Site icon Vistara News

Assault Case : ಯುವಕನ ಬೆತ್ತಲೆಗೊಳಿಸಿ ನಡುರಸ್ತೆಯಲ್ಲೆ ಅಟ್ಟಾಡಿಸಿ ಹೊಡೆದ ರೌಡಿಶೀಟರ್‌! ವಿಡಿಯೊ ಮಾಡಿ ಪುಂಡಾಟ

Rowdy-sheeter stripped young man naked and assaulted

ಬೆಂಗಳೂರು: ಬೆಂಗಳೂರಿನ ಸುಂಕದಕಟ್ಟೆಯಲ್ಲಿ ರೌಡಿಶೀಟರ್‌ ಯುವಕನ ಮೇಲೆ ಅಟ್ಟಹಾಸ (Assault Case) ಮೆರೆದಿದ್ದಾನೆ. ಯುವಕನ ಬಟ್ಟೆ ಬೆಚ್ಚಿ ನನ್ನ ಟಚ್ ಮಾಡುತ್ಯಾ ಎಂದು ಅವಾಜ್ ಹಾಕಿ ಹಲ್ಲೆ ಮಾಡಿದ್ದಲ್ಲದೇ, ಬಳಿಕ ಬೆತ್ತಲೆ ಮಾಡಿ ವಿಡಿಯೊ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾನೆ.

ಪೊಲೀಸ್‌ ಅಂದರೆ ಪುಂಡ, ಪೋಕರಿಗಳಿಗೆ, ರೌಡಿಗಳಿಗೆ ಭಯವೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜಗೋಪಾಲ ನಗರ ರೌಡಿಶೀಟರ್ ಪವನ್ ಅಲಿಯಾಸ್ ಕಡಬು ಎಂಬಾತ ಹಲವು ಕ್ರೈಂ ಕೇಸ್‌ಗಳಲ್ಲಿ ಭಾಗಿಯಾಗಿದ್ದ. ತುಮಕೂರು ಮೂಲದ ಕಡಬು ಇತ್ತೀಚೆಗೆ ಜೈಲಿನಿಂದ ರಿಲೀಸ್ ಆಗಿದ್ದ. ಈತನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲೂ ಒಂದು ಕೇಸ್ ಇದ್ದು, ವಾರೆಂಟ್ ಕೂಡ ಇಶ್ಯೂ ಆಗಿದೆ. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆದರೆ ಪವನ್‌ ಅಲಿಯಾಸ್‌ ಕಡಬು ಪೊಲೀಸರ ಕೈಗೆ ಸಿಗದೇ ಬೆಂಗಳೂರಿನಲ್ಲಿ ಓಡಾಡಿಕೊಂಡಿದ್ದ.

ಇದನ್ನೂ ಓದಿ: Assault Case : ಲಾಠಿ ಏಟಿಗೆ ಜೀವ ಬಿಟ್ಟನ್ನಾ? ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ರಾ ಪೊಲೀಸರು!

ಮೊನ್ನೆ ಮಧ್ಯರಾತ್ರಿ ಯುವಕನನ್ನು ಹಿಡಿದು ರಾಜಾರೋಷವಾಗಿ ಆತನ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದಲ್ಲದೆ, ಬೆತ್ತಲೆಯಲ್ಲಿಯೇ ಮನೆಗೆ ಓಡಿಸಿ ವಿಡಿಯೊ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾನೆ. ಹಲ್ಲೆಗೊಳಗಾಗಿರುವ ಯುವಕ ಬೇರೆ ಯಾರೂ ಅಲ್ಲ ಇದೇ ಕಾಮಾಕ್ಷಿಪಾಳ್ಯ ಪೊಲೀಸರ ಇನ್ಫಾರ್ಮರ್ ಎಂದು ಹೇಳಲಾಗಿತ್ತು. ಈ ಹಿಂದೆ ಗಾಂಜಾ ಸೇದುವ ವಿಚಾರಕ್ಕೆ ಯುವಕ, ಪವನ್ @ ಕಡವುಗೆ ಬುದ್ದಿ ಹೇಳಿದ್ದನಂತೆ. ಗಾಂಜಾ ಸೇದಬೇಡ ಅಂದಿದ್ದನಂತೆ. ಇದೇ ವಿಚಾರಕ್ಕೆ ಯುವಕನನ್ನು ಹುಡುಕಿ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇನ್ನು ವಿಡಿಯೊ ಮಾಧ್ಯಮಗಳಲ್ಲಿ ಬರುವರೆಗೂ ಈ‌ ವಿಚಾರವೇ ಕಾಮಾಕ್ಷಿಪಾಳ್ಯ ಪೊಲೀಸರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

