ಬೆಂಗಳೂರು : ಜಿಎಸ್ಟಿ ಅಡಿಟ್ ಮಾಡಿಕೊಡುವುದಾಗಿ ಹೇಳಿ ಗ್ರಾಹಕರಿಂದ ಹಣ ಪಡೆದು ಬರೋಬ್ಬರಿ 10 ಕೋಟಿಗೂ ಹೆಚ್ಚು ತೆರಿಗೆ ಹಣ ವಂಚನೆ ಮಾಡಿದ ಆಡಿಟರ್ ಒಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಂದಿರಾ ನಗರದ ನಿವಾಸಿ ವೀರಭದ್ರಪ್ಪ ಬಂಧಿತ ಆರೋಪಿ ಅಗಿದ್ದು, 12 ಪ್ರಕರಣಗಳಲ್ಲಿ 10 ಕೋಟಿಗೂ ಹೆಚ್ಚು ತೆರಿಗೆ ಹಣ ವಂಚನೆ ಮಾಡಿದ್ದ ಎನ್ನುವುದು ತಿಳಿದು ಬಂದಿದೆ.
ಇದನ್ನೂ ಓದಿ : ಶೇರ್ ಮಾರ್ಕೆಟ್ ಟಿಪ್ಸ್ ಪಡೆಯುವ ಮುನ್ನ ಎಚ್ಚರ!: ₹2.5ಲಕ್ಷ ವಂಚಿಸಿದ ಪ್ರಕರಣ ಬಯಲು
ಪೊಲೀಸರು ಈಗಾಗಲೇ ಆರೋಪಿ ವೀರಭದ್ರಪ್ಪನ ಬೆಂಗಳೂರಿನ ಇಂದಿರಾನಗರ ಮನೆ ಮತ್ತು ದಾವಣಗೆರೆ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಯಿಂದ 5.31 ಕೋಟಿ ರೂ. ಪೊಲೀಸರು ವಸೂಲಿ ಮಾಡಿದ್ದು, ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆಸಿ ಪರಿಶೀಲನೆ ಕೂಡ ನಡೆಸಿಲಾಗಿದೆ. ಆರೋಪಿ ವೀರಭದ್ರಪ್ಪ ವಿರುದ್ದ ರಾಮಮೂರ್ತಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : ಅಂತರ್‌ಜಿಲ್ಲಾ ಮನೆಗಳ್ಳರ ಬಂಧನ: ₹92,000 ಕದ್ದಿದ್ದ ಆರೋಪಿಗಳು