ವಾಷಿಂಗ್​ ಮೆಷಿನ್​ನಲ್ಲಿ ತರಕಾರಿ ತೊಳೆದ ಮಹಿಳೆ, ನೆಟ್ಟಿಗರಿಂದ ಫುಲ್ ಕ್ಲಾಸ್ - Vistara News

ವಿದೇಶ

ವಾಷಿಂಗ್​ ಮೆಷಿನ್​ನಲ್ಲಿ ತರಕಾರಿ ತೊಳೆದ ಮಹಿಳೆ, ನೆಟ್ಟಿಗರಿಂದ ಫುಲ್ ಕ್ಲಾಸ್

ಬಟ್ಟೆ ಒಗೆಯುವ ವಾಷಿಂಗ್ ಮೆಷಿನ್​ನಲ್ಲಿ ತರಕಾರಿ ತೊಳೆದ ಮಹಿಳೆ ಭಾರಿ ಸುದ್ದಿಯಲ್ಲಿದ್ದಾಳೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

VISTARANEWS.COM


on

washing machine
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ವಾಷಿಂಗ್ ಮೆಷಿನ್​ನನ್ನು ನೀವು ಬಟ್ಟೆ ಒಗೆಯಲು ಮಾತ್ರ ಬಳಸಿರ್ತಿರಾ. ಆದರೆ, ಇಲ್ಲೊಬ್ಬ ಮಹಿಳೆ ವಾಷಿಂಗ್​ ಮೆಷಿನ್​ ತರಕಾರಿ ತೊಳೆಯೋ ಮೆಷಿನ್ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಹಿಳೆಯೊಬ್ಬಳು “ನಿಮ್ಮ ತರಕಾರಿಗಳನ್ನು ಹೀಗೆ ತೊಳೆಯಿರಿʼ ಎಂಬ ಕ್ಯಾಪ್ಶನ್‌ ನೀಡಿ ವಾಷಿಂಗ್ ಮೆಷಿನ್​ನಲ್ಲಿ ಹಸಿರು ತರಕಾರಿಗಳನ್ನು ತೊಳೆಯುವ ಟಿಕ್ ಟಾಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ. ವಿಡಿಯೋದಲ್ಲಿ ಮಹಿಳೆ ಎಲ್ಲಾ ಹಸಿರು ತರಕಾರಿಗಳನ್ನು ವಾಷಿಂಗ್ ಮೆಷಿನ್​ಗೆ ಹಾಕಿ ಸುಮಾರು 55 ನಿಮಿಷಗಳ ಕಾಲ ಶುಚಿಗೊಳಿಸಿದ್ದಾಳೆ. ಬಳಿಕ ವಾಷಿಂಗ್ ಮೆಷಿನ್​ನಿಂದ ತರಕಾರಿಯನ್ನು ಹೊರಗೆ ತೆಗೆದಿದ್ದಾಳೆ.

ಇದನ್ನು ಓದಿ| G7 Summit | ಮೋದಿ ಇದ್ದಲ್ಲಿಗೆ ಬಂದು ಮಾತನಾಡಿಸಿದ ಬೈಡೆನ್‌; ವಿಡಿಯೋ ವೈರಲ್‌

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ಮಹಿಳೆಯ ದಡ್ಡತನಕ್ಕೆ ನೆಟ್ಟಿಗರು ಗೇಲಿ ಮಾಡಿದ್ದಾರೆ. ಕೆಲ ಬಳಕೆದಾರರು ನಿಮ್ಮ ಮನೆಯಲ್ಲಿರುವ ಕೊಳಕು ಬಟ್ಟೆಗಳನ್ನು ಮೊದಲು ಶುಚಿಗೊಳಿಸಿ ಎಂದಿದ್ದರೆ, ಮತ್ತೊಬ್ಬ ಬಳಕೆದಾರರು ವಾಷಿಂಗ್ ಮೆಷಿನ್​ನಲ್ಲಿ ತರಕಾರಿ ತೊಳೆಯೊದರಿಂದ ಮೆಷಿನ್​ ಕೆಟ್ಟು ಹೋಗುತ್ತೆ ಎಂದು ಬುದ್ಧಿವಾದ ಹೇಳಿದ್ದಾರೆ. ಮತ್ತೆ ಕೆಲವರು ಈ ರೀತಿ ವಾಷ್ ಮಾಡುವುದರಿಂದ ಬ್ಯಾಕ್ಟಿರಿಯಾ ಹೆಚ್ಚಾಗುತ್ತದೆ, ಇದರಿಂದ ರೋಗ ಬರುತ್ತದೆ ಎಂದು ಸಲಹೆ ನೀಡಿದ್ದಾರೆ.

