Site icon Vistara News

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

ಬೆಂಗಳೂರು: ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿಯ ಕಾಟಕ್ಕೆ ಬೇಸತ್ತ ಪತ್ನಿ ಪೊಲೀಸ್‌ ಠಾಣೆ (Assault Case) ಮೆಟ್ಟಿಲೇರಿದ್ದಾಳೆ. ಮಗುವನ್ನು ಬಲಿ ಕೊಡೋಣ, ಬಲಿ ಕೊಟ್ರೆ ನಿಧಿ ಸಿಗುತ್ತೆ. ಕುಟುಂಬದ ಸಮೃದ್ಧಿ ಹೆಚ್ಚಾಗತ್ತೆ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಪತಿ ವಿರುದ್ಧ ಸಿಡಿದೆದ್ದ ಪತ್ನಿಯಿಂದ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂ ನಿವಾಸಿ ಸದ್ದಾಂ ವಿರುದ್ಧ ಪತ್ನಿಯೇ ದೂರು ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ನಾನೊಬ್ಬ ಹಿಂದು ಯುವಕಮ ನನ್ನ ಹೆಸರು ಆದಿಈಶ್ವರ್ ಎಂದು ಸುಳ್ಳು ಹೇಳಿ ಸದ್ದಾಂ ಹಿಂದು ಧರ್ಮದ ಯುವತಿಯನ್ನು ಮದುವೆಯಾಗಿದ್ದ.

Assault case A psychopathic husband in Bangalore Wife harassed for sacrificing her child for treasure

ಮದುವೆಯಾಗಿ ಪತ್ನಿ ಗರ್ಭಿಣಿಯಾದಾಗ ತಾನೊಬ್ಬ ಮುಸಲ್ಮಾನ್ ತನ್ನ ಹೆಸರು ಸದ್ದಾಂ ಎಂದು ಹೇಳಿಕೊಂಡಿದ್ದ.
ನೀನು ಮುಸಲ್ಮಾನ್ ಧರ್ಮಕ್ಕೆ ಮತಾಂತರವಾಗಬೇಕೆಂದು ಪತ್ನಿಯನ್ನು ಮತಾಂತರಿಸಿದ್ದ. ಅಲ್ಲದೇ ಪತ್ನಿಯ ಹೆಸರನ್ನು ಬದಲಾಯಿಸಿದ್ದ. ಪ್ರೀತಿಸಿ ಮದುವೆಯಾದವನು ಧರ್ಮ ಯಾವುದಾದರೇನು ಎಂದು ಪತ್ನಿಯೂ ಸುಮ್ಮನಾಗಿದ್ದಳು. ಆದರೆ ಇತ್ತೀಚಿಗೆ ಸೈಕೋ ರೀತಿಯಲ್ಲಿ ಸದ್ದಾಂ ವರ್ತಿಸುತ್ತಿದ್ದ.

Assault case A psychopathic husband in Bangalore Wife harassed for sacrificing her child for treasure

ಗಂಡು ಮಗು ಹುಟ್ಟಿದ ನಂತರ ಕುಟ್ಟಿ ಸೈತಾನ್ ಪೂಜೆ ಮಾಡಬೇಕು. ಕುಟ್ಟಿ ಸೈತಾನ್ ಪೂಜೆಯಲ್ಲಿ ಮಗುವನ್ನು ಬಲಿ ಕೊಡಬೇಕು. ಮಗುವನ್ನು ಬಲಿ ಕೊಟ್ರೆ ಸಮೃದ್ಧಿ ಹೆಚ್ಚಾಗತ್ತೆ, ಜತೆಗೆ ನಿಧಿ ಸಿಗತ್ತೆ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಸದ್ಯ ಸೈಕೋ ಗಂಡನಿಂದ ತಪ್ಪಿಸಿಕೊಂಡಿರುವ ಮಹಿಳೆ ತುಮಕೂರಿನ ತವರು ಮನೆ ಸೇರಿಕೊಂಡಿದ್ದಾಳೆ. ತುಮಕೂರಿಗೂ ತೆರಳಿ ಮಗುವನ್ನು ಬಲಿ ಕೊಡೋಣ ಮಗುವನ್ನು ಕೊಡು ಎಂದು ಟಾರ್ಚರ್ ಕೊಟ್ಟಿದ್ದಾನೆ. ಆರೋಪಿ ಸದ್ದಾಂ ಪತ್ನಿಯ ತಾಯಿಗೂ ಜೀವ ಬೆದರಿಕೆ ಹಾಕಿದ್ದಾನೆ.

Assault case A psychopathic husband in Bangalore Wife harassed for sacrificing her child for treasure

ಹೀಗಾಗಿ ಮಹಿಳೆ ಈ ಬಗ್ಗೆ ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದಾಳೆ. ಆದರೆ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ದಯಾನಂದ್‌ಗೆ ನೊಂದಾಕೆ ದೂರು ನೀಡಿದ್ದಾಳೆ. ತಡರಾತ್ರಿ ಎದ್ದು ಮಂತ್ರ ಪಠಿಸುತ್ತಾ ವಾಮಾಚಾರ ವಿದ್ಯೆ ಅಭ್ಯಾಸ ಮಾಡುತ್ತಿದ್ದ. ಪತಿಯ ವರ್ತನೆ ಕಂಡು ಭಯಭೀತಳಾಗಿದ್ದ ಮಹಿಳೆ, ದಿನ ಕಳೆದಂತೆ ಕುಟ್ಟಿ ಸೈತಾನ್ ಪೂಜೆಗೆ ಮಗುವನ್ನು ಬಲಿ ಕೊಡಬೇಕೆಂದು ಹಿಂಸೆ ನೀಡಲು ಶುರು ಮಾಡಿದ್ದ.

Exit mobile version