ಬೆಂಗಳೂರು: ತಲೆಮರೆಸಿಕೊಂಡಿರುವ ಕುಖ್ಯಾತ ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕಿ ಅಲಿಯಾಸ್ ಕೃಷ್ಣ ಭಟ್ ಹುಡುಕಾಟ ಮತ್ತೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ರೂವಾರಿ ಶ್ರೀಕಿಗಾಗಿ ಕೇರಳದ ಕಾಸರಗೋಡು ಕ್ರೈಂ ಬ್ರಾಂಚ್ ಪೊಲೀಸರು ಎಲ್ಲಿಲ್ಲದ ಹುಡುಕಾಟ ನಡೆಸಿದ್ದಾರೆ. ಆದರೆ ಶ್ರೀಕಿ ಕುರಿತು ಸಣ್ಣ ಸುಳಿವೂ ಕೇರಳ ಪೊಲೀಸರಿಗೆ ಸಿಕ್ಕಿಲ್ಲ ಎನ್ನಲಾಗಿದ್ದ ಈತ ಎಲ್ಲ ಅಡಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಓರ್ವ ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳ ತಂಡದಿಂದ 10 ದಿನ ಬೆಂಗಳೂರಲ್ಲಿ ಹುಡುಕಾಟ ನಡೆಸಿದ್ದರೂ ಶ್ರೀಕಿ ಮಾತ್ರ ಪತ್ತೆಯಾಗಿಲ್ಲ. ಕೇರಳದಲ್ಲಿ 923 ಸೈಬರ್ ಪ್ರಕರಣ ದಾಖಲಾಗಿದ್ದು ಆ ಪ್ರಕರಣಗಳಲ್ಲಿ ನೂರಾರು ಕೋಟಿ ವಂಚನೆಯಾಗಿದೆ. ಇ-ಮೈಲ್ ಹ್ಯಾಕ್, ಅಕೌಂಟ್ಸ್ ಹ್ಯಾಕ್, ಗೌರ್ನ್‌ಮೆಂಟ್ಸ್ ವೆಬ್‌ಸೈಟ್ಸ್ ಹ್ಯಾಕ್ ಮಾಡಿ ವಂಚನೆ ಮಾಡಲಾಗಿದೆ. ಶ್ರೀಕಿ ಹಿಂದೆ ಅರೆಸ್ಟ್ ಅಗಿದ್ದ ಪ್ರಕರಣಗಳು ಹಾಗೂ ಕೇರಳದಲ್ಲಿ ದಾಖಲಾಗಿರುವ ಪ್ರಕರಣಗಳು ಒಂದೇ ರೀತಿ ಕಂಡು ಬಂದಿದೆ. ಹೀಗಾಗಿ ಸಾಕಷ್ಟು ಸೈಬರ್ ಕ್ರೈಂ ಪ್ರಕರಣಗಳಲ್ಲಿ ಶ್ರೀಕಿ ಕೈವಾಡ ಇರಬಹುದೆಂಬ ಅನುಮಾನ ಕೇರಳ ಪೊಲೀಸರಿಗೆ ಕಾಡುವಂತಾಗಿದೆ.
ಇದನ್ನೂ ಓದಿ | ಕೇರಳದಲ್ಲಿ ಹೆಚ್ಚುತ್ತಿರುವ ಹ್ಯಾಕಿಂಗ್, ಹ್ಯಾಕರ್ ಶ್ರೀಕಿಯದ್ದೇ ಕೈವಾಡ ಶಂಕೆ!
ಶ್ರೀಕಿ ಇನ್ನೂ ಪೊಲೀಸರಿಗೆ ಕೈಗೆ ಸಿಗುತ್ತಿಲ್ಲ
ಶ್ರೀಕಿ ಯಾವುದೇ ಮೊಬೈಲ್ ಬಳಸುವುದಿಲ್ಲ. ಆತನನ್ನು ಸಂಪರ್ಕ ಮಾಡುವುದೇ ಒಂದು ಚಾಲೆಂಜಿಂಗ್ ಆಗಿದೆ. ನೆಟ್‌ವರ್ಕ್ ಟ್ರ್ಯಾಕ್ ಮಾಡಿ ಅಥವಾ ಟವರ್ ಲೋಕೇಷನ್ ಆಧರಿಸಿ ಪತ್ತೆ ಮಾಡುವುದು ಕೂಡ ಅಸಾಧ್ಯ. ಕೇವಲ ಐಷಾರಾಮಿ ಹೋಟೆಲ್‌ಗಳಲ್ಲಿ ಮಾತ್ರ ವಾಸ್ತವ್ಯ ಹೂಡುವ ಶ್ರೀಕಿ, ತನ್ನ ಮನೆಗೂ ಕೂಡ ಹೋಗದೆ ಇರುವುದರಿಂದ ಅತನನ್ನ ಹುಡುಕುವುದೇ ಪೊಲೀಸರಿಗೆ ಸವಾಲಾಗಿದೆ.
ಸದ್ಯ ಬೆಂಗಳೂರಿನ ಎಲ್ಲಾ ಐಷರಾಮಿ ಹೋಟೆಲ್‌ಗಳಲ್ಲಿ ಶ್ರೀಕಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದೀಗ ಶ್ರೀಕಿ ಎಲ್ಲಿಯೂ ಸಿಗದ ಕಾರಣ ಕೇರಳ ಪೊಲೀಸರು ವಾಪಸ್ಸು ತೆರಳಿದ್ದಾರೆ. ಅಲ್ಲದೆ ಶ್ರೀಕಿ ಸಿಕ್ಕರೆ ಮಾಹಿತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಲಡಾಖ್ ಸಮೀಪದ ಪವರ್ ಗ್ರಿಡ್‌ಗೆ ಚೀನಾ ಹ್ಯಾಕರ್‌ಗಳಿಂದ ಕನ್ನ: ʻಡ್ರ್ಯಾಗನ್ʼ ಕಳ್ಳಾಟ ಬಯಲು!