1. ಅಕ್ರಮದ ಹೊಳೆಯಾದ ಎತ್ತಿನಹೊಳೆ ಪ್ರಾಜೆಕ್ಟ್; ಭ್ರಷ್ಟಾಚಾರದ ಹಿಂದಿದೆಯಾ ಮಾಫಿಯಾ?
ಬೆಂಗಳೂರು: “ಬರ ಅಂದರೆ ಎಲ್ಲರಿಗೂ ಇಷ್ಟ” ಎಂದು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರು ಪುಸ್ತಕವೊಂದನ್ನು ಬರೆದಿದ್ದರು. ಅಂದರೆ ಬರ ಎಂಬುದು ಒಮ್ಮೆ ಬಂದರೆ ಅದರಿಂದ “ಭರ”ಪೂರ ಲಾಭ ಪಡೆಯುವವರು ಮತ್ತೊಂದು ವರ್ಗವಾಗಿದೆ. ಆದರೆ, ರೈತಾಪಿ ಜನರ ದುಸ್ಥಿತಿಯನ್ನು ಮಾತ್ರ ಯಾರೂ ಕೇಳದಂತಾಗಿದೆ” ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಈಗ ಅಂಥದ್ದೇ ಭರಪೂರ ಭ್ರಷ್ಟಾಚಾರದ ಬಗ್ಗೆ ವಿಸ್ತಾರ ನ್ಯೂಸ್ ಎಕ್ಸ್‌ಕ್ಲೂಸಿವ್ (Vistara News Exclusive) ವರದಿ ಮಾಡಿದೆ. ಎತ್ತಿನಹೊಳೆ ಎಂಬ ಬಿಳಿ ಆನೆ ಪ್ರಾಜೆಕ್ಟ್‌ನ ಮತ್ತೊಂದು ಮುಖವನ್ನು ವಿಸ್ತಾರವಾಗಿ ತೆರೆದಿಡಲಾಗಿದೆ. ಎತ್ತಿನಹೊಳೆ ಯೋಜನೆ (Yettinahole Project) ಹೆಸರಿನಲ್ಲಿ ಜನರ ಜತೆ ರಾಜಕಾರಣಿಗಳು, ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರಾ? ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರಾ? ಎಂಬ ಅನುಮಾನದ ಜತೆಗೆ ಇದರ ಹಿಂದೆ ಆಂಧ್ರಪ್ರದೇಶ ಮತ್ತು ಉತ್ತರ ಭಾರತೀಯ ಗುತ್ತಿಗೆದಾರರ ಮಾಫಿಯಾ (Contractor mafia) ಇದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಇದು ಗುತ್ತಿಗೆದಾರರಿಗೆ ಗ್ಯಾರಂಟಿ ಯೋಜನೆಯಾಗಿದೆ. ಇನ್ನೊಂದು ಕರಾಳ ಸಂಗತಿಯೆಂದರೆ ಈ ಯೋಜನೆ ವೈಜ್ಞಾನಿಕವಾಗಿಲ್ಲ. ಅಂದುಕೊಂಡಷ್ಟು ನೀರನ್ನು ಪಡೆಯಲು ಬರುವುದಿಲ್ಲ ಎಂದು ಆಧಾರ ಸಹಿತ ಸರ್ಕಾರಕ್ಕೆ ಪತ್ರ ಬರೆದ ಉದ್ಯಮಿ, ಪರಿಸರ ಚಿಂತಕ ಎಚ್.ಎಸ್. ಶೆಟ್ಟಿ (Entrepreneur and Environmental Thinker HS Shetty) ಅವರಿಗೆ ಸಿಕ್ಕಿದ್ದು ಮಾತ್ರ ಲೀಗಲ್ ನೋಟಿಸ್, ಬೆದರಿಕೆಯ ಕರೆ! ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
2. ಐಸಿಸ್‌ನ 8 ಶಂಕಿತರನ್ನು ಹೆಡೆಮುರಿ ಕಟ್ಟಿದ ಎನ್‌ಐಎ! ಭಾರೀ ಸ್ಫೋಟಕ್ಕೆ ಸಿದ್ಧವಾಗಿದ್ದ ಬಳ್ಳಾರಿ ಘಟಕ
ನವದೆಹಲಿ: ಶಂಕಿತರ ಉಗ್ರರನ್ನು ಬೇಟೆಯಾಡುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯು ಸೋಮವಾರ ಕರ್ನಾಟಕದ ಬಳ್ಳಾರಿ(Ballari) ಮತ್ತು ಬೆಂಗಳೂರು(Bengaluru) ಸೇರಿದಂತೆ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ದಾಳಿ ಮಾಡಿ, ಐಸಿಸ್ ಬಳ್ಳಾರಿ ಘಟಕದ (ISIS Ballari module) ಎಂಟು ಶಂಕಿತ ಉಗ್ರರನ್ನು ಬಂಧಿಸಿದೆ(Suspected Arrest). ಬಂಧಿತರ ಪೈಕಿ ಈ ಘಟಕದ ನಾಯಕ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್, ಉಗ್ರ ಕೃತ್ಯಗಳನ್ನು ನಡೆಸಲು ಮುಂದಾಗಿದ್ದ, ಅದನ್ನು ವಿಫಲಗೊಳಿಸಲಾಗಿದೆ ಎಂದು ಎನ್ಐಎ ಹೇಳಿದೆ(NIA Raids). ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ರಾಜ್ಯದಲ್ಲಿ ಕೋವಿಡ್ ಹೈ ಅಲರ್ಟ್; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ
ಬೆಂಗಳೂರು/ಕೊಡಗು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 (COVID Subvariant JN.1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (State Health Department) ಹೈ ಅಲರ್ಟ್ (High alert) ಆಗಿದೆ. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ (Heart problem) ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ಲಕ್ಷಣ ಇರುವವರಿಗೂ ಮಾಸ್ಕ್ ಕಡ್ಡಾಯ ಮಾಡಲಾಗದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ದಾವೂದ್ ಇಬ್ರಾಹಿಂ ಸತ್ತಿಲ್ಲ, ಬದುಕಿದ್ದಾನೆ; ಛೋಟಾ ಶಕೀಲ್ ಮಾಹಿತಿ
ನವದೆಹಲಿ: ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ (Most Wanted Criminal) ದಾವೂದ್ ಇಬ್ರಾಹಿಂಗೆ (Dawood Ibrahim) ವಿಷಪ್ರಾಶನ ಮಾಡಿದ್ದು, ಸಾವಿಗೀಡಾಗಿದ್ದಾನೆ ಎಂಬ ಸುದ್ದಿಯನ್ನು ಆತನ ಸಹಚರ ಛೋಟಾ ಶಕೀಲ್ ಅಲ್ಲಗಳೆದಿದ್ದಾನೆ(Chhota Shakeel). ಅಲ್ಲದೇ, ದಾವೂದ್ ಇಬ್ರಾಹಿಂ ಜೀವಂತವಾಗಿದ್ದು, ಆರೋಗ್ಯವಾಗಿದ್ದಾನೆ. ದಾವೂದ್ ಮೃತಪಟ್ಟಿದ್ದಾನೆ ಎಂಬ ಫೇಕ್ ನ್ಯೂಸ್ (Fake News) ನೋಡಿ ನನಗೂ ಶಾಕ್ ಆಯ್ತು. ನಿನ್ನೆಯಷ್ಟೇ ಅನೇಕ ಬಾರಿ ದಾವೂದ್‌ನನ್ನು ಭೇಟಿ ಮಾಡಿದ್ದೇನೆ ಎಂದು ಆತ ಹೇಳಿದ್ದಾನೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Dawood Ibrahim: ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ; ಭಾರತದಲ್ಲಿ ಈತನ ಪಾತಕ ಕೃತ್ಯಗಳೇನು?
6. ಅಮಿತ್ ಶಾ ಹೇಳಿಕೆಗೆ ಆಗ್ರಹಿಸುತ್ತಿದ್ದ 90 ಸಂಸದರು ಅಮಾನತು!
ನವದೆಹಲಿ: ಸಂಸತ್ ಭದ್ರತಾ ಲೋಪ (Parliament Security Breach) ಕುರಿತು ಚರ್ಚೆಗೆ ಆಗ್ರಹಿಸುತ್ತಿದ್ದ ಲೋಕಸಭೆ (Lok Sabha) ಮತ್ತು ರಾಜ್ಯಸಭೆಯ (Rajya Sabha) ಒಟ್ಟು 79 ಸಂಸದರನ್ನು ಸೋಮವಾರ ಸಸ್ಪೆಂಡ್ (MPs Suspended) ಮಾಡಲಾಗಿದೆ. ಈ ಪೈಕಿ ರಾಜ್ಯಸಭೆಯ 45 ಸಂಸದರಿದ್ದಾರೆ. ಕಳೆದ ವಾರ ಸಂಭವಿಸಿದ ಸಂಸತ್ ಭದ್ರತಾ ಲೋಪ ಕುರಿತು ಪ್ರತಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home minister Amit Shah) ಅವರಿಂದ ಹೇಳಿಕೆಗೆ ಆಗ್ರಹಿಸುತ್ತಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವಾರ 14 ಸಂಸದರನ್ನು ಸಸ್ಪೆಂಡ್ ಮಾಡಲಾಗಿತ್ತು. ಇದರೊಂದಿಗೆ ಒಟ್ಟು 90 ಸಂಸದರನ್ನು ಅಮಾನತು ಮಾಡಿದಂತಾಗಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಜ್ಞಾನವಾಪಿ ಮಸೀದಿ ಸರ್ವೆ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ
ಹೊಸದಿಲ್ಲಿ: ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿ ಸಮೀಕ್ಷೆ (Gyanvapi Mosque Survey) ವರದಿಯನ್ನು ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಲಾಗಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Vistara Explainer: ಏನಿದು ಕೃಷ್ಣ ಜನ್ಮಭೂಮಿ-ಈದ್ಗಾ ಮಸೀದಿ ವಿವಾದ? ಮುಂದೇನು?
