Site icon Vistara News

ಹಿಂದೂಗಳ ಆಸ್ತಿ ಲೂಟಿ ಮಾಡಿ, ದೇವರ ವಿಗ್ರಹ ಕದ್ದು ಪಾಕಿಸ್ತಾನ ಸ್ಥಾಪನೆ; ಪಾಕ್‌ ಪತ್ರಕರ್ತನ ವಿಡಿಯೊ ವೈರಲ್‌

Viral Video

ಪಾಕಿಸ್ತಾನದ (pakistan) ಹುಟ್ಟಿನ ಬಗ್ಗೆ ಅಲ್ಲಿನ ಹಿರಿಯ ಪತ್ರಕರ್ತ (journalist) ಇಮ್ರಾನ್ ಶಫ್ಕತ್ (Imran Shafqat ) ಹೇಳಿರುವ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral Video) ಆಗಿದ್ದು, ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಪಾಕಿಸ್ತಾನ ಫಾರ್ ಇಸ್ಲಾಂ (Pakistan for Islam) ಎಂಬುದನ್ನು ಪ್ರಶ್ನಿಸಿರುವ ಅವರು, 1947ರಲ್ಲಿ ಹಿಂದೂಗಳ ದೇವಾಲಯಗಳನ್ನು ಲೂಟಿ ಮಾಡಿ, ಅವರ ಆಸ್ತಿಗಳನ್ನು ವಶಪಡಿಸಿಕೊಂಡು ಪಾಕಿಸ್ತಾನವನ್ನು ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪಾಕಿಸ್ತಾನಿ ಪತ್ರಕರ್ತ ಇಮ್ರಾನ್ ಶಫ್ಕತ್ ಅವರ ಇತ್ತೀಚಿನ ವಿಡಿಯೋ ಇದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿವಾದ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಅವರು ಪಾಕಿಸ್ತಾನದ ಸೃಷ್ಟಿಯ ಮೂಲವನ್ನು ಟೀಕಿಸಿದ್ದಾರೆ.
ಅವರ ಯೂಟ್ಯೂಬ್ ಚಾನೆಲ್ ‘ಟೆಲ್ಲಿಂಗ್ಸ್ ವಿತ್ ಇಮ್ರಾನ್ ಶಫ್ಕತ್’ನ ವಿಡಿಯೋ ಕ್ಲಿಪ್ ಅನ್ನು ಎಕ್ಸ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ವೈರಲ್ ಕ್ಲಿಪ್‌ನಲ್ಲಿ, ಶಫ್ಕತ್ ಗಮನಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವನ್ನು ಸ್ಥಾಪನೆಯ ಐತಿಹಾಸಿಕ ಆಧಾರವನ್ನು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಆರಂಭದ ಬಗ್ಗೆ ಶಫ್ಕತ್ ಅನೇಕ ಆಶ್ಚರ್ಯಕರ ಹೇಳಿಕೆಗಳನ್ನು ನೀಡಿದ್ದಾರೆ. ಪಾಕಿಸ್ತಾನವನ್ನು ರಚಿಸಿದ ಮೊದಲ ದಿನ ಅದನ್ನು ಇಸ್ಲಾಂ ಹೆಸರಿನಲ್ಲಿ ಮಾಡಲಾಯಿತು ಎಂಬುದೆಲ್ಲ ಸುಳ್ಳು ಎಂದು ಅವರು ಆರೋಪಿದ್ದಾರೆ. ಪಾಕಿಸ್ತಾನದ ಸ್ಥಾಪಕರು ಸಲ್ಲಿಸಿದ ಆರಂಭಿಕ ದಾಖಲೆಗಳನ್ನು “ದೊಡ್ಡ ಸುಳ್ಳು” ಎಂದಿರುವ ಅವರು, ಕೇವಲ ಇಸ್ಲಾಮಿಕ್ ತತ್ತ್ವಗಳ ಮೇಲೆ ಪಾಕಿಸ್ತಾನವನ್ನು ಸ್ಥಾಪಿಸಲಾಗಿದೆ ಎಂಬ ನಿರೂಪಣೆಯು ತಪ್ಪುದಾರಿಗೆಳೆಯುತ್ತಿದೆ ಎಂದು ಹೇಳಿದ್ದಾರೆ.

