Dawood Ibrahim: ದಾವೂದ್ ಇಬ್ರಾಹಿಂ ಸತ್ತಿಲ್ಲ, ಬದುಕಿದ್ದಾನೆ; ಛೋಟಾ ಶಕೀಲ್ ಮಾಹಿತಿ - Vistara News

ದೇಶ

Dawood Ibrahim: ದಾವೂದ್ ಇಬ್ರಾಹಿಂ ಸತ್ತಿಲ್ಲ, ಬದುಕಿದ್ದಾನೆ; ಛೋಟಾ ಶಕೀಲ್ ಮಾಹಿತಿ

Dawood Ibrahim: ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಸಾವಿನ ಸುದ್ದಿ ಸುಳ್ಳು ಎಂದು ಆತನ ಸಹಚರ ಛೋಟಾ ಶಕೀಲ್ ಹೇಳಿದ್ದಾನೆ.

VISTARANEWS.COM


on

Dawood Ibrahim not dead, he is alive Says Chhota Shakeel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ (Most Wanted Criminal) ದಾವೂದ್ ಇಬ್ರಾಹಿಂಗೆ (Dawood Ibrahim) ವಿಷಪ್ರಾಶನ ಮಾಡಿದ್ದು, ಸಾವಿಗೀಡಾಗಿದ್ದಾನೆ ಎಂಬ ಸುದ್ದಿಯನ್ನು ಆತನ ಸಹಚರ ಛೋಟಾ ಶಕೀಲ್ ಅಲ್ಲಗಳೆದಿದ್ದಾನೆ(Chhota Shakeel). ಅಲ್ಲದೇ, ದಾವೂದ್ ಇಬ್ರಾಹಿಂ ಜೀವಂತವಾಗಿದ್ದು, ಆರೋಗ್ಯವಾಗಿದ್ದಾನೆ. ದಾವೂದ್ ಮೃತಪಟ್ಟಿದ್ದಾನೆ ಎಂಬ ಫೇಕ್ ನ್ಯೂಸ್ (Fake News) ನೋಡಿ ನನಗೂ ಶಾಕ್ ಆಯ್ತು. ನಿನ್ನೆಯಷ್ಟೇ ಅನೇಕ ಬಾರಿ ದಾವೂದ್‌ನನ್ನು ಭೇಟಿ ಮಾಡಿದ್ದೇನೆ ಎಂದು ಆತ ಹೇಳಿದ್ದಾನೆ.

ದಾವೂದ್‌ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರೀ ಸುದ್ದಿಯಾಗಿತ್ತು. ಕೆಲವರು, ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಕ್‌ ಕಾಕರ್ ಅವರ ಖಾತೆಯ ಸ್ಕ್ರೀನ್ ಶಾಟ್‌ಗಳನ್ನು ಷೇರ್ ಮಾಡಿ ದಾವೂದ್ ಮೃತಪಟ್ಟಿದ್ದಾನೆಂದು ಸುದ್ದಿ ಹಬ್ಬಿಸಿದ್ದರು. ಬಳಿಕ ಅದು ಫೇಕ್ ಖಾತೆ ಎಂಬುದು ಗೊತ್ತಾಯಿತು.

ಈ ಮೊದಲು ಸುದ್ದಿ ಏನಾಗಿತ್ತು?

ಭಾರತಕ್ಕೆ ಹಲವು ಅಪರಾಧಗಳ ಮೂಲಕ ಕಂಟಕವಾಗಿದ್ದ, ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪೈಕಿ ಒಬ್ಬನಾದ ದಾವೂದ್ ಇಬ್ರಾಹಿಂ ಸಂಘಟಿತ ಅಪರಾಧ, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಭಾರತ ಹಾಗೂ ಪಾಕಿಸ್ತಾನದ ತನಿಖಾ ಅಧಿಕಾರಿಗಳು ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಖಚಿತಪಡಿಸಿಲ್ಲ. ಹಠಾತ್ ಆರೋಗ್ಯ ಹದಗೆಡಲು ವಿಷವೇ ಕಾರಣ ಎಂಬ ಊಹಾಪೋಹಗಳು ದಟ್ಟವಾಗಿದ್ದು, ಕರಾಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಜನವರಿಯಲ್ಲಿ, ಭೂಗತ ಲೋಕದ ಡಾನ್ ಎರಡನೇ ಬಾರಿಗೆ ಮದುವೆಯಾದ ನಂತರ ಕರಾಚಿಯಲ್ಲಿ ಉಳಿದುಕೊಂಡಿದ್ದಾನೆ ಎಂದು ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತಿಳಿಸಿದ್ದರು.

ಭೀಕರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಆಗಿದ್ದಾನೆ. ಮುಂಬೈನಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನಪ್ಪಿದ್ದರು. 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಭಾರತ ಮತ್ತು ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ದಾವೂದ್ ಇಬ್ರಾಹಿಂ ತಲೆಗೆ ಎನ್‌ಐಎ 25 ಲಕ್ಷ ಬಹುಮಾನವನ್ನೂ ಘೋಷಿಸಿದೆ. ಭಾರತಕ್ಕೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಅಗ್ರಸ್ಥಾನದಲ್ಲಿದ್ದಾನೆ.

ಈ ಸುದ್ದಿಯನ್ನೂ ಓದಿ: Dawood Ibrahim: ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ; ಭಾರತದಲ್ಲಿ ಈತನ ಪಾತಕ ಕೃತ್ಯಗಳೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

T20 World Cup Final: ವಿಮಾನ ನಿಲ್ದಾಣದಲ್ಲೂ ಸಿದ್ದರಾಮಯ್ಯಗೆ ವಿಶ್ವಕಪ್‌ ಕ್ರಿಕೆಟ್‌ ಧ್ಯಾನ!

T20 World Cup Final: ವೈರಲ್‌ ಆಗಿರುವ ವಿಡಿಯೋದಲ್ಲಿ, ಟ್ಯಾಬ್‌ ಒಂದರಲ್ಲಿ ಸಿದ್ದರಾಮಯ್ಯ ಅವರು ಟಿ20 ವಿಶ್ವಕಪ್‌ನ ಭಾರತ- ದಕ್ಷಿಣ ಆಫ್ರಿಕ ನಡುವಿನ ಫೈನಲ್‌ ಪಂದ್ಯಾಟವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಶೇಷ ವಿಮಾನ ಲ್ಯಾಂಡ್‌ ಆಗಿದ್ದರೂ, ವಿಮಾನದ ಮೆಟ್ಟಿಲು ಏರುವ ಮುನ್ನ ಅವರು ನಿಂತುಕೊಂಡೇ ಪಂದ್ಯ ವೀಕ್ಷಿಸಿದರು.

VISTARANEWS.COM


on

cm siddaramaiah T20 World Cup Final
Koo

ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಮರಳುವ ತರಾತುರಿಯ ನಡುವೆಯೂ ಕೆಲವು ಕ್ಷಣ ಬಿಡುವು ಮಾಡಿಕೊಂಡು ವಿಮಾನ ನಿಲ್ದಾಣದಲ್ಲಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಾಟವನ್ನು (T20 World Cup Final) ವೀಕ್ಷಿಸಿದರು.

ವೈರಲ್‌ ಆಗಿರುವ ವಿಡಿಯೋದಲ್ಲಿ, ಟ್ಯಾಬ್‌ ಒಂದರಲ್ಲಿ ಸಿದ್ದರಾಮಯ್ಯ ಅವರು ಟಿ20 ವಿಶ್ವಕಪ್‌ನ ಭಾರತ- ದಕ್ಷಿಣ ಆಫ್ರಿಕ ನಡುವಿನ ಫೈನಲ್‌ ಪಂದ್ಯಾಟವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಶೇಷ ವಿಮಾನ ಲ್ಯಾಂಡ್‌ ಆಗಿದ್ದರೂ, ವಿಮಾನದ ಮೆಟ್ಟಿಲು ಏರುವ ಮುನ್ನ ಅವರು ನಿಂತುಕೊಂಡೇ ಪಂದ್ಯ ವೀಕ್ಷಿಸಿದರು.

