರಿಫಿನ್‌ ಅವರು ಸುಮಾರು 20 ಎಕರೆ ಜಾಗದಲ್ಲಿ ಐಷಾರಾಮಿ ಮನೆ ನಿರ್ಮಿಸುತ್ತಿದ್ದಾರೆ. ಇವರ ಮನೆ ಹೇಗಿರಲಿದೆ? ಏನೆಲ್ಲ ಸೌಕರ್ಯ ಇರಲಿವೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Most Expensive Home In World
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸ್ವಂತದ್ದೊಂದು (Dream House) ಮನೆ ಹೊಂದಬೇಕು ಎಂಬ ಕನಸು ಇರುತ್ತದೆ. ಇದಕ್ಕಾಗಿ ಹಗಲಿರುಳು ದುಡಿದು ಸೈಟ್‌ ಖರೀದಿಸುತ್ತಾರೆ. ಸಾಲ ಮಾಡಿ ಮನೆ ಕಟ್ಟಿಸುತ್ತಾರೆ. ಜಾಸ್ತಿ ದುಡಿದವರು ದೊಡ್ಡ ಬಂಗಲೆ ಕಟ್ಟಿಸಿದರೆ, ಇನ್ನೊಂದಿಷ್ಟು ಜನ ಅಪಾರ್ಟ್‌ಮೆಂಟ್‌ ಖರೀದಿಸುತ್ತಾರೆ. ಒಟ್ಟಿನಲ್ಲಿ ತಲೆಗೊಂದು ಸೂರು ಕಟ್ಟಿಸಿಕೊಳ್ಳಲು ಜನ ಇನ್ನಿಲ್ಲದಂತೆ ಶ್ರಮಿಸುತ್ತಾರೆ. ಆದರೆ, ಅಮೆರಿಕದಲ್ಲೊಬ್ಬ ಉದ್ಯಮಿಯು ತಮ್ಮ ಮನೆಯ ಕನಸು ನನಸು ಮಾಡಿಕೊಳ್ಳಲು 8,300 (1 ಶತಕೋಟಿ ಡಾಲರ್)‌ ಖರ್ಚು (Expensive Home) ಮಾಡುತ್ತಿದ್ದಾರೆ. ಈಗಾಗಲೇ ಮನೆ ನಿರ್ಮಾಣದ ಕೆಲಸವೂ ಆರಂಭವಾಗಿದೆ.

ಬೃಹತ್‌ ಎಸ್ಟೇಟ್‌ನ ವಿಹಂಗಮ ನೋಟ.

ಹೌದು, ಅಮೆರಿಕದ ಖ್ಯಾತ ಉದ್ಯಮಿ ಕೆನ್‌ ಗ್ರಿಫಿನ್‌ (Ken Griffin) ಅವರು ಪಾಮ್‌ ಬೀಚ್‌ನಲ್ಲಿ (Palm Beach) ಬೃಹತ್‌ ಮನೆ ನಿರ್ಮಿಸುತ್ತಿದ್ದಾರೆ. ಸುಮಾರು 20 ಎಕರೆ ಪ್ರದೇಶದಲ್ಲಿ ಮನೆ ನಿರ್ಮಾಣವಾಗುತ್ತಿದ್ದು, ಎಸ್ಟೇಟ್‌ ಮನೆಗೆ ಸುಮಾರು 8,300 ಕೋಟಿ ರೂ. ವ್ಯಯಿಸಲು ಅವರು ತೀರ್ಮಾನಿಸಿದ್ದಾರೆ. ಈಗಾಗಲೇ ಮನೆ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಇಂಟೀರಿಯರ್‌ ಹೀಗಿರಲಿದೆ

ಬೌಲ್‌ವಾರ್ಡ್‌ ಸಮುದ್ರದ ತೀರದಲ್ಲಿಯೇ ಮನೆ ನಿರ್ಮಾಣವಾಗುತ್ತಿದ್ದು, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಕೆನ್‌ ಗ್ರಿಫಿನ್‌ ಮನೆ ಇರಲಿದೆ. ಫ್ಲೊರಿಡಾ ಬೀಚ್‌ ಬಳಿಯೇ ಇವರು ದುಬಾರಿ ಮೊತ್ತ ಕೊಟ್ಟು 20 ಎಕರೆ ಜಾಗವನ್ನೂ ಖರೀದಿಸಿದ್ದಾರೆ.

