Site icon Vistara News

Theft Case : ಪ್ರೇಯಸಿಯ ಜತೆಗೆ ಹೈಫೈ ಲೈಫ್‌ ಎಂಜಾಯ್‌ ಮಾಡಲು ಮನೆಗಳ್ಳತನಕ್ಕೆ ಇಳಿದ ಪ್ರೇಮಖೈದಿ!

Theft case

ಆನೇಕಲ್: ಪ್ರೇಯಸಿಯ ಜತೆ ಹೈಫೈ ಲೈಫ್‌ ಕಳೆಯಲು ಮನೆ ಕಳ್ಳತನಕ್ಕೆ ಇಳಿದಿದ್ದ ಪ್ರೇಮಿಯನ್ನು (Theft Case) ಬಂಧಿಸಿದ್ದಾರೆ. ಹಾಡುಹಗಲೇ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲೂಕಿನ ವಾಬಸಂದ್ರದಲ್ಲಿ ಮನೆ ಕಳ್ಳತನವಾಗಿತ್ತು. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಹಿಡಿದಿದ್ದಾರೆ.

ಬಂಧಿತ ಆರೋಪಿಯಿಂದ 8 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಜಿಗಣಿ ಸಿ.ಪಿ.ಐ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಲಕ್ಷ್ಮಣ್ ಅಲಿಯಾಸ್‌ ಗುನ್ನಿ ಎಂಬಾತನನ್ನು ಬಂಧಿಸಿದ್ದಾರೆ. ಸರ್ಜಾಪುರ ಸಮೀಪದ ಚಿಕ್ಕದಾಸರಹಳ್ಳಿಯ ಲಕ್ಷ್ಮಣ್ ವಿರುದ್ಧ ಈಗಾಗಲೇ ಬನ್ನೇರುಘಟ್ಟ ,ಜಿಗಣಿ, ಸರ್ಜಾಪುರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಲಕ್ಷ್ಮಣನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಪ್ರೇಯಸಿ ಜತೆ ಲೈಫ್ ಎಂಜಾಯ್ ಮಾಡಲು ಕಳ್ಳತನ ಮಾಡುತ್ತಿದ್ದೆ ಎಂದು ಲಕ್ಷ್ಮಣ್ ಹೇಳಿಕೆ ನೀಡಿದ್ದಾನೆ. ಕದ್ದ ಚಿನ್ನ ಬೆಳ್ಳಿ ಮಾರಾಟ ಮಾಡಿ ಪ್ರೇಯಸಿಗೆ ಖರ್ಚು ಮಾಡುತ್ತಿದ್ದ. ತನಿಖೆಯ ವೇಳೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.

ಇದನ್ನೂ ಓದಿ:Actor Darshan : ನಟ ದರ್ಶನ್‌-ಪವಿತ್ರಾ ಐಫೋನ್‌ಗಳಲ್ಲಿ ಇದ್ಯಾ ಕೊಲೆ ರಹಸ್ಯ! ಹೈದರಾಬಾದ್‌ನಿಂದ ರಿಟರ್ನ್‌ ಆದ ಫೋನ್‌ಗಳು

ಒಂಟಿ ಮಹಿಳೆಯರೇ ಟಾರ್ಗೆಟ್‌

ಬೆಳಗಾವಿ: ಇರಾನಿ ಗ್ಯಾಂಗ್ ಬೆಳಗಾವಿ ಜನರ ನೆಮ್ಮದಿಯ ನಿದ್ದೆಗೆ ಭಂಗ ತಂದಿದೆ. ಇರಾನಿ ಗ್ಯಾಂಗ್ (Irani gang) ಮಹಿಳೆಯರು ಧೈರ್ಯದಿಂದ ಬೀದಿಯಲ್ಲಿ ಓಡಾಡದ ಪರಿಸ್ಥಿತಿಗೆ ತಂದಿದೆ. ಬೀದಿಯಲ್ಲಿ ಸಂಚರಿಸುವ ಒಂಟಿ ಮಹಿಳೆಯರು ಹಾಗೂ ಖಾಲಿ ಮನೆಗಳೆ ಈ ಗ್ಯಾಂಗ್ (Theft Case) ಟಾರ್ಗೆಟ್ ಆಗಿದೆ.

ರಾತ್ರಿ ಹೊತ್ತು ಮನೆಗಳ ಮುಂಭಾಗ ಬೀಗ ಹಾಕಿದ್ದರೆ, ಹಗಲು ಹೊತ್ತು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಾರೆ. ಮಹಾಂತೇಶ ನಗರ, ಅಮನ್ ನಗರದಲ್ಲಿ ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡಿದ್ದಾರೆ. 2.5 ಲಕ್ಷ ರೂ. ಚಿನ್ನಾಭರಣ, 50 ಸಾವಿರ ಮೌಲ್ಯದ ಬೆಳ್ಳಿ ಹಾಗೂ 2.20 ಲಕ್ಷ ‌ನಗದು ಸೇರಿ 7 ಲಕ್ಷ ಮೌಲ್ಯದ ವಸ್ತು ಎಗರಿಸಿ ಖದೀಮರು ಕಾಲ್ಕಿತ್ತಿದ್ದಾರೆ. ಜತೆಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್‌ ಕದ್ದು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version