ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ₹ 25 ಕೋಟಿ ವಂಚನೆ ಆರೋಪದಡಿ ಸೇವೆಯಿಂದ ವಜಾಗೊಂಡಿರುವ ಹಿಂದಿನ ಪ್ರಧಾನ ವ್ಯವಸ್ಥಾಪಕ ಜಿ. ಕಿಶೋರ್‌ಕುಮಾರ್ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಪ್ರಯತ್ನ ನಡೆಸಿದ್ದರು. ಇದಕ್ಕಾಗಿ 4-5 ಬಾರಿ ಪ್ರಯತ್ನ ನಡೆಸಿದ್ದರು. ಇದಕ್ಕಾಗಿ ₹ 4-5 ಕೋಟಿ ಮೊತ್ತಕ್ಕೆ ಮಾತಕತೆ ನಡೆಸಿದ್ದರು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಆರೋಪಿಸಿದ್ದಾರೆ.
2021-22ನೇ ಸಾಲಿನನಲ್ಲಿ ಶೇ. 41 (₹ 7.06 ಕೋಟಿ) ಹೆಚ್ಚಿನ ವಹಿವಾಟು ನಡೆದಿದೆ. 2020-21ರಲ್ಲಿ ನಿಗಮದ ವಹಿವಾಟು ₹ 16.88 ಕೋಟಿಗಳಿದ್ದು, 2021-22 ರಲ್ಲಿ ₹ 23.95 ಕೋಟಿಗೆ ಏರಿಕೆ ಆಗಿದೆ. ಇದು ನಾನು ತೆಗೆದುಕೊಂಡ ಅನೇಕ ಕ್ರಮಗಳಿಂದ ಮತ್ತು ಸಿಬ್ಬಂದಿ ಪರಿಶ್ರಮದಿಂದ ಸಾಧ್ಯವಾಗಿದೆ ಎಂದು ರೂಪಾ ಹೇಳಿದ್ದಾರೆ.
ಇದನ್ನೂ ಓದಿ | BBMP ELECTION | ರಾಜ್ಯ ಸರ್ಕಾರಕ್ಕೆ ವಾರ್ಡ್ ಮರುವಿಂಗಡಣೆ ಪಟ್ಟಿ ಸಲ್ಲಿಸಿದ ಬಿಬಿಎಂಪಿ
ರಾಘವೆಂದ್ರ ಶೆಟ್ಟಿ ಮತ್ತು ಕಿಶೋರ್ ಕುಮಾರ್ ನಡುವೆ ₹ 5 ಕೋಟಿ ವ್ಯವಹಾರದ ಮಾತುಕತೆ ನಡೆದಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ನನ್ನ ಮೇಲೆ ಪಿತೂರಿ ನಡೆಸಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ರೂಪ ತಿಳಿಸಿದ್ದಾರೆ.
ಶ್ರೀಕಾಂತ್ ಚೌರಿ ಎಂಬಾತನನ್ನು ಆಪ್ತ ಕಾರ್ಯದರ್ಶಿ ಎಂದು ನೇಮಕ ಮಾಡಿಕೊಂಡು 10 ತಿಂಗಳಿಂದ ವೇತನ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ 545 ಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಆತ ಬಂಧನಕ್ಕೆ ಒಳಗಾಗಿದ್ದ. ಇದು ನಿಗಮಕ್ಕೆ ಕಪ್ಪು ಚುಕ್ಕೆ ಆಗಿದೆ ಎಂದು ರೂಪಾ ಹೇಳಿದ್ದಾರೆ.
ರೂಪಾ ಸ್ಪಷ್ಟನೆ
ರೂಪಾ ದೂರು ನೀಡಿದ ಬೆನ್ನಲ್ಲೇ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಬುಧವಾರ ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರೂಪಾ, ₹ 6 ಕೊಟಿ ಟೆಂಡರ್ ಕರೆದಿರುವ ಬಗ್ಗೆ ಅವರು ಆರೋಪಿಸಿದ್ದಾರೆ. ಆದರೆ ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿಲ್ಲ. ಕಾಯ್ದೆ ಪ್ರಕಾರವೇ ಇ-ಪೋರ್ಟ್‌ನಲ್ಲಿ ಟೆಂಡರ್ ಕರೆದಿದ್ದೇನೆ. ನಿಗಮದ ಎಂಡಿ ಪ್ರಧಾನ ಕಾರ್ಯದರ್ಶಿ ಅಧೀನದಲ್ಲಿ ಬರುವುದರಿಂದ ಅವರಿಗೆ ಉತ್ತರಿಸಬೇಕಾಗುತ್ತದೆ. ನಿಗಮದ ಅಧ್ಯಕ್ಷರಿಗೆ ಉತ್ತರಿಸುವ ಅಗತ್ಯವಿಲ್ಲ. ಅಧ್ಯಕ್ಷರು ನಿಗಮದ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರೂಪಾ ಹೇಳಿದ್ದಾರೆ.
ಇದನ್ನೂ ಓದಿ | ಹಣ ದುರ್ಬಳಕೆ ಮಾಡಿಲ್ಲ, ಬೇಕಿದ್ದರೆ ಸರಕಾರ ತನಿಖೆ ನಡೆಸಲಿ ಎಂದ ಕೋಡಿಹಳ್ಳಿ