ಈ ಹಿಂದೆ ವಾಷಿಂಗ್ ಮೆಷಿನ್​​ನಲ್ಲಿ ಹಣ ತೊಳೆದಿದ್ದ ಭೂಪ

2020ರಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿತ್ತು. ಈ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲೊಬ್ಬ ವ್ಯಕ್ತಿ ನೋಟುಗಳನ್ನು ಸಹ ವಾಷಿಂಗ್ ಮೆಷಿನ್​ಗೆ ಹಾಕಿ ವಾಷ್​ ಮಾಡಿದ್ದ. ಆಗ ಈ ಸುದ್ದಿ ಎಲ್ಲೆಡೆ ಭಾರೀ ವೈರಲ್ ಆಗಿತ್ತು. ಸಿಯೋಲ್ ಸಮೀಪದ ಅನ್ಸಾನ್ ನಗರದ ವ್ಯಕ್ತಿ ಹೀಗೆ ಮಾಡಿದ್ದ. ಹೀಗೆ ವಾಷಿಂಗ್ ಮೆಷಿನ್​ನಲ್ಲಿ 50,000 ಡಾಲರ್​ಗಳನ್ನು ಶುಚಿ ಮಾಡಲು ಹಾಕಿದ್ದ. ಆದರೆ ವಾಷಿಂಗ್ ಮೆಷಿನ್​ಗೆ ಹಾಕಿದ್ದ ನೋಟುಗಳು ಅರ್ಧಕರ್ಧ ಹಾಳಾಗಿದ್ದವು. ಬಳಿಕ ಆತ ಹರಿದ ನೋಟುಗಳನ್ನು ಬ್ಯಾಂಕ್​ಗೆ ನೀಡಿದ್ದ. ಬ್ಯಾಂಕ್​ ಆತನಿಗೆ ಹೊಸದಾಗಿ 23 ಸಾವಿರ ಡಾಲರ್ ನೋಟುಗಳನ್ನು ನೀಡಿತ್ತು!   

ಇದನ್ನು ಓದಿ| Online Beauty Trend: ವೈರಲ್‌ ಆದ ಹೇರ್‌ ಕಲರ್ ಸ್ಟೈಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಅವಮಾನ: ಭಾರತ-ಚೀನಾ ‘ನರಕ’ ಎಂದ ಮೈಕೆಲ್ ಸ್ಯಾವೇಜ್ ಪೋಸ್ಟ್ ಹಂಚಿಕೊಂಡ ಅಧ್ಯಕ್ಷ

VISTARANEWS.COM


on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ರಾಷ್ಟ್ರಗಳ ವಿರುದ್ಧ ಮತ್ತೊಮ್ಮೆ ವಿವಾದಾತ್ಮಕ ಧೋರಣೆ ತಳೆದಿದ್ದಾರೆ. ಅಮೆರಿಕದ ರಾಜಕೀಯ ನಿರೂಪಕ ಮೈಕೆಲ್ ಸ್ಯಾವೇಜ್ ಅವರ ‘ಜನಾಂಗೀಯ ನಿಂದನೆ’ಯಿಂದ ಕೂಡಿದ ಪಾಡ್‌ಕಾಸ್ಟ್ ಅನ್ನು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಪ್ಲಾಟ್‌ಫಾರ್ಮ್‌ನಲ್ಲಿ ಮರುಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸ್ಯಾವೇಜ್, ಭಾರತ ಮತ್ತು ಚೀನಾವನ್ನು “ಭೂಮಿಯ ಮೇಲಿನ ನರಕಗಳು” ಎಂದು ಬಣ್ಣಿಸಿದ್ದು, ಈ ದೇಶಗಳ ಜನರು ಕೇವಲ ಪೌರತ್ವ ಪಡೆಯುವ ಉದ್ದೇಶದಿಂದ ಅಮೆರಿಕಕ್ಕೆ ಬರುತ್ತಾರೆ ಎಂದು ಹೀಯಾಳಿಸಿದ್ದಾರೆ. ಇದು ಅನಿವಾಸಿ ಭಾರತೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಕೆಲ್ ಸ್ಯಾವೇಜ್ ತಮ್ಮ ಹೇಳಿಕೆಯಲ್ಲಿ, ಏಷ್ಯಾದ ರಾಷ್ಟ್ರಗಳ ಗರ್ಭಿಣಿಯರು “ಒಂಬತ್ತನೇ ತಿಂಗಳಲ್ಲಿ ಮಗುವನ್ನು ಹಡೆಯಲು” ಅಮೆರಿಕಕ್ಕೆ ಬರುತ್ತಾರೆ ಮತ್ತು ಇಲ್ಲಿ ಮಗು ಜನಿಸಿದ ತಕ್ಷಣ ಅಮೆರಿಕದ ನಾಗರಿಕರನ್ನಾಗಿ ಮಾಡಲಾಗುತ್ತದೆ. ನಂತರ ಅವರು ತಮ್ಮ ಇಡೀ ಕುಟುಂಬವನ್ನು “ಭಾರತ ಅಥವಾ ಚೀನಾದಂತಹ ನರಕದಿಂದ” ಇಲ್ಲಿಗೆ ಕರೆತರುತ್ತಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ವಲಸಿಗರನ್ನು “ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು” ಎಂದು ಕರೆದಿರುವ ಅವರು, ಈ ವಲಸಿಗರು ಅಮೆರಿಕದ ಧ್ವಜದ ಮೇಲೆ ಕಾಲಿಟ್ಟಿದ್ದಾರೆ ಮತ್ತು ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅತಿರೇಕದ ಜನಾಂಗೀಯ ಕಾಮೆಂಟ್ ಮಾಡಿದ್ದಾರೆ.

ಈ ಬೆಳವಣಿಗೆಯು ಟ್ರಂಪ್ ಅವರ ‘ಜನ್ಮಸಿದ್ಧ ಪೌರತ್ವ’ (Birthright Citizenship) ರದ್ದತಿ ಅಭಿಯಾನದ ಭಾಗವಾಗಿದೆ. ಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯ ಅಡಿಯಲ್ಲಿ ನೆಲದಲ್ಲಿ ಜನಿಸಿದವರಿಗೆ ಸಿಗುವ ಸ್ವಯಂಚಾಲಿತ ಪೌರತ್ವವನ್ನು ಕೊನೆಗೊಳಿಸಲು ಟ್ರಂಪ್ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿದ್ದು, ಟ್ರಂಪ್ ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಜಗತ್ತಿನಲ್ಲಿ ಅಮೆರಿಕ ಮಾತ್ರ ಪೌರತ್ವ ನೀಡುತ್ತದೆ ಎಂದು ಟ್ರಂಪ್ ಹೇಳಿದ್ದರೂ, ವಾಸ್ತವದಲ್ಲಿ ಕೆನಡಾ, ಮೆಕ್ಸಿಕೋ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ದೇಶಗಳಲ್ಲಿ ಈ ಕಾನೂನು ಜಾರಿಯಲ್ಲಿದೆ.

