ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಸಂಸದ ರಾಜಾ ಕೃಷ್ಣಮೂರ್ತಿ ಅವರು ಅಮೆರಿಕ ಮತ್ತು ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ)ಯ ನಡುವಿನ ವ್ಯೂಹಾತ್ಮಕ ಸ್ಪರ್ಧಾ ಸದನ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಚೀನಾ ಕಮ್ಯುನಿಸ್ಟ್ ಪಾರ್ಟಿಯ ಜತೆಗಿನ ಅಮೆರಿಕ ವಾಣಿಜ್ಯಕ, ತಾಂತ್ರಿಕ, ಭದ್ರತಾ ಸ್ಪರ್ಧೆಗಳ ಕುರಿತ ಸಮಾಲೋಚಿಸಿ ನೀತಿ ನಿರೂಪಣೆಗಳನ್ನು ಮಾಡುವ ನಿರ್ದಿಷ್ಟ ಉದ್ದೇಶದಿಂದ ಈ ಸಮಿತಿಯನ್ನು ಇತ್ತೀಚೆಗೆ ರಚಿಸಲಾಗಿದೆ.
ಸದಸ್ಯರಾಗಿ ತಮ್ಮನ್ನು ನೇಮಕ ಮಾಡಿರುವುದಕ್ಕೆ ರಾಜಾ ಕೃಷ್ಣಮೂರ್ತಿ ಅವರು ಧನ್ಯವಾದ ಸಲ್ಲಿಸಿದ್ದಾರೆ. ಮುಂದುವರಿದು, ಚೀನಾ ದೇಶವು ಅಮೆರಿಕಕ್ಕೆ ಹಾಗೂ ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗೆ ಆತಂಕಕಾರಿಯಾಗಿದೆ ಎಂದಿದ್ದಾರೆ. ಇದಕ್ಕೆ ತೈವಾನ್‌ನ ಪ್ರಜಾಪ್ರಭುತ್ವ ಉದಾಹರಣೆ. ಅಮೆರಿಕದ ಕೋಟ್ಯಂತರ ಮೌಲ್ಯದ ಬೌದ್ಧಿಕ ಹಕ್ಕುಗಳ ಕಳವು ನಡೆಸಿದ್ದು ಕೂಡ ದೃಷ್ಟಾಂತ ಎಂದಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer | Population | ಮೊದಲ ಬಾರಿಗೆ ಚೀನಾದ ಜನಸಂಖ್ಯೆ ಕುಸಿತ | ಭಾರತದ ಜನಸಂಖ್ಯೆ ಚೀನಾಕ್ಕಿಂತಲೂ ಹೆಚ್ಚು?
ಇದರ ಜತೆಗೆ, ಏಷ್ಯನ್ ಮೂಲದವರ ಕುರಿತು ಹೆಚ್ಚುತ್ತಿರುವ ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚುತ್ತಿರುವ ದ್ವೇಷದ ಕುರಿತೂ ಅವರು ಧ್ವನಿಯೆತ್ತಿದ್ದಾರೆ. ಚೀನಾದ ಪಾಲಿಸಿಗಳನ್ನು ವಿರೋಧಿಸಬೇಕು ನಿಜ. ಆದರೆ ಅದೇ ನಿಟ್ಟಿನಲ್ಲಿ ಹೆಚ್ಚುತ್ತಿರುವ ಕ್ಸೆನೋಫೋಬಿಯಾ (ಚೀನೀಯರ ಬಗ್ಗೆ ದ್ವೇಷ), ಏಷ್ಯನ್ ಅಮೆರಿಕನ್ನರು ಹಾಗೂ ಪೆಸಿಫಿಕ್ ದ್ವೀಪವಾಸಿಗಳ ಕುರಿತ ದ್ವೇಷವನ್ನೂ ತಡೆಯಬೇಕಿದೆ ಎಂದಿದ್ದಾರೆ.
ಡೆಮೊಕ್ರಾಟ್ ಪಕ್ಷದ ಸದಸ್ಯರಾದ ಕೃಷ್ಣಮೂರ್ತಿ ಅವರು, ಸೆನ್ಸಾರ್‌ಶಿಪ್ ಕುರಿತ ಕಾಯಂ ಸದನ ಸಮಿತಿಯ ಸದಸ್ಯರೂ ಆಗಿದ್ದಾರೆ. ಇದು, ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಪ್ರಭಾವದಡಿಯಲ್ಲಿರುವ ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವುದನ್ನು, ಅಂಥ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಸಿಲುಕದಂತೆ ತಡೆಯಬಯಸುವ ಅಮೆರಿಕನ್ ಪ್ರಜೆಗಳಿಗೆ ನೆರವಾಗುತ್ತದೆ.
US China War : ಇನ್ನೆರಡು ವರ್ಷದಲ್ಲಿ ಅಮೆರಿಕ-ಚೀನಾ ಸಮರ ಸಾಧ್ಯತೆ, ಯುಎಸ್ ವಾಯುಪಡೆ ಅಧಿಕಾರಿ ಎಚ್ಚರಿಕೆಇದನ್ನೂ ಓದಿ: