ಬೆಳಗಾವಿ: ಹುಡುಗಿಯರೇ ಹುಷಾರ್ ನೀವೂ ಸ್ವಲ್ಪ ಯಾಮಾರಿದರೂ ನಿಮ್ಮನ್ನ ಬೆತ್ತಲಾಗಿಸಿ ಹಣಕ್ಕೆ ಬೇಡಿಕೆ ಇಡುವ ಖತರ್ನಾಕ್ ಗ್ಯಾಂಗ್‌ವೊಂದು (Fraud Case) ಆ್ಯಕ್ವಿವ್ ಆಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್, ಐಬಿ ಎಂದು ಹೆಸರು ಹೇಳಿಕೊಂಡು ಕರೆ ಮಾಡುವ ಖದೀಮರು, ನೀವು ಕ್ರೈಂವೊಂದರಲ್ಲಿ ಭಾಗಿಯಾಗಿದೀರಿ ಎಂದು ಹೆದರಿಸುತ್ತಾರೆ.
ವಿಡಿಯೊ ಕಾಲ್ ಮೂಲಕ ಮಾಹಿತಿ ಕೇಳಿ, ನಿಮ್ಮ ಇಡೀ ಬಾಡಿ ತಪಾಸಣೆ ಮಾಡಬೇಕು ಎಂದು ಬೆತ್ತಲೆಗೊಳಿಸುತ್ತಾರೆ. ಇದನ್ನೇ ರೆಕಾರ್ಡ್ ಮಾಡಿಕೊಂಡು ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಾರೆ. ದುಷ್ಟರ ಈ ಖತರ್ನಾಕ್ ಐಡಿಯಾಗೆ ಬೆಳಗಾವಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯಿಸಿದ್ದಾರೆ. ಸದ್ಯ ಹೊಸ ಮಾದರಿಯಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ಇ-ಮೇಲ್, ಮೆಸೇಜ್, ಕಾಲ್ಸ್ ಅಥವಾ ವಾಟ್ಸಪ್ ಮೂಲಕ ಒಂದು ಮೆಸೇಜ್ ಬರುತ್ತದೆ. ಕ್ರೈಂ ಬ್ರ್ಯಾಂಚ್‌ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಹೆಸರು ಕ್ರಿಮಿನಲ್ ಕೇಸ್‌ನಲ್ಲಿ ಬಂದಿದೆ. ನೀವು ನಮ್ಮ ಹತ್ತಿರ ಬರಬೇಕು ರಿಪೋರ್ಟ್ ಕೊಡಬೇಕು, ಯಾಕೆ ನೀವು ಈ ರೀತಿ ಮಾಡಿದೀರಿ ಎಂದು ಮಾತಾಡಿ ವಿಕ್ಟಿಮ್ಸ್‌ಗಳಿಗೆ ಬೆದರಿಸುತ್ತಾರೆ.
ನಾವೀಗ ನಿಮ್ಮನ್ನ ವಿಚಾರಣೆ ಮಾಡಬೇಕು ಕ್ಯಾಮೆರಾ ಮುಂದೆ ನೀವು ಬರಬೇಕು. ಬೇರೆ ಕಡೆ ನೀವು ಹೋದರೆ ನಿಮ್ಮ ಕ್ರೈಂ ಬಗ್ಗೆ ಫ್ಯಾಮಿಲಿ ಅವರಿಗೆ ಹೇಳುತ್ತೇವೆ. ಹೇಗೆ ಕ್ರೈಂ ಮಾಡಿದೀರಿ ಅಂತಾ ನಿಮ್ಮ ಬಾಡಿ ವೆರಿಫಿಕೇಶನ್ ಆಗಬೇಕು ಬಟ್ಟೆ ಬಿಚ್ಚಬೇಕು ಅಂತಾ ಹೇಳುತ್ತಾರೆ. ಬಳಿಕ ಆ ವಿಡಿಯೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮಾಡುತ್ತಾರೆ. ಈ ರೀತಿ ಸುಳ್ಳು ಹೇಳಿ ನಂಬಿಸಿ ಹಣ ದೋಚುವ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಮೂರು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿವೆ. ಈ ರೀತಿ ಕರೆಗಳು ಬಂದು ಬ್ಲ್ಯಾಕ್ ಮೇಲ್ ಮಾಡಿದರೆ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