Year Ender 2023: ಈ ವರ್ಷ ಅತೀ ಹೆಚ್ಚು ಸರ್ಚ್‌ ಆದ ಸಿನಿಮಾಗಳಿವು; ನೀವೂ ನೋಡಿದ್ರಾ? - Vistara News

ಸಿನಿಮಾ

Year Ender 2023: ಈ ವರ್ಷ ಅತೀ ಹೆಚ್ಚು ಸರ್ಚ್‌ ಆದ ಸಿನಿಮಾಗಳಿವು; ನೀವೂ ನೋಡಿದ್ರಾ?

Year Ender 2023: ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪಟ್ಟಿಯನ್ನು ಗೂಗಲ್‌ ಬಿಡುಗಡೆ ಮಾಡಿದೆ.

VISTARANEWS.COM


on

jawan gadar 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಕೆಲವು ವರ್ಷಗಳಿಂದ ಸೊರಗಿದ್ದ ಬಾಲಿವುಡ್‌ ಈ ವರ್ಷ ಚೇತರಿಕೆ ಕಂಡಿದೆ. ಹಿಂದಿ ಚಿತ್ರಗಳು ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿವೆ. ʼಜವಾನ್‌ʼ, ʼಪಠಾಣ್‌ʼ ಮತ್ತು ʼಗದರ್‌ 2ʼ ಚಿತ್ರಗಳು ಭರ್ಜರಿ ಕಲೆಕ್ಷನ್‌ ಮಾಡಿವೆ. ʼಅನಿಮಲ್‌ʼ ಚಿತ್ರ ಈಗಾಗಲೇ 800 ಕೋಟಿ ರೂ.ಗಿಂತ ಅಧಿಕ ಗಳಿಕ ಮಾಡಿ ಮುನ್ನುಗ್ಗುತ್ತಿದೆ. ಇದರ ಜತೆಗೆ ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪೈಕಿ ಟಾಪ್‌ 10ರಲ್ಲಿ ಬಾಲಿವುಡ್‌ ಸಿನಿಮಾಗಳ ಸಂಖ್ಯೆ ಹೆಚ್ಚಿದೆ (Google’s most searched movies of 2023). ಈ ಬಗ್ಗೆ ವಿವರ ಇಲ್ಲಿದೆ (Year Ender 2023).

ಜವಾನ್‌

ಕಾಲಿವುಡ್‌ ಜನಪ್ರಿಯ ನಿರ್ದೇಶಕ ಅಟ್ಲೀ ಆ್ಯಕ್ಷನ್‌ ಕಟ್‌ ಹೇಳಿದ ಮೊದಲ ಬಾಲಿವುಡ್‌ ಚಿತ್ರ ‘ಜವಾನ್‌’ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿರುವ ಜತೆಗೆ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಸಿನಿಮಾ ಎನಿಸಿಕೊಂಡಿದೆ. ಶಾರುಖ್‌ ಖಾನ್‌ ಅಭಿನಯದ ಈ ಚಿತ್ರದಲ್ಲಿ ಕಾಲಿವುಡ್‌ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ನಾಯಕಿಯಾಗಿದ್ದರು. ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಗಳಿಕೆ ಬರೋಬ್ಬರಿ 1,160 ಕೋಟಿ ರೂ.

ಗದರ್‌ 2

ಭಾರತದಲ್ಲಿ ಅತೀ ಹೆಚ್ಚು ಗಳಿಸಿದ ಹಿಂದಿ ಚಿತ್ರಗಳ ಪೈಕಿ ʼಗದರ್‌ 2ʼ ಕೂಡ ಒಂದು. ಇತ್ತೀಚೆಗೆ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಈ ಬಾಲಿವುಡ್‌ ಚಿತ್ರ 2001ರ ʼಗದರ್‌ʼ ಚಿತ್ರದ ಮುಂದುವರಿದ ಭಾಗ. ಈ ಚಿತ್ರದಲ್ಲಿ ಸನ್ನಿ ಡಿಯೋಲ್‌, ಅಮೀಶಾ ಪಟೇಲ್‌, ಉತ್ಕರ್ಷ್‌ ಶರ್ಮ ಮತ್ತಿತರರು ನಟಿಸಿದ್ದಾರೆ. ಅನಿಲ್‌ ಶರ್ಮಾ ನಿರ್ದೇಶಿಸಿದ್ದಾರೆ.

ಓಪನ್‌ಹೈಮರ್‌

ಹಾಲಿವುಡ್‌ ಚಿತ್ರ ʼಓಪನ್‌ಹೈಮರ್‌ʼ ಭಾರತದಲ್ಲೂ ಉತ್ತಮ ಗಳಿಕೆ ಕಂಡಿದೆ. ಕ್ರಿಸ್ಟೋಫರ್‌ ನೊಲನ್‌ ನಿರ್ದೇಶನದ ಈ ಸಿನಿಮಾ ಪರಮಾಣು ಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಭೌತಶಾಸ್ತ್ರಜ್ಞ ಜೆ. ರೆಬಾರ್ಟ್‌ ಓಪನ್‌ಹೈಮರ್‌ ಅವರ ಜೀವನವನ್ನು ತೆರೆ ಮೇಲೆ ಬಿಚ್ಚಿಟ್ಟಿತ್ತು. ನಟ ಸಿಲಿಯನ್ ಮರ್ಫಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದು ಜಾಗತಿಕವಾಗಿ ಬರೋಬ್ಬರಿ 7,921.91 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಆದಿಪುರುಷ್‌

