ವಾಷಿಂಗ್ ಮೆಷಿನ್ನನ್ನು ನೀವು ಬಟ್ಟೆ ಒಗೆಯಲು ಮಾತ್ರ ಬಳಸಿರ್ತಿರಾ. ಆದರೆ, ಇಲ್ಲೊಬ್ಬ ಮಹಿಳೆ ವಾಷಿಂಗ್ ಮೆಷಿನ್ ತರಕಾರಿ ತೊಳೆಯೋ ಮೆಷಿನ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಹಿಳೆಯೊಬ್ಬಳು “ನಿಮ್ಮ ತರಕಾರಿಗಳನ್ನು ಹೀಗೆ ತೊಳೆಯಿರಿʼ ಎಂಬ ಕ್ಯಾಪ್ಶನ್ ನೀಡಿ ವಾಷಿಂಗ್ ಮೆಷಿನ್ನಲ್ಲಿ ಹಸಿರು ತರಕಾರಿಗಳನ್ನು ತೊಳೆಯುವ ಟಿಕ್ ಟಾಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ. ವಿಡಿಯೋದಲ್ಲಿ ಮಹಿಳೆ ಎಲ್ಲಾ ಹಸಿರು ತರಕಾರಿಗಳನ್ನು ವಾಷಿಂಗ್ ಮೆಷಿನ್ಗೆ ಹಾಕಿ ಸುಮಾರು 55 ನಿಮಿಷಗಳ ಕಾಲ ಶುಚಿಗೊಳಿಸಿದ್ದಾಳೆ. ಬಳಿಕ ವಾಷಿಂಗ್ ಮೆಷಿನ್ನಿಂದ ತರಕಾರಿಯನ್ನು ಹೊರಗೆ ತೆಗೆದಿದ್ದಾಳೆ.
ಇದನ್ನು ಓದಿ| G7 Summit | ಮೋದಿ ಇದ್ದಲ್ಲಿಗೆ ಬಂದು ಮಾತನಾಡಿಸಿದ ಬೈಡೆನ್; ವಿಡಿಯೋ ವೈರಲ್
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಮಹಿಳೆಯ ದಡ್ಡತನಕ್ಕೆ ನೆಟ್ಟಿಗರು ಗೇಲಿ ಮಾಡಿದ್ದಾರೆ. ಕೆಲ ಬಳಕೆದಾರರು ನಿಮ್ಮ ಮನೆಯಲ್ಲಿರುವ ಕೊಳಕು ಬಟ್ಟೆಗಳನ್ನು ಮೊದಲು ಶುಚಿಗೊಳಿಸಿ ಎಂದಿದ್ದರೆ, ಮತ್ತೊಬ್ಬ ಬಳಕೆದಾರರು ವಾಷಿಂಗ್ ಮೆಷಿನ್ನಲ್ಲಿ ತರಕಾರಿ ತೊಳೆಯೊದರಿಂದ ಮೆಷಿನ್ ಕೆಟ್ಟು ಹೋಗುತ್ತೆ ಎಂದು ಬುದ್ಧಿವಾದ ಹೇಳಿದ್ದಾರೆ. ಮತ್ತೆ ಕೆಲವರು ಈ ರೀತಿ ವಾಷ್ ಮಾಡುವುದರಿಂದ ಬ್ಯಾಕ್ಟಿರಿಯಾ ಹೆಚ್ಚಾಗುತ್ತದೆ, ಇದರಿಂದ ರೋಗ ಬರುತ್ತದೆ ಎಂದು ಸಲಹೆ ನೀಡಿದ್ದಾರೆ.
ಈ ಹಿಂದೆ ವಾಷಿಂಗ್ ಮೆಷಿನ್ನಲ್ಲಿ ಹಣ ತೊಳೆದಿದ್ದ ಭೂಪ
2020ರಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿತ್ತು. ಈ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲೊಬ್ಬ ವ್ಯಕ್ತಿ ನೋಟುಗಳನ್ನು ಸಹ ವಾಷಿಂಗ್ ಮೆಷಿನ್ಗೆ ಹಾಕಿ ವಾಷ್ ಮಾಡಿದ್ದ. ಆಗ ಈ ಸುದ್ದಿ ಎಲ್ಲೆಡೆ ಭಾರೀ ವೈರಲ್ ಆಗಿತ್ತು. ಸಿಯೋಲ್ ಸಮೀಪದ ಅನ್ಸಾನ್ ನಗರದ ವ್ಯಕ್ತಿ ಹೀಗೆ ಮಾಡಿದ್ದ. ಹೀಗೆ ವಾಷಿಂಗ್ ಮೆಷಿನ್ನಲ್ಲಿ 50,000 ಡಾಲರ್ಗಳನ್ನು ಶುಚಿ ಮಾಡಲು ಹಾಕಿದ್ದ. ಆದರೆ ವಾಷಿಂಗ್ ಮೆಷಿನ್ಗೆ ಹಾಕಿದ್ದ ನೋಟುಗಳು ಅರ್ಧಕರ್ಧ ಹಾಳಾಗಿದ್ದವು. ಬಳಿಕ ಆತ ಹರಿದ ನೋಟುಗಳನ್ನು ಬ್ಯಾಂಕ್ಗೆ ನೀಡಿದ್ದ. ಬ್ಯಾಂಕ್ ಆತನಿಗೆ ಹೊಸದಾಗಿ 23 ಸಾವಿರ ಡಾಲರ್ ನೋಟುಗಳನ್ನು ನೀಡಿತ್ತು!
ಇದನ್ನು ಓದಿ| Online Beauty Trend: ವೈರಲ್ ಆದ ಹೇರ್ ಕಲರ್ ಸ್ಟೈಲ್