ಲಡಾಖ್ ಸಮೀಪದ ಪವರ್ ಗ್ರಿಡ್‌ಗೆ ಚೀನಾ ಹ್ಯಾಕರ್‌ಗಳಿಂದ ಕನ್ನ: ʻಡ್ರ್ಯಾಗನ್‌ʼ ಕಳ್ಳಾಟ ಬಯಲು! - Vistara News

ದೇಶ

ಲಡಾಖ್ ಸಮೀಪದ ಪವರ್ ಗ್ರಿಡ್‌ಗೆ ಚೀನಾ ಹ್ಯಾಕರ್‌ಗಳಿಂದ ಕನ್ನ: ʻಡ್ರ್ಯಾಗನ್‌ʼ ಕಳ್ಳಾಟ ಬಯಲು!

ಕೆಲ ತಿಂಗಳುಗಳಿಂದ ಭಾರತದ 7 ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆಂಟರ್ಸ್ (SLDCs)ಗಳನ್ನು ಚೀನಾ ಹ್ಯಾಕರ್‌ಗಳು ಗುರಿಯಾಗಿಸಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಡಾಖ್:‌ ಚೀನಾ ಸರ್ಕಾರ ಪ್ರಾಯೋಜಕತ್ವದ ಹ್ಯಾಕರ್‌ಗಳು ಲಡಾಖ್ ಸಮೀಪದಲ್ಲಿರುವ ಭಾರತದ ವಿದ್ಯುತ್ ಪೂರೈಕೆ ಕೇಂದ್ರವನ್ನು ಕೆಲ ತಿಂಗಳುಗಳಿಂದ ಗುರಿ ಮಾಡುತ್ತಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ʻರೆಕಾರ್ಡೆಡ್ ಫ್ಯೂಚರ್ʼ ವರದಿಯಲ್ಲಿ ತಿಳಿಸಿದೆ. ಲಡಾಖ್‌ ಭಾಗದಲ್ಲಿ ಭಾರತ-ಚೀನಾ ನಡುವಿನ ಸೇನಾ ಬಿಕ್ಕಟ್ಟು ತಿಳಿಯಾಗಿರುವ ಬೆನ್ನಲ್ಲೇ ಇದೀಗ ಡ್ರ್ಯಾಗನ್‌ ರಾಷ್ಟ್ರದ ಹೊಸ ಸಂಚು ಬಯಲಾಗಿದೆ.

ಇತ್ತೀಚಿನ ಕೆಲ ತಿಂಗಳುಗಳಲ್ಲಿ ಭಾರತದ ಕನಿಷ್ಠ 7 ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆಂಟರ್ಸ್ (SLDCs)ಗಳನ್ನು ಚೀನಾ ಹ್ಯಾಕರ್‌ಗಳು ಗುರಿಯಾಗಿಸಿದ್ದಾರೆ. ಈ ವಿದ್ಯುತ್ ಪೂರೈಕೆ ಕೇಂದ್ರಗಳು ಸಂಬಂಧಿತ ರಾಜ್ಯಗಳ ಒಳಗೆ ವಿದ್ಯುತ್ ಪೂರೈಕೆ ಮತ್ತು ಗ್ರಿಡ್‌ ಕಂಟ್ರೋಲ್ ಮಾಡುವ ಜವಾಬ್ದಾರಿಯನ್ನು ಹೊತ್ತಿವೆ. ಚೀನಾ ಸರ್ಕಾರದ ಪ್ರಾಯೋಜಕ್ವತದ ಹ್ಯಾಕರ್‌ಗಳು ಗುರಿಯಾಗಿಸಿರುವ SLDCs ಉತ್ತರ ಭಾರತದಲ್ಲಿ ಇದ್ದು, ವಿವಾದಿತ ಭಾರತ-ಚೀನಾ ಗಡಿಯಲ್ಲಿನ ಲಡಾಖ್ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಚೀನಾದ ಹ್ಯಾಕರ್‌ಗಳು ಮಹತ್ವದ ಮೂಲಸೌಕರ್ಯ ವ್ಯವಸ್ಥೆಗಳ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಶೇಷ ಪರಿಣತಿ ಹೊಂದಿರುವ ಖಾಸಗಿ ಗುಪ್ತಚರ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ಎಚ್ಚರಿಸಿದೆ.

ಕಳೆದ 18 ತಿಂಗಳಿನಿಂದ ರಾಜ್ಯ ಹಾಗೂ ಪ್ರಾದೇಶಿಕ ವಿದ್ಯುತ್ ರವಾನೆ ಕೇಂದ್ರಗಳನ್ನು ಚೀನಾ ಸರ್ಕಾರಿ ಪ್ರಯೋಜಕ್ವತದ ಹ್ಯಾಕರ್‌ಗಳು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಮೊದಲು ರೆಡ್‌ಎಕೋದಿಂದ ಇದೀಗ ಟ್ಯಾಗ್-38ವರೆಗೆ ಕನ್ನ ಹಾಕುವ ಪ್ರವೃತ್ತಿ ಮುಂದುವರಿದಿದ್ದು, ಹ್ಯಾಕರ್‌ಗಳು ದೀರ್ಘಕಾಲದ ಚಟುವಟಿಕೆಯ ಉದ್ದೇಶ ಹೊಂದಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ತಿಳಿಸಿದೆ.

