Site icon Vistara News

Bengaluru Murder : ಬೆಂಗಳೂರಲ್ಲಿ ಮಹಿಳೆಯ ಭೀಕರ ಹತ್ಯೆ ಕೇಸ್‌; 31 ತುಂಡಾಗಿರುವ ಶವದ ಪೋಸ್ಟ್ ಮಾರ್ಟಂ ಹೇಗೆ ನಡೆಯುತ್ತೆ?

how will the post-mortem of the body take place

ಬೆಂಗಳೂರು: ಬೆಂಗಳೂರಿನ (Bengaluru Murder) ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೇಶ್ವರ ಬ್ಲಾಕ್‌ನಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆಯನ್ನು ಕೊಂದಿದ್ದ ಹಂತಕ, ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಕಾಲ್ಕಿತ್ತಿದ್ದ. ಸೆ. 21ರಂದು ಬೆಳಕಿಗೆ ಬಂದ ಈ ಪ್ರಕರಣದಿಂದ ಸುತ್ತಮುತ್ತಲಿನ ಜನರು ಆಘಾತಕ್ಕೆ ಒಳಗಾಗಿದ್ದರು.

ಪತಿಯಿಂದ ದೂರಾಗಿ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮಿ ಎಂಬಾಕೆ ಬರ್ಬರವಾಗಿ ಕೊಲೆಯಾಗಿದ್ದು, ಸೆ.22ರಂದು ಬೌರಿಂಗ್ ಆಸ್ಪತ್ರೆಯಲ್ಲಿ ಮರೋಣೊತ್ತರ ಪರೀಕ್ಷೆ ನಡೆಯಲಿದೆ. ಮಹಿಳೆ ಶವ ತುಂಡು ತುಂಡಾಗಿ ಕತ್ತರಿಸಿರುವುದರಿಂದ ಮೃತದೇಹದ ಪೋಸ್ಟ್‌ ಮಾರ್ಟಂ ಹೇಗೆ ನಡೆಯುತ್ತೆ? ಬಾಡಿ ಪೀಸ್‌ ಪೀಸ್‌ ಆಗಿರುವುದರಿಂದ ಪೋಸ್ಟ್ ಮಾರ್ಟಂ ಮಾಡುವುದೇ ಸವಾಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕವೇ ಪೋಷಕರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ.

ಇದನ್ನೂ ಓದಿ: Murder Case : ಬೆಂಗಳೂರಿನಲ್ಲಿ ವಿವಾಹಿತೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಹಂತಕ! ಕೊಲೆಗೆ ಕಾರಣ ನಿಗೂಢ

ಹಾಗಾದರೆ ಹೇಗೆ ನಡೆಯಲಿದೆ ಭೀಕರ ಕೊಲೆಯ ಪೋಸ್ಟ್ ಮಾರ್ಟಂ

1 ಮೊದಲು ಪ್ರತಿ ಪೀಸ್‌ಗೂ ನಂಬರಿಂಗ್ ಮಾಡಲಾಗುತ್ತದೆ
2 ದೇಹದ ಪ್ರತಿ ಪೀಸ್‌ನ ರೆಡಿಯಾಲಿಜಿಕಲ್ ಎಕ್ಸಾಮೀನೇಶನ್ ಮಾಡಲಾಗುತ್ತೆ, ಸಿಟಿ ಸ್ಕ್ಯಾನ್, ಎಕ್ಸ್‌ರೇ ಮುಂದಾದವುಗಳನ್ನು ಮಾಡಲಾಗುತ್ತದೆ.
3 ಆಯ್ದ ತುಂಡುಗಳ ಟಾಕ್ಸಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ.
4 ಆಯ್ದ ತುಂಡುಗಳ ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ
5 ಬಳಿಕ ಡಿಎನ್‌ಎ (DNA) ಪರೀಕ್ಷೆ ಮಾಡಲಾಗುತ್ತೆ
6 ಅವಶ್ಯವಿದ್ದರೆ ಬಾಡಿ ರಿ ಅಸ್ಸೆಂಬಲ್ ಮಾಡಲಾಗುತ್ತೆ
7 ಅಂತಿಮವಾಗಿ ಕಂಡು ಬಂದ ಅಂಶಗಳ ವರದಿಯನ್ನು ಸಿದ್ಧಪಡಿಸಲಾಗುತ್ತೆ

ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬಹಳ ಮುಖ್ಯ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪ್ರಾಥಮಿಕ ಸಾಕ್ಷ್ಯ ಪತ್ತೆ ಹಚ್ಚುವುದೆ ವೈದ್ಯರಿಗೆ ಸವಾಲಾಗಿದೆ. ಎಲ್ಲಾ ಕೊಲೆಗಳಿಗಿಂತ ಈ ಪ್ರಕರಣ ತುಂಬಾನೇ ವಿಚಿತ್ರ ಕೇಸ್ ಆಗಿದೆ. ಮರಣಕ್ಕೆ ಮೊದಲ ಗಾಯ Antemortem Evidence ಪತ್ತೆ ಹಚ್ಚುವುದೆ ವೈದ್ಯರಿಗೆ ಕಷ್ಟವಾಗಿದೆ. Antemortem ಅಂದರೆ ಮರಣಕ್ಕೂ ಮೊದಲ ಗಾಯವಾಗಿರುವುದನ್ನು ಗುರುತಿಸುವುದು. Antemortem ತಿಳಿದರೆ ಯಾವ ಆಯುಧದಿಂದ ಈ ಕೃತ್ಯ ಎಸಗಿರುವ ಅಂದಾಜು‌ ಮಾಡಲಾಗುತ್ತೆ. ಸದ್ಯ ಮೃತದೇಹದ ಎಲ್ಲ ಭಾಗವನ್ನು ಫ್ರೀಜರ್ ಅಲ್ಲಿ ಇಡಲಾಗಿದೆ. ಪೋಸ್ಟ್ ಮಾರ್ಟಂ ಮಾಡಲು ಪೊಲೀಸರಿಂದ ಇನ್ ಕ್ವೆಸ್ಟ್ ಅನುಮತಿ ಸಿಗಬೇಕು. ಪೊಲೀಸರು ಇನ್ ಕ್ವೆಸ್ಟ್ ಅನುಮತಿ ನಂತರ ಪೋಸ್ಟ್ ಮಾರ್ಟಂ ಮಾಡಲಾಗುತ್ತೆ.