Continue Reading

Latest

ನೇಪಾಳದಲ್ಲಿ ‘ರ‍್ಯಾಪರ್’ ಪ್ರಧಾನಿ ಬಾಲೆನ್ ಶಾ ಕ್ರಾಂತಿ: ಭ್ರಷ್ಟಾಚಾರಕ್ಕೆ ಜಾಗವಿಲ್ಲ, ಆರೋಪ ಕೇಳಿಬಂದ 26 ದಿನಕ್ಕೇ ಇಬ್ಬರು ಸಚಿವರ ಔಟ್!

VISTARANEWS.COM


on

ಕಠ್ಮಂಡು: ದಕ್ಷಿಣ ಏಷ್ಯಾದ ರಾಜಕಾರಣದಲ್ಲಿ ಹಿರಿಯ ನಾಯಕರ ನಡುವೆ 35 ವರ್ಷದ ಯುವ ರ‍್ಯಾಪರ್-ರಾಜಕಾರಣಿ ಬಾಲೆನ್ ಶಾ (Balen Shah) ಹೊಸ ಮನ್ವಂತರ ಸೃಷ್ಟಿಸುತ್ತಿದ್ದಾರೆ. ನೇಪಾಳದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳೊಳಗೆ, ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಮಂತ್ರಿಗಳ ಮೇಲೆ ಸಣ್ಣ ಆರೋಪ ಕೇಳಿಬಂದರೂ ಸಹನೆ ತೋರದೆ, ಕೇವಲ 26 ದಿನಗಳ ಅವಧಿಯಲ್ಲಿ ಇಬ್ಬರು ಪ್ರಭಾವಿ ಸಚಿವರ ರಾಜೀನಾಮೆ ಪಡೆಯುವ ಮೂಲಕ ಬಾಲೆನ್ ಶಾ ಭಾರತದಂತಹ ನೆರೆರಾಷ್ಟ್ರಗಳ ರಾಜಕಾರಣಿಗಳಿಗೂ ಮಾದರಿ ಎನಿಸುವಂತಹ ಕಠಿಣ ಸಂದೇಶ ರವಾನಿಸಿದ್ದಾರೆ.

ಸಾಮಾನ್ಯವಾಗಿ ರಾಜಕೀಯದಲ್ಲಿ ಆರೋಪಗಳು ಕೇಳಿಬಂದಾಗ ನಾಯಕರು ತಮ್ಮ ಸಚಿವರನ್ನು ಸಮರ್ಥಿಸಿಕೊಳ್ಳುವುದು ಅಥವಾ ತನಿಖೆ ಮುಗಿಯುವವರೆಗೆ ಕಾಯುವುದು ವಾಡಿಕೆ. ಆದರೆ ಬಾಲೆನ್ ಶಾ ಸರ್ಕಾರದಲ್ಲಿ ‘ನೈತಿಕತೆ’ಗೆ ಮೊದಲ ಆದ್ಯತೆ ನೀಡಲಾಗಿದೆ. ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸಿದ ಕಾರ್ಮಿಕ ಸಚಿವ ದೀಪಕ್ ಕುಮಾರ್ ಸಾ ಅವರನ್ನು ಪ್ರಮಾಣವಚನ ಸ್ವೀಕರಿಸಿದ ಕೇವಲ 13 ದಿನಕ್ಕೆ ವಜಾಗೊಳಿಸಲಾಯಿತು. ಅದರ ಬೆನ್ನಲ್ಲೇ, ವೈಯಕ್ತಿಕ ವ್ಯವಹಾರಗಳ ಬಗ್ಗೆ ಪ್ರಶ್ನೆ ಎದುರಾದಾಗ ಗೃಹ ಸಚಿವ ಸುಡಾನ್ ಗುರುಂಗ್ ಅವರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದು, “ಸ್ಥಾನಕ್ಕಿಂತ ನೈತಿಕತೆ ದೊಡ್ಡದು” ಎಂಬ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದು ಅಧಿಕಾರಕ್ಕಾಗಿ ಅಂಟಿ ಕುಳಿತುಕೊಳ್ಳುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿದೆ.

ಬಾಲೆನ್ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಕ್ಷವು (RSP) ಜನರಲ್ಲಿ ಸುಧಾರಣೆಯ ಭರವಸೆ ಮೂಡಿಸಿದ್ದರೂ, ಪ್ರಸ್ತುತ ದೇಶವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಇಂಧನ ಬೆಲೆ ಏರಿಕೆ ಮತ್ತು ಭಾರತದ ಗಡಿಯಿಂದ ಬರುವ ಸರಕುಗಳ ಮೇಲಿನ ಕಟ್ಟುನಿಟ್ಟಿನ ಸುಂಕದ ನೀತಿ ಜನರಲ್ಲಿ ಅಸಮಾಧಾನ ಮೂಡಿಸಿರುವುದು ನಿಜ. ಆದರೆ, ಆಡಳಿತದಲ್ಲಿ ಪಾರದರ್ಶಕತೆ ತರಲು ಅವರು ತೋರುತ್ತಿರುವ ಧೈರ್ಯ ಮತ್ತು ಭ್ರಷ್ಟರನ್ನು ತಕ್ಷಣವೇ ಸಂಪುಟದಿಂದ ಹೊರಹಾಕುವ ಅವರ “ಝೀರೋ ಟಾಲರೆನ್ಸ್” ನೀತಿ ಯುವ ಪೀಳಿಗೆಯ ಮೆಚ್ಚುಗೆಗೆ ಪಾತ್ರವಾಗಿದೆ. ಹಳೆಯ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡಿ ಸ್ವಚ್ಛ ಆಡಳಿತ ನೀಡಲು ಹೊರಟಿರುವ ಈ Gen Z ನಾಯಕನ ನಡೆ ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