ಬಾರ್ಬಡೋಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಭಾರತ (India Team) ಹಾಗೂ ದಕ್ಷಿಣ ಆಫ್ರಿಕ (South Africa) ತಂಡಗಳು ಮುಖಾಮುಖಯಾಗಿವೆ. ಭಾರತ ಟೀಮ್‌ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಕ್ಕೆ ಪಂದ್ಯ ಗೆಲ್ಲಲು 177 ರನ್‌ಗಳ ಟಾರ್ಗೆಟ್‌ ನೀಡಿದೆ. ಈ ನಡುವೆ ಭಾರತ 7 ವಿಕೆಟ್‌ಗಳು ಕಳೆದುಕೊಂಡಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಯೋಜನೆಗಳ ಅನುಮೋದನೆ ಕುರಿತು ಮನವಿ ಮಾಡಿದ್ದಾರೆ. ಇದರಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು (Drinking Water) ಒದಗಿಸುವ ಹಾಗೂ 400 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು (Mekedatu project) ಅಣೆಕಟ್ಟು ಯೋಜನೆ ಪ್ರಮುಖವಾಗಿದ್ದು, 9000 ಕೋಟಿ ರೂ.ಗಳ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದಿಂದ (Central water commission) ಅನುಮೋದನೆ ಬಾಕಿ ಇದೆ. ಈ ಯೋಜನೆಗೆ ಪ್ರಧಾನಿಗಳು ಖುದ್ದಾಗಿ ಆಸಕ್ತಿ ವಹಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024 ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ಮಹಾದಾಯಿ ಯೋಜನೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ ಸುರಂಗ ಮಾರ್ಗಕ್ಕೆ 3000 ಕೋಟಿ ವೆಚ್ಚವಾಗಲಿದ್ದು, ಯೋಜನೆಯಿಂದ ಹಲವಾರು ಲಾಭಗಳಿವೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ನ್ನು ರಾ.ಹೆ.4 ಕ್ಕೆ ಸಂಪರ್ಕಿಸುವುದರಿಂದ ಕರ್ನಾಟಕ ಸರ್ಕಾರ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಕೈಗೊಳ್ಳಬಹುದಾಗಿದ್ದು, ಕೇಂದ್ರ ಬಜೆಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಎನ್.ಹೆಚ್.ಎ.ಐ ಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಡಾ ಜಿ ಪರಮೇಶ್ವರ, ಎಚ್ ಸಿ ಮಹದೇವಪ್ಪ ಅವರನ್ನು ಒಳಗೊಂಡ ಕರ್ನಾಟಕ ಸರಕಾರದ ನಿಯೋಗವು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ರಾತ್ರಿ ಭೇಟಿ ಮಾಡಿ ಕರ್ನಾಟಕದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: Siddaramaiah: ಮೇಕೆದಾಟು ಕೂಡಲೇ ಕ್ಲಿಯರ್‌ ಮಾಡಿ: ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Continue Reading

ಪ್ರಮುಖ ಸುದ್ದಿ

Siddaramaiah: ಮೇಕೆದಾಟು ಕೂಡಲೇ ಕ್ಲಿಯರ್‌ ಮಾಡಿ: ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024 ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ.

VISTARANEWS.COM


on

CM Siddaramaiah pm narendra modi
ಫೈಲ್‌ ಚಿತ್ರ
Koo

ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಯೋಜನೆಗಳ ಅನುಮೋದನೆ ಕುರಿತು ಮನವಿ ಮಾಡಿದ್ದಾರೆ. ಇದರಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು (Drinking Water) ಒದಗಿಸುವ ಹಾಗೂ 400 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು (Mekedatu project) ಅಣೆಕಟ್ಟು ಯೋಜನೆ ಪ್ರಮುಖವಾಗಿದ್ದು, 9000 ಕೋಟಿ ರೂ.ಗಳ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದಿಂದ (Central water commission) ಅನುಮೋದನೆ ಬಾಕಿ ಇದೆ. ಈ ಯೋಜನೆಗೆ ಪ್ರಧಾನಿಗಳು ಖುದ್ದಾಗಿ ಆಸಕ್ತಿ ವಹಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024 ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ಮಹಾದಾಯಿ ಯೋಜನೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳು

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ ಸುರಂಗ ಮಾರ್ಗಕ್ಕೆ 3000 ಕೋಟಿ ವೆಚ್ಚವಾಗಲಿದ್ದು, ಯೋಜನೆಯಿಂದ ಹಲವಾರು ಲಾಭಗಳಿವೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ನ್ನು ರಾ.ಹೆ.4 ಕ್ಕೆ ಸಂಪರ್ಕಿಸುವುದರಿಂದ ಕರ್ನಾಟಕ ಸರ್ಕಾರ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಕೈಗೊಳ್ಳಬಹುದಾಗಿದ್ದು, ಕೇಂದ್ರ ಬಜೆಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಎನ್.ಹೆಚ್.ಎ.ಐ ಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

ಸಾರ್ವಜನಿಕ ಸಾರಿಗೆಗೆ ಬೇಡಿಕೆ ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಮೆಟ್ರೋ 3ನೇ ಹಂತದ 44.65 ಕಿಮೀ ಗಲನ್ನು 15611 ಕೋಟಿಗಳ ವೆಚ್ಚದ ಡಿಪಿಆರ್‌ ಅನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಆದಷ್ಟು ಶೀಘ್ರವಾಗಿ ಅನುಮೋದನೆ ನೀಡುವಂತೆ ಕೋರಿದ್ದಾರೆ.