ಪ್ಯಾನ್‌ ಇಂಡಿಯಾ ಚಿತ್ರ ʼಆದಿಪುರುಷ್‌ʼ ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಬಹುಶಃ ಈ ವರ್ಷ ಅತೀ ಹೆಚ್ಚು ಟ್ರೋಲ್‌ಗೆ ಗುರಿಯಾದ ಚಿತ್ರವೂ ಇದೇ ಇರಬೇಕು. ರಾಮಾಯಣವನ್ನು ಆಧರಿಸಿ ತಯಾರಾದ ಈ ಚಿತ್ರ ಕೆಟ್ಟ ಗ್ರಾಫಿಕ್ಸ್‌ ಕಾರಣಕ್ಕೆ ಸುದ್ದಿಯಾಗಿತ್ತು. ಓಂ ರಾವತ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್‌, ಕೃತಿ ಸನೂನ್‌, ಸೈಫ್‌ ಆಲಿಖಾನ್‌ ಮತ್ತಿತರರು ನಟಿಸಿದ್ದರು. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರದ ಗಳಿಕೆ ಕೇವಲ 350 ಕೋಟಿ ರೂ. ಎನ್ನಲಾಗಿದೆ.

ಪಠಾಣ್‌

ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಚಿತ್ರ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ವರ್ಷಾರಂಭದಲ್ಲಿ ತೆರೆಕಂಡ ಈ ಚಿತ್ರದ ಮೂಲಕ ಶಾರುಖ್‌ ಸೋಲಿನ ಸುಳಿಯಿಂದ ಹೊರ ಬಂದಿದ್ದರು. ಸಿದ್ಧಾರ್ಥ್‌ ಆನಂದ್‌ ಆ್ಯಕ್ಷನ್‌ ಕಟ್‌ ಹೇಳಿದ ಈ ಚಿತ್ರದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದರು. ಸುಮಾರು 250 ಕೋಟಿ ರೂ. ಬಜೆಟ್‌ನ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 1,055 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ದಿ ಕೇರಳ ಸ್ಟೋರಿ

ವಿವಾದಗಳಿಂದಲೇ ಸುದ್ದಿಯಾದ ಹಿಂದಿ ಚಿತ್ರ ʼದಿ ಕೇರಳ ಸ್ಟೋರಿʼ ಬಾಕ್ಸ್‌ ಆಫೀಸ್‌ನಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಜತೆಗೆ‌ 6ನೇ ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇರಳದ ಹಿಂದೂ / ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ / ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ / ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ‘ದಿ ಕೇರಳ ಸ್ಟೋರಿ’ ಸಿನಿಮಾ ಒಳಗೊಂಡಿತ್ತು. ವಿಪುಲ್‌ ಅಮೃತ್‌ಲಾಲ್‌ ಶಾ ನಿರ್ದೇಶನದ ಈ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 15-20 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರದಲ್ಲಿ ಗಳಿಸಿದ್ದು ಸುಮಾರು 300 ಕೋಟಿ ರೂ.

ಜೈಲರ್‌

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಚಿತ್ರ ʼಜೈಲರ್‌ʼ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್‌ ಹೀರೋ ಶಿವ ರಾಜ್‌ಕುಮಾರ್‌, ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌, ವಿನಾಯಕನ್‌, ತಮನ್ನಾ, ರಮ್ಯಾಕೃಷ್ಣ ಮತ್ತಿತರರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.

ಲಿಯೋ

ಕಾಲಿವುಡ್‌ ನಟ ದಳಪತಿ ವಿಜಯ್‌ ಅಭಿನಯದ ಈ ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರವನ್ನು ಲೋಕೇಶ್‌ ಕನಕರಾಜ್‌ ನಿರ್ದೇಶಿಸಿದ್ದಾರೆ. ತ್ರಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅರ್ಜುನ್‌ ಸರ್ಜಾ, ಸಂಜಯ್‌ ದತ್‌, ಗೌತಮ್‌ ವಾಸುದೇವ್‌ ಮೆನನ್‌ ಮತ್ತಿತರರು ಅಭಿನಯಿಸಿದ್ದಾರೆ. ಇದು ಎಂಟನೇ ಸ್ಥಾನದಲ್ಲಿದೆ.

ಟೈಗರ್‌ 3

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಅಭಿನಯದ ʼಟೈಗರ್‌ 3ʼ ಚಿತ್ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಮನೀಷ್‌ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕತ್ರಿನಾ ಕೈಫ್‌ ಅಭಿನಯಿಸಿದ್ದಾರೆ. 300 ಕೋಟಿ ರೂ. ಬಜೆಟ್‌ನ ಈ ಸಿನಿಮಾ 463 ಕೋಟಿ ರೂ. ಗಳಿಸಿದೆ.

ವಾರಿಸು

ಅತೀ ಹೆಚ್ಚು ಹುಡುಕಲ್ಪಟ್ಟ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನೊಂದು ತಮಿಳು ಚಿತ್ರ ʼವಾರಿಸುʼ. ವಿಜಯ್‌ ಅಭಿನಯದ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ವಂಶಿ ಪೈಡಿಪಳ್ಳಿ ನಿರ್ದೇಶನದ ಈ ಚಿತ್ರ 200 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿ ಬಾಕ್ಸ್‌ ಆಫೀಸ್‌ನಲ್ಲಿ 310 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು.

