Site icon Vistara News

Actor Darshan : ರೇಣುಕಾಸ್ವಾಮಿಗೆ ಹೊಡೆದು ಬಡಿದಿದ್ದ ಫೋಟೊಗಳು ಆರೋಪಿ ಪವನ್‌ ಫೋನ್‌ನಲ್ಲಿ ಪತ್ತೆ!

Actor Darshan gang

ಬೆಂಗಳೂರು: ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಮತ್ತು ಗ್ಯಾಂಗ್‌ ಅರೆಸ್ಟ್‌ ಆಗಿದ್ದು, ಕೇಸ್‌ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಕೊಲೆ ಕೇಸ್‌ ತನಿಖೆ ವೇಳೆ ಆರೋಪಿ ಪವನ್‌ ಫೋನ್‌ನಲ್ಲಿ ಎರಡು ಫೋಟೊಗಳು ಪತ್ತೆಯಾಗಿವೆ. ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿಯ ಎರಡು ಫೋಟೋಗಳು ಸಿಕ್ಕಿವೆ ಎನ್ನಲಾಗಿದೆ.

ನಟ ದರ್ಶನ್ ಬರುವ ಮುಂಚೆ ಆತನ ಸಹಚರರು 8ನೇ ತಾರೀಖು ಮಧ್ಯಾಹ್ನ‌ 2.30 ರಿಂದ 4ಗಂಟೆವರೆಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ನಟ ದರ್ಶನ್‌ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಆರೋಪಿ ಪವನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಎರಡು ಫೋಟೊ ತೆಗೆದುಕೊಂಡು ಹೋಗಿ ದರ್ಶನ್‌ಗೆ ತೋರಿಸಿದ್ದ.

ಈ ರೀತಿ ಕರೆದುಕೊಂಡು ಬಂದು, ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪವನ್‌ ದರ್ಶನ್‌ಗೆ ಫೋಟೊ ತೋರಿಸಿದ್ದ. ಫೋಟೊ ನೋಡಿ ಸುಮಾರು ನಾಲ್ಕುವರೆ ದರ್ಶನ್‌ ಪಟ್ಟನಗೆರೆ ಶೆಡ್‌ಗೆ ಹೋಗಿದ್ದ. ಬಳಿಕ ರೇಣುಕಾಸ್ವಾಮಿಗೆ ದರ್ಶನ್‌ ಕೂಡ ಹಲ್ಲೆ ಮಾಡಿದ್ದ. ದರ್ಶನ್ ಹೋದಮೇಲೆ ಡಿ ಗ್ಯಾಂಗ್‌ ಮತ್ತಷ್ಟು ಕ್ರೂರವಾಗಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದರು. ಸದ್ಯ ಘಟನೆ ಬಗ್ಗೆ ಸಂಪೂರ್ಣವಾಗಿ ಚಾರ್ಜ್ ಶೀಟ್‌ನಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: Actor Darshan : ಪವಿತ್ರಾಗೌಡಗೆ ಅಶ್ಲೀಲ ಫೋಟೊ ಕಳಿಸಿದ್ದು ದೃಢ; ಆದ್ರೆ ರೇಣುಕಾಸ್ವಾಮಿ ಕೊಲೆಯಲ್ಲಿ ಈ ಮೂವರು ಭಾಗಿಯೇ ಆಗಿಲ್ಲ! ಯಾರವರು?