73.04 ಕಿ.ಮೀ ಉದ್ದದ ಅಷ್ಟಪಥ ಪೆರಿಫೆರಲ್ ರಿಂಗ್ ರೋಡನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಅನುಮೋದಿಸಿದೆ. ಕೇಂದ್ರ ಬಜೆಟ್‌ನಲ್ಲಿ ಅಗತ್ಯ ಅನುದಾನವನ್ನು ಮೀಸಲಿಡುವಂತೆ ಮುಖ್ಯಮಂತ್ರಿಗಳು ಪತ್ರದಲ್ಲಿ ಕೋರಿದ್ದಾರೆ.

15ನೇ ಹಣಕಾಸು ಆಯೋಗವು 2021-26 ರ ಅವಧಿಗೆ ಕೆರೆಗಳ ಅಭಿವೃದ್ಧಿ ಹಾಗೂ ಪೇರಿಫೆರಲ್ ರಿಂಗ್ ರೋಡ್‌ಗಾಗಿ ಶಿಫಾರಸ್ಸು ಮಾಡಿರುವ 6000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಬಿಬಿಎಂಪಿ ವತಿಯಿಂದ ಘನ ತ್ಯಾಜ್ಯ ನಿರ್ವಹಣೆಗಾಗಿ 3200 ಕೋಟಿ ಅಂದಾಜು ಮೊತ್ತದ ಯೋಜನೆ ಕೈಗೊಳ್ಳುತ್ತಿದ್ದು, ಯೋಜನೆಯ ಶೇ.30% ಅಂದರೆ 960 ಕೋಟಿ ರೂ.ಗಳನ್ನು ಸ್ವಚ್ಛ ಭಾರತ ಅಭಿಯಾನ 2.0ದಡಿ ಕಾರ್ಯಸಾಧ್ಯತಾ ಅಂತರ ನಿಧಿ ಒದಗಿಸಲು ಕೋರಲಾಗಿದೆ.

ಕಲ್ಯಾಣ ಕರ್ನಾಟಕದ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 3000 ಕೋಟಿ ರೂ.ಗಳ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿರಿಸಿದ್ದು ಕೇಂದ್ರ ಸರ್ಕಾರವು ತನ್ನ 2024-25 ರ ಬಜೆಟ್ ನಲ್ಲಿ ಅನುರೂಪದ ಅನುದಾನವನ್ನು ಒದಗಿಸಲು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮದಡಿ ಒದಗಿಸುವ ಅನುದಾನವನ್ನು ಹೆಚ್ಚಿಸಲು ಮತ್ತು ಹೊಸ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಧನಸಹಾಯ ನೀಡಲು ಕೋರಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ (AIIMS) ನ್ನೂ ಘೋಷಿಸುವಂತೆ ಮುಖ್ಯಮಂತ್ರಿಗಳು ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ. 15ನೇ ಹಣಕಾಸು ಆಯೋಗವು 2020-21ರಲ್ಲಿ ಶಿಫಾರಸ್ಸು ಮಾಡಿದ್ದ 5495 ಕೋಟಿಗಳ ನಿರ್ದಿಷ್ಟ ಅನುದಾನವನ್ನು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಲ್ಲ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಮೊತ್ತದ ಪಾಲು ದೊರಕಲಿಲ್ಲವಾದ್ದರಿಂದ ಈ ಶಿಫಾರಸ್ಸನ್ನು ಒಪ್ಪಿ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಕೋರಿದ್ದಾರೆ.

ಇದನ್ನೂ ಓದಿ: Siddaramaiah: ಅಮಿತ್‌ ಶಾ-ಸಿದ್ದರಾಮಯ್ಯ ಭೇಟಿ; ರಾಜ್ಯದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಒತ್ತಾಯ

Continue Reading

ದೇಶ

Lalu Prasad Yadav: “ಇಂದಿರಾ ಗಾಂಧಿ ನಮ್ಮನ್ನು ಜೈಲಿಗಟ್ಟಿದರು, ಆದರೆ…” ಎಮರ್ಜೆನ್ಸಿ ಬಗ್ಗೆ ಲಾಲೂ ಹೇಳಿದ್ದೇನು?

Lalu Prasad Yadav:ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿ ತಾವು ಎದುರಿಸಿದ ಕರಾಳ ದಿನಗಳನ್ನು ಲಾಲು ಪ್ರಸಾದ್ ಯಾದವ್ ನೆನಪಿಸಿಕೊಂಡಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ನಾಯಕರನ್ನು ಜೈಲು ಕಂಬಿಯ ಹಿಂದೆ ಹಾಕಿದ್ದರು. ಆದರೆ ಎಂದಿಗೂ ಅವರನ್ನು ನಿಂದಿಸಿರಲಿಲ್ಲ ಎಂದು ಲಾಲು ಹೇಳಿದ್ದಾರೆ.

