ಮಂಡ್ಯ: ಬೆಂಗಳೂರು- ಮೈಸೂರು ಹೆದ್ದಾರಿಯ (Bangalore Mysore Expressway) ವಾಹನ ಸವಾರರಿಗೆ ಮತ್ತೊಂದು ಟೋಲ್ ಬರೆ ನಾಳೆಯಿಂದ ಬೀಳುತ್ತಿದೆ. ನಾಳೆಯಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭಗೊಳ್ಳಲಿದೆ.
ಮಂಡ್ಯ ಜಿಲ್ಲೆಯ 55.134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹ ನಾಳೆ ಆರಂಭವಾಗಲಿದ್ದು, ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾದಲ್ಲಿ ವಸೂಲಿ ಶುರುವಾಗಲಿದೆ. ಟೋಲ್‌ನ ಶುಲ್ಕ ಬೆಚ್ಚಿ ಬೀಳಿಸುವಂತಿದೆ. ಲೆಕ್ಕಾಚಾರ ಹಾಕಿದರೆ ಸ್ವಂತ ವಾಹನದಲ್ಲಿ ಹೋಗುವುದಕ್ಕಿಂತಲೂ ಸರ್ಕಾರಿ ಬಸ್ಸಿನಲ್ಲಿ ಹೋದರೇ ಅಗ್ಗವಾಗಬಹುದು.
ಟೋಲ್ ಶುಲ್ಕ
ಏಕಮುಖ ಸಂಚಾರ
ಕಾರು, ಜೀಪು, ವ್ಯಾನು – 155 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂ
ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) 525 ರೂ
ಮೂರು ಆಕ್ಸೆಲ್ ವಾಣಿಜ್ಯ ವಾಹನ – 575 ರೂ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್‌ಗಳದ್ದು) – 825 ರೂ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 1005 ರೂ
ಅದೇ ದಿನ ವಾಪಸ್ಸು
ಕಾರು, ಜೀಪು, ವ್ಯಾನು – 235 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 375 ರೂ
ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) 790 ರೂ
ಮೂರು ಆಕ್ಸೆಲ್ ವಾಣಿಜ್ಯ ವಾಹನ – 860 ರೂ
ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್‌ಗಳದ್ದು)- 1240 ರೂ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 1510 ರೂ
ಮಂಡ್ಯ ಜಿಲ್ಲೆ ಒಳಗೆ
ಕಾರು, ಜೀಪು, ವ್ಯಾನು – 80 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 125 ರೂ
ಟ್ರಕ್/ಬಸ್ (ಎರಡು ಆಕ್ಸೆಲ್‌ಗಳದ್ದು) 265 ರೂ
ಮೂರು ಆಕ್ಸೆಲ್ ವಾಣಿಜ್ಯ ವಾಹನ – 285 ರೂ
ಭಾರಿ ನಿರ್ಮಾಣ ಯಂತ್ರಗಳು/ ಭೂ ಅಗೆತದ ಸಾಧನಗಳು/ ಬಹು ಆಕ್ಸೆಲ್ ವಾಹನ (4ರಿಂದ 6 ಆಕ್ಸೆಲ್‌ಗಳದ್ದು) – 415 ರೂ
ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸೆಲ್‌ಗಳದ್ದು) – 505 ರೂ
ಇದನ್ನೂ ಓದಿ: Bangalore Mysore Expressway: ದಶಪಥ ಹೆದ್ದಾರಿ ಉಳಿಸಿ ಪ್ಲೀಸ್; ಶುರುವಾಗಿದೆ ಕಬ್ಬಿಣ ಕಳ್ಳರ ಕಾಟ!