Continue Reading

Latest

ಇರಾನ್ ಮೇಲಿನ ದಾಳಿ ಸದ್ಯಕ್ಕೆ ಸ್ಥಗಿತ: ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಸಮ್ಮತಿ

VISTARANEWS.COM


on

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಸ್ಫೋಟಕ ಹಂತ ತಲುಪಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿಯುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಘೋಷಿಸಲಾಗಿದ್ದ ಕದನ ವಿರಾಮದ ಅವಧಿ ಬುಧವಾರಕ್ಕೆ ಅಂತ್ಯಗೊಂಡಿದ್ದರೂ, ರಾಜತಾಂತ್ರಿಕತೆಗೆ ಮತ್ತೊಂದು ಅವಕಾಶ ನೀಡುವ ಸಲುವಾಗಿ ಟ್ರಂಪ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ಇರಾನ್ ಕಡೆಯಿಂದ ಅಧಿಕೃತ ಮತ್ತು ಏಕೀಕೃತ ಸಂಧಾನದ ಪ್ರಸ್ತಾಪ ಬರುವವರೆಗೆ ಅಮೆರಿಕದ ಸೇನೆ ಯಾವುದೇ ಆಕ್ರಮಣ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಅಮೆರಿಕದ ಪಡೆಗಳು ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಸಜ್ಜಾಗಿರುವಂತೆ ಕಟ್ಟುನಿಟ್ಟಿನ ಆದೇಶವನ್ನೂ ನೀಡಿದ್ದಾರೆ.

ಈ ಅನಿರೀಕ್ಷಿತ ಬೆಳವಣಿಗೆಯ ಹಿಂದೆ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸಿವೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರು ಟ್ರಂಪ್ ಅವರನ್ನು ಸಂಪರ್ಕಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಕಾಲಾವಕಾಶ ಕೋರಿದ್ದರು. ಪಾಕಿಸ್ತಾನದ ಈ ವಿಶೇಷ ಮನವಿಯನ್ನು ಪುರಸ್ಕರಿಸಿದ ಟ್ರಂಪ್, ತಮ್ಮ ‘ಟ್ರುತ್ ಸೋಶಿಯಲ್’ ಪ್ಲಾಟ್ ಫಾರ್ಮ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಇರಾನ್ ಮಂಡಿಸಲಿರುವ ಹೊಸ ಪ್ರಸ್ತಾಪವು ತಾರ್ಕಿಕ ಅಂತ್ಯ ಕಾಣುವವರೆಗೆ ದಾಳಿಯನ್ನು ತಡೆಹಿಡಿಯಲಾಗಿದೆ, ಇದು ಇರಾನ್‌ಗೆ ನೀಡಲಾದ ಕೊನೆಯ ಅವಕಾಶ ಎಂಬ ಸೂಚನೆಯೂ ಇದರಲ್ಲಿದೆ.

ಮತ್ತೊಂದೆಡೆ, ಆರ್ಥಿಕವಾಗಿ ಇರಾನ್ ಅನ್ನು ಕಟ್ಟಿಹಾಕಲು ಟ್ರಂಪ್ ‘ಹಾರ್ಮುಜ್ ಜಲಸಂಧಿ’ಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಜಾಗತಿಕ ತೈಲ ವ್ಯಾಪಾರದ ಆಯಕಟ್ಟಿನ ಪ್ರದೇಶವಾದ ಈ ಮಾರ್ಗಕ್ಕೆ ಅಮೆರಿಕ ನೌಕಾಪಡೆಯು ದಿಗ್ಬಂಧನ ವಿಧಿಸಿರುವುದರಿಂದ ಇರಾನ್‌ನ ದಿನಕ್ಕೆ 500 ಮಿಲಿಯನ್ ಡಾಲರ್ ಆದಾಯಕ್ಕೆ ಕತ್ತರಿ ಬಿದ್ದಿದೆ. ಇರಾನ್ ತನ್ನ ಅಸಹಾಯಕತೆಯನ್ನು ಮುಚ್ಚಿಕೊಳ್ಳಲು ತಾನೇ ಜಲಸಂಧಿ ಮುಚ್ಚಿರುವುದಾಗಿ ಹೇಳಿಕೊಳ್ಳುತ್ತಿದ್ದರೂ, ವಾಸ್ತವದಲ್ಲಿ ಅಮೆರಿಕದ ಬಿಗಿ ಹಿಡಿತದಿಂದಾಗಿ ಆ ದೇಶ ಕಂಗೆಟ್ಟಿದೆ. ಈ ಆರ್ಥಿಕ ಸಂಕಷ್ಟವೇ ಇರಾನ್ ಅನ್ನು ಮಾತುಕತೆಯ ಮೇಜಿಗೆ ಬರುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Continue Reading

Latest

“ಗ್ರೇಟರ್ ಇಸ್ರೇಲ್” ಸಾಕಾರಕ್ಕೆ ನೆತನ್ಯಾಹು ಬಿಗ್‌ ಪ್ಲಾನ್:‌ ಮಧ್ಯ ಪ್ರಾಚ್ಯದಲ್ಲಿ ಶಾಂತಿಗಿಲ್ಲ ನೆಲೆ