VISTARANEWS.COM


on

Indira Gandhi's Emergency
Koo

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ತುರ್ತು ಪರಿಸ್ಥಿತಿ(Emergency) ಹೇರಿಕೆಯ ವಿಚಾರವನ್ನಿಟ್ಟುಕೊಂಡು ಆಡಳಿತ ಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ. ಇದು ಸಾಲದೆನ್ನುವಂತೆ ಸ್ಪೀಕರ್‌ ಓಂ ಬಿರ್ಲಾ(Om birla), ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಕೂಡ ಎಮರ್ಜೆನ್ಸಿ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿ ತಾವು ಎದುರಿಸಿದ ಕರಾಳ ದಿನಗಳನ್ನು ಲಾಲು ಪ್ರಸಾದ್ ಯಾದವ್ ನೆನಪಿಸಿಕೊಂಡಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ನಾಯಕರನ್ನು ಜೈಲು ಕಂಬಿಯ ಹಿಂದೆ ಹಾಕಿದ್ದರು. ಆದರೆ ಎಂದಿಗೂ ಅವರನ್ನು ನಿಂದಿಸಿರಲಿಲ್ಲ ಎಂದು ಲಾಲು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಲಾಲೂ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧದ ಚಳವಳಿಯನ್ನು ಮುಂದುವರಿಸಲು ಜಯಪ್ರಕಾಶ್ ನಾರಾಯಣ್ ರಚಿಸಿದ್ದ ಸಮಿತಿಯಲ್ಲಿ ನಾನು ಸಂಚಾಲಕನಾಗಿದ್ದೆ. ನನ್ನನ್ನು 15 ತಿಂಗಳ ಕಾಲ ಭದ್ರತಾ ನಿರ್ವಹಣಾ ಕಾಯ್ದೆ (ಮಿಸಾ) ಅಡಿ ಜೈಲಿನಲ್ಲಿ ಇರಿಸಲಾಗಿತ್ತು ಎಂದರು.

ಇದೇ ವೇಳೆ ಅವರು ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರಿದ್ದು, ಇಂದು ಎಮರ್ಜೆನ್ಸಿ ಕುರಿತು ಮಾತನಾಡುತ್ತಿರುವ ಬಿಜೆಪಿ ಸಚಿವರ ಬಗ್ಗೆ ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಗೊತ್ತೇ ಇರಲಿಲ್ಲ. ಮೋದಿ, ಜೆಪಿ ನಡ್ಡಾ ಹಾಗೂ ಇಂದು ಸ್ವಾತಂತ್ರ್ಯದ ಮೌಲ್ಯಗಳ ಬಗ್ಗೆ ನಮಗೆ ಉಪದೇಶ ನೀಡುತ್ತಿರುವ ಪ್ರಧಾನಿಯ ಇತರೆ ಸಚಿವ ಸಹೋದ್ಯೋಗಿಗಳ ಹೆಸರನ್ನೇ ನಾವು ಕೇಳಿರಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಇಂದಿರಾ ಗಾಂಧಿ ನಮ್ಮನ್ನು ಕಂಬಿಗಳ ಹಿಂದೆ ಇರಿಸಿದ್ದು ಎಷ್ಟು ನಿಜವೂ ಅವರು ನಮ್ಮನ್ನು ನಿಂದಿಸಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಅವರಾಗಲೀ ಅಥವಾ ಅವರ ಸಚಿವರಾಗಲೀ ನಮ್ಮನ್ನು ದೇಶ ದ್ರೋಹಿಗಳು ಅಥವಾ ದೇಶಪ್ರೇಮಿಗಳಲ್ಲ ಎಂದು ಕರೆದಿರಲಿಲ್ಲ. ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಕ್ಕೆ ಧಕ್ಕೆ ತರುವ ವಿಧ್ವಂಸಕ ಕೃತ್ಯಗಳಿಗೆ ಅವಕಾಶ ನೀಡಿರಲಿಲ್ಲ. 1975 ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪು ಚುಕ್ಕೆ ಹೌದು. ಹಾಗಂದ ಮಾತ್ರಕ್ಕೆ ವಿರೋಧ ಪಕ್ಷದವರನ್ನು ಅಗೌರವದಿಂದ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Continue Reading

ವಿದೇಶ

Maya Neelakantan: ಅಮೆರಿಕವನ್ನು ಹುಚ್ಚೆಬ್ಬಿಸಿದ 10 ವರ್ಷದ ಭಾರತೀಯ ಗಿಟಾರ್‌ ಬಾಲೆ ಮಾಯಾ ನೀಲಕಂಠನ್‌, ಯಾರೀಕೆ?

