Site icon Vistara News

ಮೂರು ಜನರ ಸಾವಿಗೆ ಕಾರಣವಾಯಿತು ಕುಡಿದ ಅಮಲು!

suicide news

ಬೆಳಗಾವಿ: ಕುಡಿದ ಅಮಲಿನಲ್ಲಿ ಕ್ರಿಮಿನಾಶಕ ಸೇವಿಸಿ ಚಿಕಿತ್ಸೆ ಫಲಿಸದೇ ವ್ಯಕ್ತಿ ಮೃತಪಟ್ಟಿದ್ದು, ಪತಿಯ ಸಾವಿನಿಂದ ಮನನೊಂದ ಪತ್ನಿ ಒಂದೂವರೆ ವರ್ಷದ ಮಗಳನ್ನು ಹತ್ಯೆಗೈದು ತಾನೂ ನೇಣಿಗೆ ಶರಣಾದ ದಾರುಣ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟ‌ನೆ ನಡೆದಿದೆ. ಅಕ್ಟೋಬರ್ 20ರ ಮಧ್ಯಾಹ್ನ ಮಲ್ಲಹೋಳ ಗ್ರಾಮದ ಮನೆಯಲ್ಲಿ ಹೊಳೆಪ್ಪ ಮಸ್ತಿ (25) ಎಂಬಾತ ವಿಷ ಸೇವಿಸಿದ್ದ. ಯಮಕನಮರಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.

ಪತಿ ಸಾವಿನಿಂದ ಮನನೊಂದ ಪತ್ನಿ ವಾಸಂತಿ(20) ಮಾರನೇ ದಿನ ತವರು ಮನೆ ವಂಟಮೂರಿಗೆ ಬಂದಿದ್ದಳು. ವಂಟಮೂರಿ ಹೊರವಲಯದಲ್ಲಿರುವ ಗದ್ದೆಗೆ ಎರಡನೇ ಮಗಳ ಜತೆ ಹೋಗಿದ್ದಾಳೆ. ಅಲ್ಲಿ ಒಂದೂವರೆ ವರ್ಷದ ಮಗಳು ಮಾನಸಳನ್ನು ಮೊದಲು ಕತ್ತು ಹಿಸುಕಿ ಹತ್ಯೆಗೈದಿದ್ದಾಳೆ. ಬಳಿಕ ಅಲ್ಲಿಯೇ ಇದ್ದ ಮರಕ್ಕೆ ತನ್ನ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ | Homosexuality | ಸಲಿಂಗಕಾಮಿಯ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಯುವಕ, ಏನಿದು ದುರಂತ?

Exit mobile version