Site icon Vistara News

Assault Case : ಮಗನ ಜತೆ ಜಗಳವಾಡಿದ್ದಕ್ಕೆ ಸಿಟ್ಟು; ಬಾಲಕನಿಗೆ ಕಾಲಿನಿಂದ ಜಾಡಿಸಿ ಒದ್ದು ಕ್ರೌರ್ಯ ಮರೆದ ತಂದೆ!

Assault Case in Belgavi

ಬೆಳಗಾವಿ: ಮಗನ ಜತೆ ಜಗಳವಾಡಿದ ಬಾಲಕನ ಮೇಲೆ ತಂದೆಯೊಬ್ಬ (Assault Case) ಕ್ರೌರ್ಯ ಮರೆದಿದ್ದಾನೆ. ತನ್ನ ಮಗನೊಂದಿಗೆ ಜಗಳವಾಡಿದ ಸಿಟ್ಟಿಗೆ ಬಾಲಕನನ್ನು ಹಿಡಿದು ಕಾಲಿನಿಂದ ಒದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಬಾಲಕನ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಸ್ಮಾಯಿಲ್ ಗಫಾರ್ ಮುಲ್ಲಾ ಎಂಬಾತ 12 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ನೂರಾಣಿ ಮಸೀದಿಯಲ್ಲಿ ಘಟನೆ ನಡೆದಿದೆ. ಕಳೆದ ಜೂನ್‌ 9ರಂದು ಇಸ್ಮಾಯಿಲ್ ಮಗನ‌ ಜತೆಗೆ ಬಾಲಕನೊಬ್ಬ ಜಗಳವಾಡಿದ್ದ. ನಂತರ ಮಸೀದಿಗೆ ನಮಾಜ್ ಮಾಡಲು ತೆರಳಿದ್ದ.

ಮಗನೊಟ್ಟಿಗೆ ಜಗಳವಾಡಿದ ವಿಷಯ ತಿಳಿದ ಇಸ್ಮಾಯಿಲ್‌ ಇದೇ ಸಿಟ್ಟಿನಲ್ಲಿ ಮಸೀದಿಗೆ ತೆರಳಿ ಬಾಲಕನನ್ನು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದ. ಚಿಕ್ಕ ಹುಡುಗ ಎಂಬುದನ್ನೂ ನೋಡದೆ ಆತನನ್ನು ನೆಲಕ್ಕುರುಳಿಸಿ ಎದೆಗೆ, ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದ. ಇಸ್ಮಾಯಿಲ್‌ ಹೊಡೆತಕ್ಕೆ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದ. ಇತರರು ಬಿಡಿಸಲು ಬಂದರೂ ಇಸ್ಮಾಯಿಲ್‌ ನನ್ನ ಮಗನೊಟ್ಟಿಗೆ ಯಾಕೆ ಜಗಳವಾಡುತ್ಯಾ ಎಂದು ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಹಲ್ಲೆ ಮಾಡಿದ್ದು ಹಾಗೂ ಪಾಪಿ ಇಸ್ಮಾಯಿಲ್ ಕ್ರೌರ್ಯವೆಲ್ಲವೂ ಮಸೀದಿಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡು ಮನೆಗೆ ತೆರಳಿದ್ದ ಬಾಲಕನಿಗೆ ಪೋಷಕರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಇಸ್ಮಾಯಿಲ್ ವಿರುದ್ಧ ನಿಪ್ಪಾಣಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Dead Body Found : ಗ್ರಾಮದ ಕೆರೆಯಲ್ಲಿ ತೇಲಿ ಬಂದ ಯುವಕನ ಶವ ಕಂಡು ಜನರು ತಬ್ಬಿಬ್ಬು

ಗಡ್ಡಕ್ಕೆ ಬಣ್ಣಹಚ್ಚಿ ಮುದುಕನ ವೇಷ ಧರಿಸಿ ಪ್ರಯಾಣಿಸುತ್ತಿದ್ದ 24ರ ಯುವಕ ಅರೆಸ್ಟ್!

ನವದೆಹಲಿ: ಜೀವನದಲ್ಲಿ ದುಡಿದು ತಿನ್ನಬೇಕು ಎನ್ನುವವರಿಗೆ ಸಾವಿರ ದಾರಿಯಿರುತ್ತಾರೆ. ಆದರೆ ಇವೆಲ್ಲವನ್ನೂ ಬಿಟ್ಟು ಇಂದಿನ ಯುವ ಜನಾಂಗ ಇನ್ಯಾವುದೋ ಕೆಟ್ಟ ದಾರಿಯಲ್ಲಿ ಸಾಗುವ ಹುಮ್ಮಸ್ಸಿನಲ್ಲಿರುತ್ತಾರೆ. ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಏನಾದರು ಮಾಡಬಹುದು ಎಂದುಕೊಂಡವರು ಕೊನೆಗೆ ಸಿಕ್ಕಿಬಿದ್ದು ಜೈಲುಪಾಲಾಗುತ್ತಾರೆ. ಇಂತಹದ್ದೇ ಒಂದು ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನಕಲಿ ಪಾಸ್‌ಪೋರ್ಟ್‌ (Passport Forgery Case) ಪ್ರಕರಣದಡಿಯಲ್ಲಿ ಯುವಕನೊಬ್ಬ ಜೈಲುಪಾಲಾಗಿದ್ದಾನೆ.

