ಬೆಂಗಳೂರು: ಆಂಧ್ರಕ್ಕೆ ಹೋಗುತ್ತಿದ್ದ ಶಾಸಕ ಮುನಿರತ್ನ (MLA Muniratna) ಅವರ ಮೊಬೈಲ್ ನೆಟ್‌ವರ್ಕ್ ಟ್ರಾಕ್ ಮಾಡಿ ಬಂಧನ ಮಾಡಲಾಗಿತ್ತು. ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ಸಂಬಂಧ ಶಾಸಕ ಮುನಿರತ್ನ ವಿಚಾರಣೆ ತೀವ್ರಗೊಂಡಿದೆ. ಆದರೆ ಶಾಸಕರು ಮಾತ್ರ ತಮ್ಮ ಎಂದಿನ ಮಾತಿಗೆ ಸ್ಟಿಕ್ ಆನ್ ಆಗಿದ್ದು ನಾನವನಲ್ಲ ಎಂದು ಜಪಿಸುತ್ತಿದ್ದಾರೆ. ಹೀಗಾಗಿ ಶಾಸಕರ ವಿಚಾರಣೆ ಮಾಡುವುದೇ ಪೊಲೀಸರಿಗೆ ತಲೆನೋವಾಗಿದೆ.
ಮುನಿರತ್ನರನ್ನು ಬಂಧನ ಮಾಡುವ ಮುನ್ನ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರನ್ನು ವೈಯಾಲಿಕಾವಲ್‌ನಲ್ಲಿರುವ ಶಾಸಕರ ಕಚೇರಿಯಲ್ಲಿ ಸ್ಥಳ ಮಹಜರು ನಡೆಸಲಾಗಿತ್ತು. ಈ ವೇಳೆ ಶಾಸಕ ಕೂತು ಬೈದ ಸ್ಥಳ , ಹಲ್ಲೆ ಮಾಡಿದ್ದ ಸ್ಥಳದ ಬಗ್ಗೆ ವಿವರಣೆ ನೀಡಿದ್ದರು. ಆದರೆ ಮುನಿರತ್ನ ಅವರ ಸ್ಥಳ ಮಹಜರು ಪ್ರಕ್ರಿಯೆ ನಡೆದಿಲ್ಲ. ಅದೆಲ್ಲಾದಕ್ಕೂ ಹೆಚ್ಚಾಗಿ ನಾನವನಲ್ಲ ಎಂಬ ಉತ್ತರಕ್ಕೆ ಕಟ್ಟುಬಿದ್ದಿದ್ದಾರೆ.
ಶಾಸಕ ಮುನಿರತ್ನಗೆ ಸುಮಾರು ಮೂವತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಆದರೆ ಅದಕ್ಕೆ ತಕ್ಕುದಾದ ಸ್ಪಷ್ಟನೆ ಶಾಸಕರಿಂದ ಸಿಗುತ್ತಿಲ್ಲ. ಇನ್ನು ಇದೆಲ್ಲಾ ರಾಜಕೀಯ ಷಡ್ಯಂತ್ರ, ನನ್ನ ದನಿಯನ್ನು ಮಾನ್ಯೂಪ್ಲೇಟ್ ಮಾಡಲಾಗಿದೆ ಎಂಬ ಮಾತಿಗೆ ನಿಂತಿದ್ದಾರೆ. ಇನ್ನು ಸೋಮವಾರ ಅಶೋಕನಗರ ಪೊಲೀಸ್ ಠಾಣೆಗೆ ಫೋರೆನ್ಸಿಕ್ ಎಕ್ಸ್‌ಪರ್ಟಸ್ ಕೂಡ ಆಗಮಿಸಿದ್ದರು. ಶಾಸಕ ಮುನಿರತ್ನ ಅವರ ವಾಯ್ಸ್ ಸ್ಯಾಂಪಲ್ ಕೂಡ ಕಲೆಕ್ಟ್ ಮಾಡಿಕೊಂಡರು. ಈ ವಾಯ್ಸ್ ಸ್ಯಾಂಪಲ್‌ನಿಂದ ಮಾತ್ರ ಆಡಿಯೋ ಅಸಲಿಯತ್ತು ತಿಳಿಯಲಿದೆ
ಸದ್ಯ ಎರಡು ದಿನದ ಪೊಲೀಸ್ ಕಷ್ಟಡಿ ಅಂತ್ಯವಾಗಲಿದೆ. ಅಷ್ಟರಲ್ಲಿ ಆದಷ್ಟು ಬೇಗ ಮುನಿರತ್ನ ಅವರ ಸ್ಟೇಟ್ಮೆಂಟ್ ಪಡೆಯಬೇಕಿದೆ. ಸೋಮವಾರ ಮುನಿರತ್ನ ಮೆಡಿಕಲ್ ಚೆಕ್‌ಅಪ್‌ಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ನನಗೆ ಆರೋಗ್ಯ ಸಮಸ್ಯೆ ಇದೆ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ ಎಂದು ಜಡ್ಜ್ ಬಳಿ ಮುನಿರತ್ನ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಮುನಿರತ್ನಗೆ ಮೆಡಿಕಲ್ ಟೆಸ್ಟ್ ಮಾಡಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