ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bangalore Mysore Expressway) ದಿನೇ ದಿನೆ ದುಬಾರಿಯಾಗುತ್ತಿದೆ. ಜನ ಸಾಮಾನ್ಯರಿಗೆ ಈ ದಾರಿಯೇ ಅಲ್ಲ ಎಂಬಂತೆ ಭಾಸವಾಗುತ್ತಿದೆ. ಈಗಾಗಲೇ ಹೆದ್ದಾರಿ ಆರಂಭದಲ್ಲಿ ಭಾರಿ ಪ್ರಮಾಣದ ಟೋಲ್ ಅನ್ನು ಕಟ್ಟಬೇಕಿದೆ. ಅಲ್ಲಿ ಈ ತಿಂಗಳ ಆರಂಭದಲ್ಲಿ ಹಿಂದಿನ ದರಕ್ಕಿಂತ ಶೇಕಡಾ 22ರಷ್ಟು ಟೋಲ್ ಶುಲ್ಕವನ್ನು (Toll Tariff) ಏರಿಸಿತ್ತು. ಇದನ್ನು ಸುಧಾರಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ಬರೆ ಬೀಳುತ್ತಿದೆ. ಜುಲೈ 1ರಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭವಾಗುತ್ತಿದೆ.
ಮಂಡ್ಯ ಜಿಲ್ಲೆಯ 55.134 ಕಿ.ಮೀ. ವ್ಯಾಪ್ತಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಫ್ಲಾಜಾ ಇದಾಗಿದ್ದು, ಟೋಲ್‌ನ ಶುಲ್ಕ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಈ ಭಾಗದಲ್ಲಿ ಓಡಾಡಬೇಕಾದರೆ ಜೇಬು ತುಂಬಾ ಹಣವನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.
ಇದನ್ನೂ ಓದಿ: Rahul Gandhi : ಕಾಂಗ್ರೆಸ್ ನಾಯಕರ ವಿರುದ್ಧ ವಿಡಿಯೊ ಪೋಸ್ಟ್ ಮಾಡಿದ್ದ ಅಮಿತ್ ಮಾಳವೀಯ ವಿರದ್ಧ FIR
ಟೋಲ್ ಶುಲ್ಕದ ವಿವರ ಹೀಗಿದೆ
ಏಕಮುಖ ಸಂಚಾರ:
ಕಾರು, ಜೀಪು, ವ್ಯಾನ್- 155 ರೂಪಾಯಿ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂಪಾಯಿ
ಟ್ರಕ್/ಬಸ್ (ಎರಡು ಆ್ಯಕ್ಸೆಲ್ ವಾಹನ)- 525 ರೂಪಾಯಿ
ಮೂರು ಆ್ಯಕ್ಸೆಲ್ ವಾಣಿಜ್ಯ ವಾಹನ- 575 ರೂಪಾಯಿ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆ್ಯಕ್ಸೆಲ್ ವಾಹನ (4ರಿಂದ 6 ಆ್ಯಕ್ಸೆಲ್)- 825 ರೂಪಾಯಿ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆ್ಯಕ್ಸೆಲ್)- 1005 ರೂ
ಅದೇ ದಿನ ವಾಪಸಾದರೆ?
ಕಾರು, ಜೀಪು, ವ್ಯಾನ್- 235 ರೂಪಾಯಿ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್- 375 ರೂಪಾಯಿ
ಟ್ರಕ್/ಬಸ್ (ಎರಡು ಆ್ಯಲೆಕ್ಸ್) 790 ರೂಪಾಯಿ
ಮೂರು ಆ್ಯಕ್ಸೆಲ್ ವಾಣಿಜ್ಯ ವಾಹನ – 860 ರೂಪಾಯಿ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆ್ಯಕ್ಸೆಲ್ ವಾಹನ (4ರಿಂದ 6 ಆ್ಯಕ್ಸೆಲ್) – 1240 ರೂಪಾಯಿ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆ್ಯಕ್ಸೆಲ್) – 1510 ರೂಪಾಯಿ
ಮಂಡ್ಯ ಜಿಲ್ಲೆ ಒಳಗೆ ಸಂಚಾರಕ್ಕೆ ಹೇಗಿದೆ ದರ?
ಕಾರು, ಜೀಪು, ವ್ಯಾನ್- 80 ರೂಪಾಯಿ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 125 ರೂಪಾಯಿ
ಟ್ರಕ್/ಬಸ್ (ಎರಡು ಆ್ಯಕ್ಸೆಲ್)- 265 ರೂಪಾಯಿ
ಮೂರು ಆ್ಯಕ್ಸೆಲ್ ವಾಣಿಜ್ಯ ವಾಹನ – 285 ರೂಪಾಯಿ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆ್ಯಕ್ಸೆಲ್ ವಾಹನ (4ರಿಂದ 6 ಆ್ಯಕ್ಸೆಲ್) – 415 ರೂಪಾಯಿ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆ್ಯಕ್ಸೆಲ್) – 505 ರೂಪಾಯಿ
ಇದನ್ನೂ ಓದಿ: Weather Report : ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭರ್ಜರಿ ವರ್ಷಧಾರೆ; ಹೆಚ್ಚು ಕಡೆ ಬರಿ ಮೋಡ!
ಈ ರೀತಿ ದರ ನಿಗದಿ ಮಾಡಿರುವುದಕ್ಕೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನಾವು ವಾಹನವನ್ನು ಚಲಾಯಿಸುವುದಾದರೂ ಹೇಗೆ? ಈ ಹೆದ್ದಾರಿ ಬಹಳವೇ ದುಬಾರಿಯಾಗುತ್ತಿದೆ. ನಾವೇನು ಹೀಗೆ ಮಾಡಿ ಎಂದು ಕೇಳಿರಲಿಲ್ಲ. ಈಗ ನಮಗೇ ಬರೆ ಹಾಕಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.