Site icon Vistara News

NIRF India Rankings 2022 | ಟಾಪ್‌ 10 ವಿವಿಗಳ ಪಟ್ಟಿ; ಮೊದಲ ಸ್ಥಾನ ಗಳಿಸಿದ ಬೆಂಗಳೂರಿನ ಐಐಎಸ್‌ಸಿ

IISC bangalore

ನವ ದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ (NIRF India Rankings 2022) ಬಿಡುಗಡೆ ಮಾಡಿದೆ. ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲ ಸ್ಥಾನ ಪಡೆದುಕೊಂಡಿದೆ. ಈ ವಿಭಾಗದಲ್ಲಿ ನವ ದೆಹಲಿಯ ಜವಹಾರ್‌ಲಾಲ್ ನೆಹರು ವಿಶ್ವವಿದ್ಯಾಲಯ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ.

ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ರ‍್ಯಾಕಿಂಗ್‌ ಫ್ರೇಮ್‌ ವರ್ಕ್ (National institute of ranking framework) ಹೆಸರಿನಲ್ಲಿ ವಿಶ್ವವಿದ್ಯಾಲಯಗಳ ಶಿಕ್ಷಣ ಹಾಗೂ ಮೂಲಸೌಕರ್ಯ ಗಮನದಲ್ಲಿಟ್ಟುಕೊಂಡು ಈ ಪಟ್ಟಿ ಸಿದ್ಧಪಡಿಸಲಾಗಿದೆ. ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕರ್ನಾಟಕದ ಮಣಿಪಾಲದ ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಏಳನೇ ಸ್ಥಾನ ಪಡೆದಿದೆ. ಕಾನೂನು ಕಾಲೇಜುಗಳ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಮೊದಲ ಸ್ಥಾನ ಪಡೆದಿದೆ. ಫಾರ್ಮಸಿ ವಿಭಾಗದಲ್ಲಿ ಮೈಸೂರಿನ ಜೆಎಸ್‌ಎಸ್‌ ಕಾಲೇಜಿಗೆ 6ನೇ ಸ್ಥಾನ ಲಭಿಸಿದೆ.

ಟಾಪ್‌ 10 ವಿಶ್ವವಿದ್ಯಾಲಯಗಳು
1 – ಐಐಎಸ್‌ಸಿ ಬೆಂಗಳೂರು
2 -ಜೆಎನ್‌ಯು ನವ ದೆಹಲಿ
3- ಜಾಮಿಯಾ ಮಿಲಿಯಾ ಇಸ್ಲಾಂಇಯಾ, ನವ ದೆಹಲಿ
4- ಜಾಧವ್‌ಪುರ ಯೂನಿವರ್ಸಿಟಿ, ಕೊಲ್ಕತ
5- ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು
6- ಬನಾರಸ್‌ ಹಿಂದು ಯೂನಿವರ್ಸಿಟಿ, ವಾರಾಣಸಿ
7- ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌, ಮಣಿಪಾಲ್‌
8- ಕಲ್ಕತ್ತ ಯೂನಿವರ್ಸಿಟಿ, ಕೊಲ್ಕತ
9- ವೆಲ್ಲೂರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ವೆಲ್ಲೂರ್‌
10- ಹೈದರಾಬಾದ್‌ ಯೂನಿವರ್ಸಿಟಿ, ಹೈದರಾಬಾದ್‌

ಒಟ್ಟಾರೆ ಉನ್ನತ ಶಿಕ್ಷಣ ರ‍್ಯಾಂಕಿಂಗ್‌ನಲ್ಲಿ ಐಐಎಸ್‌ಸಿ ಎರಡನೇ ಸ್ಥಾನ ಪಡೆದಿದೆ. ಐಐಟಿ ಮದ್ರಾಸ್‌ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷದ ರ‍್ಯಾಂಕಿಂಗ್‌ನಲ್ಲೂ ಐಐಟಿ ಮದ್ರಾಸ್‌ ಮೊದಲ ಹಾಗೂ ಐಐಎಸ್‌ಸಿ ಎರಡನೇ ಸ್ಥಾನದಲ್ಲಿದ್ದವು. ಈ ವರ್ಷವೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ.

ಈ ರ‍್ಯಾಂಕಿಂಗ್‌ ನಿಂದ ವಿದ್ಯಾರ್ಥಿಗಳು ಸುಲಭವಾಗಿ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಕಾಲೇಜುಗಳ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ದಂತ ವೈದ್ಯಕೀಯ, ಫಾರ್ಮಾಸಿ ಹಾಗೂ ಕಾನೂನು ಕಾಲೇಜು, ಮ್ಯಾನೇಂಜ್‌ಮೆಂಟ್‌, ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜುಗಳ ಆಯ್ಕೆ ಸುಲಭವಾಗಲಿದೆ.

ಇದನ್ನು ಓದಿ | ಬಿಎಂಎಸ್ ಸಂಜೆ ಎಂಜಿನಿಯರಿಂಗ್ ಕಾಲೇಜು ಸಮಸ್ಯೆ: 2021-22ಕ್ಕೆ ಮಾತ್ರ ಲ್ಯಾಟರಲ್ ಪ್ರವೇಶಕ್ಕೆ ವಿನಾಯಿತಿ

ಇದನ್ನೂ ಓದಿ | Neet Exam | ಜುಲೈ 17ರಂದು ನೀಟ್‌ ಪರೀಕ್ಷೆ: ಪರೀಕ್ಷಾರ್ಥಿಗಳಿಗಾಗಿ ರೈಲು ಸಂಚಾರ ಅವಧಿ ಬದಲು

Exit mobile version