ಆರೋಪಿ ಪತ್ತೆಗೆ ಆರು ವಿಶೇಷ ತಂಡ ರಚನೆ

ವೈಯಾಲಿಕಾವಲ್ ಮಹಿಳೆಯ ಭೀಕರ ಹತ್ಯೆ ಪ್ರಕರಣದ ಆರೋಪಿ ಪತ್ತೆಗೆ ಪೊಲೀಸರು ಆರು ವಿಶೇಷ ತಂಡ ರಚನೆ ಮಾಡಿದ್ದಾರೆ. ಕೃತ್ಯ ನಡೆದು ಹತ್ತು ದಿನಗಳಾಗಿರುವ ಹಿನ್ನೆಲೆಯಲ್ಲಿ ಆರೋಪಿ ಹೊರರಾಜ್ಯಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ. ಜತೆಗೆ ಕೃತ್ಯ ನಡೆಸಿ ತನ್ನ ಚಹರೆಯನ್ನೇ ಬದಲಿಸಿರುವ ಶಂಕೆಯೂ ಇದೆ.

ಕೃತ್ಯ ನಡೆದ ಬಳಿಕ ತಕ್ಷಣ ಆರೋಪಿಯ ಬಂಧನ ಮಾಡಬೇಕು. ಸಾಕ್ಷಿನಾಶ , ಹೊರರಾಜ್ಯಗಳಲ್ಲಿ ಪರಾರಿಯಾಗಲು ಅವಕಾಶ ಸಿಕ್ಕಿದರೆ ಆರೋಪಿಯ ಬಂಧನ ತುಸು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಟೀಂ, ಆನ್ ಫೀಲ್ಡ್ ಟೀಂ , ಎನ್ಕೌರಿ ಟೀಂ ಎಂದು ಆರು ತಂಡಗಳನ್ನು ಕೇಂದ್ರ ವಿಭಾಗ ಪೊಲೀಸರು ರಚನೆ ಮಾಡಿದ್ದಾರೆ. ಕೊಲೆಯಾದ ಮಹಿಳೆಯ ಜತೆ ನಿರಂತರ ಸಂಪರ್ಕ ಹೊಂದಿರುವವರಲ್ಲಿ ಯಾರಾದರೂ ಕಾಣೆಯಾಗಿದ್ದಾರಾ ಎಂಬುದರ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ.

ಇದನ್ನೂ ಓದಿ : Murder Case : ಬ್ಲ್ಯಾಕ್‌ ಮ್ಯಾಜಿಕ್‌ ಮಾಡಿ ತನ್ನ ಹುಡುಗಿ ಮೇಲೆ ಕಣ್ಣು ಹಾಕಿ ಪಟಾಯಿಸಿಕೊಂಡವನ ರಕ್ತಹರಿಸಿದ ಯುವಕ

ಪರಸಂಗದ ಪೀಕಲಾಟಕ್ಕೆ ಕೊಲೆಯಾದಳಾ ಸುಂದರಿ?

ಮಹಾಲಕ್ಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸಂಗದ ಪೀಕಲಾಟಕ್ಕೆ ಕೊಲೆಯಾದಳಾ ಎಂಬ ಹಲವು ಅನುಮಾನ ಮೂಡಿದೆ. ಮೆನ್ಸ್ ಬ್ಯೂಟಿ ಪಾರ್ಲರ್ ವ್ಯಕ್ತಿ ಜತೆ ಮಹಾಲಕ್ಷ್ಮಿ ಆತ್ಮೀಯವಾಗಿ ಇದ್ದಳು. ಆದರೆ ಕೆಲ ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಹೀಗಾಗಿ ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಅನುಮಾನ ಮೂಡಿದೆ. ಸದ್ಯ ಎರಡು ದಿನಗಳ ಹಿಂದೆ ಮನೆಯ ಬಳಿ ಬಂದು ಬಾಗಿಲು ತೆಗೆದು ಪರಾರಿ ಆಗಿದ್ದಾನೆ. 8 ದಿನವಾದರೂ ಯಾರಿಗೂ ವಿಷಯ ತಿಳಿಯದ ಕಾರಣ, ಮನೆ ಬಾಗಿಲು ತೆಗೆದು ಪರಾರಿ ಆಗಿದ್ದಾನೆ. ಸದ್ಯ ಪಾರ್ಲರ್ ನ ವ್ಯಕ್ತಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version