ಇದನ್ನೂ ಓದಿ: YEAR ENDER 2023: ಈ ವರ್ಷದ ಅತ್ಯಂತ ವಿವಾದಾತ್ಮಕ ಸಿನಿಮಾಗಳಿವು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Rajkummar Rao: ಮುಂಬಯಿಗೆ ಬಂದು ಶಾರುಕ್‌ ಮನೆ ಮುಂದೆ ದಿನವಿಡೀ ಕಾದಿದ್ದರಂತೆ ನಟ ರಾಜ್‌ಕುಮಾರ್ ರಾವ್‌!

ದೃಷ್ಟಿಹೀನ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಲ್ಲ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಶ್ರೀಕಾಂತ್ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಕುರಿತು ಅಗಾಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ (Rajkummar Rao) ಅವರು ತಾವು ನಡೆದು ಬಂದ ಬದುಕಿನ ಹಾದಿಯನ್ನು ನೆನಪಿಸಿಕೊಂಡರು.

VISTARANEWS.COM


on

By

Rajkummar Rao
Koo

ತುಷಾರ್ ಹಿರಾನಂದಾನಿ (Tushar Hiranandani) ನಿರ್ದೇಶನದ ದೃಷ್ಟಿಹೀನ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಲ್ಲ (Srikanth Bolla) ಅವರ ಜೀವನ ಚರಿತ್ರೆಯನ್ನು ಆಧರಿಸಿದ ʼಶ್ರೀಕಾಂತ್ʼ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ನಟ (Bollywood actor) ರಾಜ್ ಕುಮಾರ್ ರಾವ್ (Rajkummar Rao) ಅಭಿನಯಕ್ಕೆ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ.

ಚಿತ್ರದ ಕುರಿತು ಅಗಾಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರು ತಾವು ನಡೆದು ಬಂದಿದ್ದ ಹಾದಿಯನ್ನು ನೆನಪಿಸಿಕೊಂಡರು. ರಾಜ್ ಕುಮಾರ್ ಅವರು ತಮ್ಮ ತವರು ಗುರುಗ್ರಾಮ್ ನಿಂದ ಮುಂಬಯಿಗೆ ಆಗಮಿಸಿದ ಬಳಿಕ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. ನಾನು ಬೆಳೆಯುತ್ತಿರುವಾಗ ಗುರುಗ್ರಾಮ್ ಅಷ್ಟು ದೊಡ್ಡ ನಗರವಾಗಿರಲಿಲ್ಲ. ಅದಕ್ಕೆ ಹೋಲಿಸಿದರೆ ಆಗ ನನಗೆ ಮುಂಬಯಿ ತುಂಬಾ ದುಬಾರಿಯಾಗಿತ್ತು. ವಿಶೇಷವಾಗಿ ನಾನು ತುಂಬಾ ವಿನಮ್ರ ಹಿನ್ನೆಲೆಯಿಂದ ಬಂದವನಾಗಿದ್ದೆ. ಸಾಂಸ್ಕೃತಿಕ ಭಿನ್ನತೆಯೂ ಎದ್ದುಕಾಣುತ್ತಿತ್ತು. ಆದರೆ ನಾನು ಇಲ್ಲಿಯೇ ಉಳಿಯಬೇಕಾಗಿತ್ತು ಮತ್ತು ನಾನು ಯಾವಾಗಲೂ ಮುಂಬಯಿ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೆ ಎಂದು ಅವರು ವಿ.ಆರ್. ಯುವಾ ಜೊತೆಗಿನ ಚಾಟ್‌ನಲ್ಲಿ ಹೇಳಿಕೊಂಡರು.

ನಾನು 10ನೇ ತರಗತಿಯನ್ನು ಪೂರ್ಣಗೊಳಿಸಿದ ತಕ್ಷಣ, ಬೂಗೀ ವೂಗೀ ನೃತ್ಯ ಸ್ಪರ್ಧೆಯ ಟಿವಿ ಸರಣಿ ಆಡಿಷನ್ ನೀಡಲು ಮುಂಬಯಿಗೆ ಬಂದೆ. ಆಗ ನಾನು ಮುಂಬಯಿ ನಗರ ಮತ್ತು ಶಾರುಖ್ ಖಾನ್ ಅವರ ಮನೆಯನ್ನು ನೋಡಲು ಬಯಸಿದ್ದೆ. ಆಗ ನನಗೆ 16 ವರ್ಷ. ನನ್ನ 12 ವರ್ಷದ ಸೋದರ ಸಂಬಂಧಿಯೊಂದಿಗೆ ರೈಲಿನಲ್ಲಿ ನಗರಕ್ಕೆ ಬಂದಿದ್ದೆ. ನಮ್ಮಿಬ್ಬರ ಬಳಿಯೂ ಹಣವಿಲ್ಲದ ಕಾರಣ ಚಿಕ್ಕಮ್ಮನಿಂದ 5 ಸಾವಿರ ರೂ. ಪಡೆದು ಬಂದಿದ್ದೆವು. ನನ್ನ ಕುಟುಂಬವು ತುಂಬಾ ಬೆಂಬಲ ನೀಡಿತು. ಇಬ್ಬರು ಮಕ್ಕಳು ಮೂರು ದಿನ ರೈಲು ಪ್ರಯಾಣ ಮಾಡಿ ಮುಂಬಯಿಗೆ ಬಂದಿದ್ದೆವು. ಇಲ್ಲಿಗೆ ಬಂದ ಬಳಿಕ ನಗರವನ್ನು ನೋಡಿ ಮೈಮರೆತಿದ್ದೆ ಎಂದು ಅವರು ನೆನಪಿಸಿಕೊಂಡರು. ಬೂಗಿ ವೂಗಿ ಆಡಿಷನ್‌ಗೆ ಹಾಜರಾಗಿದ್ದರೂ ಆಯ್ಕೆಯಾಗಲಿಲ್ಲ ಎಂದು ಪ್ರಸ್ತಾಪಿಸಿದ ರಾಜ್‌ಕುಮಾರ್, ಮುಂಬಯಿಗೆ ತನ್ನ ಮೊದಲ ಭೇಟಿಯ ನೆನಪುಗಳನ್ನು ಮೆಲುಕು ಹಾಕಿದರು.