VISTARANEWS.COM


on

“ಗ್ರೇಟರ್ ಇಸ್ರೇಲ್” (Greater Israel) ಎಂಬುದು ಏಕೈಕ ಅಧಿಕೃತ ನೀತಿ ಅಥವಾ ಸಮಗ್ರವಾಗಿ ಒಪ್ಪಿಕೊಂಡ ಯೋಜನೆ ಅಲ್ಲ; ಇದು ಮುಖ್ಯವಾಗಿ ಒಂದು ವಿಚಾರಧಾರೆ/ಪರಿಕಲ್ಪನೆ, ಕೆಲವು ಧಾರ್ಮಿಕ ಹಾಗೂ ರಾಷ್ಟ್ರವಾದಿ ವಲಯಗಳಲ್ಲಿ ಚರ್ಚೆಯ ವಿಷಯ. ಈ ವಿಚಾರಧಾರೆ ಅಥವಾ ಪರಿಕಲ್ಪನೆಗೆ ಮೂಲ ಹೀಬ್ರೂ ಬೈಬಲ್‌ನಂತಹ ಯಹೂದಿ ಧಾರ್ಮಿಕ ಗ್ರಂಥಗಳು. ಅದರಲ್ಲಿ ವಚನಭೂಮಿ(Promised Land) ಪ್ರಸ್ತಾಪವಿದೆ.

ಈ ಗ್ರಂಥಗಳಲ್ಲಿ ಇಸ್ರೇಲ್ ಜನಾಂಗಕ್ಕೆ ದೇವರು ನೀಡಿದ ಭೂಮಿ ಎಂಬ ವಿವರಣೆ ಇದೆ. ಇದು ಇಂದಿನ ಇಸ್ರೇಲ್‌ ದೇಶಕ್ಕಿಂತ ಬಹು ದೊಡ್ಡ ಪ್ರದೇಶವೆಂದು ಅಂದರೆ ಪೂರ್ವಕ್ಕೆ ಜೋರ್ಡನ್‌ ನದಿಯಿಂದ ವೆಸ್ಟ್‌ಬ್ಯಾಂಕ್‌ವರೆಗೆ, ಪಶ್ಚಿಮದಲ್ಲಿ ಮೆಡಿಟರೇನಿಯನ್‌ ಸಮುದ್ರ ತೀರದವರೆಗೆ, ಉತ್ತರಕ್ಕೆ ಸಿರಿಯಾ ಹಾಗೂ ಲೆಬೆನಾನ್‌ ಕೆಲ ಭೂಪ್ರದೇಶ ದಕ್ಷಿಣಕ್ಕೆ ಈಜಿಪ್ಟ್‌ ನ ಕೆಲ ಪ್ರದೇಶಗಳು, ನೈರುತ್ಯಕ್ಕೆ ಪ್ಯಾಲಿಸ್ತೇನ್‌ ವಶದಲ್ಲಿರುವ ಗಾಜಾಪಟ್ಟಿ, ಈಶಾನ್ಯಕ್ಕೆ ಸಿರಿಯಾದ ಗೋಲಾನ್‌ ಹೈಬ್ಲೇಟ್‌ವರೆಗೆ ಹೀಗೆ ಒಟ್ಟು 5 ಲಕ್ಷ ಚದರ ಕಿ.ಮೀವರೆಗೆ ಅಂದರೆ ಈಗಿರುವ ಭೂಪ್ರದೇಶಕ್ಕಿಂತ 20ಪಟ್ಟು ಹೆಚ್ಚಿನ ಪ್ರದೇಶದಲ್ಲಿ ಇಸ್ರೇಲ್‌ ಗಡಿ ವಿಸ್ತರಿಸುವುದು ಗ್ರೇಟರ್‌ ಇಸ್ರೇಲ್‌ ಸ್ಥಾಪನೆಯ ಹಿಂದಿನ ಉದ್ದೇಶ.

ಈ ಮೂಲಕ ಯಹೂದಿ ಜನಾಂಗದ ಐತಿಹಾಸಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಪುನಃಸ್ಥಾಪಿಸುವುದು ಆ ಮೂಲಕ “ವಚನಭೂಮಿ”ಯನ್ನು ಸಂಪೂರ್ಣವಾಗಿ ಒಳಗೊಂಡ ರಾಜ್ಯ ನಿರ್ಮಾಣ ಮಾಡುವುದು, ಅದಕ್ಕೆ ಅಗತ್ಯ ಭದ್ರತೆ ಮತ್ತು ರಾಷ್ಟ್ರವನ್ನು ವಿಸ್ತರಿಸುವುದು ಅಂದರೆ ಗ್ರೇಟರ್‌ ಇಸ್ರೇಲ್‌ ಸ್ಥಾಪನೆಯನ್ನು ಸಾಕಾರಗೊಳಿಸುವುದು ಇಸ್ರೇಲ್‌ನ ಈಗಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸೇರಿದಂತೆ ಈ ಪರಿಕಲ್ಪನೆ ಬೆಂಬಲಿಸುವವರ ಮುಖ್ಯ ಉದ್ದೇಶ. ಆದರೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ.