ಕೆನಡಾಕ್ಕೆ ಪ್ರಯಾಣಿಸುತ್ತಿದ್ದ ಯುವಕನನ್ನು ಸಿಐಎಸ್ ಎಫ್ ತಂಡ ಆತನ ಅನುಮಾನಾಸ್ಪದ ನಡೆಯ ಹಿನ್ನೆಲೆ ವಿಚಾರಣೆ ನಡೆಸಿ ಬಂಧಿಸಿದೆ. 24 ವರ್ಷದ ಗುರುಸೇವಕ್‌ ಸಿಂಗ್‌ ಬಂಧನಕ್ಕೊಳಗಾದ ಯುವಕ.

ಪ್ರಯಾಣಿಕ ಗುರು ಸೇವಕ್ ಸಿಂಗ್(24) ಗಡ್ಡ ಮತ್ತು ಕೂದಲಿಗೆ ಬಣ್ಣ ಹಚ್ಚಿ 67 ವರ್ಷದ ವ್ಯಕ್ತಿಯ ವೇಷ ಧರಿಸಿ ರಶ್ಮಿಂದರ್ ಸಿಂಗ್ ಸಹೋಟಾ ಎಂಬ ಹೆಸರಿನ ಪಾಸ್ ಪೋರ್ಟ್ ತೋರಿಸಿ ಮಂಗಳವಾರ ದೆಹಲಿಯಿಂದ ಹೊರಡುವ ಏರ್ ಕೆನಡಾ ವಿಮಾನ ಹತ್ತಿ ಕೆನಡಕ್ಕೆ ಪ್ರಯಾಣಿಸುವ ಪ್ಲ್ಯಾನ್ ಮಾಡಿದ್ದನು. ಆದರೆ ಅವನ ಚಟುವಟಿಕೆಗಳು ಅನುಮಾನಾಸ್ಪದವೆಂದು ಕಂಡು ಬಂದ ಹಿನ್ನಲೆಯಲ್ಲಿ ಆತನನ್ನು ಮೊದಲು ಸಿಐಎಸ್ ಎಫ್ ಸಿಬ್ಬಂದಿ ಪರಿಶೀಲಿಸಿದರು. ವ್ಯಕ್ತಿಯ ನೋಟ, ಧ್ವನಿ ಮತ್ತು ಚರ್ಮದ ವಿನ್ಯಾಸವು ಪಾಸ್ ಪೋರ್ಟ್ ನಲ್ಲಿ ತಿಳಿಸಿದ ವಿವರಗಳಿಗೆ ಭಿನ್ನವಾಗಿತ್ತು. ಸೂಕ್ಷ್ಮವಾಗಿ ನೋಡಿದರೆ ಆತನ ಗಡ್ಡ ಮತ್ತು ಕೂದಲಿಗೆ ಬಣ್ಣಹಚ್ಚಿದ್ದು, ವಯಸ್ಸಾದವರಂತೆ ಕಾಣಲು ಕನ್ನಡಕ ಧರಿಸಿದ್ದನು ಎಂಬುದನ್ನು ಅವರು ಗಮನಿಸಿದರು.

ಹಾಗಾಗಿ ಅನುಮಾನಗೊಂಡು ಆತನನ್ನು ವಿಚಾರಿಸಿದಾಗ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಹಾಗೇ ಆತನ ಹೆಸರಿನ ಪಾಸ್ ಪೋರ್ಟ್ ಅವನ ಮೊಬೈಲ್ ನಲ್ಲಿತ್ತು ಎನ್ನಲಾಗಿದೆ. ಹಾಗಾಗಿ ಈ ಪ್ರಕರಣವು ನಕಲಿ ಪಾಸ್ ಪೋರ್ಟ್ ಗೆ ಸಂಬಂಧಿಸಿದ್ದಾದ್ದರಿಂದ ಸಿಐಎಸ್ ಎಫ್ ಆತನನ್ನು ಬಂಧಿಸಿ ಕಾನೂನಿನ ಕ್ರಮದಂತೆ ಆತನನ್ನು‌ ಹಾಗೂ ಆತನ ವಸ್ತುಗಳೊಂದಿಗೆ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version