ಶಾರುಖ್ ಖಾನ್ ಭೇಟಿಯಾಗುವ ಹಂಬಲ

ಇಡೀ ದಿನ ಶಾರುಖ್ ಖಾನ್ ಅವರ ಮನೆಯ ಮುಂದೆ ಕಾಯುತ್ತಿದ್ದೆವು. ರಾತ್ರಿ, ನಾವು ರೈಲ್ವೇ ನಿಲ್ದಾಣದಲ್ಲಿಯೇ ಉಳಿದುಕೊಂಡೆವು ಮತ್ತು ಆಗ ನಮಗೆ ಹಣವಿಲ್ಲದ ಕಾರಣ ಕೇವಲ ವಡಾ ಪಾವ್ ಅನ್ನು ಸೇವಿಸಿದ್ದೇವೆ. ಎರಡು ದಿನ ಇಲ್ಲಿದ್ದೆವು. ಬೆಳಗ್ಗೆ 10 ಗಂಟೆಗೆ ಮನ್ನತ್ ತಲುಪಿ ಸಂಜೆ 4-5 ಗಂಟೆಯವರೆಗೆ ಕಾಯುತ್ತಿದ್ದೆವು. ನಾವು ಅವರನ್ನು ನೋಡಲೇಬೇಕು ಎಂಬ ಕನಸಿತ್ತು.

ಕೊನೆಗೂ ಶಾರುಖ್ ಖಾನ್ ಅವರನ್ನು ಮುಖಾಮುಖಿಯಾಗಿ ಭೇಟಿಯಾದುದನ್ನು ನೆನಪಿಸಿಕೊಂಡ ರಾಜ್‌ಕುಮಾರ್, ನಾನು ನಟನಾಗಲು ಅವರು ಸ್ಫೂರ್ತಿ. ಅವರ ಬದುಕಿನ ಪ್ರಯಾಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ ಮತ್ತು ಸ್ಫೂರ್ತಿ ಪಡೆದಿದ್ದೇನೆ. ವಿಶೇಷವಾಗಿ ಅವರು ದೆಹಲಿಯವರು. ಹೊರಗಿನವರು ಮತ್ತು ರಂಗಭೂಮಿ ಹಿನ್ನೆಲೆಯನ್ನು ಹೊಂದಿದ್ದರು. ಆದರೆ ಅವರನ್ನು ಭೇಟಿಯಾಗುವುದು ತುಂಬಾ ಅಸಾಧ್ಯ ಎಂದೆನಿಸುತ್ತಿತ್ತು.

ಆ ಸಮಯದಲ್ಲಿ ಸಿಟಿಲೈಟ್ಸ್ (2014) ಅನ್ನು ಪ್ರಚಾರ ಮಾಡುತ್ತಿದ್ದೆವು. ಅವರು ಮೆಹಬೂಬ್ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿಯಿತು. ನಾನು ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರೂ, ನನಗೆ ಆರಂಭದಲ್ಲಿ ಭಯವಾಯಿತು. ನಾನು ಅಲ್ಲಿದ್ದ ಶಕುನ್ (ಬಾತ್ರಾ) ಗೆ ಮೆಸೇಜ್ ಮಾಡಿದೆ. ಅನಂತರ ಅವರು ಹಿಂತಿರುಗಿದರು ಮತ್ತು ಅವರು ಎಸ್ ಆರ್ ಕೆ ನನಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಿದರು. ನಾನು ತಕ್ಷಣ ನನ್ನನ್ನು ಪರಿಚಯಿಸಲು ಮತ್ತು ನನ್ನ ಹೆಸರನ್ನು ರಾಜ್‌ಕುಮಾರ್ ರಾವ್ ಮತ್ತು ನಾನು ಎಫ್‌ಟಿಐಐನಲ್ಲಿ ಓದಿದ ನಟ ಎಂದು ಹೇಳಲು ತಯಾರಿ ನಡೆಸಲಾರಂಭಿಸಿದೆ. ಆದರೆ ಅವರಿಗೆ ನನ್ನ ಬಗ್ಗೆ ಎಲ್ಲವೂ ತಿಳಿದಿತ್ತು. “ಶಾಹಿದ್‌ʼಗಾಗಿ ನಾನು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದೇನೆ, ʼಕೈ ಪೋ ಚೆʼ ಚಿತ್ರ ಚೆನ್ನಾಗಿದೆ ಮತ್ತು ʼಸಿಟಿಲೈಟ್ಸ್ʼ ಶೀಘ್ರದಲ್ಲೇ ಬರಲಿದೆ ಎಂದು ಅವರು ತಿಳಿದಿದ್ದರು. ಅದರ ಅನಂತರ ಶಾರುಖ್ ಖಾನ್ ಅವರನ್ನು ಹಲವು ಬಾರಿ ಭೇಟಿ ಮಾಡಿದರೂ, ಅವರು ಮತ್ತೆ ಬಾಲಿವುಡ್‌ನ ಬಾದ್‌ಶಾ ಅವರನ್ನು ಎದುರಿಸಿದಾಗಲೆಲ್ಲಾ ಅವರು ಸ್ಟಾರ್-ಸ್ಟ್ರಕ್ ಆಗುತ್ತಾರೆ ಎಂದು ರಾಜ್‌ಕುಮಾರ್ ಹೇಳಿದರು.

