ದಾವಣಗೆರೆ/ಬೆಂಗಳೂರು: ಅಕ್ಕನ ಅಕ್ರಮ ಸಂಬಂಧಕ್ಕೆ ಬೇಸತ್ತ ತಮ್ಮನೊಬ್ಬ ಅಕ್ಕನ ಮಗುವನ್ನೇ ಅಪಹರಿಸಿದ ಘಟನೆ (Kidnap case) ನಡೆದಿದೆ. ಬೆಂಗಳೂರಿನಿಂದ ಹೊರಟಿದ್ದ ಅಪ್ರಾಪ್ತ ಬಾಲಕನನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ. 17 ವರ್ಷದ ತರುಣ್ ಎಂಬಾತ ಗೋಯಲ್ (3) ಎಂಬ ಮಗುವನ್ನು ಅಪಹರಿಸಿದ್ದ.
ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ದಾವಣಗೆರೆಗೆ ಬಂದಾಗ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ತರುಣ್‌ನ ಅಕ್ಕ ಅಕ್ರಮ ಸಂಬಂಧವಿಟ್ಟುಕೊಂಡು ಬೇರೆ ವ್ಯಕ್ತಿ ಜತೆ ವಾಸಿಸುತ್ತಿದ್ದಳು. ಈ ವೇಳೆ ಅಕ್ರಮ ಸಂಬಂಧ ಬಿಡಲು ಒಪ್ಪದಿದ್ದಕ್ಕೆ ಅಕ್ಕನ ಮಗುವನ್ನು ಅಪಹರಿಸಿಕೊಂಡು ಬರುವಾಗ ದಾವಣಗೆರೆ ಆರ್‌ಪಿಎಫ್ (RPF) ವಿಚಾರಣೆ ನಡೆಸಿ ವಶಕ್ಕೆ ಪಡೆದುಕೊಂಡು, ಬಳಿಕ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟ್ರೈನ್ ಬರುತ್ತಿದ್ದಂತೆ ತಪಾಸಣೆ ಮಾಡಿ ವಿಚಾರಿಸಿದಾಗ ಮಗು ಅಪಹರಿಸಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ರೈಲ್ವೆ ಇನ್ಸ್‌ಪೆಕ್ಟರ್ ಎಕೆ ರೆಡ್ಡಿ, ಸಿಬ್ಬಂದಿಗಳಾದ ಶಿವಾನಂದ, ಅಮಿತ್, ಬಿಂದು ಮಧುರಿ ಅವರು ಇಬ್ಬರನ್ನು ರಕ್ಷಿಸಿದ್ದಾರೆ.