Site icon Vistara News

Actor Darshan : ಕೊನೆಗೂ ಪೊಲೀಸರ ಕೈಸೇರಿದ ದರ್ಶನ್, ಪವಿತ್ರಾಗೌಡರ ಮೊಬೈಲ್ ರಿಪೋರ್ಟ್! ಸಿಕ್ಕಿ ಬಿಡ್ತು ಮಹತ್ವದ ಸಾಕ್ಷ್ಯ?

actor darshan

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (renukaswamy murder) ಪ್ರಕರಣದಲ್ಲಿ ನಟ ದರ್ಶನ್‌ (Actor darshan) ಮತ್ತು ಗ್ಯಾಂಗ್‌ ಜೈಲುಪಾಲಾಗಿದೆ. ಮೂವರು ಜಾಮೀನು ಪಡೆದು ಹೊರಬಂದಿದ್ದರೆ, ಎ2 ದರ್ಶನ್‌ ಹಾಗೂ ಎ1 ಆರೋಪಿ ಪವಿತ್ರಾಗೌಡರ ಜಾಮೀನು ಅರ್ಜಿ ವಿಚಾರಣೆಯು ಕೋರ್ಟ್‌ ಹಂತದಲ್ಲಿದೆ. ಈ ನಡುವೆ ಹೈದರಾಬಾದ್ ಸಿಎಫ್ಎಸ್ಎಲ್‌ಗೆ ಕಳಿಸಿದ್ದ ದರ್ಶನ್‌ ಹಾಗೂ ಪವಿತ್ರಾಗೌಡರ ಐಫೋನ್ ರಿಪೋರ್ಟ್ ಪೊಲೀಸರಿಗೆ ರವಾನೆ ಆಗಿದೆ.

ರೇಣುಕಾಸ್ವಾಮಿ ಕೊಲೆ ಸಂಬಂಧ ದರ್ಶನ್ ಹಾಗೂ ಪವಿತ್ರಾಗೌಡರ ಮೊಬೈಲ್ ಅನ್ನು ಪೊಲೀಸರು ಹೈದರಾಬಾದ್‌ಗೆ ರವಾನಿಸಿದ್ದರು. ಇದೀಗ ಕೊಲೆಗೆ ಸಂಬಂಧಿಸಿದ ಯಾವುದೇ ಫೋಟೊ, ವಿಡಿಯೋ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಕೊಲೆಗೆ ಸಂಬಂಧಿಸಿದ ಯಾವುದೇ ಫೋಟೊ, ವಿಡಿಯೋ ಇತರರಿಗೆ ಕಳಿಸಿಲ್ಲ. ಇತರೆ ಆರೋಪಿಗಳು ದರ್ಶನ್ ಮೊಬೈಲ್‌ಗೆ ಯಾವುದೇ ಫೋಟೊ ವಿಡಿಯೋ ಕಳಿಸಿಲ್ಲ ಎನ್ನಲಾಗಿದೆ. ದರ್ಶನ್ ಮೊಬೈಲ್‌ನಲ್ಲಿ ಫೋಟೊ, ವಿಡಿಯೋ ಇರಬಹುದಾ ಅಂತಾ ಸಿಎಫ್ಎಸ್ಎಲ್‌ಗೆ ಕಳುಹಿಸಿದ್ದರು‌. ಆದರೆ ಸಿಎಫ್ಎಸ್ಎಲ್ ಪರೀಕ್ಷೆ ಬಳಿಕ ಎರಡು ಮೊಬೈಲ್‌ ಫೋನ್‌ ಅನ್ನು ವಾಪಸ್ ಪಡೆದಿದ್ದಾರೆ.