ಇದನ್ನೂ ಓದಿ: House of the Dragon: ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಟ್ರೈಲರ್‌ ಔಟ್‌!

ಈಗಲೂ ನನಗೆ ಹಿರಿಯ ನಾಯಕರ ಕರೆ ಬಂದರೆ ಅದರಲ್ಲೂ ಅಕ್ಷಯ್ ಕುಮಾರ್ ಅಥವಾ ಶಾರುಖ್ ಖಾನ್ ಕರೆ ಮಾಡಿದರೆ ನಾನು ತುಂಬಾ ಉತ್ಸುಕನಾಗುತ್ತೇನೆ. ನನ್ನೊಳಗಿನ ಅಭಿಮಾನಿ ಮತ್ತು ಗುರ್ಗಾಂವ್‌ನ ಮಗು ಇನ್ನೂ ಜೀವಂತವಾಗಿದೆ ಎಂಬಂತೆ ಭಾಸವಾಗುತ್ತದೆ ಎಂದು ಹೇಳಿದರು.

Continue Reading

ಟಾಲಿವುಡ್

Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

Ram Pothineni ಇಸ್ಮಾರ್ಟ್ ಶಂಕರ್ ಚಿತ್ರದ ಸೀಕ್ವೆಲ್ ಆಗಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾದ ಟೀಸರ್ ಡೈನಾಮಿಕ್ ಸ್ಟಾರ್ ರಾಮ್ ಪೋತಿನೇನಿ ಜನ್ಮದಿನಕ್ಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಆಕ್ಷನ್ ಮೂಲಕ ರಾಮ್ ಅಬ್ಬರಿಸಿದ್ದಾರೆ.ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬರುತ್ತಿದೆ.

VISTARANEWS.COM


on

Ram Pothineni Double iSmart teaser with Sanjay Dutt
Koo

ಬೆಂಗಳೂರು: ಉಸ್ತಾದ್ ರಾಮ್ ಪೋತಿನೇನಿ (Ram Pothineni) ಹಾಗೂ ಡೈರೆಕ್ಟರ್ ಪುರಿ ಜಗನ್ನಾಥ್ ಜೋಡಿಯ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ `ಡಬಲ್ ಇಸ್ಮಾರ್ಟ್‘ (Double iSmart) ಟೀಸರ್‌ ಬಿಡುಗಡೆಗೊಂಡಿದೆ. ಇಸ್ಮಾರ್ಟ್ ಶಂಕರ್ ಚಿತ್ರದ ಸೀಕ್ವೆಲ್ ಆಗಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾದ ಟೀಸರ್ ಡೈನಾಮಿಕ್ ಸ್ಟಾರ್ ರಾಮ್ ಪೋತಿನೇನಿ ಜನ್ಮದಿನಕ್ಕೆ ಬಿಡುಗಡೆ ಮಾಡಲಾಗಿದೆ. ಭರ್ಜರಿ ಆಕ್ಷನ್ ಮೂಲಕ ರಾಮ್ ಅಬ್ಬರಿಸಿದ್ದಾರೆ.

ಮಾಸ್ ಮತ್ತು ಆಕ್ಷನ್-ಪ್ಯಾಕ್ಡ್ ಟೀಸರ್‌ನಲ್ಲಿ ರಾಮ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. 1.26 ಸೆಕೆಂಡ್ ಇರುವ ಟೀಸರ್ ನಲ್ಲಿ ರಾಮ್ ಪೋತಿನೇನಿ ಹಾಗೂ ಸಂಜು ಬಾಬು ಜುಗಲ್ಬಂದಿ ನೋಡುಗರಿಗೆ ಕಿಕ್ ಕೊಡುವಂತಿದೆ. ‘ಡಬಲ್ ಇಸ್ಮಾರ್ಟ್’ ಟೀಸರ್ ಕ್ಲೈಮ್ಯಾಕ್ಸ್ ಸೀನ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬರುತ್ತಿದೆ.

ಇದನ್ನೂ ಓದಿ: Sanjay Dutt: ‘ಡಬಲ್ ಇಸ್ಮಾರ್ಟ್’ಗೆ ʻಬಿಗ್ ಬುಲ್ʼ ಎಂಟ್ರಿ; ಸಂಜಯ್ ದತ್ ಬರ್ತ್‌ಡೇ ಸ್ಪೆಷಲ್‌!

ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ನಡಿ ಪೂರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ.

