Site icon Vistara News

ಆಲ್ಟ್‌ ನ್ಯೂಸ್‌ಸಹ ಸ್ಥಾಪಕ ಮೊಹಮ್ಮದ್‌ ಜುಬೇರ್‌ ಬೆಂಗಳೂರು ಮನೆ ಮಹಜರ್‌

alt news co founder mohammed zubair in bengaluru

ಬೆಂಗಳೂರು: ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುವ ಪೋಸ್ಟ್‌ ಮಾಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ನನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಬೆಂಗಳೂರಿನ ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯ ಕಾವಲ್ ಭೈರಸಂದ್ರದ ಚಿನ್ನಣ್ಣ ಲೇಔಟ್‌ನಲ್ಲಿರುವ ಮನೆಗೆ ಗುರುವಾರ ಕರೊದೊಯ್ದ ಪೊಲೀಸರು ಮಹಜರ್‌ ನಡೆಸಿದ್ದಾರೆ. ಆಲ್ಟ್‌ ನ್ಯೂಸ್‌ (alt news) ಮಾಧ್ಯಮದಲ್ಲಿ ಹಿಂದುತ್ವ ವಿರೋಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನೇಕ ಸುದ್ದಿಗಳನ್ನು ಪೋಸ್ಟ್‌ ಮಾಡಲಾಗುತ್ತಿತ್ತು. ಇದು ವಿವಾದದ ಕಿಡಿ ಎಬ್ಬಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್‌ ಇಲಾಖೆಯ ಇಂಟಲಿಜೆನ್ಸ್‌ ಫ್ಯೂಷನ್‌ ಹಾಗೂ ಸ್ಟ್ರಾಟಜಿಕ್‌ ಆಪರೇಷನ್ ವಿಭಾಗ ಜುಬೇರ್‌ನನ್ನು ಜೂನ್‌ 27ರಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಈತ ದೇಶದಲ್ಲಿ ಸಮುದಾಯಗಳ ನಡುವಿನ ಸೌಹಾರ್ದತೆ ಹಾಳು ಮಾಡುವಂತಹ ಟ್ವೀಟ್‌ ಮಾಡಿದ್ದಾನೆ ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆದರೆ, ಈ ಪ್ರಕರಣದ ಕುರಿತು ವಿಚಾರಣೆಗೆ ಜುಬೇರ್‌ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದರು. 2018ರಲ್ಲಿ ಉಪಯೋಗಿಸಿದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪೊಲೀಸರ ವಶಕ್ಕೆ ನೀಡಲು ಜುಬೇರ್‌ ನಿರಾಕರಿಸಿದ್ದ. ಪೊಲೀಸರ ತನಿಖೆಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ, ಅಲ್ಲದೆ ತನಿಖೆಗೆ ಮುಖ್ಯವಾಗಿರುವ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪ್ರಸ್ತುತಪಡಿಸುತ್ತಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.

ಒಂದು ದಿನದ ಕಸ್ಟಡಿಯ ಅವಧಿ ಮುಕ್ತಾಯದ ವೇಳೆಗೆ ಪಟಿಯಾಲ ನ್ಯಾಯಾಲಯದ ನ್ಯಾಯಾಧೀಶರಾದ ಸ್ನಿಗ್ಧ ಸರ್ವಾರಿಯ ಎದುರು ಹಾಜರುಪಡಿಸಲಾಗಿತ್ತು. ತನಿಖೆಯನ್ನು ಮುಂದುವರಿಸಲು ಪೊಲೀಸರು ಇನ್ನೂ ಐದು ದಿನಗಳ ಅನುಮತಿ ಕೇಳಿದ್ದರು. ಅದಕ್ಕೆ ನ್ಯಾಯಾಧೀಶರು 4 ದಿನಗಳ ಕಸ್ಟಡಿಗೆ ಅನುಮತಿ ನೀಡಿದ್ದರು. ಸದ್ಯ ಜುಲೈ 2ರವರೆಗೂ ಕಸ್ಟಡಿ ಅವಧಿಯಿದೆ.

ಜುಬೇರ್‌ನನ್ನು ಬೆಂಗಳೂರಿಗೆ ಕರೆತಂದಿರುವ ಪೊಲೀಸರು ಬೆಂಗಳೂರು ಪೊಲೀಸರ ಸಹಾಯದೊಂದಿಗೆ ಮಹಜರ್‌ ಮಾಡುತ್ತಿದ್ದಾರೆ. ಮೊಬೈಲ್ ಹಾಗೂ ಲ್ಯಾಪ್ ಟಾಟ್‌ ಸೇರಿ ಜುಬೇರ್‌ಗೆ ಸೇರಿದ ಇನ್ನಿತೆ ವಸ್ತುಗಳ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version