ಸೀಮಿತ ಆರ್ಥಿಕ ಬೇಹುಗಾರಿಕೆ ಅಥವಾ ಸಾಂಪ್ರದಾಯಿಕ ಗುಪ್ತಚರ ಅವಕಾಶಗಳ ಅಡಿ ಚೀನಾದ ಹ್ಯಾಕರ್‌ಗಳು ಭಾರತದ ಪವರ್ ಗ್ರೀಡ್‌ ಸಂಪನ್ಮೂಲಗಳ ಮೇಲೆ ದೀರ್ಘಕಾಲದಿಂದ ಕಣ್ಣಿಟ್ಟಿವೆ. ಇದನ್ನು ಗಮನಿಸುತ್ತಿದ್ದರೆ ಭಾರತದ ಮಹತ್ವದ ಮೂಲಸೌಕರ್ಯ ವ್ಯವಸ್ಥೆಗಳ ಮಾಹಿತಿ ಸಂಗ್ರಹಿಸಲು ನೆರವಾಗುವ ಅಥವಾ ತನ್ನ ಭವಿಷ್ಯದ ಚಟುವಟಿಕೆಗಳಿಗೆ ಮೊದಲೇ ಸಿದ್ಧತೆ ನಡೆಸುವ ಉದ್ದೇಶ ಹೊಂದಿರುವಂತೆ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಹ್ಯಾಕಿಂಗ್ ಕೃತ್ಯ ನಡೆಯುವ ಸಾಧ್ಯತೆ ಇದೆ ಎಂದು ರೆಕಾರ್ಡೆಡ್ ಫ್ಯೂಚರ್ ಎಚ್ಚರಿಕೆ ಕೊಟ್ಟಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಶಿಕ್ಷಣ

CISCE Results 2024: ಸಿಐಎಸ್‌ಸಿಇಯ 10 & 12ನೇ ತರಗತಿಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

CISCE Results 2024: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ 10ನೇ ತರಗತಿಯ ಐಸಿಎಸ್ಇ ಮತ್ತು 12ನೇ ತರಗತಿ ಐಎಸ್‌ಸಿ ಫಲಿತಾಂಶವನ್ನು ಪ್ರಕಟಿಸಿದೆ. ಪ್ರಕಟಿಸಿದೆ. ಈ ಸಿಐಎಸ್‌ಸಿ 10 ಮತ್ತು 12ನೇ ತರಗತಿ ಫಲಿತಾಂಶಗಳನ್ನು ಸಿಐಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ cisce.org. ಮತ್ತು results.cisce.org.ನಲ್ಲಿ ವೀಕ್ಷಿಸಬಹುದು.

VISTARANEWS.COM


on

ICSE Results 202
Koo

ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) 10ನೇ ತರಗತಿಯ ಐಸಿಎಸ್ಇ (ICSE) ಮತ್ತು 12ನೇ ತರಗತಿ ಐಎಸ್‌ಸಿ (ISC) ಫಲಿತಾಂಶವನ್ನು ಇಂದು (ಮೇ 6) ಬೆಳಿಗ್ಗೆ ಪ್ರಕಟಿಸಿದೆ. ಈ ಸಿಐಎಸ್‌ಸಿ 10 ಮತ್ತು 12ನೇ ತರಗತಿ ಫಲಿತಾಂಶಗಳನ್ನು ಸಿಐಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ cisce.org. ಮತ್ತು results.cisce.org.ನಲ್ಲಿ ವೀಕ್ಷಿಸಬಹುದು.

ಈ ವರ್ಷ ಸುಮಾರು 2.5 ವಿದ್ಯಾರ್ಥಿಗಳು ಸಿಐಎಸ್‌ಸಿಇಯ 10 ಮತ್ತು 12ನೇ ತರಗತಿಯ ಪರೀಕ್ಷೆ ಬರೆದಿದ್ದರು. 10ನೇ ತರಗತಿ ಪರೀಕ್ಷೆ 2024ರ ಫೆಬ್ರವರಿ 21ರಂದು ಆರಂಭವಾಗಿ ಮಾರ್ಚ್‌ 28ರಂದು ಮುಕ್ತಾಯವಾಗಿತ್ತು. ಇನ್ನು 12ನೇ ತರಗತಿ ಪರೀಕ್ಷೆ 2024ರ ಫೆಬ್ರವರಿ 12ರಂದು ಆರಂಭವಾಗಿ ಏಪ್ರಿಲ್‌ 4ರಂದು ಮುಗಿದಿತ್ತು. ಪ್ರಶ್ನೆ ಪತ್ರಿಕೆಯನ್ನು ಓದಲು ವಿದ್ಯಾರ್ಥಿಗಳಿಗೆ ಹೆಚ್ಚುವರಿ 15 ನಿಮಿಷ ನೀಡಲಾಗಿತ್ತು.

ಫಲಿತಾಂಶ ವೀಕ್ಷಿಸುವ ವಿಧಾನ

  • ಸಿಐಎಸ್‌ಸಿಇಯ ಅದಿಕೃತ ವೆಬ್‌ಸೈಟ್‌ results.cisce.org.ಗೆ ಭೇಟಿ ನೀಡಿ.
  • ಅಥವಾ ಇಲ್ಲಿ ಕ್ಲಿಕ್‌ ಮಾಡಿ.
  • ಈಗ ತೆರೆದುಕೊಳ್ಳುವ ಪುಟದ ಮೇಲ್ಭಾಗದಲ್ಲಿ ಕಾಣಿಸುವ Course ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • ICSE ಅಥವಾ ISC ಪೈಕಿ ಒಂದನ್ನು ಆರಿಸಿ.
  • ಕೋರ್ಸ್‌ ಕೋಡ್‌, ಅಭ್ಯರ್ಥಿಯ ಯುಐಡಿ (UID), ಇಂಡಕ್ಸ್‌ ನಂಬರ್‌ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
  • Show Results ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
  • ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿ ಮತ್ತು ಪ್ರಿಂಟ್‌ ಔಟ್‌ ತೆಗೆದಿಡಿ.