Maya Neelakantan: ಇದೀಗ ಅಮೆರಿಕಾದ ಹೊಸ ರಾಕ್ ಮ್ಯೂಸಿಕ್‌ ಡಾರ್ಲಿಂಗ್‌ ಆಗಿರುವ ಮಾಯಾ ನೀಲಕಂಠನ್‌ 10 ವರ್ಷದ ಗಿಟಾರ್ ಪ್ರತಿಭೆ. ರಾಕ್ ಸಂಗೀತದ ಅಸಾಧಾರಣ ಪ್ರತಿಭೆ ಮತ್ತು ಉತ್ಸಾಹವನ್ನು ಪ್ರದರ್ಶಿಸಿದ‌ ಮಾಯಾ, ಜಡ್ಜ್‌ಗಳ ಮನಗೆದ್ದರು.

VISTARANEWS.COM


on

maya neelakantan
Koo

ನ್ಯೂಯಾರ್ಕ್‌: ಭಾರತ (India) ಮೂಲದ 10 ವರ್ಷದ ಬಾಲಕಿ ಮಾಯಾ ನೀಲಕಂಠನ್ (Maya Neelakantan) ಇತ್ತೀಚೆಗೆ “ಅಮೆರಿಕಾಸ್ ಗಾಟ್ ಟ್ಯಾಲೆಂಟ್” (America’s got Talent) ಕಾರ್ಯಕ್ರಮದಲ್ಲಿ ತಮ್ಮ ಅಗಾಧ ಪ್ರತಿಭೆಯಿಂದ ನೋಡುಗರನ್ನು ಹುಚ್ಚೆಬ್ಬಿಸಿದರು. ಭಾರತೀಯ ಕ್ಲಾಸಿಕಲ್‌ (Classical) ಮತ್ತು ಪಾಪ್‌ ಫ್ಯೂಶನ್‌ (pop Fusion) ಮಾಡಿದ ನೋಟ್‌ ಅನ್ನು ಗಿಟಾರ್‌ನಲ್ಲಿ (Guitar) ನುಡಿಸಿ ಪ್ರೇಕ್ಷಕರಲ್ಲಿ ಪುಳಕ ಮೂಡಿಸಿದರು.

ಇದೀಗ ಅಮೆರಿಕಾದ ಹೊಸ ರಾಕ್ ಮ್ಯೂಸಿಕ್‌ ಡಾರ್ಲಿಂಗ್‌ ಆಗಿರುವ ಮಾಯಾ ನೀಲಕಂಠನ್‌ 10 ವರ್ಷದ ಗಿಟಾರ್ ಪ್ರತಿಭೆ. ರಾಕ್ ಸಂಗೀತದ ಅಸಾಧಾರಣ ಪ್ರತಿಭೆ ಮತ್ತು ಉತ್ಸಾಹವನ್ನು ಪ್ರದರ್ಶಿಸಿದ‌ ಮಾಯಾ, ಜಡ್ಜ್‌ಗಳ ಮನಗೆದ್ದರು. ತನ್ನ ಆಡಿಷನ್‌ಗಾಗಿ ಭಾರತದಿಂದ ಪ್ರಯಾಣಿಸಿದ ಮಾಯಾ, ಪಾಪಾ ರೋಚ್‌ನ “ಲಾಸ್ಟ್ ರೆಸಾರ್ಟ್” ಆಲ್ಬಂನ ನಿರೂಪಣೆಯೊಂದಿಗೆ ತೀರ್ಪುಗಾರರನ್ನು ಬೆರಗುಗೊಳಿಸಿದಳು. ಆತ್ಮವಿಶ್ವಾಸದಿಂದ ಗಿಟಾರ್ ನುಡಿಸಿ ರೋಮಾಂಚನಗೊಳಿಸಿದಳು.