ಇದನ್ನೂ ಓದಿ: Karnataka Weather : ಬಿರುಗಾಳಿಯೊಂದಿಗೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

ದರ್ಶನ್‌ಗೆ ಇಂದು ಸಿಗುತ್ತಾ ಜಾಮೀನು

ರೇಣುಕಾಸ್ವಾಮಿ‌ (Renukaswamy Murder case) ಹತ್ಯೆ ಪ್ರಕರಣದ ಆರೋಪಿ ದರ್ಶನ್ (Actor Darshan) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಕಳೆದ ಅ.5ರಂದು ನಡೆಯಿತು. ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಸಹ ಪ್ರಬಲ ವಾದ ಮಂಡಿಸಿದ್ದರು. ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ ಅಂಶಗಳ ನ್ಯೂನತೆಗಳನ್ನು ಹೆಕ್ಕಿ ತೆಗೆದ ವಕೀಲರು ದರ್ಶನ್ ವಿರುದ್ಧ ಪೊಲೀಸರ ಸುಳ್ಳಿನ ಕಥೆ ಕಟ್ಟಿದ್ದಾರೆ ಎಂದು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿಯ ಮೃತದೇಹ ಜೂನ್ 9ರಂದು ಪತ್ತೆಯಾಗಿರುವುದಾಗಿ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ನೀಡಿರುವ ದೂರಿನಲ್ಲಿ ಸ್ಪಷ್ಟವಾಗಿದೆ. ಆದರೆ ಜೂನ್ 11ರಂದು ಮಧ್ಯಾಹ್ನ 2:45ರ ಸುಮಾರಿಗೆ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ಮೃತನ ವಿವರ ಲಭ್ಯವಾಗಿರದಿದ್ದರಿಂದ ಮರಣೋತ್ತರ ಪರೀಕ್ಷೆ ವಿಳಂಬವಾಗಿದೆ ಎಂದು ಪೊಲೀಸರು ಕಾರಣ ನೀಡಿದ್ದಾರೆ. ಆದರೆ ಯಾವುದೇ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲು ಮೃತನ ಐಡೆಂಟಿಟಿ ಮುಖ್ಯವಲ್ಲ ಎಂದು ಸಿಆರ್ಪಿಸಿ 174 ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲು ವಿಳಂಬ ಮಾಡಿರುವುದೇಕೆ ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು.

ಪಿಎಸ್ಐ ವಿನಯ್ ಆರೋಪಿ ಪ್ರದೂಷ್ ಜತೆ ನಿರಂತರ ಸಂಪರ್ಕ!

ಇನ್ನು ಕೊಲೆ ನಡೆದ ವಿಚಾರ ಕಾಮಾಕ್ಷಿಪಾಳ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನಯ್‌ಗೆ ಗೊತ್ತಿತ್ತು. ಅವರ ಮೊಬೈಲ್‌ನಲ್ಲಿ ಘಟನಾ ಸ್ಥಳದ ಸಿಸಿಟಿವಿ ಹಾಗೂ ಮೃತದೇಹದ ಫೋಟೋ‌ ಪತ್ತೆಯಾಗಿದೆ.‌ ಅದನ್ನು ಆರೋಪಿ ಪ್ರದೂಷ್‌ಗೆ ಕಳಿಸಿದ್ದಾನೆ. ಹಾಗಾದರೆ ಪಿಎಸ್ಐ‌ ಫೋನ್‌ ಯಾಕೆ ಸೀಜ್ ಮಾಡಿಲ್ಲ. ಮೊಬೈಲ್ ರಿಟ್ರೀವ್ ಮಾಡಿಲ್ಲವೆಂದು ತನಿಖಾಧಿಕಾರಿಗಳ ವಿರುದ್ಧ ನಾಗೇಶ್‌ ಗುಡುಗಿದರು.

ದರ್ಶನ್ ಮನೆಯಲ್ಲಿ ಸಿಕ್ಕಿದ್ದು ವ್ಯವಹಾರಿಕ ಹಣ; ಸಾಕ್ಷಿಗಳಿಗೆ ನೀಡಲು ಇರುವುದು ಶುದ್ಧ ಸುಳ್ಳು!