ಸಿಐಎಸ್‌ಸಿಇ ಈ ಬಾರಿ ಹೊಸ ಸೌಲಭ್ಯವನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ತಮ್ಮ ಐಸಿಎಸ್ಇ ಮತ್ತು ಐಎಸ್‌ಸಿ ಫಲಿತಾಂಶಗಳ ಮರು ಪರಿಶೀಲನೆ ಮತ್ತು ಮರು ಮೌಲ್ಯಮಾಪನವನ್ನು ಕೋರಲು ಅನುವು ಮಾಡಿಕೊಟ್ಟಿದೆ. ಮರುಪರಿಶೀಲನೆಗೆ ಪ್ರತಿ ಪತ್ರಿಕೆಗೆ 1,000 ರೂ. ಮರು ಮೌಲ್ಯಮಾಪನಕ್ಕೆ 1,500 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಫಲಿತಾಂಶ ಘೋಷಣೆಯ ನಂತರ ಈ ಆಯ್ಕೆಯು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ಇದಲ್ಲದೆ ಐಸಿಎಸ್ಇ ಮತ್ತು ಐಎಸ್‌ಸಿ ಕಂಪಾರ್ಟ್‌ಮೆಂಟ್‌ ಪರೀಕ್ಷೆಗಳನ್ನು ನಿಲ್ಲಿಸಲು ಸಿಐಎಸ್‌ಇ ನಿರ್ಧರಿಸಿದೆ. ಬದಲಾಗಿ ವಿದ್ಯಾರ್ಥಿಗಳಿಗೆ ಎರಡು ವಿಷಯಗಳಲ್ಲಿ ಸುಧಾರಣಾ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅವಕಾಶ ನೀಡಿದೆ.

ಫಲಿತಾಂಶದ ವಿವರ

10ನೇ ತರಗತಿ

  • ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ: 2,43,617
  • ತೇರ್ಗಡೆಯಾದವರು: 2,42,328
  • ಪಾಸ್‌ ಆದ ಶೇಕಡಾವಾರು: 99.47%

12ನೇ ತರಗತಿ

  • ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ: 99,901
  • ತೇರ್ಗಡೆಯಾದವರು: 98,088
  • ಪಾಸ್‌ ಆದ ಶೇಕಡಾವಾರು: 98.19%

ಕೆಸೆಟ್‌- 2023ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಕೆಸೆಟ್‌ ಪರೀಕ್ಷೆ- 2023ರ ತಾತ್ಕಾಲಿಕ ಸ್ಕೋರ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ʼಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ – ಕೆಸೆಟ್‌ʼ (KSET – Karnataka State Eligibility Test) ಇದರ 2023ನೇ ಸಾಲಿನ ಪರೀಕ್ಷೆಯನ್ನು ಕಳೆದ ಜನವರಿ ತಿಂಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆಗೆ ಬರೆದವರು ಈಗ ತಮ್ಮ ತಾತ್ಕಾಲಿಕ ಸ್ಕೋರ್‌ ಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು.

ಪ್ರಸ್ತುತ ಕೆಇಎ ಬಿಡುಗಡೆ ಮಾಡಿರುವ ಕೆಸೆಟ್‌ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ವಿವರವಾದ ಮಾಹಿತಿಗಳೊಂದಿಗೆ ಸಲ್ಲಿಸಲು ಮೇ 10, 2024 ರವರೆಗೆ ಅವಕಾಶ ನೀಡಿದೆ. ಆಕ್ಷೇಪಣೆಯನ್ನು ಇಮೇಲ್‌ ವಿಳಾಸ -keakset2023@gmail.com ಗೆ ಕಳುಹಿಸಬಹುದು.

ಇದನ್ನೂ ಓದಿ: Best Courses After SSLC: ವಿಜ್ಞಾನ, ವಾಣಿಜ್ಯ, ಕಲೆ; ಎಸ್ ಎಸ್ ಎಲ್ ಸಿ ನಂತರ ಮುಂದೇನು?

Continue Reading

ಪ್ರವಾಸ

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

ಪ್ರವಾಸದ ಯೋಜನೆ ಕೆಲವೊಮ್ಮೆ ಜೇಬಿಗೆ ಕತ್ತರಿ ಹಾಕುತ್ತದೆ ಎನ್ನುವ ಭಯವಿರುತ್ತದೆ. ಆದರೆ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಜನೆ ಮಾಡಿದರೆ ಇಲ್ಲಿ ಜೇಬಿಗೆ ಭಾರವಾಗದ ಹಲವು ತಾಣಗಳಿವೆ. ಆದರೆ ಸ್ವಲ್ಪ ಬುದ್ದಿವಂತಿಕೆ ತೋರಬೇಕು ಅಷ್ಟೇ. ಕನ್ಯಾಕುಮಾರಿಯ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kanyakumari Tour
Koo

ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಚನೆಯಲ್ಲಿದ್ದರೆ ಇಲ್ಲಿನ ಕೆಲವೊಂದು ಸಂಗತಿಗಳನ್ನು ಮಿಸ್ ಮಾಡಿಕೊಳ್ಳದಿರಿ. ಅತ್ಯದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಮಹತ್ವ ಎರಡಕ್ಕೂ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಜೀವನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕು.