ಬಿಗ್ ಬುಲ್ ಪಾತ್ರದಲ್ಲಿ ಸಂಜಯ್ ದತ್

ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್‌ದತ್‌ ಇತ್ತೀಚೆಗೆ ಸೌತ್ ಸಿನಿಮಾಗಳದತ್ತ ಚಿತ್ತ ಹರಿಸುತ್ತಿದ್ದಾರೆ. ಕೆಜಿಎಫ್ ಬಳಿಕ ಬ್ಯಾಕ್ ಟು ಬ್ಯಾಕ್ ದಕ್ಷಿಣ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜು ಬಾಬಾ ಈಗ ‘ಡಬಲ್ ಇಸ್ಮಾರ್ಟ್’ ಭಾಗವಾಗಿದ್ದಾರೆ. ಸಂಜಯ್ ದತ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಈ ಹಿಂದೆ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಗಡ್ಡ ಬಿಟ್ಟು ಬಿಟ್ಟು ಸ್ಟೈಲೀಶ್ ಲುಕ್‌ನಲ್ಲಿ ಸಿಗಾರ್ ಸೇದುತ್ತಾ ರಗಡ್ ಆಗಿ ಮುನ್ನಾಭಾಯಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕೆ ಬಿಗ್ ಬುಲ್ ಎಂದು ಹೆಸರಿಡಲಾಗಿದೆ. ಸಂಜಯ್ ದತ್ ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಲು ನಿರ್ದೇಶಕ ಪುರಿ ಜಗನ್ನಾಥ್ ಪ್ಲಾನ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Actor Diganth: ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದಲ್ಲಿ ದಿಗಂತ್‌ ಪಾತ್ರ ಡಿಫರೆಂಟ್!

ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ ಡಬಲ್ ಇಸ್ಮಾರ್ಟ್ ಸಿನಿಮಾಗೆ ಹಾಲಿವುಡ್ ಗಿಯಾನಿ ಜಿಯಾನೆಲ್ಲಿ ಕ್ಯಾಮೆರಾ ಹಿಡಿಯಲಿದ್ದಾರೆ. ಲೈಗರ್ ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರೀ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ.

Continue Reading

ಸ್ಯಾಂಡಲ್ ವುಡ್

Kannada New Movie: ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನ ಮಂಟಪ’ ಚಿತ್ರೀಕರಣ ಮುಕ್ತಾಯ

Kannada New Movie: ‘ಸ್ವಪ್ನ ಮಂಟಪ’ ಚಿತ್ರವು ಈಗಾಗಲೇ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸಗಳನ್ನು ಮುಗಿಸಿದೆ. ಕನಕಪುರ ರಸ್ತೆಯ ಒಂದು ಹಳ್ಳಿಯಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಹೊಸಮನೆ ಮೂರ್ತಿಯವರು ಈ ಸೆಟ್ ನಿರ್ಮಾಣ ಮಾಡಿದ್ದಾರೆ.ಬರಗೂರು ರಾಮಚಂದ್ರಪ್ಪನವರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶನ ಮಾಡಿದ್ದಾರೆ.

VISTARANEWS.COM


on

Kannada New Movie swapna mantapa shooting compleated
Koo

ಬೆಂಗಳೂರು: ಮೈಸೂರಿನ ಬಾಬು ನಾಯ್ಕ್ ಅವರು ತಮ್ಮ ಮಲೈಮಹದೇಶ್ವರ ಎಂಟರ್‌ಪ್ರೈಸಿಸ್‌ ಸಂಸ್ಥೆಯಿಂದ (Kannada New Movie) ‘ಸ್ವಪ್ನ ಮಂಟಪ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಬರಗೂರು ರಾಮಚಂದ್ರಪ್ಪನವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪನವರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶನ ಮಾಡಿದ್ದಾರೆ.

‘ಸ್ವಪ್ನ ಮಂಟಪ’ ಚಿತ್ರವು ಈಗಾಗಲೇ ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸಗಳನ್ನು ಮುಗಿಸಿದೆ. ಕನಕಪುರ ರಸ್ತೆಯ ಒಂದು ಹಳ್ಳಿಯಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಹೊಸಮನೆ ಮೂರ್ತಿಯವರು ಈ ಸೆಟ್ ನಿರ್ಮಾಣ ಮಾಡಿದ್ದಾರೆ.

‘ಸ್ವಪ್ನ ಮಂಟಪ’ ಚಿತ್ರವು ಪಾರಂಪರಿಕ ಸ್ಥಳಗಳ ರಕ್ಷಣೆಯನ್ನು ಪ್ರತಿಪಾದಿಸುವ ಕಥಾವಸ್ತುವನ್ನು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ಸ್ವಪ್ನ ಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ , ಕಥಾನಾಯಕ ಮತ್ತು ನಾಯಕಿ ಜನರನ್ನು ಸಂಘಟಿಸಿ ಸ್ವಪ್ನಮಂಟಪವನ್ನು ಉಳಿಸಿ ಸರ್ಕಾರದ ಅಧಿಕೃತ ಸ್ಮಾರಕದ ಪಟ್ಟಿಗೆ ಸೇರಿಸುವ ಮೂಲಕ ಚಾರಿತ್ರಿಕ ಸ್ಮಾರಕಗಳ ಪರಂಪರೆಯನ್ನು ಎತ್ತಿ ಹಿಡಿಯುತ್ತಾರೆ. ಈ ಸಾಮಾಜಿಕ ಚಿತ್ರದಲ್ಲಿ ಸ್ವಪ್ನ ಮಂಟಪವನ್ನು ನಿರ್ಮಾಣ ಮಾಡಿದ ರಾಜ-ರಾಣಿ ಯರ ಕಥನವನ್ನೂ ಹಿನ್ನೋಟ ತಂತ್ರದಲ್ಲಿ ಸೇರಿಸಿರುವುದು ಒಂದು ವಿಶೇಷ.

