Site icon Vistara News

Bengaluru News : ಪ್ರಿಯಕರನ ಕಣ್ಮುಂದೆಯೇ ಯುವತಿ ಮೇಲೆ ಎರಗಿದ್ದ ಕಾಮುಕರಿಗೆ ಜೀವಾವಧಿ ಶಿಕ್ಷೆ

Bengaluru News

ಬೆಂಗಳೂರು: ಡಿನ್ನರ್‌ ಮುಗಿಸಿ ಬರುತ್ತಿದ್ದ ಪ್ರೇಮಿಗಳಿಗೆ ಕಿರಾತಕರು ಅಡ್ಡ ಹಾಕಿ, ಬಳಿಕ ಯುವಕನ ಕುತ್ತಿಗೆ ಚಾಕು ಇಟ್ಟು ಯುವತಿ ಮೇಲೆ ಅತ್ಯಾಚಾರ ನಡೆಸಿದ್ದರು. ಇದೀಗ ಆ ಆರೋಪಿಗಳಿಗೆ 10 ವರ್ಷಗಳ ನಂತರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2014ರ ಏಪ್ರಿಲ್ 11ರಂದು ಪ್ರೇಮಿಗಳಿಬ್ಬರು ಎಂ.ಜಿ ರೋಡ್‌ನಲ್ಲಿ ಡಿನ್ನರ್ ಮುಗಿಸಿ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ (Bengaluru News) ನೇತಾಜಿ ರಸ್ತೆಯಲ್ಲಿ ಮಧ್ಯರಾತ್ರಿ 12:30ರ ಸಮಯಲ್ಲಿ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಕಾಮುಕರ ದಂಡು ಅವರನ್ನು ಸುತ್ತುವರಿದು ಕಾರು ಏರಿಕೊಂಡಿದ್ದರು.

ಶೇಕ್ ಹೈದರ್, ಸೈಯದ್ ಶಫಿಕ್, ಮಹಮ್ಮಸ್ ಹಫೀಜ್, ಶೋಯಬ್ @ ಶೇಖ್ ಕಲ್ವಾನ ಕಾರಿನಲ್ಲಿ ಪ್ರೇಮಿಗಳು ಇದ್ದರೆ, ಮಹಮ್ಮದ್ ಇಸಾಕ್ ಎಂಬಾತ ಕಾಮುಕರ ಕಾರನ್ನು ಫಾಲೋ ಮಾಡಿದ್ದ. ಬಳಿಕ ರಾತ್ರಿಯಿಡಿ ಸಂತ್ರಸ್ತೆ ಕಾರಿನಲ್ಲೇ ಪುಲಕೇಶಿ ನಗರ ಸುತ್ತಾಡಿದ್ದರು. ಕಾರಿನಲ್ಲಿ ಆ ಯುವತಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದರು. ಕೊನೆಗೆ ಕಾಮುಕರ ಗುಂಪಿನ ನಾಯಕ ಶೇಕ್ ಹೈದರ್ ಆಜ್ಞೆಯಂತೆ ಸಂತ್ರಸ್ತೆಯ ಸ್ನೇಹಿತನನ್ನು ಕಾರಿನಿಂದ ಇಳಿಸಿದ್ದರು.

ಸೈಯದ್ ಶಫಿಕ್, ಹಫಿಜ್, ಶೋಯಬ್ ಆ ಯುವಕನ ಕುತ್ತಿಗೆಗೆ ಚಾಕು ಹಿಡಿದು ಕೊಂಡಿದ್ದರು. ಕಾರಿನಲ್ಲಿದ್ದ ಶೇಕ್ ಹೈದರ್ ನಾನು ಹೇಳಿದ ಹಾಗೆ ಕೇಳದಿದ್ದರೆ ನಿನ್ನ ಹುಡುಗನನ್ನು ಕೊಲೆ ಮಾಡುತ್ತೇನೆ ಎಂದು ಯುವತಿಗೆ ಬೆದರಿಕೆ ಹಾಕಿದ್ದ. ನಂತರ ಯುವತಿ ಮೇಲೆ ಮೃಘೀಯ ರೀತಿ ವರ್ತಿಸಿದ್ದ. ತನ್ನ ಕಣ್ಣ ಮುಂದೆಯೇ ತನ್ನ ನಂಬಿ ಬಂದ ಪ್ರೇಯಸಿ ಮೇಲೆ ಕಾಮುಕರು ಪಿಶಾಚಿಗಳಂತೆ ಎಗರಿದ್ದರೂ ಏನು ಮಾಡಲು ಆಗದೆ ಅಸಯಾಕನಾಗಿದ್ದ.

ಯುವತಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ 50 ಸಾವಿರ ರೂ. ಗೆ ಡಿಮ್ಯಾಂಡ್ ಮಾಡಿದ್ದರು. ಹಣ ನೀಡದಿದ್ದಾಗ ಹುಡುಗನ ಕೈಯಲ್ಲಿದ್ದ ವಾಚ್‌ನ ಕಿತ್ತುಕೊಂಡು ಹೋಗಿದ್ದರು. ಈ ಘಟನೆ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಅಂದಿನ ಇನ್‌ಸ್ಪೆಕ್ಟರ್‌ ಸರಿಯಾದ ಸೆಕ್ಷನ್ ಹಾಕಿಲ್ಲ ಎಂದು ಸಸ್ಪೆಂಡ್ ಕೂಡ ಆಗಿದ್ದರು. ಇದಾದ ನಂತರ ಅಂದಿನ ಪುಲಕೇಶಿ ನಗರ ಉಪವಿಭಾಗ ಎಸಿಪಿ ನೂರುಲ್ಲ ಶರೀಫ್ ತನಿಖೆ ನಡೆಸಿ ನ್ಯಾಯಲಯಕ್ಕೆ ಐವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕಾರಿನಲ್ಲಿ ಸಿಕ್ಕ ಆರೋಪಿಯ ತಲೆಕೂದಲು ಮತ್ತು ವೀರ್ಯದ ಕರುಹುಗಳು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿತ್ತು. ಆರೋಪಿಗಳು ರಾಜಕೀಯ ಪ್ರಭಾವ ಹೊಂದಿದ್ದರು. ಆದರೆ ಇದ್ಯಾವುದಕ್ಕೂ ಮಣಿಯದ ಪೊಲೀಸರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದರು. ಸದ್ಯ ಆರೋಪಿಗಳ ಪೈಕಿ ಎ1 ಆರೋಪಿ ಶೇಕ್ ಹೈದರ್‌ಗೆ ಜೀವಾವಧಿ ಶಿಕ್ಷೆ 31 ಸಾವಿರ ದಂಡ ಹಾಗೂ ಎ2 ಸೈಯದ್ ಶಫಿಕ್ 10 ವರ್ಷ ಸಜೆ 23 ಸಾವಿರ ದಂಡ, ಎ3 ಮೊಹಮ್ಮದ್ ಹಫೀಜ್‌ಗೆ 3500 ದಂಡ, ಎ4 ಶೋಯಬ್ ಗೆ 1 ವರ್ಷ ಸಜೆ ಹಾಗೂ 3500 ದಂಡ ಹಾಗೂ ಎ5 ಮಹಮ್ಮದ್ ಇಸಾಕ್‌ಗೆ 6 ತಿಂಗಳ ಸಜೆ ಹಾಗೂ 3000 ದಂಡ ವಿಧಿಸಿ 57ನೇ ಸಿಸಿಹೆಚ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

Exit mobile version