ಈ ಘಟನೆ ಆಗಿದ್ದು ಒಂದೆಡೆ ಆದರೆ ಎರಡು ವಿಚಾರಗಳು ಪೊಲೀಸರ ಮೇಲೆ ಹೆಚ್ಚು ಅನುಮಾನ ಹುಟ್ಟಿಸಿವೆ. ತಾವು ಹುಡುಕುತ್ತಿದ್ದ ರೌಡಿಶೀಟರ್ ತಮ್ಮ ಲಿಮಿಟ್ಸ್‌ನಲ್ಲೇ ಓಡಾಡ್ಕೊಂಡಿದ್ದರೂ ಪೊಲೀಸರಿಗೆ ಆತನ ಬಗ್ಗೆ ಅನುಮಾನವೇ ಇರಲಿಲ್ವಾ? ಅಥವಾ ತಮ್ಮ ಇನ್ಫಾರ್ಮರ್ ಮೇಲೆ ಈ ರೀತಿ ಹಲ್ಲೆ ಆಗಿದ್ದರೂ ಒಂಚೂರು ಮಾಹಿತಿ ಸಿಕ್ಕಿಲ್ವಾ? ಅಥವಾ ರೌಡಿಶೀಟರ್ ಬಗ್ಗೆ ಹಲ್ಲೆಗೊಳಗಾದವ್ನೇ ಇನ್ಫಾರ್ಮೇಶನ್ ಕೊಟ್ಟಿದ್ದಕ್ಕೆ ಕಾಮಾಕ್ಷಿಪಾಳ್ಯ ಪೊಲೀಸ್ ಸಿಬ್ಬಂದಿಯೇ ಬಿಟ್ಟು ಹೊಡೆಸಿದ್ರಾ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ರೌಡಿಯ ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇಂತಹ ವಿಕೃತ ಮನಸ್ಸಿನ ಕ್ರಿಮಿನಲ್ಸ್‌ಗೆ ತಕ್ಕ ಶಾಸ್ತಿಯಾಗಬೇಕಿದೆ. ವಯಸ್ಸು 20 ದಾಟದ ಈ ರೌಡಿಯನ್ನು ಕಂಟ್ರೋಲ್‌ಗೆ ತರದಿದ್ದರೆ ಸಮಾಜಕ್ಕೆ ಕಂಟಕವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಒಂದು ತಿಂಗಳ ಹಳೇ ವಿಡಿಯೊ ಹರಿಬಿಟ್ಟ ರೌಡಿಶೀಟರ್‌ ಸ್ನೇಹಿತರು

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆ ಮಾಡಿ ಬೆತ್ತಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದಾರೆ. ನಿನ್ನೆ ಭಾನುವಾರ ರಾತ್ರಿ ಒಂದು ಘಟನೆಗೆ ನಡೆದಿದೆ. ರಾಜಗೋಪಾಲ್ ನಗರ ರೌಡಿ ಶೀಟರ್ ಪವನ್ ಎಂಬಾತ ವಿಶ್ವಾಸ್‌ ಎಂಬುವವನಿಗೆ ಹೊಡೆದಿದ್ದಾನೆ.

ವಿಶ್ವಾಸ್ ಮತ್ತು ಆತನ ಸ್ನೇಹಿತರು ಪವನ್‌ ಅಲಿಯಾಸ್‌ ಕಡಬು ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂಬ ಕೋಪಕ್ಕೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆದ ಕೆಲವೇ ಗಂಟೆಗಳಲ್ಲಿ ಪವನ್ ಇನ್ನೊಬ್ಬನಿಗೆ ಹೊಡೆದಿದ್ದ ಒಂದು ತಿಂಗಳ ಹಳೇ ವಿಡಿಯೋ ವೈರಲ್ ಆಗಿದೆ. ಅರ್ಜುನ್ ಎಂಬಾತನಿಗೆ ಬಟ್ಟೆ ಬಿಚ್ಚಿ ಹೊಡೆದಿರುವ ವಿಡಿಯೊ ಆಚೆ ಬಂದಿದೆ.

ಪವನ್ ಸ್ನೇಹಿತರೇ ಇದನ್ನು ಲೀಕ್ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪವನ್‌ಗಾಗಿ ಹುಡುಕುತಿದ್ದೇವೆ. ಜತೆಗೆ ವೈರಲ್‌ ಆದ ವಿಡಿಯೋದಲ್ಲಿ ಹೊಡೆಸಿಕೊಂಡಿರುವ ವ್ಯಕ್ತಿಯನ್ನು ಹುಡುಕುತಿದ್ದೇವೆ. ಒಂದು ತಿಂಗಳಾದರೂ ಹಲ್ಲೆ ಸಂಬಂಧ ಯಾರು ದೂರು‌ ನೀಡಿಲ್ಲ. ಇಬ್ಬರು ಬ್ಯಾಡ್ ಮ್ಯಾನೆರ್ಸ್ ಇರೋರು ಎಂಬುದು ಗೊತ್ತಾಗಿದೆ. ಸದ್ಯ ವಿಶ್ವಾಸ್‌ನಿಂದ ದೂರು ಪಡೆದು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version