ಅಲ್ಲದೆ ಜೂನ್ 18ರಂದು ದರ್ಶನ್ ಅವರ ಮನೆಯಲ್ಲಿ 37.5 ಲಕ್ಷ ರೂ ಹಣವನ್ನು ಜಪ್ತಿ ಮಾಡಿರುವ ಪೊಲೀಸರು, ಸಾಕ್ಷ್ಯ ನಾಶ ಮಾಡಲು ಪ್ರಕರಣದ ಇತರೆ ಆರೋಪಿಗಳಿಗೆ ನೀಡಲು ಹಣ ಸಂಗ್ರಹಿಸಿಟ್ಟಿರುವುದಾಗಿ ಹೇಳಿಕೆ ಪಡೆದಿರುವುದಾಗಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಮೋಹನ್ ರಾಜ್ ಎಂಬುವವರು ತಮ್ಮ ಮಗಳ ಆಲ್ಬಂ ಸಾಂಗ್ ಮಾಡಿಸಲು ದರ್ಶನ್ ಅವರಿಂದ ಫೆಬ್ರವರಿಯಲ್ಲಿ ಹಣ ಪಡೆದಿದ್ದರು. ಆ ಸಾಲದ ಹಣವನ್ನು ಮೇ 2ರಂದೇ ವಾಪಾಸ್ ನೀಡಿದ್ದಾರೆ. ಹಾಗಾದರೆ ದರ್ಶನ್ ಅವರು ಸಾಕ್ಷಿಗಳಿಗೆ ಕೊಡಲೆಂದೇ ಹಣ ಸಂಗ್ರಹಿಸಿಟ್ಟಿದ್ದರು ಎನ್ನಲು ಸಾಧ್ಯವೇ? ಮುಂದೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಬರಲಿದ್ದಾನೆ ಅವನ ಹತ್ಯೆಯಾಗಲಿದೆ. ಅದನ್ನು ಮುಚ್ಚಿಹಾಕಲು ಸಾಕ್ಷಿಗಳಿಗೆ ಹಣ ನೀಡಬೇಕಾಗುತ್ತದೆ ಎಂದು ದರ್ಶನ್ ಊಹಿಸಿರಲು ಸಾಧ್ಯವೇ ಎಂದು ತನಿಖಾಧಿಕಾರಿಗಳ ಕಾರ್ಯವೈಖರಿಯ ಕುರಿತು ಪ್ರಶ್ನೆ ಮಾಡಿದ ಹಿರಿಯ ವಕೀಲ ಸಿ.ವಿ. ನಾಗೇಶ್ ತನಿಖಾಧಿಕಾರಿಗಳ ಲೋಪದ ಬಗ್ಗೆ ಕೋರ್ಟ್ ಗಮನಕ್ಕೆ ತಂದರು.

ಸಿಆರ್ ಪಿಸಿ 161 ಹೇಳಿಕೆಗೂ 164 ಹೇಳಿಕೆಗೂ ತಾಳೆಯಿಲ್ಲ!

ಇನ್ನು ಪ್ರಕರಣದಲ್ಲಿ ಐ ವಿಟ್ನೆಸ್ ಹಾಗೂ ಕೆಲ ಸಾಕ್ಷಿಗಳ ಹೇಳಿಕೆ ದಾಖಲ ಮಾಡಲಾಗಿದೆ. ಆದರೆ ಎರಡು ಸ್ವ ಇಚ್ಚಾ ಹೇಳಿಕೆಗಳಲ್ಲಿ ಕೆಲ ಅಂಶಗಳು ವ್ಯತಿರಿಕ್ತವಾಗಿವೆ. ಪೊಲೀಸರಿಗೆ ಮಿಡ್ ನೈಟ್ ಹೇಳಿಕೆ ದಾಖಲಿಸುವ ಅಭ್ಯಾಸವಿದೆ. ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ರೀತಿ ಕಥೆಯಿದೆ. ಸಾಕ್ಷಿದಾರರಾಗಿ ನಟ ಚಿಕ್ಕಣ್ಣ ಹಾಗೂ ನವೀನ್ ಅವರು ಪೊಲೀಸರ ಮುಂದೆ ಹೇಳಿಕೆ ಹಾಗೂ ನ್ಯಾಯಾಲಯದ ಮುಂದೆ ಹೇಳಿಕೆಗಳು ವ್ಯತಿರಿಕ್ತವಾಗಿದೆ. ಶೂ ನಲ್ಲಿ ರಕ್ತದ ಗುರುತುವಿದೆ. ಆದರೆ ಯಾವ ಶೂ ಎಂದು ನಿಖರವಾಗಿ ತಿಳಿಸಿಲ್ಲ. ಪಂಚನಾಮೆ ವೇಳೆ ಇದ್ದ ರಕ್ತದ ಕಲೆಗಳು ಎಫ್ಎಸ್ಎಲ್‌ನಲ್ಲಿಲ್ಲ. ಹಾಗಾದರೆ ರಕ್ತದ ಗುರುತು ಚಾರ್ಜ್ ಶೀಟ್‌ನಲ್ಲಿ ಹೇಗೆ ಬಂತು ಪ್ರಶ್ನಿಸಿದ ಸಿವಿ ನಾಗೇಶ್, ರಿಮ್ಯಾಂಡ್ ಅರ್ಜಿಯಲ್ಲಿ ಕೆಲ ಸಾಕ್ಷಿಗಳ ಹೆಸರಿಲ್ಲ ಉಲ್ಲೇಖಿಸಿಲ್ಲ. ಕೇಳಿದರೆ, ಬೆದರಿಕೆ, ಗೌಪ್ಯತೆಯ ರೀಸನ್ ನೀಡಿದ್ದಾರೆ ಎಂದು ತಮ್ಮ ವಾದದಲ್ಲಿ ಮಂಡಿಸಿದ್ದರು.