ಹಾಗೆ ನೋಡಿದರೆ ಗ್ರೇಟರ್‌ ಇಸ್ರೇಲ್‌ ನಿರ್ಮಾಣ, ಇಂದಿನ ಇಸ್ರೇಲ್‌ ಸರ್ಕಾರದ ಅಧಿಕೃತ ನೀತಿ ಅಲ್ಲ, ಹಾಗೆಂದು ಅದು ಅಧಿಕೃತವಾಗಿ ಘೋಷಿಸಿಕೊಂಡಿಲ್ಲ. ಈ ಕಲ್ಪನೆ ಮುಖ್ಯವಾಗಿ ಕೆಲವು ಅತಿರಾಷ್ಟ್ರವಾದಿ ಅಥವಾ ಧಾರ್ಮಿಕ ಗುಂಪುಗಳಲ್ಲಿ ಮಾತ್ರ ಕಾಣಬಹುದಾಗಿದೆ ಎಂಬುದು ಗಮನಿಸಬೇಕಾದ ವಿಷಯ.
ಬಹುತೇಕ ಅಂತರರಾಷ್ಟ್ರೀಯ ಸಮುದಾಯ ಮತ್ತು ರಾಜಕೀಯ ತಜ್ಞರು ಇದನ್ನು ವಿವಾದಾತ್ಮಕ ಮತ್ತು ಸಂಘರ್ಷ ಹೆಚ್ಚಿಸುವ ವಿಚಾರ ಎಂದು ಅಭಿಪ್ರಾಯಪಡುತ್ತಾರೆ. ಒಟ್ಟಾರೆ ಗ್ರೇಟರ್‌ ಇಸ್ರೇಲ್‌ ಎಂಬುದು ಧಾರ್ಮಿಕ ಮತ್ತು ಐತಿಹಾಸಿಕ ವ್ಯಾಖ್ಯಾನಗಳ ಮೇಲೆ ಆಧಾರಿತ ಕಲ್ಪನೆಯೇ ಹೊರತು ಇದು ಎಲ್ಲರೂ ಒಪ್ಪಿಕೊಂಡ ಯೋಜನೆ ಅಲ್ಲ ಎಂಬುದು ವೇದ್ಯ.

ಆದಾಗ್ಯೂ “ಗ್ರೇಟರ್‌ ಇಸ್ರೇಲ್‌” ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿರುವ ಇಸ್ರೇಲ್‌ ನ ಬಲಪಂಥೀಯ ಪಕ್ಷದ ರೂವಾರಿ ಈಗಿನ ಪ್ರಧಾನಿ ನೆತನ್ಯಾಹು ಇಡಿ ಮಧ್ಯಪ್ರಾಚ್ಯ ಪ್ರದೇಶವನ್ನು ಸದಾ ಸಂಘರ್ಷಮಯ ತಾಣವನ್ನಾಗಿಸಿದ್ದಾರೆ. ಆಗಿಂದಾಗ್ಗೆ ನೆರೆಹೊರೆ ದೇಶಗಳ ಮೇಲೆ ನಿರಂತರ ಯುದ್ಧಗಳನ್ನು ಸಾರುತ್ತಾ ಸದಾ ಉದ್ವಿಗ್ನ ಸ್ಥಿತಿಗೆ ಕಾರಣಭೂತರಾಗಿದ್ದಾರೆ. ಇದಕ್ಕೆ ದಾಳವಾಗಿರುವುದು ಗ್ರೇಟರ್‌ ಇಸ್ರೇಲ್‌ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಕನಸು ಎಂಬುದರಲ್ಲಿ ಎರಡು ಮಾತಿಲ್ಲ.

ಗಾಝಾಪಟ್ಟಿಯಲ್ಲಿ ನರಸಂಹಾರದ ನಂತರ ಇದೀಗ ಅವರು ಅಮೆರಿಕಾದ ಜತೆಗೂಡಿ ಇರಾನ್‌ ಮೇಲೆ ಜಂಟಿಯಾಗಿ ಹಾಗೂ ಲೆಬೆನಾನ್‌ ಮೇಲೆ ಪ್ರತ್ಯೇಕವಾಗಿ ಯುದ್ಧ ಸಾರಿದ್ದಾರೆ. ಇಸ್ರೇಲ್‌ನ ರಾಷ್ಟ್ರ ವಿಸ್ತರಣೆಯ ಕನಸು ಇದರ ಹಿಂದಿದೆ. ಆದರೆ ಲೆಬನಾನ್‌ನಲ್ಲಿ ನೆತನ್ಯಾಹು ಕನಸು ಸಾಕಾರಕ್ಕೆ ಮುಖ್ಯ ಅಡ್ಡಿಯಾಗಿರುವುದು ಹೆಜ್ಬುಲ್ಲಾ ಮತ್ತು ಹಮಾಸ್‌ ಸಂಘಟನೆಗಳು. ಲೆಬೆನಾನ್‌ ನಲ್ಲಿ ಇರಾನ್‌ ಬೆಂಬಲಿತ ಹೆಜ್ಬುಲ್ಲಾ ಪ್ರಬಲ ಶಕ್ತಿಯಾಗಿದ್ದರೆ ಹಮಾಸ್‌ ಪ್ಯಾಲೆಸ್ತೀನ್‌ ಗಡಿ ಭಾಗಗಳಲ್ಲಿ ನೆಲೆಯೂರಿರುವ ಸಂಘಟನೆಯಾಗಿದೆ ಇವು ಭಯೋತ್ಪಾದಕ ಸಂಘಟನೆಗಳು ಎಂದು ನಿಂದಿಸುವ ನೆತನ್ಯಾಹು ಖುದ್ಧು ಯುದ್ಧಧಾಹಿ ಎಂಬುದರಲ್ಲಿ ಎರಡು ಮಾತಿಲ್ಲ.
ಈ ನಡುವೆ ಇಸ್ರೇಲ್‌ ಅಮೆರಿಕಾ ಬೆನ್ನಿಗೆ ಸದಾ ನಿಂತಿರಲು ಕಾರಣವಿದೆ. ಅದಕ್ಕೆ ಮಧ್ಯ ಪ್ರಾಚ್ಯರಾಷ್ಟ್ರಗಳಲ್ಲಿರುವ ತೈಲ ಸಂಪತ್ತು ದೋಚುವ ವ್ಯಾಪಾರಿ ಬುದ್ಧಿಯೂ ಇದೆ. ಜತೆಗೆ ಅಮೆರಿಕಾದಲ್ಲಿ ಸರ್ಕಾರವನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಸಿರಿವಂತ ಯಹೂದಿಗಳ ಲಾಬಿ ಕೆಲಸ ಮಾಡುತ್ತದೆ. ಇಷ್ಟು ಮಾತ್ರವಲ್ಲ ಅಮೆರಿಕಾ, ಬ್ರಿಟನ್‌ ಮತ್ತಿತರ ರಾಷ್ಟ್ರಗಳಲ್ಲಿ ಇಸ್ರೇಲ್‌ನ ಚಾಣಾಕ್ಷ ತಂತ್ರಜ್ಞಾನವಿದೆ.

