ಮಂಡ್ಯ: ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಹುಟ್ಟಿಕೊಂಡು ಮಾತಿನ ಚಕಮಕಿ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಸ್ನೇಹಿತರ ದಿನವೇ ಸ್ನೇಹಿತನ ಕೊಲೆಯಾಗಿದೆ.
ಚಾಕುವಿನಿಂದ ಇರಿದು ಕೊಲೆ ಮಾಡಿರುವ ಈ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದೆ. ಜಯಂತ್ (24) ಕೊಲೆಯಾದ ದುರ್ದೈವಿ. ಕೀರ್ತಿ ಎಂಬಾತನಿಂದ ಕೊಲೆ ನಡೆದಿದೆ. ಘಟನೆ ನಂತರ ಆರೋಪಿ ಕೀರ್ತಿ ಪರಾರಿಯಾಗಿದ್ದಾನೆ. ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಆರ್ಟಿಸಿ ಇನ್ಸ್ಪೆಕ್ಟರ್ ಸಾವು, ಹತ್ಯೆ ಶಂಕೆ
ಬಳ್ಳಾರಿ: ಕೆಎಸ್ಆರ್ಟಿಸಿ ಡಿವಿಜನಲ್ ಸೆಕ್ಯುರಿಟಿ ಇನ್ಸ್ಪೆಪೆಕ್ಟರ್ ಒಬ್ಬರು ಬೈಕ್ನಲ್ಲಿ ಹೋಗುತ್ತಿರುವಾಗ ತಲೆಗೆ ಪೆಟ್ಟಾಗಿ ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಕಾರಾಗೃಹದ ಸಮೀಪದಲ್ಲಿ ನಡೆದಿದೆ. ಹತ್ಯೆಯ ಶಂಕೆ ವ್ಯಕ್ತವಾಗಿದೆ.
ಮೃತನಾದ ವ್ಯಕ್ತಿ ಹುಸೇನಪ್ಪ(54) ಸೆಕ್ಯುರಿಟಿ ಇನ್ಸ್ಪೆಕ್ಟರ್ ಆಗಿದ್ದವರು. ತಲೆಗೆ ಮೂರು ಕಡೆ ಪೆಟ್ಟಾಗಿರುವುದರಿಂದ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ತಲೆ ತೀವ್ರ ಏಟು ಬಿದ್ದಿರುವುದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಮೃತರು ಕಳೆದ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ನಾಳೆ ಬೀದರ್ನಲ್ಲಿ ಚಾಲಕರ ನೇಮಕಾತಿ ಪರೀಕ್ಷೆಗೆ ತೆರಳಲಿದ್ದರು.
ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗುವ ವೇಳೆ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಬೈಕ್ನಲ್ಲಿ ಬಂದು ಹತ್ಯೆಗೈದು ಪರಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಎಸ್ಪಿ ರಂಜೀತ್ ಕುಮಾರ್ ಬಂಡಾರು, ಎಎಸ್ಪಿ ನಟರಾಜ್, ಡಿವೈಎಸ್ಪಿ ಶೇಖರಪ್ಪ, ಕೆಎಸ್ಆರ್ಟಿಸಿ ಡಿಸಿ ದೇವರಾಜ್, ಗಾಂಧಿನಗರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ವಿಮ್ಸ್ಗೆ ಕೊಂಡೊಯ್ಯಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Self Harming : ಮಂಗಳೂರಲ್ಲಿ ಕಟ್ಟಡದಿಂದ ಹಾರಿದ ಬಿಲ್ಡರ್! ಆತ್ಮಹತ್ಯೆಯೋ, ಕೊಲೆಯೋ?