ಸ್ವಿಮ್ಮಿಂಗ್‌ ಪೂಲ್

ದೊಡ್ಡದಾದ ಮನೆ, ಮನೆಯ ಎದುರೇ ಮನಮೋಹಕ ಸ್ವಿಮ್ಮಿಂಗ್‌ ಪೂಲ್‌, ಎಸ್ಟೇಟ್‌ ತುಂಬ ಗಿಡ, ಮರಗಳು, ಎಕರೆಗಟ್ಟಲೆ ವ್ಯಾಪಿಸಿದ ಮನೆಯಲ್ಲಿ ಐಷಾರಾಮಿ ಇಂಟೀರಿಯರ್‌, ಮನೆ ಮೇಲೊಂದು ಹೆಲಿಪ್ಯಾಡ್‌, ಅಲ್ಲೊಂದು ಸ್ವಿಮ್ಮಿಂಗ್‌ ಪೂಲ್‌, ಮನೆ ಮೇಲೆ ನಿಂತರೆ ಧುಮ್ಮಿಕ್ಕುವ ಸಮುದ್ರ ನೋಡಲು ಗ್ಯಾಲರಿ ಸೇರಿ ನೂರಾರು ಐಷಾರಾಮಿ ಸವಲತ್ತುಗಳಿವೆ.

ಕೆನ್‌ ಗ್ರಿಫಿನ್

ಇದನ್ನೂ ಓದಿ: Ayodhya Ram Mandir: ಜನವರಿಯಲ್ಲಿ ಅಯೋಧ್ಯೆಗೆ ಭೇಟಿ ನೀಡ್ತೀರಾ? ಐಷಾರಾಮಿ ʼಟೆಂಟ್‌ ಸಿಟಿʼ ನಿಮಗಾಗಿಯೇ ಇದೆ!

ಅಂದಹಾಗೆ, ಸಿಟಾಡೆಲ್‌ ಸಿಇಒ ಆಗಿರುವ ಕೆನ್‌ ಗ್ರಿಫಿನ್‌ ಅವರು ಹೂಡಿಕೆ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿದ್ದಾರೆ. ಇವರ ಆಸ್ತಿಯ ಮೌಲ್ಯವು ಅಂದಾಜು 2.82 ಲಕ್ಷ ಕೋಟಿ ರೂ. ಆಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಭವಿಷ್ಯ

Dina Bhavishya : ಈ ರಾಶಿಯವರಿಗೆ ಈ ದಿನ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ತದಿಗೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಸಿಂಹ ರಾಶಿಯಿಂದ ಮಂಗಳವಾರ ಬೆಳಗ್ಗೆ 09:47ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದಾಗಿ ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ವೃಷಭ ರಾಶಿಯವರು ದಿನದ ಕೊನೆಯಲ್ಲಿ ಅನಿವಾರ್ಯ ಕಾರಣದಿಂದ ಖರ್ಚು ಇರಲಿದೆ. ಮಾನಸಿಕ ಒತ್ತಡಗೊಳಗಾಗಬಹುದು. ಕಟಕ ರಾಶಿಯವರು ಹಿರಿಯರಿಂದ ಹಣಕಾಸಿನ ನೆರವು ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ಸೃಜನಶೀಲತೆ ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಲಿದೆ. ಅತಿಯಾದ ಶ್ರಮ ದೈಹಿಕವಾಗಿ ನಿಮ್ಮನ್ನು ಜರ್ಜರಿತನ್ನಾಗಿ ಮಾಡಬಹುದು, ಕೊಂಚ ಕಾಳಜಿ ವಹಿಸಿ. ಕನ್ಯಾ ರಾಶಿಯವರು ಅನಿರೀಕ್ಷಿತ ಮೂಲಗಳಿಂದ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ವಾದಕ್ಕೆ ಇಳಿಯುವ ಪ್ರಸಂಗ ಬರಬಹುದು, ಆದರಿಂದ ಮಾತಿನಲ್ಲಿ ಹಿಡಿತವಿರಲಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (9-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ.
ತಿಥಿ: ತದಿಗೆ 06:08 ವಾರ: ಮಂಗಳವಾರ
ನಕ್ಷತ್ರ: ಆಶ್ಲೇಷಾ 07:51 ಯೋಗ: ಸಿದ್ಧಿ 26:25
ಕರಣ: ಗರಜ 06:08 ಅಮೃತಕಾಲ: ಬೆಳಗ್ಗೆ 06:09 ರಿಂದ 07:52
ದಿನದ ವಿಶೇಷ: ರಘುನಾಥ ತೀರ್ಥರ ಆರಾಧನೆ, ವಿನಾಯಕ ಚತುರ್ಥಿ