ಕನ್ಯಾಕುಮಾರಿ ನಗರವು ಐಷಾರಾಮಿ ಹಾಟ್‌ಸ್ಪಾಟ್ ಎಂಬ ಖ್ಯಾತಿಯನ್ನು ಪಡೆದಿದ್ದರೂ ಇಲ್ಲಿ ನಿಮ್ಮ ಬಜೆಟ್ ಮೀರದ ಹಾಗೆ ಪ್ರವಾಸ ಮಾಡಲು ಹಲವು ಆಯ್ಕೆಗಳನ್ನೂ ನೀಡುತ್ತದೆ. ಕೆಲವು ಯೋಜನೆ ಮತ್ತು ಸ್ಥಳೀಯರ ಸಲಹೆ ಪಡೆದರೆ ಬಜೆಟ್ ಮೀರದ ಹಾಗೆ ಪ್ರವಾಸವನ್ನೂ ಪೂರ್ಣಗೊಳಿಸಬಹುದು. ಜೀವನದಲ್ಲಿ ಅತ್ಯಂತ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.

ಸೂರ್ಯೋದಯ – ಸೂರ್ಯಾಸ್ತ

ಕನ್ಯಾಕುಮಾರಿಗೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಇಲ್ಲಿನ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಅರಬ್ಬಿ ಸಮುದ್ರ (Arabian Sea), ಬಂಗಾಳ ಕೊಲ್ಲಿ (Bay of Bengal) ಮತ್ತು ಹಿಂದೂ ಮಹಾಸಾಗರದ (Indian Ocean) ಭೇಟಿಯ ಸ್ಥಳದಲ್ಲಿ ಅತ್ಯಂತ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿ ಕೊಳ್ಳಬಹದು. ಇದಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ; ತೀರದ ಪಕ್ಕದಲ್ಲಿ ಕುಳಿತುಕೊಂಡು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಬಹುದು.

ಐಕಾನಿಕ್ ಹೆಗ್ಗುರುತು

ಕನ್ಯಾಕುಮಾರಿಯು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರದರ್ಶಿಸುವ ಅನೇಕ ಪ್ರಸಿದ್ಧ ತಾಣಗಳನ್ನು ಹೊಂದಿದೆ. ಹೆಚ್ಚಿನ ಸ್ಥಳಗಳು ಕಡಿಮೆ ಪ್ರವೇಶ ಶುಲ್ಕವನ್ನು ಹೊಂದಿವೆ ಅಥವಾ ಉಚಿತ ಪ್ರವೇಶವನ್ನು ನೀಡುತ್ತವೆ.
ಹಿಂದೂ ಸಂತ ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ ನಿರ್ಮಿಸಲಾದ ವಿವೇಕಾನಂದ ರಾಕ್ ಮೆಮೋರಿಯಲ್‌ ಗೆ ಹೋಗಲು ದೋಣಿಯಲ್ಲಿ ತೆರಳಬೇಕು. ಈಲ್ಲಿ ಅದ್ಭುತವಾದ ನೋಟಗಳಲ್ಲದೆ, ಧ್ಯಾನ ಮಂದಿರಕ್ಕೂ ಭೇಟಿ ನೀಡಬಹುದು.

ಪ್ರಾಚೀನ ತಮಿಳು ಕವಿ ತಿರುವಳ್ಳುವರ್ ಅವರನ್ನು ಗೌರವಿಸುವ ತಿರುವಳ್ಳುವರ್ ಪ್ರತಿಮೆ ಕನ್ಯಾಕುಮಾರಿ ಕರಾವಳಿಯ ಹೊರವಲಯದಲ್ಲಿದೆ. ಈ ಬೃಹತ್ ರಚನೆಯು ನಿಮ್ಮ ಬಜೆಟ್ ಅನ್ನು ಮೀರಿಸುವುದಿಲ್ಲ. ಅಲ್ಲದೇ ಅತ್ಯಂತ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡುತ್ತದೆ.


ಪ್ರಕೃತಿಯ ನಡುವೆ ಸುಂದರ ಸಮಯ

ಕನ್ಯಾಕುಮಾರಿಯಲ್ಲಿ ಸುಂದರವಾದ ಪ್ರಕೃತಿಕ ತಾಣಗಳಿಗೆ ಕೊರತೆಯಿಲ್ಲ, ಆದ್ದರಿಂದ ಪ್ರಕೃತಿ ಪ್ರಿಯರು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಈ ಪ್ರದೇಶವು ಸುಂದರವಾದ ಕಡಲತೀರಗಳಿಂದ ಹಿಡಿದು ಸೊಂಪಾದ ಭೂದೃಶ್ಯಗಳವರೆಗೆ ಎಲ್ಲವನ್ನೂ ನೀಡುತ್ತದೆ.

ಕನ್ಯಾಕುಮಾರಿ ಬೀಚ್ ನಲ್ಲಿ ಸೂರ್ಯನ ಸ್ನಾನ ಅಥವಾ ಸಮುದ್ರದಲ್ಲಿ ಈಜಲು ಕೆಲವು ಗಂಟೆಗಳ ಕಾಲ ಕಳೆಯಬಹುದು. ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ನೋಡುತ್ತಾ ಧ್ಯಾನ ಮಗ್ನರಾಗಿ ಕುಳಿತುಕೊಳ್ಳಬಹುದು. ಕನ್ಯಾಕುಮಾರಿಯಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಸುಚಿಂದ್ರಂ ದೇವಸ್ಥಾನದ ಕೊಳ ಪ್ರಶಾಂತ ವಾತಾವರಣದ ಮಧ್ಯ ಇದೆ. ಪುರಾತನ ದೇವಾಲಯಗಳಿಂದ ಆವೃತವಾಗಿದೆ. ಇದು ಸುಮ್ಮನೆ ನಡಿಗೆ, ಧ್ಯಾನಕ್ಕಾಗಿ ಸೂಕ್ತ ಅವಕಾಶವನ್ನು ಕಲ್ಪಿಸುತ್ತದೆ.