ಮಾಯಾ ಕುಟುಂಬ ಜೊತೆಗಿದ್ದು ತೆರೆಮರೆಯಲ್ಲಿ ಅವಳನ್ನು ಹುರಿದುಂಬಿಸಿತು. ಮಾಯಾ ಕೌಶಲ್ಯ ತೀರ್ಪುಗಾರರಾದ ಸೈಮನ್ ಕೋವೆಲ್, ಸೋಫಿಯಾ ವೆರ್ಗರಾ, ಹೈಡಿ ಕ್ಲುಮ್ ಮತ್ತು ಹೋವೀ ಮ್ಯಾಂಡೆಲ್ ಅವರ ವಿಸ್ಮಯಕ್ಕೆ ಕಾರಣವಾಯಿತು. ಮಾಯಾ ತೀರ್ಪುಗಾರರು ಮತ್ತು ಪ್ರೇಕ್ಷಕರಿಂದ ಸಮಾನವಾಗಿ ಚಪ್ಪಾಳೆಗಳನ್ನು ಪಡೆದರು. ಈಗಾಗಲೇ ಎಲ್ಲಾ ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಮಾಯಾ ಗಿಟಾರ್‌ ನುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊ ಲಕ್ಷಾಂತರ ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದಿದೆ.

“ಭಾರತೀಯ ಉಡುಗೆ ಧರಿಸಿ ರಾಕ್ ಸಂಗೀತ ನುಡಿಸಿದ ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ನೀವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೀರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಪ್ರತಿಭೆಗೆ ಯಾವುದೇ ಮಿತಿಯಿಲ್ಲ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಟೂಲ್, ಮೆಟಾಲಿಕಾ ಮತ್ತು ಸ್ಲೇಯರ್ ಅವರ ಹಾಡುಗಳನ್ನು ಒಳಗೊಂಡಿರುವ ನೀಲಕಂಠನ್ ಅವರ ರಾಕ್ ಮತ್ತು ಗಿಟಾರ್‌ ನುಡಿಸುವಿಕೆಗಳು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯಗೊಳಿಸಿವೆ. 2022ರಲ್ಲಿ ಅವರು ಗಿಟಾರ್ ವಾದಕ ಆಡಮ್ ಜೋನ್ಸ್ ಅವರ “7ಎಂಪೆಸ್ಟ್” ನಿರೂಪಣೆಯೊಂದಿಗೆ ಪ್ರಭಾವಿಸಿದರು. ಮಾಯಾ ನೀಲಕಂಠನ್ ತನ್ನ ಇನ್ನೊಬ್ಬ ಗಿಟಾರ್‌ ಐಕಾನ್‌ ಗ್ಯಾರಿ ಹಾಲ್ಟ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅವರಿಂದ ಉಡುಗೊರೆ ಪಡೆದಿದ್ದಾಳೆ. ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಆಕೆ ಆತನನ್ನು ಭೇಟಿಯಾದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಅವನ ಸಂಗ್ರಹದಿಂದ ಗಿಟಾರ್ ಅನ್ನು ಉಡುಗೊರೆಯಾಗಿ ಸ್ವೀಕರಿಸಿದಳು.

ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ನೀಲಕಂಠನ್, ಥ್ರಾಶ್ ಮೆಟಲ್, ಟೂಲ್ ಹಾಡುಗಳು ಮತ್ತು ಭಾರತೀಯ ಶಾಸ್ತ್ರೀಯ ಕರ್ನಾಟಕ ಸಂಗೀತವನ್ನು ನುಡಿಸುತ್ತಾಳೆ. ಹಲವಾರು ಸಂದರ್ಭಗಳಲ್ಲಿ ನೇರ ಪ್ರದರ್ಶನ ನೀಡಿದ್ದಾಳೆ. ಕೇವಲ ಐದು ವರ್ಷದವಳಾಗಿದ್ದಾಗ ಆಕೆ ಆಟಿಕೆ ಗಿಟಾರ್ ನುಡಿಸುತ್ತಾ ಮನೆಯಲ್ಲಿ ನೃತ್ಯ ಮಾಡುತ್ತಿದ್ದಳಂತೆ. ಇದೇ ಆಸಕ್ತಿ ಆಕೆಯನ್ನು ನುರಿತ ಗಿಟಾರ್ ವಾದಕನಾಗಲು ಅವಳನ್ನು ಪ್ರೇರೇಪಿಸಿತು.

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ನೀಲಕಂಠನ್ ಅವರ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವಳನ್ನು “ದೇವತೆಗಳ ಭೂಮಿಯಿಂದ ಬಂದ ರಾಕ್ ದೇವತೆ” ಎಂದು ಉಲ್ಲೇಖಿಸಿದ್ದಾರೆ. ಮಹೀಂದ್ರಾ ಗ್ರೂಪ್ ಪ್ರತಿ ವರ್ಷ ಮುಂಬೈನಲ್ಲಿ ಆಯೋಜಿಸುವ ಮಹೀಂದ್ರಾ ಬ್ಲೂಸ್ ಫೆಸ್ಟಿವಲ್‌ನಲ್ಲಿ ಈಕೆ ಕಾರ್ಯಕ್ರಮ ನೀಡಲು ಅರ್ಹಳು ಎಂದು ಮಹೀಂದ್ರಾ ಹೇಳಿದ್ದಾರೆ.