ಕಾಲ್ ರೆಕಾರ್ಡಿಂಗ್ ಆಧಾರದ ಮೇಲೆ ಗಲ್ಲು ಶಿಕ್ಷೆ ವಿಧಿಸಲಾಗದು!

ಇನ್ನು ಪ್ರಕರಣದಲ್ಲಿ ಎ1 ಹಾಗೂ ಎ3 ಆರೋಪಿಗಳೊಂದಿಗೆ ದರ್ಶನ್ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದರು. ಫೋನ್ ಕಾಲ್‌ ಮೂಲಕವೇ ರೇಣುಕಾಸ್ವಾಮಿಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಎ1 ಆರೋಪಿ ದರ್ಶನ್‌ಗೆ ಸ್ನೇಹಿತೆ. ಪವನ್‌ ಮನಗೆಲದವನು. ಸ್ನೇಹಿತೆ, ಮನೆ ಕೆಲಸದವನ ಜತೆ ಮಾತಾಡಿದರೆ ಕೊಲೆಗೆ ಸಂಚು ರೂಪಿಸಿದಂತೆಯೇ? ಅವರು ಹಲವು ವರ್ಷಗಳಿಂದ ಮಾತನಾಡಿದ್ದಾರೆ. ಕೊಲೆಯಾದ ಒಂದೆರಡು ದಿನ ಹಿಂದೆ ಮುಂದೆ ಮಾತಾಡಿದರೆ ಸಂಶಯ ಪಡಬಹುದಿತ್ತೆಂದು. ಕಾರ್ ರೆಕಾರ್ಡ್ ಆಧಾರದ ಮೇಲೆ ಗಲ್ಲು ಶಿಕ್ಷೆ ವಿಧಿಸೋದಕ್ಕಾಗಲ್ಲ ಎಂದು ವಾದದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ರೇಣುಕಾಸ್ವಾಮಿ ಕೊಲೆಗೆ ದರ್ಶನ್ ಮತ್ತು ಟೀಂ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಕೂತು ಪ್ಲಾ‌ನ್ ಮಾಡಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಅಲ್ಲಿ‌ ಸೇರಿದ್ದು ಊಟಕ್ಕೆ. ಊಟ‌ ಮಾಡುತ್ತ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ವಿ ಸಾಕ್ಷಿಗಳಾಗಿ ಚೇತನ್ ,ನವೀನ್ ಹಾಗೂ ಚಿಕ್ಕಣ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇದು ದರ್ಶನ್‌ನ ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರ ಸೃಷ್ಟಿಸಿರುವ ಸಾಕ್ಷಿಗಳ‌ ಸುಳ್ಳಿನ ಕಥೆ. ಹೀಗಾಗಿ ಜಾಮೀನು ನೀಡಬೇಕೆಂದು ಕೋರಿ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮುಕ್ತಾಯಗೊಳಿಸಿದ್ದು, ಮುಂದಿನ ವಿಚಾರಣೆಯನ್ನ ಕೋರ್ಟ್ ಅಕ್ಟೋಬರ್ 8ಕ್ಕೆ ಮುಂದೂಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version