ಸುಳ್ಳು ದಾಖಲೆ

ಇಸ್ಲಾಂ ಧರ್ಮದ ಹೆಸರಿನಲ್ಲಿ ಪಾಕಿಸ್ತಾನವನ್ನು ನಿರ್ಮಿಸಲಾಗಿದೆ ಎಂದು ಅವರು ನಮಗೆ ಹೇಳುತ್ತಿದ್ದದ್ದು ಒಂದು ದೊಡ್ಡ ಅಫೀಮ್. ದೇವರಿಗೆ ಗೊತ್ತು ಈ ದೇಶದ ಸೃಷ್ಟಿಕರ್ತರು ಸಲ್ಲಿಸಿದ ಮೊದಲ ದಾಖಲೆ ಒಂದು ದೊಡ್ಡ ಸುಳ್ಳು, ಹಲವಾರು ಸುಳ್ಳು ಹೇಳಿಕೆಗಳಿವೆ ಎಂದು ಅವರು ಹೇಳಿದರು.


ದೇವಸ್ಥಾನ ಲೂಟಿ, ಭೂಮಿ ವಶ

ಇತಿಹಾಸದಿಂದ ನಿರ್ದಿಷ್ಟ ಘಟನೆಗಳನ್ನು ಎತ್ತಿ ತೋರಿಸುತ್ತಾ, ಪಾಕಿಸ್ತಾನದ ರಚನೆಯಾದ ಸ್ವಲ್ಪ ಸಮಯದ ಅನಂತರ ಲಾಹೋರ್‌ನಲ್ಲಿ ಮುಸ್ಲಿಮರು ಬಲವಂತವಾಗಿ ದೇವಸ್ಥಾನವನ್ನು ಪ್ರವೇಶಿಸಿದರು. ವಿಗ್ರಹಗಳನ್ನು ಕದ್ದರು ಮತ್ತು ಹಿಂದೂ ಒಡೆತನದ ಅಂಗಡಿಗಳು ಮತ್ತು ಭೂಮಿಯನ್ನು ವಶಪಡಿಸಿಕೊಂಡರು ಎಂದು ಶಫ್ಕತ್ ಆರೋಪಿಸಿದ್ದಾರೆ.

ದೇವಾಲಯದ ಬೀಗಗಳನ್ನು ಒಡೆದು ವಿಗ್ರಹಗಳನ್ನು ಕದ್ದಿರುವ ಲಾಹೋರ್‌ನ ಮುಸ್ಲಿಮರು ಹಿಂದೂ ಅಂಗಡಿಗಳನ್ನು ಸಹ ವಶಪಡಿಸಿಕೊಂಡರು. ಅದನ್ನು ಮುರಿದು ಅವುಗಳ ಶೆಟರ್‌ಗಳನ್ನು ಎಳೆದಿದ್ದಾರೆ. ಇದು ಪಾಕಿಸ್ತಾನದ ಅಡಿಪಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಗನಿಗೆ ಮುಸಲ್ಮಾನರ ಕ್ಯಾಪ್‌ ಹಾಕಿದ ನಟಿ; ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ!

ಶಫ್ಕತ್ ಮಾಡಿರುವ ಈ ಟೀಕೆಗಳು ಆನ್‌ಲೈನ್‌ನಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು, ಸತ್ಯವನ್ನು ಮಾತನಾಡುವ ಧೈರ್ಯ ಮತ್ತು ದೃಢತೆಯನ್ನು ಹೊಂದಿರುವ ನಿಮಗೆ ಹ್ಯಾಟ್ಸ್ ಆಫ್. ಈ ಜಗತ್ತನ್ನು ಉತ್ತಮ ಸ್ಥಳವಾಗಿಸಲು ನಿಮ್ಮಂತಹ ಹೆಚ್ಚು ಜನರು ಇರಬೇಕು ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರ, ಎಚ್ಚರವಾಗಿರಿ. ನಿಮ್ಮನ್ನು ಕೊಲ್ಲಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ಶಫ್ಕತ್ ಅವರ ಸುರಕ್ಷತೆ ಬಗ್ಗೆ ಭಯಪಟ್ಟಿದ್ದಾರೆ. ಇನ್ನೊಬ್ಬರು ಸರಿಯಾಗಿ ಮಾತನಾಡಿದ್ದೀರಿ ಎಂದು ಹೇಳಿದ್ದಾರೆ.

Exit mobile version