ಇದನ್ನೂ ಓದಿ: Kannada New Movie: `ಕುಂಟೆಬಿಲ್ಲೆ’ ಸಿನಿಮಾದ ಮುಹೂರ್ತ: ಶುಭಕೋರಿದ ಗಣ್ಯರು

ನಾಯಕ ಮತ್ತು ನಾಯಕಿಯ ಪಾತ್ರದಲ್ಲಿ ಕ್ರಮವಾಗಿ ವಿಜಯ ರಾಘವೇಂದ್ರ ಮತ್ತು ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇವರಿಬ್ಬರೂ ದ್ವಿಪಾತ್ರಗಳಲ್ಲಿ ಅಭಿನಯಿಸಿರುವುದು ಸಿನಿಮಾದ ಒಂದು ವಿಶೇಷ. ಜತೆಗೆ ಸುಂದರರಾಜ್, ಶೋಭಾರಾಘವೇಂದ್ರ, ರಜನಿ, ಮಹಾಲಕ್ಷ್ಮೀ, ಸುಂದರರಾಜ ಅರಸು, ರಾಜಪ್ಪದಳವಾಯಿ, ಅಂಬರೀಶ ಸಾರಂಗಿ, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ವೆಂಕಟರಾಜು, ಶಿವಲಿಂಗಪ್ರಸಾದ್, ಭಾರತಿರಮೇಶ್, ಗುಂಡಿ ರಮೇಶ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.

ಬಾಬುನಾಯ್ಕ್ ನಿರ್ಮಾಣ ಮತ್ತು ಬರಗೂರರ ನಿರ್ದೇಶನದ ಈ ಚಿತ್ರವು ನಾಗರಾಜ ಆದವಾನಿ ಛಾಯಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮತ್ತು ತ್ರಿಭುವನ್ ನೃತ್ಯ ಸಂಯೋಜನೆಯನ್ನು ಒಳಗೊಂಡಿದೆ. ನಟರಾಜ್ ಶಿವು ಮತ್ತು ಪ್ರವೀಣ್ ಸಹನಿರ್ದೇಶಕರಾಗಿದ್ದಾರೆ.

Continue Reading

ಸಿನಿಮಾ

House of the Dragon: ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಟ್ರೈಲರ್‌ ಔಟ್‌!

ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ʻಹೌಸ್ ಆಫ್ ದಿ ಡ್ರ್ಯಾಗನ್ ಎಸ್2ʼ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17ರಿಂದ ಲಭ್ಯವಿರುತ್ತಿದೆ. ಪ್ರತಿ ಸೋಮವಾರ ಅಮೆರಿಕ ಸೇರಿದಂತೆ ಎಲ್ಲ ಕಡೆ ಕಂತುಗಳು ಪ್ರಸಾರವಾಗಲಿವೆ.ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿ’ಅರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್-ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ತಾರಾಗಣ ಹೊಂದಿದೆ.

VISTARANEWS.COM


on

House of the Dragon season 2 new trailer hints at a bloody
Koo

ಬೆಂಗಳೂರು: 2022ರ ಆಗಸ್ಟ್ ತಿಂಗಳಲ್ಲಿ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ (House of the Dragon) ಮೊದಲ ಸೀಸನ್ ಬಿಡುಗಡೆ ಆಯ್ತು. ಮೊದಲ ಸೀಸನ್​ನಲ್ಲಿಯೇ ಗಮನ ಸೆಳೆದಿದ್ದ ‘ಹೌಸ್ ಆಫ್ ದಿ ಡ್ರ್ಯಾಗನ್’ ಎರಡನೇ ಸೀಸನ್​ ಎರಡು ವರ್ಷಗಳ ಬಳಿಕ ಬಿಡುಗಡೆ ಆಗಲಿದೆ. ಇದೀಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2ರ ಟ್ರೈಲರ್ ಬಿಡುಗಡೆ ಆಗಿದ್ದು, ಅದರ ಜೊತೆಗೆ ವೆಬ್ ಸರಣಿಯ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ವಿಶೇಷವಾಗಿ ಪ್ರಸಾರವಾಗುವ ʻಹೌಸ್ ಆಫ್ ದಿ ಡ್ರ್ಯಾಗನ್ ಎಸ್2ʼ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಜೂನ್ 17ರಿಂದ ಲಭ್ಯವಿರುತ್ತಿದೆ. ಪ್ರತಿ ಸೋಮವಾರ ಅಮೆರಿಕ ಸೇರಿದಂತೆ ಎಲ್ಲ ಕಡೆ ಕಂತುಗಳು ಪ್ರಸಾರವಾಗಲಿವೆ.

ಜಾರ್ಜ್ ಆರ್.ಆರ್. ಮಾರ್ಟಿನ್ ಅವರ “ಫೈರ್ ಆ್ಯಂಡ್ ಬ್ಲಡ್” ಆಧರಿಸಿದ ಈ ಸರಣಿಯು ಹೌಸ್ ಟಾರ್ಗೇರಿಯನ್ ಕಥೆಯನ್ನು ಹೇಳುತ್ತಿದೆ. ಈ ರಾಜ ಕುಟುಂಬದಲ್ಲಿ ಅತ್ಯಂತ ಕಠಿಣ ಅಧಿಕಾರದ ಸಂಘರ್ಷಗಳ ನಂತರ ಕುಟುಂಬವು ಹೇಗೆ ರಾಜಕೀಯ ಒಳಸಂಚು, ಕೌಟುಂಬಿಕ ಶತ್ರುತ್ವಗಳನ್ನು ಎದುರಿಸಿ ಮುನ್ನಡೆಯುತ್ತವೆ ಮತ್ತು ಸಿಂಹಾಸನವನ್ನು ಮರಳಿ ಪಡೆಯಲು ಎದುರಾದ ಆಂತರಿಕ ಯುದ್ಧವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಹೇಳುತ್ತದೆ.