ಇಷ್ಟೆಲ್ಲದರ ನಡುವೆ ಗ್ರೇಟರ್‌ ಇಸ್ರೇಲ್‌ ರಾಷ್ಟ್ರದ ಪರಿಕಲ್ಪನೆ ಸಾಕಾರಕ್ಕೆ ಇಸ್ರೇಲ್‌ ನಲ್ಲಿ ವ್ಯಾಪಕ ವಿರೋಧವಿದೆ. ಬಲಪಂಥಿಯರು ಇದನ್ನು ಸಮರ್ಥಿಸಿದರೆ ಕೆಲ ಸಿವಿಲ್‌ ಸೋಸೈಟಿ ಹಾಗೂ ಎಡಪಂಥೀಯ ಪ್ರತಿಪಕ್ಷಗಳು ಇಸ್ರೇಲ್‌ ಪ್ರಧಾನಿಯ ಈ ನಡೆಯನ್ನು ತೀವ್ರವಾಗಿ ವಿರೋಧಿಸುತ್ತಿರುವುದೂ ಉಂಟು. ಇಸ್ರೇಲ್ ಭೂಭಾಗವನ್ನು ವಿಸ್ತರಿಸುವ ಹವಣಿಕೆಯಲ್ಲಿ ಇನ್ನೊಂದು ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಯೋಜನೆ ಒಪ್ಪುವಂತಹದ್ದಲ್ಲ. ಇದೆಲ್ಲದರ ಪರಿಣಾಮವಾಗಿ ಭವಿಷ್ಯದಲ್ಲಿ ಇನ್ನಷ್ಟು ಭಯೋತ್ಪಾದಕರ ದಾಳಿಯನ್ನು ಎದುರಿಸಬೇಕಾಗಬಹುದು ಎಂಬ ಎಚ್ಚರಿಕೆ ನೆತನ್ಯಾಹು ವಿರೋಧಿಗಳಿಂದ ವ್ಯಕ್ತವಾಗುತ್ತಲೇ ಇದೆ.


ಇದೆಲ್ಲಕ್ಕೂ ಮಿಗಿಲಾಗಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧದ ಅನೇಕ ಭ್ರಷ್ಟಾಚಾರದ ಮೊಕದ್ದಮೆಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ಅಂತಿಮ ಹಂತದಲ್ಲಿದ್ದು ಅವುಗಳು ರುಜುವಾತಾದರೆ ಪ್ರಧಾನಿ ಪಟ್ಟವನ್ನು ನೆತನ್ಯಾಹು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಯುದ್ಧಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆದು ಕುರ್ಚಿ‌ ಉಳಿಸಿಕೊಳ್ಳುವ ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ ಎಂಬ ವಿಶ್ಲೇಷಣೆಗಳಿವೆ.

ಮಧ್ಯಪ್ರಾಚ್ಯದಲ್ಲಿ ಎಲ್ಲೆ ಕಿಡಿ ಹೊತ್ತಿದರೂ ಅದರಲ್ಲಿ ಇಸ್ರೇಲ್‌ ಪಾತ್ರ ಇದ್ದೇ ಇರುತ್ತದೆ. ಆದರೆ ಇರಾನ್‌, ಇಸ್ರೇಲ್‌ ನ ಗಡಿ ಭಾಗವನ್ನು ಹೊಂದಿಕೊಂಡಿಲ್ಲ ಸರಿ ಸುಮಾರು 2 ಸಾವಿರ ಕಿ.ಮೀ ದೂರದಲ್ಲಿ ಈ ಎರಡು ರಾಷ್ಟ್ರಗಳ ಗಡಿ ಭಾಗಗಳಿವೆ. ಆದಾಗ್ಯ ಇಸ್ರೇಲ್‌ ಚಿತಾವಣೆ ಮೇರೆಗೆ ಅಮೆರಿಕಾ ಕೂಡ ಇರಾನ್‌ ವಿರುದ್ಧ ಮುಗಿಬಿದ್ದಿದೆ. ಇಸ್ರೇಲ್‌ ಪ್ರಧಾನಿ ನೆತನ್ಯಾಹು ಯುದ್ಧದಲ್ಲಿ ಅಮೆರಿಕಾವನ್ನು ಎಳೆದುತಂದಿದ್ದಾರೆ ಎಂದೆನ್ನಲಾಗುತ್ತಿದೆ. ಯುದ್ಧ ತಜ್ಞರ ಪ್ರಕಾರ ಇಸ್ರೇಲ್‌ ಗಡಿಗೆ ಹೊಂದಿಕೊಂಡಿರುವ ಲೆಬೆನಾನ್‌ ನ ಹೆಜ್ಬುಲ್ಲಾ ಸಂಘಟನೆಯನ್ನು ಇರಾನ್‌ ಹಾಗೂ ಹಮಾಸ್‌ ಸಂಘಟನೆಯನ್ನು ಪ್ಯಾಲಿಸ್ತೇನ್‌ ಪೋಷಿಸುತ್ತಿವೆ ಇಸ್ರೇಲ್‌ ಸೇಡಿಗೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಯುದ್ಧ ಅಂದರೆ ನಾಶ. ಈಗಾಗಲೇ ಅಮೆರಿಕಾ ಮತ್ತು ಇಸ್ರೇಲ್‌ ಜಂಟಿ ಕಾರ್ಯಾಚರಣೆಯಿಂದ ಇರಾನ್‌ ಸಾಕಷ್ಟು ಬಸವಳಿದಿದೆ. ಬಲಾಢ್ಯ ಅಮೆರಿಕಾ-ಇಸ್ರೇಲ್‌ ದೇಶಗಳಿದೂ ಸಾಕಷ್ಟು ಪೆಟ್ಟು ಬಿದ್ದಿದೆ. ಇಷ್ಟಾದ ಮೇಲೆ ಅಮೆರಿಕಾ ಮತ್ತು ಇರಾನ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎರಡನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ದಗೊಂಡಿದೆ. ಆದರೆ ಕದನ ವಿರಾಮವನ್ನು ಅಮೆರಿಕಾ ಉಲ್ಲಂಘಿಸುತ್ತಲೇ ಇದೆ ಎಂಬುದು ಇರಾನ್‌ ಆಕ್ರೋಶಕ್ಕೆ ಕಾರಣವಾಗಿದೆ. ಅಂತಿಮವಾಗಿ ಯುದ್ದಗಳು ಎಷ್ಟೇ ದೊಡ್ಡ ಪ್ರಮಾಣದಲ್ಲಿ ನಡೆದರೂ ಅದು ಕೊನೆಗೊಳ್ಳುವುದು ಶಾಂತಿಯಿಂದಲೇ ಎಂಬ ಅರಿವನ್ನು ಹೊಂದಬೇಕಿದೆ. ಅದುವೆ ವಿವೇಕ.ಅದರಿಂದಲೇ ಶಾಂತಿ-ನೆಮ್ಮದಿ ನೆಲೆ ನಿಲ್ಲಲು ಸಾಧ್ಯ.