ಸೂರ್ಯೋದಯ : 06:00   ಸೂರ್ಯಾಸ್ತ : 06:50

ರಾಹುಕಾಲ: ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30

ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ನಿಮ್ಮ ಒರಟು ವರ್ತನೆ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟುಮಾಡಬಹುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರಲಿದೆ. ನಿಮ್ಮ ಕುಟುಂಬದ ಕಾಳಜಿ ಅರ್ಥವಾಗಲಿ. ಈ ಸಂದರ್ಭದಲ್ಲಿ ಇಂದಿನ ದಿನ ನಿಮಗೆ ಉತ್ತಮವಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲಗಳು ದೊರೆಯಲಿವೆ. ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಇಂದು ನಿಮ್ಮ ಆಕರ್ಷಕ ವ್ಯಕ್ತಿತ್ವ ಇತರರನ್ನು ಗಮನ ಸೆಳೆಯುವಂತೆ ಮಾಡಲಿದೆ. ದಿನದ ಕೊನೆಯಲ್ಲಿ ಅನಿವಾರ್ಯ ಕಾರಣದಿಂದ ಖರ್ಚು ಇರಲಿದೆ. ಮಾನಸಿಕ ಒತ್ತಡಗೊಳಗಾಗಬಹುದು. ಕೌಟುಂಬಿಕವಾಗಿ ಶುಭಫಲವಿರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅದೃಷ್ಟ ಸಂಖ್ಯೆ: 9

Horoscope Today

ಮಿಥುನ: ಹಿಂದಿನ ದಿನಕ್ಕಿಂತ ಹೆಚ್ಚಿನ ಸಂತಸ ಇಂದು ಕಾಣುವಿರಿ. ಹಣಕಾಸಿನ ಯೋಜನೆ ಕುರಿತು ಚಿಂತನೆ ಮಾಡುವಿರಿ. ಆರ್ಥಿಕ ಪ್ರಗತಿ ಇರಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರಲಿದೆ. ಸ್ನೇಹಿತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಸಹಾಯ ಮಾಡುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಕಟಕ: ಹಿರಿಯರಿಂದ ಹಣಕಾಸಿನ ನೆರವು ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ಸೃಜನಶೀಲತೆ ನಿಮ್ಮನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಲಿದೆ. ಅತಿಯಾದ ಶ್ರಮ ದೈಹಿಕವಾಗಿ ನಿಮ್ಮನ್ನು ಜರ್ಜರಿತನ್ನಾಗಿ ಮಾಡಬಹುದು, ಕೊಂಚ ಕಾಳಜಿ ವಹಿಸಿ. ಹಣಕಾಸು ವ್ಯವಹಾರದಲ್ಲಿ ಲಾಭ, ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ:2

Horoscope Today

ಸಿಂಹ: ದೈಹಿಕ ಹಾಗೂ ಮಾನಸಿಕ ಆರೋಗ್ಯ ಪರಿಪೂರ್ಣವಾಗಿರಲಿದೆ. ಆತ್ಮವಿಶ್ವಾಸದಿಂದ ಮಾಡಿದ ಕಾರ್ಯವು ಸಿದ್ಧಿಸಿ ಕೊಡಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಇರಲಿದೆ. ಕೌಟುಂಬಿಕವಾಗಿ ಶುಭ ಫಲ ಇರಲಿದೆ. ಅದೃಷ್ಟ ಸಂಖ್ಯೆ:9

Horoscope Today

ಕನ್ಯಾ: ಅನಿರೀಕ್ಷಿತ ಮೂಲಗಳಿಂದ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ವಾದಕ್ಕೆ ಇಳಿಯುವ ಪ್ರಸಂಗ ಬರಬಹುದು, ಆದರಿಂದ ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ ಇರಲಿದೆ. ಅದೃಷ್ಟ ಸಂಖ್ಯೆ:7

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆಕರ್ಷಕ ವ್ಯಕ್ತಿತ್ವ ಹೊಸ ಸ್ನೇಹಿತರನ್ನು ಪರಿಚಯಿಸಲಿದೆ. ಆತ್ಮ ವಿಶ್ವಾಸದ ಭರದಲ್ಲಿ ಮಾತು ಕೊಟ್ಟು ಕೊರಗುವುದು ಬೇಡ, ನೈಜತೆ ಇರಲಿ. ಆರ್ಥಿಕ ಸ್ಥಿತಿ ಕೊಂಚ ಸಾಧಾರಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅದೃಷ್ಟ ಸಂಖ್ಯೆ:1

Horoscope Today

ವೃಶ್ಚಿಕ : ಆಪ್ತರ ಸಹಾಯದಿಂದ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಇಂದು ಅತಿಯಾದ ಸಲುಗೆಯಿಂದ ಯಾರೊಂದಿಗೂ ವರ್ತಿಸುವುದು ಸರಿಯಲ್ಲ, ಮುಖಭಂಗ ಆಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ:3