ವೈಭವದ ಸಾಂಸ್ಕೃತಿಕ ಪರಂಪರೆ

ಕನ್ಯಾಕುಮಾರಿ ನಗರವು ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ನೀಡುತ್ತದೆ. ಕನ್ಯಾಕುಮಾರಿ ಅಮ್ಮನ್ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಯಾತ್ರಿಕರನ್ನು ಆಹ್ವಾನಿಸುತ್ತದೆ. ದೇವಾಲಯದ ಎತ್ತರದ ಗೋಪುರ, ಸಂಕೀರ್ಣವಾದ ಕೆತ್ತಿದ ಕಂಬಗಳು ಈ ಪ್ರದೇಶದಲ್ಲಿ ಅನುಸರಿಸುವ ಸಂಪ್ರದಾಯಗಳು, ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.


ಇದನ್ನೂ ಓದಿ: Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

ಸ್ಥಳೀಯ ಖಾದ್ಯ ರುಚಿ

ಬಜೆಟ್ ಸ್ನೇಹಿ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಕಲಾಕೃತಿಗಳನ್ನು ಇಲ್ಲಿ ಖರೀದಿ ಮಾಡಬಹುದು, ಜೊತೆಗೆ ಸ್ಥಳೀಯ ತಿನಿಸುಗಳು, ಸಮುದ್ರಾಹಾರ ತಿಂಡಿಗಳು, ಬಾಳೆಹಣ್ಣು ಚಿಪ್ಸ್, ತೆಂಗಿನಕಾಯಿ ಸಿಹಿತಿಂಡಿಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ.

Continue Reading

ದೇಶ

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Bomb Threat: ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಸೋಮವಾರ (ಮೇ 6) ಬೆದರಿಕೆ ಇ ಮೇಲ್‌ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸರು ತ್ವರಿತ ತಪಾಸಣೆಗೆ ಮುಂದಾಗಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕೆಲವು ದಿನಗಳ ಹಿಂದೆ ದೆಹಲಿ- ಎನ್‌ಸಿಆರ್ (Delhi NCR) ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ (Schools) ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ (Bomb Threat) ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಗುಜರಾತ್‌ನಲ್ಲಿ ಈ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ.

VISTARANEWS.COM


on

Bomb Threat
Koo

ಗಾಂಧಿನಗರ: ಕೆಲವು ದಿನಗಳ ಹಿಂದೆ ದೆಹಲಿ- ಎನ್‌ಸಿಆರ್ (Delhi NCR) ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ (Schools) ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ (Bomb Threat) ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಸೋಮವಾರ (ಮೇ 6) ಬೆದರಿಕೆ ಇ ಮೇಲ್‌ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸರು ತ್ವರಿತ ತಪಾಸಣೆಗೆ ಮುಂದಾಗಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕಳೆದ ವಾರ ದೆಹಲಿ-ಎನ್‌ಸಿಆರ್‌ನ ಶಾಲೆಗೆ ಬಂದ ಬಾಂಬ್ ಬೆದರಿಕೆಯ ಇ ಮೇಲ್‌ನ ಮೂಲವಾದ ರಷ್ಯಾದ ಡೊಮೇನ್ mail.ruನಿಂದಲೇ ಈ ಬೆದರಿಕೆಯನ್ನೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಪೊಲೀಸ್ ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (Bomb Detection and Disposal Squad) ತಂಡಗಳು ಶಾಲೆಗಳಲ್ಲಿ ವ್ಯಾಪಕ ಶೋಧ ನಡೆಸಿವೆ. ಸದ್ಯ ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ದೆಹಲಿ ಶಾಲೆಗಳಿಗೆ ಬೆದರಿಕೆ

ಮೇ 1ರಂದು ದೆಹಲಿ- ಎನ್‌ಸಿಆರ್ ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಾಂಬ್ ಬೆದರಿಕೆ ಇ ಮೇಲ್ ಸ್ವೀಕರಿಸಿದ ಶಾಲೆಗಳೆಂದರೆ – ಚಾಣಕ್ಯಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್, ದ್ವಾರಕಾ ಜಿಲ್ಲೆಯ ಡಿಪಿಎಸ್ ಶಾಲೆ, ದಕ್ಷಿಣದ ಬಸಂತ್ ಕುಂಜ್ ಪ್ರದೇಶದಲ್ಲಿರುವ ಡಿಎವಿ ಶಾಲೆ, ಅಮಿಟಿ ಸ್ಕೂಲ್, ಸಾಕೇತ್, ನವದೆಹಲಿಯ ಸಂಸ್ಕೃತಿ ಶಾಲೆ ಮುಂತಾದವು. ಸಂಸ್ಕೃತಿಯು ದೆಹಲಿಯ ಅತ್ಯಂತ ಉನ್ನತ ಮಟ್ಟದ ಶಾಲೆಗಳಲ್ಲಿ ಒಂದು.

ಇದನ್ನೂ ಓದಿ: Bomb Threat: ದೆಹಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ಮಾಡಿದವ 16 ವರ್ಷದ ಪೋರ?

