ಮೈಸೂರು: ವಿಧಾನ ಪರಿಷತ್‌ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮೈ.ವಿ ರವಿಶಂಕರ್ ಅವರನ್ನು ೧೨,೨೦೫ ಮತಗಳಿಂದ ಸೋಲಿಸಿದರು.
ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಮುಂದಿದ್ದರೂ ನಿಗದಿತ 46,0೮೩ ಮತಗಳನ್ನು ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳ ಲೆಕ್ಕಾಚಾರ ಮಾಡಲಾಯಿತು. ಆದರೆ, ಇದರಲ್ಲು ಕಾಂಗ್ರೆಸ್ ಈ ಸಂಖ್ಯೆಯನ್ನು ತಲುಪಲು ವಿಫಲವಾಯಿತು. ೮೦೮ ಮತಗಳ ಕೊರತೆ ಬಿತ್ತು. ಅಂತಿಮವಾಗಿ ಎಲಿಮಿನೇಷನ್ ಪ್ರಕ್ರಿಯೆ ಮೂಲಕ ಕಾಂಗ್ರೆಸ್ ಗೆಲುವನ್ನು ಘೋಷಿಸಲಾಯಿತು.
ಅಂತಿಮವಾಗಿ ಕಾಂಗ್ರೆಸ್‌ನ ಮಧು ಜಿ. ಮಾದೇಗೌಡ ಅವರು ೪೫,೨೭೫, ಬಿಜೆಪಿಯ ಮೈ.ವಿ. ರವಿಶಂಕರ್ ೩೩,೮೭೮ ಮತ್ತು ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಅವರು ೧೯,೬೩೦ ಮತಗಳನ್ನು ಪಡೆದರು.
ಮೊದಲ ಪ್ರಾಶಸ್ತ್ಯದ ನಂತರ ಹೇಗಿತ್ತು ಪರಿಸ್ಥಿತಿ?
ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಮಧು ಮಾದೇಗೌಡ ಅವರು ೩೨,೫೯೨, ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರು ೨೬,೬೮೭, ಜೆಡಿಎಸ್ ಅಭ್ಯರ್ಥಿ ಎಚ್.ಕೆ. ರಾಮು ಅವರು ೧೭,೦೦೨ ಮತಗಳನ್ನು ಪಡೆದಿದ್ದಾರೆ. ರೈತ ಸಂಘದ ಅಭ್ಯರ್ಥಿ ಪ್ರಸನ್ನ ಎನ್. ಗೌಡ ೬೬೦೯ ಮತ ಪಡೆದಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಪ್ತ ಸಹಾಯಕರಾಗಿದ್ದ ಎನ್.ಎಸ್. ವಿನಯ್ ೩೪೭೨ ಹಾಗೂ ಪಕ್ಷೇತರ ಡಾ.ಬಿ.ಎಚ್. ಚನ್ನಕೇಶವಮೂರ್ತಿ ೨೬೨೧ ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್-ಬಿಜೆಪಿ ತಲಾ ಎರಡು ಸ್ಥಾನ
ನಾಲ್ಕು ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಈಗ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಎರಡು ಸ್ಥಾನಗಳನ್ನು ಗೆದ್ದಂತಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹನುಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಭರ್ಜರಿ ಜಯ ಗಳಿಸಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಧು ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಒಟ್ಟಾರೆ ಫಲಿತಾಂಶದ ನಂತರ ವಿಧಾನ ಪರಿಷತ್‌ನ 75 ಸ್ಥಾನಗಳ ಪೈಕಿ ಬಿಜೆಪಿ 39 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಪಡೆದಂತಾಗಿದೆ.
ಇದನ್ನೂ ಓದಿ | ಬಸವರಾಜ ಹೊರಟ್ಟಿ ವಿಜಯ: 48 ವರ್ಷ MLC ಆಗುವ ದಾಖಲೆ ಬರೆಯಲು ಸಜ್ಜು
ADVERTISEMENT