ಇದನ್ನೂ ಓದಿ: Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Continue Reading
Advertisement
T20 World Cup
ಪ್ರಮುಖ ಸುದ್ದಿ14 mins ago

T20 World Cup : ಘರ್ಜಿಸಿದ ಕಿಂಗ್ ಕೊಹ್ಲಿ, 176 ರನ್ ಬಾರಿಸಿದ ಭಾರತ, ಇದು ವಿಶ್ವ ಕಪ್​ ಫೈನಲ್​ನಲ್ಲಿ ಗರಿಷ್ಠ ಸ್ಕೋರ್​

cm siddaramaiah T20 World Cup Final
ಪ್ರಮುಖ ಸುದ್ದಿ18 mins ago

T20 World Cup Final: ವಿಮಾನ ನಿಲ್ದಾಣದಲ್ಲೂ ಸಿದ್ದರಾಮಯ್ಯಗೆ ವಿಶ್ವಕಪ್‌ ಕ್ರಿಕೆಟ್‌ ಧ್ಯಾನ!

Hardik Pandya
ಪ್ರಮುಖ ಸುದ್ದಿ50 mins ago

Hardik Pandya : ಕಪಿಲ್​ ದೇವ್​ ರೀತಿ ಮೀಸೆ ಬಿಟ್ಟುಕೊಂಡು ಫೈನಲ್ ಪಂದ್ಯ ಆಡಲು ಬಂದ ಹಾರ್ದಿಕ್ ಪಾಂಡ್ಯ

CM Siddaramaiah pm narendra modi
ಪ್ರಮುಖ ಸುದ್ದಿ51 mins ago

Siddaramaiah: ಮೇಕೆದಾಟು ಕೂಡಲೇ ಕ್ಲಿಯರ್‌ ಮಾಡಿ: ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Indira Gandhi's Emergency
ದೇಶ56 mins ago

Lalu Prasad Yadav: “ಇಂದಿರಾ ಗಾಂಧಿ ನಮ್ಮನ್ನು ಜೈಲಿಗಟ್ಟಿದರು, ಆದರೆ…” ಎಮರ್ಜೆನ್ಸಿ ಬಗ್ಗೆ ಲಾಲೂ ಹೇಳಿದ್ದೇನು?

IPS officers promoted
ಪ್ರಮುಖ ಸುದ್ದಿ1 hour ago

IPS officers promoted: ಡಿಜಿಪಿಯಾಗಿ ಮಾಲಿನಿ ಕೃಷ್ಣಮೂರ್ತಿ, ಪ್ರಣಬ್ ಮೊಹಂತಿಗೆ ಮುಂಬಡ್ತಿ

maya neelakantan
ವಿದೇಶ2 hours ago

Maya Neelakantan: ಅಮೆರಿಕವನ್ನು ಹುಚ್ಚೆಬ್ಬಿಸಿದ 10 ವರ್ಷದ ಭಾರತೀಯ ಗಿಟಾರ್‌ ಬಾಲೆ ಮಾಯಾ ನೀಲಕಂಠನ್‌, ಯಾರೀಕೆ?

Back Benchers film in the Censor
ಕರ್ನಾಟಕ2 hours ago

Kannada New Movie: ಸೆನ್ಸಾರ್ ಅಂಗಳದಲ್ಲಿ ‘ಬ್ಯಾಕ್ ಬೆಂಚರ್ಸ್’ ಸಿನಿಮಾ!

Producer who gifted an expensive car to the director of Radhika Kumaraswamy starrer Ajagrata
ಕರ್ನಾಟಕ2 hours ago

Kannada New Movie: ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಅಜಾಗ್ರತ’ ಸಿನಿಮಾ ಡೈರೆಕ್ಟರ್‌ಗೆ ನಿರ್ಮಾಪಕರಿಂದ ದುಬಾರಿ ಕಾರ್‌ ಗಿಫ್ಟ್‌!

T20 World Cup final
ಕ್ರಿಕೆಟ್2 hours ago

T20 World Cup Final : ಟಾಸ್​ ಗೆದ್ದವರು ಮ್ಯಾಚ್​ ಗೆಲ್ತಾರೆ; ವಿಶ್ವ ಕಪ್​ ಫೈನಲ್ ಪಂದ್ಯದ ಇತಿಹಾಸ ಹೀಗಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ5 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ12 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ1 day ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