Horoscope Today

ಧನಸ್ಸು: ನಿಮ್ಮ ಬಲವಾದ ಧೃಢತೆ ಮತ್ತು ನಿರ್ಭಯತೆ ನಿಮ್ಮ ಮಾನಸಿಕ ಶಕ್ತಿ ವರ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದು ನಿಮಗೆ ಯಾವುದೇ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಉತ್ತೇಜಿಸುವುದರಿಂದ ಇದನ್ನು ಕಾಯ್ದುಕೊಳ್ಳಿ. ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ ಮಾಡುವಿರಿ. ಕೌಟುಂಬಿಕವಾಗಿ ಮಿಶ್ರ ಫಲ ಇರಲಿದೆ. ಆರೋಗ್ಯದ ಕುರಿತು ಕೊಂಚ ಕಾಳಜಿ ವಹಿಸಿ. ಅದೃಷ್ಟ ಸಂಖ್ಯೆ: 9

Horoscope Today

ಮಕರ: ಭವಿಷ್ಯದ ಬಗೆಗೆ ಚಿಂತಿಸಿ ಕಾಲಹರಣ ಮಾಡುವ ಬದಲು ಆತ್ಮ ವಿಶ್ವಾಸದಿಂದ ಕಾರ್ಯದಲ್ಲಿ ಮುನ್ನುಗ್ಗಿ ಜಯ ಸಿಗಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ:9

Horoscope Today

ಕುಂಭ: ಪ್ರಮುಖ ಯೋಜನೆಗಳು ಕಾರ್ಯಗತಗೊಳ್ಳಲಿವೆ. ವಾಹನ ಚಾಲನೆ ಮಾಡುವಾಗ ಆದಷ್ಟು ಎಚ್ಚರಿಕೆ ಇರಲಿ. ನೆರೆಹೊರೆಯವರೊಂದಿಗೆ ವಿನಾ ಕಾರಣ ವಾದಕ್ಕಿಳಿಯುವುದು ಬೇಡ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಇರಲಿದೆ. ಅದೃಷ್ಟ ಸಂಖ್ಯೆ:6

Horoscope Today

ಮೀನ:ಸ್ನೇಹಿತರ ಮಾತುಗಳು ನಿಮ್ಮನ್ನು ಪ್ರಭಾವಗೊಳಿಸಲಿವೆ. ಆರೋಗ್ಯ ಪರಿಪೂರ್ಣ ಇರಲಿದೆ. ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ:8

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ವಿದೇಶ

PM Modi Russia Visit: ದೇಶ, ಜನರಿಗಾಗಿ ನಿಮ್ಮ ಜೀವನವೇ ಮುಡಿಪು ಎಂದು ಮೋದಿಯನ್ನು ಹೊಗಳಿದ ಪುಟಿನ್

PM Modi Russia Visit: ಮಾಸ್ಕೋದಲ್ಲಿರುವ ವ್ಲಾಡಿಮಿರ್‌ ಪುಟಿನ್‌ ಅವರ ನಿವಾಸಕ್ಕೆ (ನೋವೊ-ಒಗಾರ್ಯೊವೊ) ನರೇಂದ್ರ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ಕೈ ಕುಲುಕಿ, ತಬ್ಬಿಕೊಂಡು ಸ್ವಾಗತಿಸಿದರು. ಉಭಯ ನಾಯಕರು ಆತ್ಮೀಯವಾಗಿ ಮಾತುಕತೆ ನಡೆಸಿದರು. ಬಿಸಿ ಬಿಸಿ ಚಹಾ ಸವಿಯುತ್ತ ಉಭಯ ಕುಶಲೋಪರಿ ನಡೆಸಿದರು. ಇದೇ ವೇಳೆ ಮೋದಿ ಅವರನ್ನು ಪುಟಿನ್‌ ಅವರು ಹಾಡಿ ಹೊಗಳಿದರು.

VISTARANEWS.COM


on

PM Modi Russia Visit
Koo

ಮಾಸ್ಕೋ: ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Modi Russia Visit) ಅವರು ಮಾಸ್ಕೋ ತಲುಪುತ್ತಲೇ ಅದ್ಧೂರಿ ಸ್ವಾಗತ ಸಿಕ್ಕಿದೆ. ಅನಿವಾಸಿ ಭಾರತೀಯರು, ರಷ್ಯಾ ಕಲಾವಿದರು ಹಿಂದಿಗೆ ಹಾಡಿಗೆ ನೃತ್ಯ ಮಾಡಿ, ಭಜನೆ, ಹಾಡುಗಳ ಮೂಲಕ ನರೇಂದ್ರ ಮೋದಿ (Narendra Modi) ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರನ್ನೂ ಭೇಟಿಯಾಗಿದ್ದು, ಪುಟಿನ್‌ ಮನೆಯಲ್ಲೇ ಚಾಯ್‌ ಪೆ ಚರ್ಚಾ, ಔತಣ ಕೂಡ ನಡೆದಿದೆ.