ಕೊಲೆ ಬಳಿಕ ಪಾರ್ಟಿ

ರೇಣುಕಾಸ್ವಾಮಿ ಕೊಲೆ‌ ಮೊದಲು ಹಾಗೂ ಕೊಲೆ ನಂತರ ಡಿ‌ ಗ್ಯಾಂಗ್ ಪಾರ್ಟಿ ಮಾಡಿದ್ದರು. ಡಿ ಗ್ಯಾಂಗ್ ಪಾರ್ಟಿ ಮಾಡಿದ್ದನ್ನು ಪೊಲೀಸರು ಸ್ಟೋನಿ ಬ್ರೂಕ್‌ನಲ್ಲಿ ರೀ ಕ್ರಿಯೇಟ್ ಮಾಡಿದ್ದಾರೆ. ದರ್ಶನ್, ವಿನಯ್ ಸೇರಿದಂತೆ ಇತರೆ ಆರೋಪಿಗಳೊಂದಿ ರೀ ಕ್ರಿಯೇಟ್ ಮಾಡಿದ್ದಾರೆ. ನಟ ಚಿಕ್ಕಣ್ಣ ಲಾಸ್ಟ್ ಸೀಟ್‌ನಲ್ಲಿದ್ದರೆ, ದರ್ಶನ್ ಹಾಗೂ ವಿನಯ್ ಅಕ್ಕಪಕ್ಕ, ದರ್ಶನ್ ಎದುರುಗಡೆ ನಾಗ ಕುಳಿತಿದ್ದ. ಡಿ ಗ್ಯಾಂಗ್‌ ಪಾರ್ಟಿ ಮಾಡಿಕೊಂಡು ಮಸ್ತ್ ಮಜಾ ಮಾಡಿದ್ದರು.

ಕೊಲೆ ಬಳಿಕ ಆಪ್ತ ಸ್ನೇಹಿತೆಯನ್ನು ಸಂಪರ್ಕಿಸಿದ್ದ ಪವಿತ್ರಾಗೌಡ

ನಟ ದರ್ಶನ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಸಮತಾ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಸಮತಾ ನಟಿ ಪವಿತ್ರಾಗೌಡಳ ಆಪ್ತ ಸ್ನೇಹಿತೆ ಆಗಿದ್ದಾಳೆ. ರೇಣುಕಾಸ್ವಾಮಿ ಕೊಲೆ ಬಳಿಕ ಪವಿತ್ರಾಗೌಡ ಸಮತಾಳನ್ನು ಸಂಪರ್ಕಿಸಿದ್ದಳು. ಒಮ್ಮೆ ಫೋನ್ ಮೂಲಕ ಮತ್ತೊಮ್ಮೆ ಖುದ್ದು ಭೇಟಿಯಾಗಿದ್ದಾಗಿ ತನಿಖೆ ವೇಳೆ ಗೊತ್ತಾಗಿದೆ. ಅಲ್ಲದೇ ಸಮತಾ ಜೈಲಿನಲ್ಲೂ ಕೂಡ ಪವಿತ್ರಾಗೌಡ ಹಾಗೂ ದರ್ಶನ್ ಭೇಟಿಯಾಗಿದ್ದರು. ಹೀಗಾಗಿ ಪೊಲೀಸರು ಸಮತಾಳ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಸಮತಾ ಹಾಗೂ ಪವಿತ್ರಾಗೌಡ ಭೇಟಿ ಬಗ್ಗೆ ಉಲ್ಲೇಖ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ದರ್ಶನ್‌-ಪವಿತ್ರಾರ ಐಫೋನ್‌ಗಳ ರಹಸ್ಯ ಭೇದಿಸಲು ಚಿಂತನೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಹಾಗೂ ಪವಿತ್ರಾಗೌಡ ಫೋನ್‌ಗಳು ಕೊನೆಗೂ ರಿಟ್ರೀವ್ ಆಗಿಲ್ಲ. ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್ ಸಿಎಫ್ಎಸ್ಎಲ್‌ನಲ್ಲಿದ್ದ ಇಬ್ಬರು ಆರೋಪಿಗಳ ಐಫೋನ್‌ಗಳು ರಿಟ್ರೀವ್ ಆಗದೇ ರಿಟರ್ನ್ ಆಗಿವೆ. ಸದ್ಯ ಎರಡು ಐಫೋನ್‌ಗಳನ್ನು ಗುಜರಾತ್‌ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಗುಜರಾತ್‌ನ ಎಫ್ಎಸ್ಎಲ್ ಯೂನಿವರ್ಸಿಟಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ, ಎಕ್ಪ್ಮೆಂಟ್ ಇದೆ. ತಜ್ಞ ಎಫ್ಎಸ್ಎಲ್ ತಂಡದಿಂದ ಎರಡು ಐಫೋನ್‌ಗಳ ರಹಸ್ಯ ಭೇದಿಸಲು ಚಿಂತನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version