Site icon Vistara News

Video: ನಲಪಾಡ್‌ಗೆ ಸೇರಿದ ಹೋಟೆಲ್‌ ಜಾಗದಲ್ಲಿ ಮಹಿಳೆಗೆ ಕಿರುಕುಳ ಆರೋಪ

ಮೈಸೂರು: ಹೋಟೆಲ್‌ ನಡೆಸಲು ಜಾಗವನ್ನು ಗುತ್ತಿಗೆ ನೀಡಿದ್ದರೂ ಅವಧಿಗೆ ಮುನ್ನವೇ ತೆರವು ಮಾಡುವಂತೆ ಮಹಿಳೆಗೆ ಬೆದರಿಕೆ ಒಡ್ಡಿದ ಹಾಗೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಶಾಂತಿನಗರ ಶಾಸಕ ಎಂ. ಎ. ಹಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಅವರು ತಮ್ಮ ಸ್ಥಳವನ್ನು ಸೈಯದ್‌ ಎಂಬಾತನಿಗೆ ಗುತ್ತಿಗೆ ನೀಡಿದ್ದರು. ಆ ಸ್ಥಳದಲ್ಲಿ ಹೋಟೆಲ್‌ ರೆಸ್ಟೋರೆಂಟ್‌ ನಡೆಸುವ ಮೂಲಸೌಕರ್ಯವಿದೆ. ಅದನ್ನು ಕೃತಿಕಾ ಎಂ. ಗೌಡ ಎಂಬವರು 20 ಲಕ್ಷ ರೂ. ನೀಡಿ ಮೂರು ವರ್ಷದ ಅವಧಿಗೆ ಸೈಯದ್‌ ಅವರಿಂದ ಉಪಗುತ್ತಿಗೆ ಪಡೆದಿದು ರೆಸ್ಟೋರೆಂಟ್‌ ನಡೆಸುತ್ತಿದ್ದರು.

ಆದರೆ ಸ್ಥಳವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ, ಒಪ್ಪಂದದ ಪ್ರಕಾರ ಕಾಲಕಾಲಕ್ಕೆ ಹಣ ಪಾವತಿ ಮಾಡುತ್ತಿಲ್ಲ ಎಂದು ಸೈಯದ್‌ ಹಾಗೂ ಕೃತಿಕಾ ನಡುವೆ ವೈಮನಸ್ಯ ಉಂಟಾಗಿತ್ತು. ಅವಧಿ ಪೂರ್ವದಲ್ಲೆ ಸ್ಥಳವನ್ನು ತೆರವು ಮಾಡಲು ಸೈಯದ್‌ ಸೂಚಿಸಿದ್ದಾರೆ. ಆದರೆ ಇನ್ನೂ ಎರಡು ವರ್ಷವಿರುವಾಗ ಖಾಲಿ ಮಾಡುವುದಿಲ್ಲ ಎಂದು ಕೃತಿಕ ತಿಳಿಸಿದ್ದರು ಎನ್ನಲಾಗಿದೆ. ಈ ವೇಳೆ ಮಾರ್ಚ್‌ 26ರ ಮದ್ಯಾಹ್ನ 2.40ರ ಸುಮಾರಿಗೆ ರೆಸ್ಟೋರೆಂಟ್‌ಗೆ ಸೈಯದ್‌ ಆಗಮಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಡುವೆ ಜಗಳ ತಾರಕಕ್ಕೇರಿ, ಕೃತಿಕಾ ಅವರನ್ನು ಸೈಯದ್‌ ಪಕ್ಕಕ್ಕೆ ತಳ್ಳಿ ಕ್ಯಾಷಿಯರ್‌ ಕುರ್ಚಿಯ ಮೇಳೆ ತಾವು ಕುಳಿತುಕೊಂಡಿದ್ದಾರೆ. ಕೆಳಕ್ಕೆ ಬಿದ್ದು ನಂತರ ಮೇಲೆದ್ದ ಕೃತಿಕ ಮತ್ತು ಕೆಲಕಾಲ ಮಾತಿನ ಚಕಮಕಿ ಮುಂದುವರಿಸಿರುವ ದೃಷ್ಯಗಳು ರೆಸ್ಟೋರೆಂಟ್‌ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸೈಯದ್‌ ಅವರಿಗೆ ನIಡಬೇಕಾದ ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿರುವ ಕೃತಿಕಾ, ಪ್ರಕರಣದ ಕುರಿತು ಯಾವುದೇ ದೂರನ್ನು ದಾಖಲಿಸಿಲ್ಲ.

https://vistaranews.com/wp-content/uploads/2022/05/Mysuru-Restaurant.mp4
Exit mobile version