ಮಾಸ್ಕೋದಲ್ಲಿರುವ ವ್ಲಾಡಿಮಿರ್‌ ಪುಟಿನ್‌ ಅವರ ನಿವಾಸಕ್ಕೆ (ನೋವೊ-ಒಗಾರ್ಯೊವೊ) ನರೇಂದ್ರ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ಕೈ ಕುಲುಕಿ, ತಬ್ಬಿಕೊಂಡು ಸ್ವಾಗತಿಸಿದರು. ತಮ್ಮ ನಿವಾಸದಲ್ಲಿಯೇ ಮೋದಿ ಅವರಿಗೆ ಪುಟಿನ್‌ ಅವರು ಚಹಾ, ಭೋಜನಕೂಟದ ಉಸ್ತುವಾರಿ ನೋಡಿಕೊಂಡರು. ಇದೇ ವೇಳೆ ಉಭಯ ನಾಯಕರು ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ.

ಮೋದಿಯನ್ನು ಹೊಗಳಿದ ಪುಟಿನ್‌

ನರೇಂದ್ರ ಮೋದಿ ಅವರನ್ನು ವ್ಲಾಡಿಮಿರ್‌ ಪುಟಿನ್‌ ಅವರು ಹಾಡಿ ಹೊಗಳಿದ್ದಾರೆ. “ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಪ್ರಧಾನಿಯಾಗಿದ್ದಕ್ಕೆ ಅಭಿನಂದನೆಗಳು. ನೀವು ಹೊಂದಿರುವ ಸಾಮರ್ಥ್ಯ, ಉತ್ಸಾಹವು ಅಮೋಘವಾದುದು. ನೀವು ದೇಶ ಹಾಗೂ ಸಾರ್ವಜನಿಕರ ಸೇವೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದೀರಿ. ನೀವು ನಮ್ಮ ದೇಶಕ್ಕೆ ಆಗಮಿಸಿರುವುದು ಖುಷಿಯಾಗಿದೆ. ಇನ್ನು, ಬಾರತದಲ್ಲಿ 2.3 ಕೋಟಿ ಮಕ್ಕಳಿದ್ದು, ಅವರು ಭವಿಷ್ಯದ ಬಗ್ಗೆ ಯೋಚಿಸುತ್ತಾರೆ, ಕನಸು ಕಾಣುತ್ತಾರೆ. ಅಲ್ಲದೆ, ಇದು ಭದ್ರ, ಸ್ಥಿರ ಭಾರತದ ಸಂಕೇತವಾಗಿದೆ” ಎಂದು ವ್ಲಾಡಿಮಿರ್‌ ಪುಟಿನ್‌ ಅವರು ಖಾಸಗಿ ಭೇಟಿ ವೇಳೆ ಹೊಗಳಿದ್ದಾರೆ.

ಭಾರತ ಮತ್ತು ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದ್ದು, ರಷ್ಯಾ-ಉಕ್ರೇನ್‌ ಯುದ್ಧದ ಬಳಿಕ ಮೊದಲ ಭೇಟಿಯಲ್ಲಿ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರು ಸೋಮವಾರ ನರೇಂದ್ರ ಮೋದಿ ಅವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಮಂಗಳವಾರ (ಜುಲೈ 9) ಶೃಂಗಸಭೆ ನಡೆಯಲಿದ್ದು, ಉಭಯ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಸಭೆಯು ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ.

ಇದನ್ನೂ ಓದಿ: PM Modi Russia Visit: ರಷ್ಯಾ ತಲುಪಿದ ಮೋದಿಗೆ ಭಾರತದ ಸಂಪ್ರದಾಯದಂತೆ ಅದ್ಧೂರಿ ಸ್ವಾಗತ; Video ಇದೆ

Continue Reading

ಪ್ರಮುಖ ಸುದ್ದಿ

LKG, UKG: ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ನಿಗದಿ; ಇಲ್ಲಿದೆ ಹೊಸ ಅಪ್‌ಡೇಟ್

LKG, UKG: ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿಯು 6 ವರ್ಷ ಆಗಿದೆ. ಯುಕೆಜಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, 7 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಹಾಗೆಯೇ, ಒಂದನೇ ತರಗತಿಗೆ ಕನಿಷ್ಠ 6 ವರ್ಷ ಇದ್ದರೆ, ಗರಿಷ್ಠ 8 ವರ್ಷ ಇರಬೇಕಾಗುತ್ತದೆ.