ಬಾಂಬ್‌ ದಾಳಿ ಕುರಿತ ಬೆದರಿಕೆ ಇ ಮೇಲ್‌ಗಳು ರವಾನೆಯಾಗುತ್ತಲೇ ಪೊಲೀಸರು ಎಚ್ಚೆತ್ತುಕೊಂಡರು. ಕೂಲಂಕಷ ತನಿಖೆ, ಪರಿಶೀಲನೆ ನಡೆಸಿದ ಪೊಲೀಸರು, ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಪೋಷಕರು, ಶಾಲೆಗಳ ಆಡಳಿತ ಮಂಡಳಿಯು ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಚೆಂಡೆಂದು ಭಾವಿಸಿ ಬಾಂಬ್‌ ಜತೆ ಮಕ್ಕಳ ಆಟ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಒಂದು ದಿನ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಬಾಂಬ್‌ ಸ್ಫೋಟಗೊಂಡಿದೆ. ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಗುವೊಂದು ಮೃತಪಟ್ಟಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಪಾಂಡುವಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಚ್ಚಾ ಬಾಂಬ್‌ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗಿದೆ. ಇನ್ನು ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಚ್ಚಾ ಬಾಂಬ್‌ ಅನ್ನು ಚೆಂಡು ಎಂದು ಭಾವಿಸಿ ಎತ್ತಿಕೊಂಡಿದ್ದಾರೆ. ಆಗ ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ ಪುಟ್ಟ ಕಂದಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಗಾಯಗೊಂಡ ಇಬ್ಬರಲ್ಲಿ ಒಬ್ಬ ತನ್ನ ಬಲಗೈಯನ್ನೇ ಕಳೆದುಕೊಂಡಿದ್ದಾನೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಈ ಕಚ್ಚಾ ಬಾಂಬ್‌ ಎಲ್ಲಿಂದ ಬಂತು? ಯಾರು ಎಸೆದರು ಎಂಬುದು ತನಿಖೆಯಲ್ಲಿ ತಿಳಿಯಬೇಕಾಗಿದೆ.

Continue Reading

Lok Sabha Election 2024

Lok Sabha Election 2024: ಘಟಾನುಘಟಿಗಳ ಸ್ಪರ್ಧೆ; ಮೇ 7ರ ಮೂರನೇ ಹಂತದ ಪೈಪೋಟಿಯ ಚಿತ್ರಣ ಇಲ್ಲಿದೆ

ಲೋಕಸಭಾ ಚುನಾವಣೆ 2024ರ 3ನೇ ಹಂತದ ಮತದಾನ ಮೇ 7 ರಂದು ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಎಸ್‌ಪಿಯ ಅಖಿಲೇಶ್‌ ಯಾದವ್‌ ಪತ್ನಿ ಡಿಂಪಲ್ ಯಾದವ್, ಮಧ್ಯ ಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಸೇರಿದಂತೆ ಹಲವು ಪ್ರಮುಖರ ಅದೃಷ್ಟ ಪರೀಕ್ಷೆ (Lok Sabha Election 2024) ನಡೆಯಲಿದೆ. ಈ ಕುರಿತ ಚಿತ್ರಣ ಇಲ್ಲಿದೆ.

VISTARANEWS.COM


on

By

Lok Sabha Elections-2024
Koo

ಲೋಕಸಭಾ ಚುನಾವಣೆ 2024ರ (Lok Sabha Election 2024) 3ನೇ ಹಂತದ (3rd phase) ಮತದಾನ (voting) ಮೇ 7ರಂದು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 95 ಸ್ಥಾನಗಳಿಗೆ ನಡೆಯಲಿದೆ. ಈ ಬಾರಿ ಕಣದಲ್ಲಿರುವ ಹಲವು ಪ್ರಮುಖ ನಾಯಕರ ಅದೃಷ್ಟ ಪರೀಕ್ಷೆ ನಡೆಯಲಿದೆ.

ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಬಂಡಾಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ( KS Eshwarappa), ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia), ಡಿಂಪಲ್ ಯಾದವ್ (Dimple Yadav), ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮತ್ತು ಸುಪ್ರಿಯಾ ಸುಳೆ (Supriya Sule) ಸೇರಿದ್ದಾರೆ.


2024 ರ ಲೋಕಸಭಾ ಚುನಾವಣೆಯ 3ನೇ ಹಂತದಲ್ಲಿ ಸ್ಪರ್ಧಿಸುವ ಪ್ರಮುಖ ಪಕ್ಷಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಸೇರಿವೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಅಮಿತ್ ಶಾ

ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಗಾಂಧಿನಗರದಿಂದ ಎರಡನೇ ಬಾರಿಗೆ ಕಣಕ್ಕಿಳಿದಿರುವ ಅಮಿತ್ ಶಾ ಅವರಿಗೆ ಕಾಂಗ್ರೆಸ್‌ನ ಸೋನಾಲ್ ಪಟೇಲ್ ಸ್ಪರ್ಧೆ ನೀಡುತ್ತಿದ್ದಾರೆ. 1989ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಜೇಯವಾಗಿದೆ. 2019ರ ಚುನಾವಣೆಯಲ್ಲಿ ಅಮಿತ್ ಶಾ ಅವರು 5.55 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಸಿ.ಜೆ. ಚಾವ್ಡಾ ಅವರನ್ನು ಸೋಲಿಸಿದ್ದರು.

