ಬೆಂಗಳೂರು: ಕೈನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಇದೆ ಎಂದು ಸಿಕ್ಕ ಸಿಕ್ಕ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ. ಯಾಕೆಂದರೆ ನೀವು ಬಳಸುವ ಆ್ಯಪ್‌ಗಳಿಂದಲೇ ನಿಮ್ಮ ಜೇಬು ಖಾಲಿ ಆಗಬಹುದು. ಇತ್ತೀಚೆಗೆ ಆನ್‌ಲೈನ್ ಮೂಲಕ ವಂಚನೆ ಮಾಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಸೈಬರ್ ಕ್ರೈಂಗೆ ನಿತ್ಯ ನೂರಾರು ದೂರುಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ಕೆಲವು ಚೀನಿ ಆ್ಯಪ್‌ಗಳ ವಿರುದ್ಧ ಸಮರ ಸಾರಿರುವ ದಕ್ಷಿಣ ವಿಭಾಗದ ಪೊಲೀಸರು ಚೀನಿ ಆ್ಯಪ್‌ಗಳನ್ನು ಫ್ರೀಜ್ ಮಾಡಿದ್ದಾರೆ.
ಇದನ್ನೂ ಓದಿ | ನೂರು ಕೋಟಿ ಲೂಟಿ! ಇದು ಚೀನಿ ಗ್ಯಾಂಗ್‌ನ ಕರಾಮತ್ತು
ಹ್ಯಾಂಡಿಲೋನ್ , ಈಝಿ ಕ್ಯಾಷ್ , ಸೂಪರ್ ಕ್ಯಾಷ್ , ಕ್ಯಾಷ್ ನೌ ಎಂಬಂತಹ ಆ್ಯಪ್‌ಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗುವ ಕೆಲ ಚೀನಿ ಆ್ಯಪ್‌ಗಳನ್ನು ಹಣದ ಅವಶ್ಯಕತೆ ಇದ್ದವರು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಡೌನ್ ಲೋಡ್ ಆದ ತಕ್ಷಣ ಆ್ಯಪ್ ಕಡೆಯಿಂದ ಕರೆ ಮಾಡಿ 3ರಿಂದ 7 ಸಾವಿರದವರೆಗೆ ಲೋನ್ ಕೊಡುವುದಾಗಿ ಹೇಳಿ ಬಳಿಕ ಎಲ್ಲಾ ಷರತ್ತು ಒಪ್ಪಿದ ಮೇಲೆ ಅಸಲಿ ಮುಖವಾಡ ಬಯಲಾಗುತ್ತದೆ.
ಮಾಲ್ವೆರ್ ಎಂಬ ವೈರಸ್ ಮೊಬೈಲ್‌ಗೆ ಹರಿಬಿಟ್ಟು ಲೋನ್ ತೆಗೆದುಕೊಂಡವರ ಸಂಪೂರ್ಣ ಮಾಹಿತಿ ವಂಚಕರ ಕೈ ಸೇರುತ್ತದೆ . ಮೊದಲು ಮೂರು ಸಾವಿರ ಲೋನ್ ಅಪ್ಲೈ ಮಾಡಿದರೆ ಸಾಲ ಕೊಡುವ ಚೀನಿ ಆ್ಯಪ್ ಮೊದಲೇ ಒಂದೂವರೆ ಸಾವಿರ ಹಣವನ್ನು ಬಡ್ಡಿ ಎಂದು ಕಟ್ ಮಾಡಿ ಅಕೌಂಟ್‌ಗೆ ಹಾಕುತ್ತಾರೆ. ನಂತರ ಏಳು ದಿನಗಳಲ್ಲಿ ಹಣವನ್ನು ಕಟ್ಟಬೇಕು. ಇಲ್ಲದಿದ್ದಲ್ಲಿ ಗ್ರಾಹಕನ ಮೊಬೈಲ್ ನಲ್ಲಿರುವ ಎಲ್ಲಾ ನಂಬರ್‌ಗಳಿಗೆ ಅಶ್ಲೀಲವಾದ ಪದ ಬಳಕೆ ಮಾರ್ಫಿಂಗ್ ಪೋಟೋಸ್‌ಗಳು ಹೋಗುತ್ತವೆ.
ಕೋಡ್ ವರ್ಡ್ ಬಳಕೆ
s1 ಇಂದ s4ರವರೆಗೆ ಕೋಡ್‌ಗಳನ್ನು ಬಳಕೆ ಮಾಡುವ ಖದೀಮರು, S1 ಎಂದು ಮೆಸೇಜ್ ಬಂದರೆ ನಾಳೆ ಸಾಲ ತೀರಿಸಬೇಕು. ತಪ್ಪಿದರೆ s4 ಎಂದು ಮೆಸೇಜ್ ಬಂದರೆ ಮುಗೀತು. ಸಾಲ ತೆಗೆದುಕೊಂಡವನ ಪರಿಚಯಸ್ಥರಿಗೆ ಕರೆ ಮಾಡಿ ಅಶ್ಲೀಲವಾಗಿ ನಿಂದಿಸುವ ಕೆಲಸಗಳು ನಡೆಯುತ್ತವೆ. ಸದ್ಯ ಈ ರೀತಿಯ ಆ್ಯಪ್‌ಗಳನ್ನ ಫ್ರೀಜ್ ಮಾಡಿರುವ ದಕ್ಷಿಣ ವಿಭಾಗದ ಪೊಲೀಸರು ಮತ್ತಷ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ.
13 ಚೀನಿ ಗ್ಯಾಂಗ್ ವಿರುದ್ಧ ಚಾರ್ಜ್‌ಶೀಟ್
ಚೈನೀಸ್ ಇನ್ವೆಸ್ಟ್ಮೆಂಟ್ ಆ್ಯಪ್‌ಗಳ ಗೋಲ್ಮಾಲ್ಗೆ ಭಾರತೀಯರ ಜೇಬು ಖಾಲಿಯಾಗಿದ್ದು, ಕೋಟಿ ಕೋಟಿ ಬಾಚಿ ಹೋದ 13 ವಂಚಕ ಚೀನಿಯರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಎರಡೇ ಎರಡು ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಸುಮಾರು 100 ಕೋಟಿ ರೂ. ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ | ಚೀನಾದ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಅಶ್ಲೀಲ, ಆಕ್ಷೇಪಾರ್ಹ ಜನಾಂಗೀಯ ಚಿತ್ರ!