ಬೆಂಗಳೂರು: ಅದ್ಧೂರಿಯಾಗಿ ತನ್ನ ತಂಗಿ ಮದುವೆ ಮಾಡಬೇಕೆಂದು ಗಾಂಜಾ ಮಾರಲು (Drugs Seized) ಮುಂದಾಗಿದ್ದವನು ಮೊದಲ ಯತ್ನದಲ್ಲಿಯೇ ಬಾಣಸವಾಡಿ ಪೊಲೀಸರಿಗೆ ಲಾಕ್ ಆಗಿದ್ದಾನೆ. ಬಾಣಸವಾಡಿ ಪೊಲೀಸರಿಂದ ಪುತ್ತೂರು ಮೂಲದ ಬದ್ರುದ್ದಿನ್ (25) ಎಂಬಾತನ ಬಂಧನವಾಗಿದೆ.
ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದಿನ್‌ಗೆ ಬರುವ ಕಡಿಮೆ ಸಂಬಳದಲ್ಲಿ ಮನೆ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. ಆಗಾಗ ಯಾರೋ ಸ್ನೇಹಿತರ ಮೂಲಕ ಗಾಂಜಾ ಮಾರಿ ಹಣ ಮಾಡಬಹುದು ಅಂತ ತಿಳಿದಿದ್ದ. ಅದ್ಹೇಗೋ ಪೆಡ್ಲರ್ ಒಬ್ಬರ ಸಂಪರ್ಕ ಮಾಡಿ ಒರಿಸ್ಸಾಗೆ ಹೋಗಿದ್ದ. ಅಲ್ಲಿ ಲಾರಿ ಚಾಲಕನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರುತ್ತಿದ್ದ. ಅಲ್ಲಿಂದ ದುರಂತ್ ಎಕ್ಸ್‌ಪ್ರೆಸ್ ಟ್ರೈನ್ ಮೂಲಕ ಬರುವಾಗ ಎಸ್.ಎಂ.ಟಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಲಾಕ್ ಆಗಿದ್ದಾನೆ.
ಹೆಣ್ಣೂರು ಪೊಲೀಸರು ಒರಿಸ್ಸಾದ ದಿಲೀಪ್, ಶಿವರಾಜ್, ರಾಮ್ ಹಂತಲ್ ಎಂಬುವವರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ ಲಾಕ್ ಮಾಡಿದ ಪೊಲೀಸರು, 21 ಲಕ್ಷ ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Actor Darshan : ಚಿಕ್ಕಣ್ಣ ಇದ್ದಾಗಲೇ ರೇಣುಕಾಸ್ವಾಮಿ ಕೊಲೆ ಬಗ್ಗೆ ಚರ್ಚೆ ಆಯ್ತಾ! ಆ ದಿನ ದರ್ಶನ್ ಏನ್ ಅಂದ್ರು
ಬಟ್ಟೆ ವ್ಯಾಪಾರಿ ಲಾಕ್
ಇಸ್ಟ್ರಾಗ್ರಾಮ್ ಮೂಲಕ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಟ್ಟೆ ವ್ಯಾಪಾರಿ ಅರೆಸ್ಟ್ ಆಗಿದ್ದಾನೆ. ಬ್ಯಾಡರಹಳ್ಳಿ ಪೊಲೀಸರಿಂದ ಆರೋಪಿ ತೌನೇಶ್ ಎಂಬಾತ ಬಂಧನವಾಗಿದೆ. ಒಂದು ಕೋಟಿ 22 ಲಕ್ಷ ಮೌಲ್ಯದ ಎರಡು ಕೆಜಿ 779 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಅಂಧ್ರಹಳ್ಳಿಯ ಕಾಲೇಜ್ ಒಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಲಾಕ್ ಆಗಿದ್ದಾನೆ.
ಕೇರಳ ಮೂಲದ ಸೈಜು ಮುಖಾಂತರ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ ತರಿಸುತ್ತಿದ್ದ. ಒಂದು ವರ್ಷದ ಹಿಂದೆ ತೌನೇಶ್‌ಗೆ ಇಸ್ಟ್ರಾಗ್ರಾಮ್‌ನಲ್ಲಿ ಸೈಜು ಪರಿಚಯವಾಗಿದ್ದ. ಏರ್‌ಪೋರ್ಟ್‌ನಲ್ಲಿ ಯಾಮಾರಿಸಿ ಹೈಡ್ರೋ ಗಾಂಜಾ ತರಿಸುತ್ತಿದ್ದ. ಸಿಂಥೆಟಿಕ್ ಪೇಪರ್‌ನಲ್ಲಿ ಸುತ್ತಿ ಬಿಸ್ಕೆಟ್, ಚಾಕಲೇಟ್ ಬಾಕ್ಸ್‌ನಲ್ಲಿ ಗಾಂಜಾ ಬರುತ್ತಿತ್ತು. ಸಿಂಥೆಟಿಕ್ ಪೇಪರ್‌ನಲ್ಲಿ ಸುತ್ತಿರುವುದರಿಂದ ಯಾವ ವಾಸನೆಯೂ ಬರುತ್ತಿರಲಿಲ್ಲ. ಜತೆಗೆ ಸ್ಕ್ಯಾನ್ ಮಾಡಿದಾಗಲೂ ಗಾಂಜಾ ಇದೆ ಎಂದು ತಿಳಿದಿರಲಿಲ್ಲ. ಬಟ್ಟೆ ವ್ಯಾಪರಿಯಾಗಿರುವ ತೌನೇಶ್ 2020ರಿಂದ ಗಾಂಜಾ ಮಾರಾಟ ಮಾಡುತ್ತಿದ್ದ. ಬೆಂಗಳೂರಿನ ನಾಲ್ಕು ಠಾಣೆಯಲ್ಲಿ ಆರೋಪಿ ವಿರುದ್ಧ ಕೇಸ್ ಇದೆ. ಇನ್ಪಾರ್ಮರ್ ಒಬ್ಬರ ಮಾಹಿತಿ ಮೇರೆ ಆರೋಪಿ ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