ಡಿಂಪಲ್ ಯಾದವ್

ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಅವರು 2024ರ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ‘ಮೈನ್‌ಪುರಿ’ಯಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರ ಸಮಾಜವಾದಿ ಪಕ್ಷದ ಭದ್ರಕೋಟೆ. ಡಿಂಪಲ್‌ ಯಾದವ್‌ ಅವರು ಎಸ್ಪಿ ವರಿಷ್ಠ ನಾಯಕ ಅಖಿಲೇಶ್‌ ಯಾದವ್‌ ಅವರ ಪತ್ನಿ. 2022ರಲ್ಲಿ ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಮರಣದ ಅನಂತರ ಅವರ ಸೊಸೆ ಡಿಂಪಲ್ ಯಾದವ್ ಅವರು ಉಪಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದರು. ಡಿಂಪಲ್ ಯಾದವ್ ಅವರು ಮೂರು ಬಾರಿ ಸಂಸದರಾಗಿದ್ದಾರೆ. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿ ಜೈವೀರ್ ಸಿಂಗ್ ಕಣದಲ್ಲಿ ಇದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2024ರ ಲೋಕಸಭಾ ಚುನಾವಣೆಯ 3ನೇ ಹಂತದಲ್ಲಿ ಮೇ 7ರಂದು ನಡೆಯಲಿರುವ ಮಧ್ಯಪ್ರದೇಶದ ಗುಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ನ ರಾವ್ ಯದ್ವೇಂದ್ರ ಸಿಂಗ್ ಅವರ ವಿರುದ್ಧ ಕಣದಲ್ಲಿ ಇದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣ ಪಾಲ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಸೋಲಿಸಿದ್ದರು. ಆ ಬಳಿಕ ಸಿಂಧಿಯಾ ಬಿಜೆಪಿ ಸೇರಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ವಿದಿಶಾ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಮಧ್ಯಪ್ರದೇಶದಲ್ಲಿ ಬಹುಕಾಲ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪ್ ಭಾನು ಶರ್ಮಾ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧಿಸುತ್ತಿದ್ದಾರೆ.

ಸುಪ್ರಿಯಾ ಸುಳೆ

ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಪವಾರ್‌ vs ಪವಾರ್‌ ಈ ಬಾರಿಯ ವಿಶೇಷ. ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಈಗ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿದ್ದಾರೆ. ಹಾಗಾಗಿ ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ. ಹಾಲಿ ಸಂಸದೆ ಸುಪ್ರಿಯಾ ಸುಳೆ ಈ ಕ್ಷೇತ್ರದಲ್ಲಿ ಮೂರು ಬಾರಿ ಸ್ಪರ್ಧಿಸಿ ಗೆದ್ದಿದ್ದರು.

ಕರ್ನಾಟಕದಲ್ಲಿ ಬಿಜೆಪಿ ಹಿರಿಯ ನಾಯಕ ಕೆ ಎಸ್‌ ಈಶ್ವರಪ್ಪ ಅವರು ಈ ಬಾರಿ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿಸ ಸಂಸದ ಬಿ ವೈ ರಾಘವೇಂದ್ರ ಸ್ಪರ್ಧಿಸುತ್ತಿದ್ದಾರೆ.

3ನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳು

ಅಸ್ಸಾಂ: ಧುಬ್ರಿ, ಕೊಕ್ರಜಾರ್, ಬರ್ಪೇಟಾ, ಗೌಹಾಟಿ, ಬಿಹಾರದ ಝಂಜರ್ಪುರ್, ಸುಪೌಲ್, ಅರಾರಿಯಾ, ಮಾಧೆಪುರ, ಖಗಾರಿಯಾ

ಛತ್ತೀಸ್‌ಗಢ: ಸರ್ಗುಜಾ, ರಾಯ್‌ಗಢ, ಜಾಂಜ್‌ಗೀರ್-ಚಂಪಾ, ಕೊರ್ಬಾ, ಬಿಲಾಸ್‌ಪುರ್, ದುರ್ಗ್, ರಾಯ್‌ಪುರ್.

ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು

ಗೋವಾ: ಉತ್ತರ ಗೋವಾ, ದಕ್ಷಿಣ ಗೋವಾ, ಗುಜರಾತ್ ನ ಕಚ್ಛ್, ಬನಸ್ಕಾಂತ, ಪಟಾನ್, ಮಹೇಶಾನಾ, ಸಬರ್ಕಾಂತ, ಗಾಂಧಿನಗರ, ಅಹಮದಾಬಾದ್ ಪೂರ್ವ, ಅಹಮದಾಬಾದ್ ಪಶ್ಚಿಮ, ಸುರೇಂದ್ರನಗರ, ರಾಜ್‌ಕೋಟ್, ಪೋರಬಂದರ್, ಜಾಮ್‌ನಗರ, ಜುನಾಗಢ, ಅಮ್ರೇಲಿ, ಭಾವನಗರ, ಆನಂದ್, ಖೇಡಾ, ಪಂಚಮಹಲ್, ದಾಹೋದ್, ವಡೋದರ, ಛೋಟಾ ಉದಯಪುರ, ಭರೂಚ್, ಭರೂಚ್, ನವಸಾರಿ, ವಲ್ಸಾದ್

ಕರ್ನಾಟಕ: ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ

ಮಧ್ಯಪ್ರದೇಶ: ಬೇತುಲ್, ಮೊರೆನಾ, ಭಿಂಡ್, ಗ್ವಾಲಿಯರ್, ಗುಣ, ಸಾಗರ್, ವಿದಿಶಾ, ಭೋಪಾಲ್, ರಾಜ್‌ಗಢ್, ಬೇತುಲ್

ಮಹಾರಾಷ್ಟ್ರ: ಬಾರಾಮತಿ, ರಾಯಗಢ, ಧರಾಶಿವ, ಲಾತೂರ್ (SC), ಸೋಲಾಪುರ (SC), ಮಾಧಾ, ಸಾಂಗ್ಲಿ, ರತ್ನಗಿರಿ-ಸಿಂಧುದುರ್ಗ, ಕೊಲ್ಲಾಪುರ, ಹತ್ಕನಂಗಲೆ

