ಬೆಂಗಳೂರು: ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧ ಆರೋಪಿಗಳ ಪೊಲೀಸ್ ಕಸ್ಟಡಿ ಬುಧವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಸಿಸಿಬಿ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ವೇಳೆ ಇವರು ಅಲ್‌ಖೈದಾಗೆ ಸೇರ್ಪಡೆಗೊಳ್ಳಲು ಹಲವು ರೀತಿಯ ಪರೀಕ್ಷೆಗಳು ನಡೆದಿವೆ ಎಂದು ತಿಳಿದುಬಂದಿದೆ.
ನಗರದಲ್ಲಿ ಶಂಕಿತ ಉಗ್ರರಾದ ಅಖ್ತರ್ ಹುಸೇನ್ ಮತ್ತು ಜುಬಾ ಆರೋಪಿಗಳನ್ನು ಸಿಸಿಬಿ ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಹತ್ತು ದಿನ ಕಸ್ಟಡಿಗೆ ಸಿಸಿಬಿ ಪಡೆದುಕೊಂಡು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಮಹತ್ವದ ದಾಖಲೆಗಳನ್ನು ಕಲೆ ಹಾಕಲಾಗಿದೆ ಎಂದು ಹೇಳಲಾಗಿದೆ.
ಬುಧವಾರ (ಆ.3) ಸಿಸಿಬಿ ಪೊಲೀಸರ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಸಿಬಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದೆ. ಸಿಸಿಬಿ, ಎಸಿಪಿ ಮತ್ತು ಪ್ರಕರಣದ ತನಿಖಾಧಿಕಾರಿ ಆಗಿರುವ ಧರ್ಮೇಂದ್ರ ಶಂಕಿತರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಆರೋಪಿಗಳಿಂದ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದು ರಿಟ್ರೀವ್ ಮಾಡಲು ಸಿಸಿಬಿ ನೀಡಿದೆ. ಸಂಪೂರ್ಣ ಡೇಟಾ ರಿಟ್ರೀವ್ ಆದ ನಂತರ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.
ಇದನ್ನೂ ಓದಿ | Terror Accused | ಶಂಕಿತ ಉಗ್ರರಿಂದ ಹಳೇ ಬೇಸಿಕ್ ನೋಕಿಯಾ ಬಳಕೆ; ಸಿಸಿಬಿಗೆ ಮೊಬೈಲ್ ರಿಟ್ರೀವ್ ತಲೆಬಿಸಿ
ಇಬ್ಬರು ಆರೋಪಿಗಳು ಅಲ್ ಖೈದಾಗೆ ಸೇರ್ಪಡೆಗೊಂಡಿದ್ದರು ಎಂದು ತನಿಖೆ ವೇಳೆ ಧೃಡಪಟ್ಟಿದೆ ಎನ್ನಲಾಗಿದೆ. ಇವರನ್ನು ಸೇರ್ಪಡೆ ಮಾಡಿಕೊಳ್ಳಲು ಹಲವಾರು ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಪೂರ್ವಾಪರಗಳ ಬಗ್ಗೆ ಸಾಕಷ್ಟು ಪರಿಶೀಲನೆಯನ್ನು ಮಾಡಿಕೊಂಡ ಬಳಿಕವಷ್ಟೇ ಸೇರಿಸಿಕೊಳ್ಳಲಾಗಿದೆ ಎಂಬ ಅಂಶ ತನಿಖೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈ ಇಬ್ಬರನ್ನು ಅಲ್‌ಖೈದಾಗೆ ಸೇರಿಸಿಕೊಂಡಿದ್ದು ಬೇರೆ ಬೇರೆ ಹ್ಯಾಂಡಲರ್‌ಗಳು ಎಂದು ತಿಳಿದು ಬಂದಿದೆ. ಹ್ಯಾಂಡ್ಲರ್ಸ್ ತಮ್ಮ ಐಡೆಂಟಿಟಿಯನ್ನು ಬಳಸದೆ ಬೇನಾಮಿಯಾಗಿ ನೇಮಕ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಕೊಲ್ಹಾಪುರದಲ್ಲಿ ಶಂಕಿತ ಉಗ್ರರ ಕಚೇರಿಗೆ ನುಗ್ಗಿ ಪುಡಿಗಟ್ಟಿದ ಗ್ರಾಮಸ್ಥರು