ಇದನ್ನೂ ಓದಿ: Rishabh Pant: ಬಿಸಿಸಿಐ ನಿಯಮದ ಬಗ್ಗೆ ಅಸಮಾಧಾನ ಹೊರಹಾಕಿದ ರಿಷಭ್​ ಪಂತ್​

ಮ್ಯಾಟ್ ಸ್ಮಿತ್, ಒಲಿವಿಯಾ ಕೂಕ್, ಎಮ್ಮಾ ಡಿ’ಅರೇ, ಈವ್ ಬೆಸ್ಟ್, ಸ್ಟೀವ್ ಟೌಸ್ಸೇಂಟ್, ಫೇಬಿಯೆನ್ ಫ್ರಾಂಕೆಲ್, ಎವಾನ್ ಮಿಷೆಲ್, ಟಾಮ್ ಗ್ಲಿನ್ನ್-ಕಾರ್ನೀ ಸೊನೊಯಾ ಮಿಝುನೊ ಮತ್ತು ರಿಸ್ ಇಫಾನ್ಸ್ ತಾರಾಗಣ ಹೊಂದಿದೆ. ಹೆಚ್ಚುವರಿ ತಾರಾಗಣದಲ್ಲಿ ಹ್ಯಾರಿ ಕೊಲೆಟ್, ಬೆಥನಿ ಅಂಟೋನಿಯ, ಫೋಬ್ ಕ್ಯಾಂಪ್ ಬೆಲ್, ಫಿಯಾ ಸಬನ್, ಜೆಫರ್ಸನ್ ಹಾಲ್ ಮತ್ತು ಮ್ಯಾಥ್ಯೂ ನೀಧಂ ಇದ್ದಾರೆ. ಹೊಸ ಸೀಸನ್ ನಲ್ಲಿ ಅನುಬಕರ್ ಸಲೀಂ, ಗೇಯ್ಲ್ ರಂಕಿನ್, ಫ್ರೆಡ್ಡೀ ಫಾಕ್ಸ್, ಸಿಮನ್ ರಸೆಲ್ ಬೀಲ್, ಕ್ಲಿಂಟನ್ ಲಿಬರ್ಟಿ, ಜೆಮೀ ಕೆನ್ನಾ, ಕಿಯೆರನ್ ಬ್ಯೂ, ಟಾಮ್ ಬೆನೆಟ್, ಟಾಮ್ ಟೇಲರ್ ಮತ್ತು ವಿನ್ಸೆಂಟ್ ರೆಗಾನ್ ಇದ್ದಾರೆ.

ಹೌಸ್ ಆಫ್ ದಿ ಡ್ರ್ಯಾಗನ್‘ ಸೀಸನ್ 2 ಜೂನ್ 17 ರಂದು ಎಚ್​ಬಿಓ ಮ್ಯಾಕ್ಸ್ ನಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಜಿಯೋ​ನಲ್ಲಿಯೂ ಬಿಡುಗಡೆ. ಜಿಯೋನಲ್ಲಿ ‘ಹೌಸ್ ಆಫ್ ದಿ ಡ್ರಾಗನ್’ ವೆಬ್ ಸರಣಿ ಇಂಗ್ಲೀಷ್ ಸೇರಿದಂತೆ ಒಟ್ಟು ಆರು ಭಾಷೆಯಲ್ಲಿ ಬಿಡುಗಡೆ ಕಾಣಲಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ವೆಬ್ ಸರಣಿಯನ್ನು ವೀಕ್ಷಿಸಬಹುದಾಗಿದೆ.

Continue Reading
Advertisement
Mamata Banerjee
ಪ್ರಮುಖ ಸುದ್ದಿ4 hours ago

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

Bengaluru News
ಕರ್ನಾಟಕ4 hours ago

Bengaluru News: ಹಸುಗೂಸನ್ನು ರಸ್ತೆ ಬದಿ ಎಸೆದು ಹೋದ ಅನಾಮಿಕರು!

CAA
ಸಂಪಾದಕೀಯ4 hours ago

ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Amit Shah
ದೇಶ4 hours ago

Amit Shah: ಪ್ರಚಾರದ ವೇಳೆ ಕೇಜ್ರಿವಾಲ್‌ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್‌ ಶಾ ವಾಗ್ದಾಳಿ

PBKS vs RR
ಕ್ರೀಡೆ4 hours ago

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

Anjali Murder Case
ಕ್ರೈಂ5 hours ago

Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Isha Ambani
ದೇಶ5 hours ago

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Retired Teacher G T Bhatt Bommanahalli 80th celebration programme on May 19
ಉತ್ತರ ಕನ್ನಡ5 hours ago

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Dalita Sangharsha samiti demands that Minister HK Patil should be dismissed from the Cabinet
ರಾಯಚೂರು5 hours ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ5 hours ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ20 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ23 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