7. ಯುರೋಪ್‌ನಲ್ಲಿ ಇಸ್ಲಾಮ್‌ಗೆ ಜಾಗವಿಲ್ಲ: ಇಟಲಿ ಪ್ರಧಾನಿ ಬೋಲ್ಡ್ ಮಾತು
ಹೊಸದಿಲ್ಲಿ: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Italy PM Giorgia Meloni) ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಸ್ಲಾಮ್‌ಗೆ (Islam) ಯುರೋಪ್‌ನಲ್ಲಿ ಜಾಗವಿಲ್ಲ ಎಂದು ಅವರು ಹೇಳಿರುವುದು ಇದೀಗ ವೈರಲ್ ಆಗುತ್ತಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಮಾರ್ಚ್ 22ರಂದು ಐಪಿಎಲ್ ಶುರು, ಎಲ್ಲಿ ತನಕ ಟೂರ್ನಿ?
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಋತು ಮಾರ್ಚ್ 22 ರಿಂದ ಮೇ ಅಂತ್ಯದೊಳಗೆ ನಡೆಯಲಿದೆ ಎಂದು ವರದಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಐಪಿಎಲ್ ಆಡಳಿತ ಮಂಡಳಿ ಸೋಮವಾರ ಐಪಿಎಲ್ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿ ವೇಳಾಪಟ್ಟಿ ಮತ್ತು ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Naveen-ul-Haq : ಕೊಹ್ಲಿ ಜತೆ ಜಗಳವಾಡಿದ್ದ ನವಿನ್ ಉಲ್ ಹಕ್ಗೆ 20 ತಿಂಗಳು ನಿಷೇಧ
9. ಮಹಿಳೆ ಮೇಲೆ ಹಲ್ಲೆ ಪ್ರಕರಣ; ಮೂಕ ಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಗೆ ಹೈಕೋರ್ಟ್ ದಂಡ
ಬೆಂಗಳೂರು: ವಂಟಮೂರಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದಲ್ಲಿ (Woman Assault Case) ಗ್ರಾಮಸ್ಥರ ವರ್ತನೆ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ಮಹಿಳೆ ಮೇಲೆ ಹಲ್ಲೆ ನಡೆಯುತ್ತಿದ್ದರೆ ಮೂಕ ಪ್ರೇಕ್ಷಕರಾಗಿ ನಿಂತಿದ್ದ ಗ್ರಾಮಸ್ಥರಿಗೆ ದಂಡ ವಿಧಿಸಿ, ಆ ಹಣವನ್ನು ಸಂತ್ರಸ್ತೆಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಡ್ ಸೂಚಿಸಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಸಲಾರ್ʼ ಎರಡನೇ ಟ್ರೈಲರ್ ಔಟ್; ಪ್ರಭಾಸ್ ದರ್ಬಾರ್ ಜೋರು!
ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರ ಸಲಾರ್: ಭಾಗ 1-ಸೀಸ್‌ಫೈರ್ (Salaar: Part 1 – Ceasefire)ನ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಇದೀಗ ಸಿನಿಮಾದ ಎರಡನೇ ಟ್ರೈಲರ್ (Salaar Release Trailer) ಔಟ್ ಆಗಿದೆ. ಸಿನಿಮಾ ರಿಲೀಸ್ಗೆ ಕೆಲವೇ ದಿನಗಳು ಬಾಕಿ ಇರುವಾಗ ‘ಹೊಂಬಾಳೆ ಫಿಲ್ಮ್ಸ್’ ಹೊಸ ಟ್ರೈಲರ್ ಬಿಡುಗಡೆ ಮಾಡಿ ಹವಾ ಸೃಷ್ಟಿಸಿದೆ. ಎರಡನೇ ಟ್ರೈಲರ್‌ನಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಸಖತ್ ಹೈಲೈಟ್ ಆಗಿದ್ದಾರೆ. ನಟಿಯರು ಮಿಂಚಿದ್ದಾರೆ. ‘ಸಲಾರ್’ ಸಿನಿಮಾದಲ್ಲಿ ಇಬ್ಬರು ಸ್ನೇಹಿತರ ಕಥೆ ಇದೆ. ಅದೇ ರೀತಿ ಈ ಎರಡನೇ ಟ್ರೈಲರ್ ಮೂಡಿ ಬಂದಿದೆ. ಪೂರ್ಣ ಸುದ್ದಿಯನ್ನೂ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Year Ender 2023: ಈ ವರ್ಷ ಅತೀ ಹೆಚ್ಚು ಸರ್ಚ್ ಆದ ಸಿನಿಮಾಗಳಿವು; ನೀವೂ ನೋಡಿದ್ರಾ?