Continue Reading
Advertisement
HD Revanna
Latest9 hours ago

ಸಚಿವ ಜಮೀರ್‌ರಿಂದ ಸಾಕಷ್ಟು ಅನುಭವಿಸಿದ್ದೇನೆ, ಅವರನ್ನು ಮತ್ತೆ ಜೆಡಿಎಸ್‌ಗೆ ಸೇರಿಸಿಕೊಳ್ಳಲ್ಲ; ಕುಮಾರಸ್ವಾಮಿ ಸ್ಪಷ್ಟೋಕ್ತಿ

Latest9 hours ago

ಮತದಾನಕ್ಕೆ ಕ್ಯೂನಲ್ಲಿ ನಿಂತರೂ ಕಷ್ಟ; ನಿಲ್ಲದಿದ್ದರೂ ಕಷ್ಟ: ಹಾಗಾದ್ರೆ ನಟ ಕಮಲ್‌ ಹಾಸನ್‌ ಏನು ಮಾಡಬೇಕಿತ್ತು?

Latest9 hours ago

ವಿಜಯ್ ಪಕ್ಷಕ್ಕೆ ಮತ ಚಲಾಯಿಸಲು ಸಾಧ್ಯವಾಗದೆ ಬಿಕ್ಕಿ ಬಿಕ್ಕಿ ಅತ್ತ ಯುವತಿ! ವಿಡಿಯೋ ವೈರಲ್

Latest10 hours ago

ಸಮಂತಾ ಕೇಳಿದ ಪ್ರಶ್ನೆಗೆ ದಿಗಂತ್ ಶಾಕ್! ‘ದೂದ್ ಪೇಡ’ ಅಂದ್ರೆ ಯಾರು ಎಂದಿದ್ದಕ್ಕೆ ‘ಚಾಕೊಲೇಟ್ ಹೀರೊ’ ನೀಡಿದ ರಿಯಾಕ್ಷನ್ ಹೇಗಿತ್ತು?

Latest10 hours ago

ಮಹಿಳಾ ಮೀಸಲಾತಿ: ಡಿಎಂಕೆ ಹುನ್ನಾರಕ್ಕೆ ರಾಜ್ಯ ಬಲಿ ಕೊಡುತ್ತಿರುವ ಸಿಎಂ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ ಆರೋಪ

Latest10 hours ago

ಬೆಸ್ಕಾಂ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಚಾಲನೆ; ಹೆಚ್‌ಟಿ ಗ್ರಾಹಕರಿಗೆ ಅನುಕೂಲ

Latest10 hours ago

ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಭಾರತಕ್ಕೆ ಅವಮಾನ: ಭಾರತ-ಚೀನಾ ‘ನರಕ’ ಎಂದ ಮೈಕೆಲ್ ಸ್ಯಾವೇಜ್ ಪೋಸ್ಟ್ ಹಂಚಿಕೊಂಡ ಅಧ್ಯಕ್ಷ

HD DeveGowda Wont celebrate 92nd birthday
Latest10 hours ago

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬಸವ ಶ್ರೀ, ಗುರುರಾಜ ಕರ್ಜಗಿ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ

Latest11 hours ago

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ; ಥಳಿಸಿದ ಗ್ರಾಮಸ್ಥರು

Latest11 hours ago

ಪಂಚರಾಜ್ಯ ಚುನಾವಣೆ ನಂತರ,ಪೆಟ್ರೋಲ್‌,ಡೀಸೆಲ್‌ ದರ ಏರಿಕೆ ಇಲ್ಲ : ಕೇಂದ್ರದ ಸ್ಪಷ್ಟನೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