VISTARANEWS.COM


on

LKG UKG
Koo

ಬೆಂಗಳೂರು: ಮಕ್ಕಳನ್ನು ಎಲ್‌ಕೆಜಿ, ಯುಕೆಜಿ (LKG, UKG) ಹಾಗೂ ಒಂದನೇ ತರಗತಿಗೆ ದಾಖಲಿಸಲು ರಾಜ್ಯ ಸರ್ಕಾರವು (Karnataka Government) ಈಗಾಗಲೇ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ. ಆದರೆ, ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸದ ರಾಜ್ಯ ಸರ್ಕಾರವೀಗ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ. ಅದರಂತೆ, 2023-24ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿಗೆ ದಾಖಲಿಸುವ ಮಕ್ಕಳ ಗರಿಷ್ಠ ವಯೋಮಿತಿಯನ್ನು ಪರಿಷ್ಕರಣೆ ಮಾಡಲಾಗಿದೆ.

ಹೀಗಿದೆ ಪರಿಷ್ಕರಿಸಿದ ವಯೋಮಿತಿ

ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಲು 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿಯು 6 ವರ್ಷ ಆಗಿದೆ. ಯುಕೆಜಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, 7 ವರ್ಷ ಗರಿಷ್ಠ ವಯೋಮಿತಿಯಾಗಿದೆ. ಹಾಗೆಯೇ, ಒಂದನೇ ತರಗತಿಗೆ ಕನಿಷ್ಠ 6 ವರ್ಷ ಇದ್ದರೆ, ಗರಿಷ್ಠ 8 ವರ್ಷ ಇರಬೇಕಾಗುತ್ತದೆ. ಎಲ್‌ಕೆಜಿಗೆ 2023-24, ಯುಕೆಜಿಗೆ 2024-25 ಹಾಗೂ ಒಂದನೇ ತರಗತಿಗೆ 2025-26ನೇ ಶೈಕ್ಷಣಿಕ ಸಾಲಿನಿಂದ ಹೊಸ ಆದೇಶವು ಅನ್ವಯವಾಗಲಿದೆ. ಡ್ರಾಪ್‌ಔಟ್‌ ಆಗುವ ಮಕ್ಕಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರವು ಹೊಸ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಹೀಗಿದೆ…

ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26 ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜೂನ್‌ 1ನೇ ತಾರೀಖಿಗೆ ಕಡ್ಡಾಯವಾಗಿ ಆರು ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದೇ ತರಗತಿಗೆ ದಾಖಲಿಸಿಕೊಳ್ಳುವಂತೆ ಕಳೆದ ವರ್ಷವೇ ಆದೇಶ ಹೊರಡಿಸಿದೆ. ಹೀಗಾಗಿ ಈ ಶೈಕ್ಷಣಿಕ ಸಾಲಿನಿಂದಲೇ ಎಲ್‌ಕೆಜಿ ತರಗತಿಗೆ ದಾಖಲು ಮಾಡಿಕೊಳ್ಳಲು ಜೂನ್‌ 01ನೇ ತಾರೀಖಿಗೆ ಅನ್ವಯವಾಗುವಂತೆ ನಾಲ್ಕು (4) ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಕಳೆದ ವರ್ಷ ಅಂದರೆ 2022 ಜುಲೈ 26ರಂದು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇನ್ನು ಮುಂದೆ ಒಂದು ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್‌ ಒಂದನೇ ತಾರೀಖಿಗೆ ಅನ್ವಯವಾಗುವಂತೆ ಆರು ವರ್ಷ ತುಂಬಿರಲೇಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು 2023-24 ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತಾದರೂ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಇದನ್ನು 2025-26 ನೇ ಸಾಲಿನ ಶೈಕ್ಷಣಿಕ (Education News) ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದೆ.

ಹೊಸ ನಿಯಮದಂತೆ 2025-26ನೇ ಸಾಲಿನಲ್ಲಿ ಒಂದನೇ ತರಗತಿಗೆ ನಿಮ್ಮ ಮಗುವನ್ನು ಸೇರಿಸಿಬೇಕೆಂದರೆ ಎಲ್‌ಕೆಜಿ ಸೇರ್ಪಡೆ ವಿಷಯದಲ್ಲಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ 2025-26ನೇ ಸಾಲಿಗೆ ಬರುವಾಗ ಒಂದನೇ ತರಗತಿ ಸೇರುವ ಮಗುವಿಗೆ ಆರು ವರ್ಷ ತುಂಬಿರುವುದು ಕಡ್ಡಾಯ. ಹಾಗಾಗಿ, ಈ ವರ್ಷ ಎಲ್‌ಕೆಜಿಗೆ ಸೇರಿಸುವಾಗ ನಿಮ್ಮ ಮಗು ಕಡ್ಡಾಯವಾಗಿ ನಾಲ್ಕು ವರ್ಷ ಪೂರ್ಣಗೊಳಿಸಿರಬೇಕು. ಇಲ್ಲದೇ ಇದ್ದಲ್ಲಿ ಎಲ್‌ಕೆಜಿ ಅಥವಾ ಯುಕೆಜಿಯಲ್ಲಿಯೇ ಮಗು ಒಂದು ವರ್ಷ ಹೆಚ್ಚಾಗಿ ಉಳಿದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಲಿದ್ದು, ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾಗಿದೆ.

ಇದನ್ನೂ ಓದಿ: LKG UKG in Anganwadis: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸಿಎಂ ಸಹಮತ

Continue Reading

ದೇಶ

Ramniwas Rawat: 15 ನಿಮಿಷದಲ್ಲಿ 2 ಬಾರಿ ಸಚಿವನಾಗಿ ಬಿಜೆಪಿ ಶಾಸಕ ಪ್ರಮಾಣವಚನ; ಎಲ್ಲಾಯ್ತು ಎಡವಟ್ಟು?

Ramniwas Rawat: ರಾಜಭವನದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ರಾಮ್‌ನಿವಾಸ್‌ ಅವರಿಗೆ ರಾಜ್ಯಪಾಲ ಮಂಗುಭಾಯಿ ಸಿ ಪಟೇಲ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವಾಗ ರಾಮ್‌ನಿವಾಸ್‌ ರಾವತ್‌ ಅವರು ರಾಜ್ಯ ಕೆ ಮಂತ್ರಿ ಎಂದು ಹೇಳುವ ಬದಲು ರಾಜ್ಯ ಮಂತ್ರಿ (ಸಹಾಯಕ ಸಚಿವ) ಎಂದು ಹೇಳಿದರು. ಇದರಿಂದಾಗಿ ಕೆಲಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಎರಡನೇ ಬಾರಿ ಬಿಜೆಪಿ ಶಾಸಕ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

VISTARANEWS.COM


on

Ramniwas Rawat
Koo

ಭೋಪಾಲ್‌: ನಾವು ಮಾತನಾಡುವಾಗ, ಬರೆಯುವಾಗ ಬಳಸುವ ಒಂದು ಪದವು ಎಷ್ಟು ಪರಿಣಾಮ ಬೀರುತ್ತದೆಯೋ, ಬಳಸಬೇಕಾದ ಜಾಗದಲ್ಲಿ ಇನ್ನೊಂದು ಪದ ಬಳಸದಿದ್ದರೂ ಅದು ಕೂಡ ಬೇರೊಂದು ಪರಿಣಾಮವನ್ನೇ ಬೀರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದ (Madhya Pradesh Cabinet) ನೂತನ ಸಚಿವರಾಗಿ ಬಿಜೆಪಿಯ ರಾಮ್‌ನಿವಾಸ್‌ ರಾವತ್‌ (Ramniwas Rawat) ಅವರು ಪ್ರಮಾಣವಚನ ಸ್ವೀಕರಿಸುವಾಗ ಒಂದು ಪದವನ್ನು ಬಳಸದ ಕಾರಣ 15 ನಿಮಿಷಗಳಲ್ಲಿಯೇ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮೋಹನ್‌ ಯಾದವ್‌ ಅವರು ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ಇದಾದ ಐದು ತಿಂಗಳ ಬಳಿಕ ಅವರು ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇದಕ್ಕೂ ಮೊದಲು ಕಾಂಗ್ರೆಸ್‌ನಲ್ಲಿದ್ದ ರಾಮ್‌ನಿವಾಸ್‌ ರಾವತ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಸೋಮವಾರ (ಜುಲೈ 8) ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸುವಾಗ ಅವರು ಒಂದು ಪದವನ್ನು ಉಚ್ಚರಣೆ ಮಾಡದ ಕಾರಣ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಅವರು ಬಳಸದ ಆ ಒಂದು ಪದ ಯಾವುದು?

ರಾಜಭವನದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ರಾಮ್‌ನಿವಾಸ್‌ ಅವರಿಗೆ ರಾಜ್ಯಪಾಲ ಮಂಗುಭಾಯಿ ಸಿ ಪಟೇಲ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸುವಾಗ ರಾಮ್‌ನಿವಾಸ್‌ ರಾವತ್‌ ಅವರು ರಾಜ್ಯ ಕೆ ಮಂತ್ರಿ ಎಂದು ಹೇಳುವ ಬದಲು ರಾಜ್ಯ ಮಂತ್ರಿ (ಸಹಾಯಕ ಸಚಿವ) ಎಂದು ಹೇಳಿದರು. ಸಹಾಯಕ ಸಚಿವ ಎಂಬುದಾಗಿ ಅವರು ಹೇಳುತ್ತಲೇ ಕಾರ್ಯಕ್ರಮದಲ್ಲಿ ಗೊಂದಲವಾಯಿತು. ಪತ್ರಕರ್ತರು ಕೂಡ ಈ ಕುರಿತು ನಾಯಕರ ಗಮನಕ್ಕೆ ತಂದರು.

ರಾಜ್ಯ ಕೆ ಮಂತ್ರಿ ಎಂಬುದಾಗಿ ಹೇಳುವ ಬದಲು ರಾಜ್ಯ ಮಂತ್ರಿ ಎಂದು ಹೇಳಿರುವುದು ಗಮನಕ್ಕೆ ಬಂದ 15 ನಿಮಿಷದಲ್ಲಿಯೇ ರಾಮ್‌ನಿವಾಸ್‌ ರಾವತ್‌ ಅವರು ಎರಡನೇ ಬಾರಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಒಂದೇ ಒಂದು ಪದವನ್ನು ಬಳಸದ ಕಾರಣ ರಾಜಭವನದಲ್ಲಿ ಇಷ್ಟೆಲ್ಲ ಗೊಂದಲ ಉಂಟಾಯಿತು. ರಾಮ್‌ನಿವಾಸ್‌ ರಾವತ್‌ ಅವರ ಸೇರ್ಪಡೆಯೊಂದಿಗೆ ಮಧ್ಯಪ್ರದೇಶ ಸಚಿವರ ಸಂಖ್ಯೆ 32ಕ್ಕೆ ಏರಿಕೆಯಾಯಿತು. Words

ಇದನ್ನೂ ಓದಿ: Hemant Soren: 5 ತಿಂಗಳ ಜೈಲುವಾಸದ ಬಳಿಕ ಮತ್ತೆ ಜಾರ್ಖಂಡ್‌ ಸಿಎಂ ಆಗಿ ಹೇಮಂತ್‌ ಸೊರೆನ್‌ ಪ್ರಮಾಣವಚನ!

Continue Reading
Advertisement
Dina Bhavishya
ಭವಿಷ್ಯ13 mins ago

Dina Bhavishya : ಈ ರಾಶಿಯವರಿಗೆ ಈ ದಿನ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ

PM Modi Russia Visit
ವಿದೇಶ5 hours ago

PM Modi Russia Visit: ದೇಶ, ಜನರಿಗಾಗಿ ನಿಮ್ಮ ಜೀವನವೇ ಮುಡಿಪು ಎಂದು ಮೋದಿಯನ್ನು ಹೊಗಳಿದ ಪುಟಿನ್

LKG UKG
ಪ್ರಮುಖ ಸುದ್ದಿ6 hours ago

LKG, UKG: ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಿತಿ ನಿಗದಿ; ಇಲ್ಲಿದೆ ಹೊಸ ಅಪ್‌ಡೇಟ್

IND vs SL
ಕ್ರೀಡೆ6 hours ago

IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್​-ಕೊಹ್ಲಿಗೆ ವಿಶ್ರಾಂತಿ

Ramniwas Rawat
ದೇಶ7 hours ago

Ramniwas Rawat: 15 ನಿಮಿಷದಲ್ಲಿ 2 ಬಾರಿ ಸಚಿವನಾಗಿ ಬಿಜೆಪಿ ಶಾಸಕ ಪ್ರಮಾಣವಚನ; ಎಲ್ಲಾಯ್ತು ಎಡವಟ್ಟು?

Paris Olympics 2024
ಕ್ರೀಡೆ7 hours ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

MLA Satish Sail visited the flood affected areas of Karwar taluk
ಉತ್ತರ ಕನ್ನಡ8 hours ago

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Union Budget 2024
ದೇಶ8 hours ago

Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Dengue Cases
ಕರ್ನಾಟಕ8 hours ago

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

ಕ್ರೀಡೆ8 hours ago

Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ12 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ14 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ16 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ17 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು18 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ1 day ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ2 days ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