ಉತ್ತರ ಪ್ರದೇಶ: ಸಂಭಾಲ್, ಹತ್ರಾಸ್, ಆಗ್ರಾ (SC), ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಇಟಾಹ್, ಬುಡೌನ್, ಅಯೋನ್ಲಾ, ರಾಯ್‌ ಬರೇಲಿ

ಪಶ್ಚಿಮ ಬಂಗಾಳ: ಮಾಲ್ಡಾ ಉತ್ತರ, ಮಾಲ್ಡಾ ದಕ್ಷಿಣ, ಜಂಗಿಪುರ, ಮುರ್ಷಿದಾಬಾದ್

ಕಣದಲ್ಲಿ 1,351 ಅಭ್ಯರ್ಥಿಗಳು

ಮೇ 7ರಂದು ನಡೆಯಲಿರುವ ಮೂರನೇ ಹಂತದ ಲೋಕಸಭೆ ಚುನಾವಣೆಯಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 1,351 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.

ಇದನ್ನೂ ಓದಿ: Amethi Unrest: ಕಾಂಗ್ರೆಸ್‌ ಕಚೇರಿ ಮೇಲೆ ಕಿಡಿಗೇಡಿಗಳಿಂದ ಅಟ್ಯಾಕ್‌; ಬಿಜೆಪಿಯ ದುಷ್ಕೃತ್ಯ ಎಂದು ಆರೋಪ

ಅತೀ ಹೆಚ್ಚು ನಾಮಪತ್ರ

ಮೂರನೇ ಹಂತದಲ್ಲಿ ಗುಜರಾತ್ 26 ಸಂಸದೀಯ ಕ್ಷೇತ್ರಗಳಿಂದ ಗರಿಷ್ಠ 658 ನಾಮನಿರ್ದೇಶನಗಳನ್ನು ಹೊಂದಿತ್ತು, ಅನಂತರ ಮಹಾರಾಷ್ಟ್ರವು 11 ಸ್ಥಾನಗಳಿಂದ 519 ನಾಮನಿರ್ದೇಶನಗಳನ್ನು ಹೊಂದಿದೆ. ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರಕ್ಕೆ ಗರಿಷ್ಠ 77 ನಾಮಪತ್ರಗಳು ಬಂದಿದ್ದು, ಛತ್ತೀಸ್‌ಗಢದ ಬಿಲಾಸ್‌ಪುರ ಕ್ಷೇತ್ರಕ್ಕೆ 68 ನಾಮಪತ್ರಗಳು ಬಂದಿವೆ ಎಂದು ಚುನಾವಣಾ ಸಮಿತಿ ತಿಳಿಸಿದೆ.

Continue Reading
Advertisement
viral news
ಕ್ರಿಕೆಟ್2 mins ago

Viral News: ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ಸಾವು

Sunita Williams
ವಿದೇಶ17 mins ago

Sunita Williams: 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸುನೀತಾ ವಿಲಿಯಮ್ಸ್‌ ಸಜ್ಜು

Namma Metro
ಬೆಂಗಳೂರು32 mins ago

Namma Metro : ದೆಹಲಿ ನಂತರ ನಮ್ಮ ಮೆಟ್ರೋದಲ್ಲೂ ಯುವಕ-ಯುವತಿಯ ಡಿಂಗ್‌ ಡಾಂಗ್‌!

Prajwal Revanna Case Who leaked the pen drive Devaraje Gowda gives evidence to SIT
ಕ್ರೈಂ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸಂಗಿಲ್ಲ; ಕೋರ್ಟ್‌ ತಡೆಯಾಜ್ಞೆ

ICSE Results 202
ಶಿಕ್ಷಣ1 hour ago

CISCE Results 2024: ಸಿಐಎಸ್‌ಸಿಇಯ 10 & 12ನೇ ತರಗತಿಯ ಫಲಿತಾಂಶ ಪ್ರಕಟ; ಹೀಗೆ ಪರಿಶೀಲಿಸಿ

MS Dhoni
ಕ್ರಿಕೆಟ್1 hour ago

MS Dhoni: ಧೋನಿಯ ಕ್ಲೀನ್​ ಬೌಲ್ಡ್​ ಕಂಡು ಬೇಸರಗೊಂಡ ಅಭಿಮಾನಿಗಳು; ವಿಡಿಯೊ ವೈರಲ್​

Viral News
ವೈರಲ್ ನ್ಯೂಸ್1 hour ago

Viral News: ಅವಳಿ-ತ್ರಿವಳಿ ಅಲ್ಲ.. ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ

Kanyakumari Tour
ಪ್ರವಾಸ1 hour ago

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

Cauvery Theatre bengaluru another single screen close
ಸಿನಿಮಾ2 hours ago

Cauvery Theatre: ಬೆಂಗಳೂರಿನಲ್ಲಿ ಪ್ರದರ್ಶನ ನಿಲ್ಲಿಸಿದ ʻಕಾವೇರಿʼ ಥಿಯೇಟರ್! ಮುಂದೇನು?

Bomb Threat
ದೇಶ2 hours ago

Bomb Threat: ದೆಹಲಿ ಬಳಿಕ ಇದೀಗ ಅಹಮದಾಬಾದ್​ನ ಶಾಲೆಗಳಿಗೂ ಬಾಂಬ್​ ಬೆದರಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ9 hours ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ19 hours ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ20 hours ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ20 hours ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ2 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ3 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ3 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ4 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ4 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

ಟ್ರೆಂಡಿಂಗ್‌