Site icon Vistara News

Bank Fraud | ಹೂಡಿಕೆ ಮಾಡಿದ್ದ ಹಣ ವಾಪಸ್‌ ಕೇಳಿದರೆ ಧಮ್ಕಿ; ಕೋಆಪರೇಟಿವ್‌ ಬ್ಯಾಂಕ್‌ನಿಂದ ವಂಚನೆ ಆರೋಪ

bank

ಬೆಂಗಳೂರು: ಸಹಕಾರಿ ಬ್ಯಾಂಕ್‌ಗಳು ದೋಖಾ (Bank Fraud ) ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಆಗಾಗ ಬೆಳಕಿಗೆ ಬರುತ್ತಲೇ ಇದ್ದು, ಈಗ ಶುಶೃತಿ ಕೋಆಪರೇಟಿವ್ ಬ್ಯಾಂಕ್ ವಿರುದ್ಧ ಡೆಪಾಸಿಟ್ ಹಣ ಹಿಂದಿರುಗಿಸದ ಆರೋಪ ಕೇಳಿ ಬಂದಿದೆ.

ಠೇವಣಿದಾರರು ಹೂಡಿಕೆ ಮಾಡಿರುವ ಹಣ ವಾಪಸ್ ಕೇಳಿದರೆ ಬ್ಯಾಂಕ್‌ನವರು ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಲಾಗಿದೆ. ವಿಲ್ಸನ್ ಗಾರ್ಡನ್ ಹಾಗೂ ರಾಜಗೋಪಾಲನಗರ ಠಾಣೆಯಲ್ಲಿ ಬ್ಯಾಂಕ್ ಛೇರ್ಮನ್ ಶ್ರೀನಿವಾಸ್ ಮೂರ್ತಿ, ಆತನ ಪತ್ನಿ ಧಾರಿಣಿದೇವಿ, ಮಗಳು ಮೋಕ್ಷತಾರ ಹಾಗೂ ನಿರ್ದೇಶಕ ರತ್ನಂ ವಿರುದ್ಧ ದೂರು ದಾಖಲಾಗಿದೆ.

ಹೆಚ್ಚಿನ ಬಡ್ಡಿ ನೀಡುವ ಆಮಿಷ

ಶುಶೃತಿ ಬ್ಯಾಂಕ್‌ ಅಧಿಕಾರಿಗಳು ಬೇರೆ ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿದ್ದರು. ಮೊದಮೊದಲು ವಾರ್ಷಿಕ ಶೇ.೯ರಷ್ಟು ಬಡ್ಡಿ ನೀಡಿ ಆ ಬಳಿಕ ಶೇ. ೪ರಷ್ಟು ಬಡ್ಡಿ ನೀಡಲು ಪ್ರಾರಂಭಿಸಿದ್ದರು. ಇದರಿಂದಾಗಿ ಡೆಪಾಸಿಟ್ ವಾಪಸ್ ಪಡೆಯಲು ಠೇವಣಿದಾರರು ಮುಂದಾಗಿದ್ದಾರೆ. ಈ ವೇಳೆ ಹೂಡಿಕೆ ಮಾಡಿದ್ದ ಹಣ ಹಿಂದಿರುಗಿಸದೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ವಿಲ್ಸನ್ ಗಾರ್ಡನ್, ಪೀಣ್ಯಾ, ಚಿಕ್ಕಲಸಂದ್ರ, ರಾಜಗೋಪಾಲನಗರದಲ್ಲಿ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ಶಾಖೆ ಹೊಂದಿದ್ದು, ಸಾವಿರಾರು ಮಂದಿ ಠೇವಣಿದಾರರನ್ನು ಹೊಂದಲಾಗಿದೆ. ಮುಖ್ಯವಾಗಿ ಹಣ ಹೂಡಿಕೆದಾರರ ಪೈಕಿ ಹಿರಿಯ ನಾಗರಿಕರು, ನಿವೃತ್ತ ಸರ್ಕಾರಿ ಅಧಿಕಾರಿಗಳೇ ಹೆಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಸಹಕಾರ ಬ್ಯಾಂಕ್‌ಗಳ ಅಸಹಕಾರ

ಬೆಂಗಳೂರಿನಲ್ಲಿ ಗುರು ರಾಘವೇಂದ್ರ ಕೋಆಪರೇಟಿವ್‌ ಬ್ಯಾಂಕ್‌, ವಶಿಷ್ಠ ಕೋಆಪರೇಟಿವ್‌ ಬ್ಯಾಂಕ್‌ ಹಾಗೂ ಸಿರಿ ವೈಭವ ಪತ್ತಿನ ಸಹಕಾರಿ ಬ್ಯಾಂಕ್‌, ಯಾದಗಿರಿಯ ಶ್ರೀ ರೇವಣಸಿದ್ದೇಶ್ವರ ವಿವಿಧೋದ್ದೇಶ ಸಹಕಾರ ಸಂಘ ನಿ. ಬ್ಯಾಂಕ್‌ಗಳಲ್ಲಿ ಈಗಾಗಲೇ ವಂಚನೆಯಾಗಿದ್ದು, ಈ ಸಾಲಿಗೆ ಈಗ ಶುಶೃತಿ ಕೋಆಪರೇಟಿವ್‌ ಬ್ಯಾಂಕ್‌ ಸೇರಿದೆ.

ಇದನ್ನೂ ಓದಿ | Good news: ಬ್ಯಾಂಕ್‌ಗಳಲ್ಲಿ 100 ಕೋಟಿ ರೂ.ಗೂ ಹೆಚ್ಚಿನ ವಂಚನೆಯ ಪ್ರಕರಣಗಳ ಸಂಖ್ಯೆ ಇಳಿಕೆ

Exit mobile version